ನಾವು ಅಂದುಕೊಂಡಂತೆ ನಡೆಯಬೇಕು ನಾವು ಸಂಕಲ್ಪಿಸಿದ ಕಾರ್ಯಗಳು ನಿರ್ವಿಘ್ನವಾಗಿ ಸುಗಮವಾಗಿ ವಿಜಯವಂತವಾಗಬೇಕು ಯಶಸ್ಸು ಕಾಣಬೇಕು ಎಂದರೇ ಪ್ರತಿಯೊಬ್ಬರೂ ಬೆಳಗ್ಗೆ ಎದ್ದು ತಕ್ಷಣ ಆ ಕೆಲಸಗಳನ್ನು ಮಾಡಲು ಕಾಯುತ್ತ ಇರುತ್ತಾರೆ. ಅಷ್ಟೇ ಅಲ್ಲ ಕೆಲಸಗಳ ಆಗುವವರೆಗೆ ಸಮಾಧಾನ ಆಗುವುದಿಲ್ಲ.
ಇನ್ನು ಆ ಕೆಲಸದ ಒತ್ತಡದಲ್ಲಿ ಕೆಳಗೆ ಮೇಲೆ, ಏರುಪೆರು ಆಗುವುದು ಸಹಜ ಇನ್ನು ಇಂತಹ ಬ್ಯುಸಿ ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದು ಕಾಯುವವರೆ ಜಾಸ್ತಿ. ಯಶಸ್ಸು ಕಾಣಬೇಕು ಅಂತ ಕೇಳುವು ಜನ ದೇವಾಲಯಗಳಿಗೆ ಹೋಗಿ ನಮಸ್ಕಾರ, ಪೂಜೆಯನ್ನು ಸಲಿಸುತ್ತಾರೆ. ಇನ್ನು ಕೆಲವರು ಮನೆಯಲ್ಲಿ ವೃತ್ತ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಹೀಗೆ ಮಾಡುವುದರಿಂದ ಏಕಾಗ್ರತೆ ಉಂಟಾಗಿ ಆ ಕೆಲಸ ಬಹುಬೇಗ ಯಶಸ್ಸನ್ನು ಕಾಣುತ್ತವೆ ಎನ್ನುವುದು ಅವರ ನಂಬಿಕೆ.
ನಂಬಿಕೆಯಲ್ಲೇ ಜೀವನ ಇದೆ ಅಲ್ವಾ ಸ್ನೇಹಿತರೆ. ಹೌದು ನಂಬಿಕೆ ಇಂದ ಯಾವುದೇ ಕೆಲಸ ಮಾಡಿದರೆ ಆ ಕೆಲಸ ಯಶಸ್ಸು ಕಾಣುವುದರಲ್ಲಿ ಸಂದೇಹವೇ ಇಲ್ಲ. ಹೀಗೆ ಯಶಸ್ಸು ನಮ್ಮ ಜೀವನದಲ್ಲಿ ಬಂದು ಒದಗಬೇಕು ಎಂದರೆ ಮತ್ತೊಂದು ಕೆಲಸವನ್ನು ನಾವು ಮಾಡಬೇಕು. ಅದು ಏನಾಪ್ಪ ಅಂದರೆ..
ಪೂಜಾ ಸಾಮಗ್ರಿಯ ಅಂಗಡಿಗಳಲ್ಲಿ ಅಥವಾ ಯಾವುದೇ ಅಂಗಡಿಯಿಂದ ಹರಳು ಉಪ್ಪನ್ನು ಮನೆಗೆ ತರಬೇಕು ಹಾಗೂ ಕಾಳು ಮೆಣಸು ತಂದು ಮನೆಯ ದೇವರ ಕೋಣೆಯಲ್ಲಿ ಇಟ್ಟು ಪ್ರತಿ ನಿತ್ಯ ಪೂಜೆ ಮಾಡಬೇಕು.
ಅವುಗಳನ್ನ ಹೇಗೆ ಪೂಜೆ ಮಾಡಬೇಕು ಎನ್ನುವುದನ್ನ ಹೇಳುತ್ತೀವಿ. ಉಪ್ಪು ಸುಮಾರಾಗಿ 1.5 ಕಿಲೋ ಅಷ್ಟು ಇರಬೇಕು ಆ ಒಂದು 1.5 ಕಿಲೋ ಉಪ್ಪನ್ನ ಕೆಂಪು ಬಟ್ಟೆಯಲ್ಲಿ ಹಾಕಿ ಕಟ್ಟಬೇಕು. ನಂತರ ಕಾಳು ಮೆಣಸನ್ನ ಒಂದು ಮುಷ್ಟಿಯಷ್ಟು ತೆಗೆದುಕೊಂಡು ಹಸಿರು ಬಟ್ಟೆಯಲ್ಲಿ ಕಟ್ಟಬೇಕು. ಇವುಗಳನ್ನು ನಿಮ್ಮ ಪೂಜಾ ಮಂದಿರದಲ್ಲಿ ಇಟ್ಟು ಪ್ರತಿ ನಿತ್ಯ ಪೂಜೆ ಮಾಡಬೇಕು. ಹನ್ನೊಂದು ದಿನಗಳ ಕಾಲ ಶ್ರದ್ಧೆ ಮತ್ತು ಭಕ್ತಿಯಿಂದ ಪೂಜೆ ಮಾಡಬೇಕು.
ಹೀಗೆ ಪೂಜೆ ಮಾಡುವುದರಿಂದ ನಿಮ್ಮ ಸಂಕಲ್ಪಗಳು ಸಿಧಿಸುತ್ತದೆ. ಕ್ರಮೇಣ ನೀವು ಕೈಗೊಂಡ ಕಾರ್ಯಗಳು ಯಾವುದೇ ವಿಘ್ನ ಇಲ್ಲದೇ ಕೈಗೂಡುತ್ತದೆ. ಈ ಹನ್ನೊಂದು ದಿನಗಳ ಕಾಲ ಪೂಜೆ ಮಡಿದ ನಂತರ ಉಪ್ಪನ್ನು ಹಾಗೂ ಕಾಳು ಮೆಣಸನ್ನ ಪ್ರತಿ ನಿತ್ಯ ನೀವು ಮಾಡುವ ಅಡುಗೆಯಲ್ಲಿ ಉಪಯೋಗಿಸಿ ಸೇವಿಸುತ್ತ ಬರಬೇಕು. ಆಗ ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗಿ ಕಾರ್ಯಗಳು ಸರಳವಾಗಿ ಸುಗಮವಾಗಿ ವಿಜಯ ಹೊಂದುತ್ತದೆ. ಹೀಗೆ ಅಂದುಕೊಂಡ ಕೆಲಸಗಳು ಯಶಸ್ವಿಯಾಗಬೇಕು ಎಂದರೆ ಈ ಉಪಾಯ ಮಾಡಿ.