ಕರ್ಕ ರಾಶಿಯ ಮಹಿಳೆಯರ ಗುಣಸ್ವಭಾವಗಳು

ನಾವು ಈ ಲೇಖನದಲ್ಲಿಕಟಕ ರಾಶಿಯ ಮಹಿಳೆಯರ ಗುಣ ಮತ್ತು ಸ್ವಭಾವಗಳ ಬಗ್ಗೆ ತಿಳಿದುಕೊಳ್ಳೋಣ. ಕಟಕ ರಾಶಿಯ ಸ್ತ್ರೀಯರು ಕೆಲವೊಂದು ವಿಚಾರಗಳಲ್ಲಿ ಬಹಳಷ್ಟು ಮುಗ್ಧರು ಭಾವಜೀವಿಗಳಾಗಿರುತ್ತಾರೆ. ಪ್ರೇಮ ಪ್ರೀತಿ ಈ ರೀತಿಯ ಯಾವುದಾದರೂ ನಂಬಿಕೆಗಳಿಗೆ ಅವರು ಅಂಟಿಕೊಂಡರೆ ಪ್ರಬಲವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಇವರ ಮನಸ್ಸಿನಲ್ಲಿ ಯಾವುದೇ ರೀತಿಯ ಕಲ್ಮಶಗಳಿರುವುದಿಲ್ಲ. ಅವರು ಸಂಪೂರ್ಣವಾಗಿ ಅವಲಂಬಿತರಾಗಿರುತ್ತಾರೆ.

ಈ ರೀತಿಯವರಿಗೆ ಗ್ರಹಣ ಶೀಲತೆ ಹೆಚ್ಚಾಗಿ ಇರುತ್ತದೆ. ಏಕಾಗ್ರತೆ ಮತ್ತು ಧೈರ್ಯ ಹೆಚ್ಚಾಗಿ ಕಂಡುಬರುತ್ತದೆ. ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಇವರು ಹಠದಿಂದ ಧೈರ್ಯದಿಂದ ತೆಗೆದುಕೊಳ್ಳುತ್ತಾರೆ. ಕಟಕ ರಾಶಿಯ ಸ್ತ್ರೀಯರು ಅತ್ಯಂತ ಸಂವೇದನಾಶೀಲರಾಗಿರುತ್ತಾರೆ. ಬೇರೆಯವರ ಚಿಕ್ಕ ಮಾತು ಸಹ ಇವರ ಮೇಲೆ ಗಾಢ ಪರಿಣಾಮವನ್ನು ಉಂಟುಮಾಡುತ್ತದೆ. ಬೇರೆಯವರು ಯಾರೇ ಏನೇ ಹೇಳಿದರೂ ಮನಸ್ಸಿನ ಮೇಲೆ ತೆಗೆದುಕೊಳ್ಳುತ್ತಾರೆ .

ಮರ್ಯಾದೆಗೆ ಮತ್ತು ಗೌರವಕ್ಕೆ ತುಂಬಾ ಬೆಲೆಯನ್ನು ಅಂದರೆ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಅವರ ಗೌರವಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುತ್ತಾರೆ. ಬೇರೆಯವರ ಮಾತಿಗೆ ತುಂಬಾ ಒತ್ತಡಕ್ಕೆ ಒಳಗಾಗುತ್ತಾರೆ. ಇವರ ಮನಸ್ಥಿತಿ ಸಹಜವಾಗಿ ಮರಳಲು ತುಂಬಾ ಸಮಯವನ್ನು ಹಿಡಿಯುತ್ತದೆ. ಇವರಿಗೆ ಕಲ್ಪನಾ ಶಕ್ತಿಯು ಹೆಚ್ಚಾಗಿ ಇರುತ್ತದೆ. ಕೆಲವು ನಡೆದು ಹೋಗಿರುವ ವಿಚಾರಗಳು, ಹಿಂದಿನ ಕೆಲವು ನೆನಪುಗಳು‌ ಇವರಲ್ಲಿ ಬಹಳಷ್ಟು ಇವರ ಮನಸ್ಸಿನಲ್ಲಿ ಬೇರೂರಿರುತತ್ತದೆ .

ಕೆಲವು ಸಣ್ಣ ಪುಟ್ಟ ವಿಚಾರಗಳನ್ನು ಇವರು ಬಹಳ ದೊಡ್ಡದಾಗಿ ತೆಗೆದುಕೊಳ್ಳುತ್ತಾರೆ. ಕಟಕ ರಾಶಿಯ ಸ್ತ್ರೀಯರು ಅವರ ಮನಸ್ಸಿನಲ್ಲಿ ಇರುವಂತಹ ವಿಚಾರಗಳನ್ನು ಬೇರೆಯವರ ಹತ್ತಿರ ಹಂಚಿಕೊಳ್ಳುತ್ತಾರೆ. ತಪ್ಪು ಮಾಡುವ ವ್ಯಕ್ತಿತ್ವದವರಲ್ಲ ಹಾಗಾಗಿ ಇವರು ಹೆದರುವ ಪರಿಸ್ಥಿತಿಯೇ ಇವರಿಗೆ ಇರುವುದಿಲ್ಲ . ಹಾಗಾಗಿ ತಮ್ಮ ಮನಸ್ಸಿನಲ್ಲಿ ಅನಿಸಿದ್ದನ್ನು ನೇರವಾಗಿ ಹೇಳಿಕೊಂಡು ಬಿಡುತ್ತಾರೆ. ಕಟಕ ರಾಶಿಯ ಸ್ತ್ರೀಯರು ಮಾತೃತ್ವದ ವಿಶೇಷ ಪ್ರವೃತ್ತಿಯನ್ನು ಹೊಂದಿರುತ್ತಾರೆ.

ವಿಶೇಷವಾದ ಗೌರವವನ್ನು ಅಣ್ಣ ತಮ್ಮಂದಿರ ಮೇಲೆ ಸಂಬಂಧಿಕರ ಮೇಲೆ ಇಟ್ಟುಕೊಂಡಿರುತ್ತಾರೆ. ಮಾತೃತ್ವದ ಭಾವನೆ ಹೆಚ್ಚಿಗೆ ಇರುತ್ತದೆ. ಕಟಕ ರಾಶಿಯ ಸ್ತ್ರೀಯರಲ್ಲಿ ಹಿಂದೆ ನಡೆದಿರುವಂತಹ ಕಹಿ ಘಟನೆಗಳು ಅಥವಾ ಬೇರೆ ಯಾವುದೇ ಘಟನೆಗಳಾದರೂ ಸಹ ಇವರ ಮನಸ್ಸಿನಲ್ಲಿ ಉಳಿದುಕೊಂಡು ಬಿಟ್ಟಿರುತ್ತದೆ. ಕಟಕ ರಾಶಿಯ ಮಹಿಳೆಯರಿಗೆ ವೃಶ್ಚಿಕ ರಾಶಿಯ ಪುರುಷರು ಬಹಳ ಹೊಂದಿಕೊಳ್ಳುತ್ತಾರೆ. ಕಟಕ ರಾಶಿಯ ಸ್ತ್ರೀಯರಿಗೆ ಅಂದರೆ ವೃಶ್ಚಿಕ ರಾಶಿಯ ಪುರುಷರ ದಾಂಪತ್ಯ ಜೀವನ ತುಂಬಾ ಚೆನ್ನಾಗಿರುತ್ತೆ.

ಸಂಶಯಕ್ಕೆ ಕಟಕ ರಾಶಿಯ ಸ್ತ್ರೀಯರು ಎಡೆ ಮಾಡಿಕೊಳ್ಳುವುದಿಲ್ಲ. ಇವರು ಆದಷ್ಟು ಶುದ್ಧ ಹಸ್ತರಾಗಿರುತ್ತಾರೆ. ಆದಷ್ಟು ಕಟಕ ರಾಶಿಯ ಸ್ತ್ರೀಯರ ನಡೆ ನುಡಿ ತುಂಬಾ ಉತ್ತಮವಾಗಿರುತ್ತದೆ. ಗೌರವಕ್ಕೆ ತುಂಬಾ ಮನ್ನಣೆಯನ್ನು ಕೊಡುತ್ತಾರೆ. ತುಂಬಾ ಪರಿಶ್ರಮ ಉಳ್ಳ ಜೀವಿಗಳಾಗಿರುತ್ತಾರೆ. ಯಾವುದೇ ಕೆಲಸ ಕೊಟ್ಟರು ಇವರು ಚಾಚು ತಪ್ಪದೇ ಪಾಲಿಸುತ್ತಾರೆ . ಸ್ವಲ್ಪ ವಿಶ್ರಾಂತಿಯನ್ನು ಸಹ ಬಯಸುತ್ತಾರೆ. ಕಟಕ ರಾಶಿಯ ಸ್ತ್ರೀಯರು ಬಹಳ ನಿಷ್ಟೂರವಾಗಿರುತ್ತಾರೆ.

ಹಿಂದೂ ಮುಂದೆ ನೋಡದೆ ಬಹಳ ನೇರವಾಗಿ ಮಾತನಾಡುವಂತಹ ವ್ಯಕ್ತಿತ್ವದವರಾಗಿರುತ್ತಾರೆ. ಗೌರವ ಆದರಗಳಿಗೆ ಇವರ ಮನಸ್ಸು ವಾಲುತ್ತದೆ. ಇವರು ಯಾರನ್ನು ನಂಬಿರುತ್ತಾರೋ ಅವರಿಗೆ ಸಮರ್ಪಣಾ ಭಾವದಲ್ಲಿ ಮುಚ್ಚು ಮರೆ ಇಲ್ಲದೆ ಜೀವನ ನಡೆಸಲು ಯತ್ನಿಸುತ್ತಾರೆ. ಆರ್ಥಿಕ ಸಮಸ್ಯೆಯ ಕುರಿತು ಪತಿ ಪತ್ನಿಯರಲ್ಲಿ ಚಿಂತನೆಗಳು ನಡೆಯುತ್ತಿರುತ್ತದೆ. ಆರೋಗ್ಯದ ವಿಚಾರದಲ್ಲಿ ಇವರಿಗೆ ತುಂಬಾ ಚಿಂತೆ ಇರುತ್ತದೆ. ಒಂದು ಸಣ್ಣ ವಿಚಾರವನ್ನು ಇವರು ಹೆಚ್ಚಿಗೆ ತೆಗೆದುಕೊಳ್ಳುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಭವಿಷ್ಯದ ಮೇಲೆ ಭಯವಿರಬಾರದು ಯಾವುದೇ ಸಮಸ್ಯೆ ಇದ್ದರೂ ಸಹ ಸರಿ ಮಾಡಿಕೊಳ್ಳುತ್ತೇನೆ ಎಂಬ ವಿಶ್ವಾಸವನ್ನು ಇಟ್ಟುಕೊಳ್ಳಬೇಕು. ಹಾಗಾದರೆ ಮಾತ್ರ ಆ ಸಮಸ್ಯೆಯಿಂದ ಹೊರಬರಲು ಕಟಕ ರಾಶಿಯ ಸ್ತ್ರೀಯರಿಗೆ ಸಾಧ್ಯವಾಗುತ್ತದೆ.

Leave a Comment