ಜೂನ್ ತಿಂಗಳ ಮಕರ ರಾಶಿಯ ಮಾಸ ಭವಿಷ್ಯ

0

ನಾವು ಈ ಲೇಖನದಲ್ಲಿ ಜೂನ್ ತಿಂಗಳ ಮಕರ ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಮಕರ ರಾಶಿಯ ಲಾಂಛನವು ಮೊಸಳೆ ಆಗಿರುತ್ತದೆ. ರಾಶ್ಯಾಧಿಪತಿಯೂ ಶನಿಯ ಆಗಿರುತ್ತಾನೆ. ದಕ್ಷಿಣದ ದಿಕ್ಕಾಗಿರುತ್ತದೆ. ಇವರು ಸೌಮ್ಯ ಸ್ವಭಾವದ ವ್ಯಕ್ತಿತ್ವದವರಾಗಿರುತ್ತಾರೆ. ರಾಶಿಯ ರತ್ನ ನೀಲವಾಗಿರುತ್ತದೆ. ಅದೃಷ್ಟದ ಬಣ್ಣ ನೀಲಿ ಮತ್ತು ಕಪ್ಪಾಗಿರುತ್ತದೆ. ಅದೃಷ್ಟದ ದಿನಗಳು ಶನಿವಾರ ಮತ್ತು ಶುಕ್ರವಾರವಾಗಿರುತ್ತದೆ . ಅದೃಷ್ಟದ ದೇವತೆ ಶ್ರೀ ಶನೇಶ್ವರ ಸ್ವಾಮಿ ಆಗಿರುತ್ತದೆ. ಅದೃಷ್ಟದ ಸಂಖ್ಯೆ ಆರು,

ಏಳು , ಎಂಟು , ಆಗಿರುತ್ತದೆ. ಅದೃಷ್ಟದ ದಿನಾಂಕ ಎಂಟು, ಹದಿನೇಳು, ಇಪ್ಪತ್ತಾರು ಆಗಿರುತ್ತದೆ. ಮಿತ್ರ ರಾಶಿಯು ಕುಂಭ ರಾಶಿ ಆಗಿರುತ್ತದೆ . ಮತ್ತು ಶತ್ರು ರಾಶಿಯು ಸಿಂಹವಾಗಿರುತ್ತದೆ. ಈ ರಾಶಿಯ ನಕ್ಷತ್ರ ಉತ್ತರಾಷಾಡದ ಎರಡು ಮತ್ತು ಮೂರು ಮತ್ತು ನಾಲ್ಕನೇ ಚರಣ ಶ್ರವಣ ನಕ್ಷತ್ರದ ನಾಲ್ಕು ಚರಣಗಳು ಧನಿಷ್ಠ ನಕ್ಷತ್ರದ ಮೊದಲೆರಡು ಚರಣಗಳು ಮಕರ ರಾಶಿಗೆ ಸೇರಿರುತ್ತದೆ. ಜೂನ್ ತಿಂಗಳಲ್ಲಿ ಬಹಳಷ್ಟು ಒಳ್ಳೆಯ ಫಲಗಳು ನಿಮಗೆ ಸಿಗುತ್ತದೆ. ನಿಮ್ಮ ಸಂಬಂಧಿಕರಿಂದ ಸಹೋದರರಿಂದ ತಂದೆ ತಾಯಿಗಳಿಂದ ಸ್ನೇಹಿತ ವರ್ಗದಿಂದ ಒಳ್ಳೆಯ ಅನುಕೂಲತೆಗಳು ದೊರೆಯುತ್ತದೆ . ಇವರಿಂದ ಸಹಾಯವೂ ಕೂಡ ನಿಮಗೆ ದೊರಕಲಿದೆ.

ಸ್ನೇಹಿತರಿಂದ ಉದ್ಯೋಗ ವರ್ಗದಲ್ಲಿ ತುಂಬಾ ಅನುಕೂಲತೆಗಳು ದೊರಕುತ್ತದೆ. ಸರಕಾರಿ ಮತ್ತು ಅರೆ ಸರ್ಕಾರಿ ನೌಕರಿಗಳಲ್ಲಿ ಕೆಲಸ ಮಾಡುವವರಿಗೆ, ನೆರೆಯವರು ಮತ್ತು ಸ್ನೇಹಿತ ವರ್ಗದಿಂದ ನಿಮಗೆ ಸಹಾಯ ದೊರಕುತ್ತದೆ. ಬಹಳಷ್ಟು ಯಶಸ್ಸನ್ನು ಕಾಣುತ್ತೀರ ಅರ್ಧಕ್ಕೆ ನಿಂತು ಹೋದಂತಹ ಕೆಲಸಗಳು ಶುರುವಾಗುತ್ತದೆ. ನೀವು ಬೇರೆಯವರಿಗೆ ಕೊಡುವ ಹಣವನ್ನು ಕೊಟ್ಟು ಮುಗಿಸಿಕೊಳ್ಳುತ್ತೀರ ಮತ್ತು ನಿಮಗೆ ಬರಬೇಕಾದಂತಹ ಹಣವು ಬೇಗ ವಾಪಸ್ ನಿಮಗೆ ಸಿಗುತ್ತದೆ.

ಹಣಕಾಸಿನ ವಿಚಾರದಲ್ಲಿ ಬಹಳಷ್ಟು ಅಭಿವೃದ್ಧಿಗಳು ನಿಮಗೆ ದೊರಕುತ್ತದೆ. ಕೆಲವೊಂದು ಕೆಲಸದಲ್ಲಿ ನೀವು ತೊಂದರೆಯನ್ನು ತೆಗೆದುಕೊಂಡರೆ ಅಥವಾ ಶ್ರಮವನ್ನು ಹಾಕಿದರೆ ನಿಮಗೆ ಅದರಿಂದ ಒಳ್ಳೆಯ ಪ್ರತಿಫಲ ದೊರಕುತ್ತದೆ. ನಿಮ್ಮ ಆತ್ಮವಿಶ್ವಾಸದಿಂದ ನಿಮಗೆ ಒಳ್ಳೆಯ ಪ್ರತಿಫಲ ದೊರಕುತ್ತದೆ. ನೀವು ಹಠವಾದಿ ಮತ್ತು ಛಲವಾದಿಯಾಗಿರುತ್ತೀರಾ ಬೇರೆಯವರ ಅಧೀನದಲ್ಲಿ ಬದುಕಲು ನಿಮಗೆ ಸಾಧ್ಯವಿಲ್ಲ. ಈ ರೀತಿಯ ಮನಸ್ಥಿತಿ ಮಕರ ರಾಶಿಯವರಿಗೆ ಇರುತ್ತದೆ. ದೀರ್ಘಕಾಲಿನ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಆರೋಗ್ಯದಲ್ಲಿ ಚೇತರಿಕೆಯೂ ಸಹ ಉಂಟಾಗುತ್ತದೆ. ದೈಹಿಕವಾಗಿ ನಿಮಗೆ ಒಂದು ರೀತಿಯ ಚೇತರಿಕೆ ಉಂಟುಮಾಡುತ್ತದೆ.

ಇದರಿಂದ ಮನಸ್ಸಿಗೆ ಒಳ್ಳೆಯ ಉತ್ಸಾಹ ಸಿಗುತ್ತದೆ. ಇದರಿಂದ ಒಳ್ಳೆಯ ಕೆಲಸಗಳನ್ನು ಹೆಚ್ಚಿಗೆ ಮಾಡಲು ನಿಮಗೆ ಪ್ರೇರೇಪಣೆ ಸಿಗುತ್ತದೆ. ವಿವಿಧ ಮೂಲಗಳಿಂದ ಧನಪ್ರಾಪ್ತಿಯಾಗುವ ಸನ್ನಿವೇಶಗಳು ಕಂಡುಬರುತ್ತದೆ. ಮನಸ್ಸು ಸದಾ ಉತ್ಸುಕತೆಯಿಂದ ಕೂಡಿರುತ್ತದೆ. ಮಕರ ರಾಶಿಯವರು ಸದಾ ನಾಯಕತ್ವದ ಮತ್ತು ಮುಂಚೂಣಿಯಲ್ಲಿರುವಂತಹ ವ್ಯಕ್ತಿತ್ವದವರಾಗಿರುತ್ತಾರೆ. ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತದೆ. ವಿವಾಹದ ಕೆಲಸಗಳಲ್ಲಿ ಸಣ್ಣಪುಟ್ಟ ಕಾರ್ಯಗಳು ಜರಗುತ್ತದೆ.

ಶುಭ ಮತ್ತು ಸಂತೋಷದ ವಿಚಾರಗಳನ್ನು ಕೇಳುತ್ತೀರಾ. ಶುಭ ಸಮಾರಂಭಗಳಲ್ಲಿ ಭಾಗವಹಿಸುವುದು ಮತ್ತು ಪ್ರಮುಖ ಪಾತ್ರಗಳನ್ನು ತೆಗೆದುಕೊಳ್ಳುತ್ತೀರಾ. ಪ್ರಯಾಣವನ್ನು ಮಾಡುವುದು ಈ ರೀತಿಯ ಸನ್ನಿವೇಶಗಳು ಕಂಡುಬರುತ್ತದೆ. ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡುವುದು ವಿಶೇಷ ಧಾರ್ಮಿಕ ಕ್ಷೇತ್ರಗಳ ಬೇಟಿಯಾಗುವುದು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆ ಮಾಡುವಂತಹ ಸಂದರ್ಭ ಬರುತ್ತದೆ. ಶ್ರೀ ಮಾತೆ ಲಕ್ಷ್ಮಿ ಕೃಪಾಕಟಾಕ್ಷ ನಿಮಗೆ ಇರುತ್ತದೆ. ದುಂದು ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬೇಕು ನಿಮ್ಮ ಖರ್ಚಿನ ಬಗ್ಗೆ ನಿಗಾವಹಿಸಿ. ಯಾವುದೇ ರೀತಿಯ ಭೋಗದ ವಸ್ತುಗಳನ್ನು ಖರೀದಿಸಲು ಹೋಗಬೇಡಿ.

ಶಿಕ್ಷಕರಿಗೆ ಮತ್ತು ಅರೆ ಸರ್ಕಾರಿ ಮತ್ತು ಸರ್ಕಾರಿ ಕೆಲಸ ಮಾಡುವವರಿಗೆ ಬಹಳಷ್ಟು ಅನುಕೂಲತೆಗಳು ಕಂಡುಬರುತ್ತದೆ. ಆರೋಗ್ಯದಲ್ಲಿ ಒಳ್ಳೆಯ ಚೇತರಿಕೆ ಕಂಡು ಬರುತ್ತದೆ. ಬಹಳ ದಿನಗಳಿಂದ ನೀವು ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕೆ ಪರಿಹಾರವೂ ದೊರಕುತ್ತದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಮನಸ್ಸು ವಾಲುತ್ತದೆ. ಮತ್ತು ಪತಿ ಪತ್ನಿಯರಲ್ಲಿ ಬಹಳಷ್ಟು ಹೊಂದಾಣಿಕೆ ಇರುತ್ತದೆ. ಮತ್ತು ಪ್ರೇಮಿಗಳಲ್ಲಿ ಸಾಮರಸ್ಯ ಕಂಡುಬರುತ್ತದೆ. ಮಕರ ರಾಶಿಯವರಿಗೆ ಇದು ಒಂದು ಶುಭಕಾಲವಾಗಿರುತ್ತದೆ. ದಾಂಪತ್ಯ ವಿಚಾರದಲ್ಲಿ ನಿಮಗೆ ಬಹಳ ಒಳ್ಳೆಯ ವಾತಾವರಣವಿರುತ್ತದೆ. ದೂರ ಪ್ರಯಾಣ ಮಾಡುವವರಿಗೆ ಒಳ್ಳೆಯ ಲಾಭ ಕಂಡು ಬರುತ್ತದೆ. ಮನಸ್ಸಿನ ಭಾರ ಕಡಿಮೆಯಾಗುತ್ತದೆ.

ಚಿಂತೆಯು ದೂರವಾಗುತ್ತದೆ. ರಾಜಕಾರಣಿಗಳಿಗೆ ಸ್ಥಾನಮಾನದ ಮೇಲೆ ಬಹಳಷ್ಟು ಆಸಕ್ತಿ ಕಂಡು ಬರುತ್ತದೆ. ಆ ಸ್ಥಾನಮಾನಗಳು ಖಂಡಿತವಾಗಿಯೂ ನಿಮಗೆ ಲಭಿಸುತ್ತದೆ . ಕಲಾವಿದರಿಗೆ ಗ್ರಾಮೀಣ ಮಟ್ಟದಲ್ಲಿರುವ ಕಲಾವಿದರಿಗೆ ಚಿತ್ರೋದ್ಯಮದಲ್ಲಿರುವವರಿಗು ಸಹ ಇಂತಹ ಕಲೆಗಾರರುಗಳಿಗೆ ಒಳ್ಳೆಯ ಬೆಲೆ ಸಿಗುತ್ತದೆ. ಅವರ ಕೆಲಸಕ್ಕೆ ತಕ್ಕಂತೆ ಪ್ರಶಂಸೆಯೂ ಸಹ ಕೂಡ ದೊರಕುತ್ತದೆ . ಆದರೆ ಸಿಕ್ಕಿರುವಂತಹ ಕೆಲಸವನ್ನ ಸರಿಯಾಗಿ ಸದುಪಯೋಗಪಡಿಸಿಕೊಳ್ಳಿ. ಒಟ್ಟಾರೆಯಾಗಿ ಈ ತಿಂಗಳಿನಲ್ಲಿ ನಿಮಗೆ ಒಳ್ಳೆಯ ಫಲವೇ ದೊರಕುತ್ತದೆ. ಆದರೆ ಕೆಲವೊಂದು ಹಣಕಾಸಿನ ವಿಚಾರದಲ್ಲಿ ಸಂಬಂಧಿಕರ ವಿಚಾರದಲ್ಲಿ ಎಚ್ಚರಿಕೆಯನ್ನು ಪಾಲಿಸಬೇಕಾಗುತ್ತದೆ. ತಾಯಿ ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿಕೊಳ್ಳಿ.

Leave A Reply

Your email address will not be published.