ಅಪ್ಪಿ ತಪ್ಪಿಯೂ ಮಹಿಳೆ ಈ ಕೆಲಸಗಳನ್ನು ಮಾಡುವಾಗ ಪುರುಷ ಏಕೆ ನೋಡಬಾರದು ಎಂದು ತಿಳಿಯೋಣ

ನಾವು ಈ ಲೇಖನದಲ್ಲಿ ಅಪ್ಪಿ ತಪ್ಪಿಯೂ ಮಹಿಳೆ ಈ ಕೆಲಸಗಳನ್ನು ಮಾಡುವಾಗ ಪುರುಷ ಏಕೆ ನೋಡಬಾರದು ಎಂದು ತಿಳಿಯೋಣ. ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ಮಹತ್ವದ ಸ್ಥಾನ ಕಲ್ಲಿಸಲಾಗಿದೆ. ಗರುಡ ಪುರಾಣದ ಹತ್ತೊಂಬತ್ತು ಪದ್ಯಗಳಲ್ಲಿ ಪಾಪ – ಕರ್ಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಗರುಡ ಪುರಾಣದ ಪ್ರಕಾರ ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಪುರುಷರು ನೋಡಲೇಬಾರದು . ಒಂದು ವೇಳೆ ನೋಡಿದರೆ, ಅವರಿಗೆ ನರಕ ಪ್ರಾಪ್ತಿಯಾಗುತ್ತದೆ. ಹಾಗಾದರೆ ಆ ಕೆಲಸಗಳು ಯಾವುದು ಎಂದು ನೋಡೋಣ .

ನಾವು ಹಿಂದಿನ ಜನ್ಮದಲ್ಲಿ ಮಾಡಿರೋ ಕೆಲಸಗಳಿಂದ ಮುಂದಿನ ಜನ್ಮದಲ್ಲಿ ನಮಗೆ ಕೆಟ್ಟದ್ದು ಆಗಬಹುದು . ಅಥವಾ ಒಳ್ಳೆಯದ್ದು ಆಗಬಹುದು . ಒಳ್ಳೆಯ ಕೆಲಸ ಮಾಡಿದರೆ , ಒಳ್ಳೆಯದ್ಧನ್ನೇ ಅನುಭವಿಸುತ್ತೇವೆ. ಇನ್ನೂ ಕೆಟ್ಟ ಕೆಸ ಮಾಡಿದರೆ , ಖಂಡತ ಕೆಟ್ಟದಾಗುತ್ತದೆ. ಹಾಗೂ ನರಕದಲ್ಲೂ ನಮಗೆ ಆತ್ಮ ತೃಪ್ತಿ ಅನ್ನೋದು ಇರುವುದಿಲ್ಲ .

ವಿಷ್ಣುವು ಗರುಡ ಪುರಾಣವನ್ನು ಗರುಡನಿಗೆ ಹೇಳುತ್ತಿರಬೇಕಾದರೆ, ಕೆಲವೊಂದು ವಿಚಾರಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ. ಅದರಲ್ಲೂ ಮಹಿಳೆಯರ ಬಗ್ಗೆ ಕೆಲವೊಂದು ಕೌತುಕದ ಸಂಗತಿಗಳ ಬಗ್ಗೆಯೂ ತಿಳಿಸಲಾಗಿದೆ. ಮಹಿಳೆಯರು ಈ ಎರಡು ಕೆಲಸಗಳನ್ನು ಮಾಡುವಾಗ ಪುರುಷರು ಅಪ್ಪಿ ತಪ್ಪಿಯೂ ನೋಡಬಾರದು, ಒಂದು ಸಾರಿ ತಪ್ಪಿ ನೋಡಿದರೂ ಕೂಡ ಆತನಿಗೆ ನರಕ ಪ್ರಾಪ್ತಿಯಾಗುವುದನ್ನು ಯಾರಿಂದಲೂ ತಪ್ಪಿಸುವುದಕ್ಕೆ ಆಗೋದಿಲ್ಲ .

1 . ಮಗುವಿಗೆ ಹಾಲು ಉಣಿಸುವಾಗ , ಗರುಡ ಪುರಾಣದ ಪ್ರಕಾರ ಮಹಿಳೆಯರು ಮಗುವಿಗೆ ಹಾಲು ಉಣಿಸುವಾಗ ಪುರುಷರು ನೋಡಬಾರದು . ಸಾಮಾನ್ಯವಾಗಿ ಮಗು ಹಾಲು ಕುಡಿಯುವಾಗ ಮುಗ್ಧತೆಯಿಂದ ಇರುತ್ತದೆ. ಹಾಗೂ ಹಾಲು ಕುಡಿಯುವುದರಲ್ಲೇ ತಲ್ಲೀನವಾಗಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಯಾವುದಾದರೂ ಪುರುಷ ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡಿದರೆ ಆತನಿಗೆ ಖಂಡಿತ ಪಾಪ ಪ್ರಾಪ್ತಿಯಾಗುತ್ತದೆ. ಇಂತಹ ನಾಚಿಕೆ ಇಲ್ಲದ ಮನುಷ್ಯನ ನರಕದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾನೆ.

2 . ಮಹಿಳೆ ಸ್ನಾನ ಮಾಡುವಾಗ , ಗರುಡ ಪುರಾಣದ ಪ್ರಕಾರ ಮಹಿಳೆ ಸ್ನಾನ ಮಾಡುವಾಗ ಪರ ಪುರುಷ ಕೆಟ್ಟ ದೃಷ್ಟಿಯಿಂದ ನೋಡುವುದು ಮಹಾ ಪಾಪ . ಇಂತಹ ಕೆಟ್ಟ ಮನಸ್ಥಿತಿ ಇರುವ ಪುರುಷ ಸತ್ತ ನಂತರ ನೇರವಾಗಿ ನರಕಕ್ಕೆ ಹೋಗುತ್ತಾನೆ. ಇಲ್ಲಿ ಆತನಿಗೆ ಚಿತ್ರ ಹಿಂಸೆಯನ್ನು ನೀಡಲಾಗುತ್ತದೆ. ಆದ್ದರಿಂದ ಪುರುಷರು ಮಹಿಳೆಯರು ಸ್ನಾನ ಮಾಡುತ್ತಿರುವುದನ್ನು ನೋಡಬಾರದು . ಮಹಿಳೆಯರ ಮೇಲೆ ಪುರುಷರು ಗೌರವವನ್ನು ಕಾಪಾಡುವುದು ತುಂಬಾನೇ ಮುಖ್ಯ .

ಗರುಡ ಪುರಾಣದ ಪ್ರಕಾರ ಓರ್ವ ಪುರುಷನು ಈ ಮೇಲಿನ 2 ತಪ್ಪುಗಳನ್ನು ಮಾಡಿದರೆ, ಅವನು ಮರಣಾ ನಂತರ ನರಕವನ್ನು ಸೇರುತ್ತಾನೆ ಎನ್ನಲಾಗಿದೆ. ಅಷ್ಟು ಮಾತ್ರವಲ್ಲ, ಆ ವ್ಯಕ್ತಿಯು ನರಕದಲ್ಲಿ ಚಿತ್ರ ಹಿಂಸೆಯನ್ನು ಎದುರಿಸುತ್ತಾನೆ ಎಂದು ಉಲ್ಲೇಖಿಸಲಾಗಿದೆ.

Leave a Comment