ನಾವು ಈ ಲೇಖನದಲ್ಲಿ ಪಾತ್ರೆಗಳನ್ನು ಉಲ್ಟಾ ಇಟ್ಟರೆ ಕಷ್ಟ ಹೇಗೆ ಬರುತ್ತದೆ. ಎಂಬುದನ್ನು ನೋಡೋಣ.
ಅಡುಗೆ ಮನೆಯಲ್ಲಿ ಈ ಎರಡು ಪಾತ್ರೆಗಳನ್ನು ಯಾವುದೇ ಕಾರಣಕ್ಕೂ ಉಲ್ಟಾ ಇಡಬಾರದು . ಇಟ್ಟರೆ ಬಡತನ ಬರುತ್ತದೆ . ಅಡುಗೆ ಮನೆ ಸದಸ್ಯರ ಹೊಟ್ಟೆ ತುಂಬಿಸುವ ಪ್ರಮುಖ ಸ್ಥಳ ಅಷ್ಟೇ ಅಲ್ಲದೆ , ಇಡೀ ಮನೆಗೆ ಅಡುಗೆ ಮನೆಯಿಂದ ಸಕಾರಾತ್ಮಕ ಶಕ್ತಿ ರವಾನೆ ಆಗುವ ಸ್ಥಳ ಆಗಿರುತ್ತದೆ . ಹಾಗಾಗಿ ಅಡುಗೆ ಮನೆಯಲ್ಲಿ ನಾವು ಮಾಡುವ ಚಿಕ್ಕ ಪುಟ್ಟ ತಪ್ಪುಗಳಿಂದ ಮನೆಯಲ್ಲಿ ಹಣಕಾಸಿನ ವ್ಯವಸ್ಥೆ ಹದಗೆಡುತ್ತದೆ .
ಮತ್ತು ಆರೋಗ್ಯದ ಸಮಸ್ಯೆ ಕೂಡ ಕಾಡಬಹುದು. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ , ಅಡುಗೆ ಮನೆಯಲ್ಲಿ ಮಾಡುವ ತಪ್ಪುಗಳಿಂದ ಆರ್ಥಿಕ ಸಮಸ್ಯೆಗಳು ಮಾನಸಿಕ ಸಮಸ್ಯೆಗಳು ಮತ್ತು ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತದೆ . ಅಡುಗೆ ಮನೆಯಲ್ಲಿ ಆಗುವ ಸಣ್ಣ ಪುಟ್ಟ ತಪ್ಪುಗಳನ್ನು ಸರಿ ಮಾಡಿಕೊಂಡರೆ , ಸಂತೋಷ ಮತ್ತು ಸಮೃದ್ಧಿಯನ್ನು ಕಾಣಬಹುದು . ಒಲೆಯ ಮೇಲೆ ಏನನ್ನು ಮಾಡದೇ ಇದ್ದಾಗ ಪಾತ್ರೆಗಳನ್ನು ಇಡುವುದು ಅನೇಕರಿಗೆ ಅಭ್ಯಾಸವಾಗಿರುತ್ತದೆ . ಆದರೆ ಅಡುಗೆ ಮಾಡದೆ ಇದ್ದಾಗ ಒಲೆಯ ಮೇಲೆ ಪಾತ್ರೆಗಳನ್ನು ಖಾಲಿ ಇಡಬಾರದು . ಹೀಗೆ ಇಡುತ್ತಿದ್ದರೆ ,
ಈ ಅಭ್ಯಾಸವನ್ನ ಬದಲಾಯಿಸಿಕೊಳ್ಳಿ . ಒಲೆಯ ಮೇಲೆ ಖಾಲಿ ಪಾತ್ರೆಗಳನ್ನ ಇಡುವುದು ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಹಾಳು ಮಾಡುತ್ತದೆ .ಯಾವುದೇ ಕಾರಣವಿಲ್ಲದೆ ವೆಚ್ಚಗಳು ಸೃಷ್ಟಿಯಾಗುತ್ತದೆ .ಮತ್ತೆ ಈ ಕಾರಣದಿಂದ ಮನೆಯಲ್ಲಿ ಜಗಳ ಅಸಮಾಧಾನ ಮನೆ ಮಾಡುತ್ತದೆ . ಯಾವುದೋ ಕಾರಣಕ್ಕೆ ಅಥವಾ ಸೋಮಾರಿತನದಿಂದ ಕೊಳಕು ಪಾತ್ರೆಗಳನ್ನು ಅಡುಗೆ ಮನೆಯ ಸಿಂಕ್ ನಲ್ಲಿ ಬಿಡುವುದು ಅನೇಕರ ಅಭ್ಯಾಸ ಆಗಿರುತ್ತದೆ . ಸಾಮಾನ್ಯವಾಗಿ ಊಟದ ನಂತರ ಪಾತ್ರೆಗಳನ್ನು ಸಿಂಕ್ ನಲ್ಲಿ ಹಾಕುತ್ತಾರೆ .
ಆದರೆ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಕೊಳಕು ಪಾತ್ರೆಗಳನ್ನು ಬಿಡಬಾರದು . ಈ ಕಾರಣದಿಂದ ಮನೆಯಲ್ಲಿ ನಷ್ಟ ಆರಂಭವಾಗುತ್ತದೆ . ಇದು ಸಾಲಕ್ಕೆ ದಾರಿ ಮಾಡಿಕೊಡುತ್ತದೆ . ನಿಮ್ಮ ಶ್ರಮಕ್ಕೆ ಸರಿಯಾದ ಫಲಿತಾಂಶವನ್ನು ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ . ಅಡುಗೆ ಮನೆಯಲ್ಲಿ ಎಂದಿಗೂ ಕೊಳಕು ಪಾತ್ರೆಯನ್ನು ಇಡಬಾರದು . ಆಹಾರ ಸೇವಿಸಿದ ತಕ್ಷಣ ಪಾತ್ರೆಗಳನ್ನು ತೊಳೆಯಬೇಕು . ಸಾಮಾನ್ಯವಾಗಿ ತವವನ್ನು ಒಲೆಯ ಮೇಲೆ ಇಟ್ಟ ತಕ್ಷಣ ರೊಟ್ಟಿ ಅಥವಾ ಚಪಾತಿಯನ್ನು ಮಾಡುವುದಕ್ಕೆ ಪ್ರಾರಂಭಿಸುವುದು
ಹಲವರ ಅಭ್ಯಾಸ ಆಗಿರುತ್ತದೆ . ಆದರೆ ನಂಬಿಕೆಗಳ ಪ್ರಕಾರ ತವದಲ್ಲಿ ರೊಟ್ಟಿ ಮಾಡುವ ಮೊದಲು ಅದರ ಮೇಲೆ ಸ್ವಲ್ಪ ನೀರನ್ನು ಚುಮುಕಿಸಬೇಕು . ನೀರಿನಿಂದ ಪವಿತ್ರ ಗೊಳಿಸಬೇಕು . ನಂತರ ರೊಟ್ಟಿ ಮಾಡುವ ಮೂಲಕ ಅನ್ನಪೂರ್ಣಮಾತೆಯ ಆಶೀರ್ವಾದವನ್ನು ಪಡೆಯಬಹುದು . ಮತ್ತು ಮನೆಯಲ್ಲಿ ಯಾವುದೇ ರೀತಿಯ ಆಹಾರದ ಕೊರತೆ ಆಗುವುದಿಲ್ಲ . ಅದರ ಸಕಾರಾತ್ಮಕ ಫಲಿತಾಂಶ ಮನೆಯವರ ಆರೋಗ್ಯದ ಮೇಲೆ ಕೂಡ ಕಂಡು ಬರುತ್ತದೆ . ಅಡುಗೆ ಮನೆಯಲ್ಲಿ ತರಕಾರಿಗಳನ್ನು ಕತ್ತರಿಸಿ ಅಡುಗೆ ಮನೆಯಲ್ಲಿ ಒಂದು ಮೂಲೆಯಲ್ಲಿ ಕಸದ ಬುಟ್ಟಿಯಲ್ಲಿ ಹಾಕುತ್ತಾರೆ .
ಅನೇಕ ಜನರು ಅಡುಗೆ ಮನೆಯಲ್ಲಿ ಕಸದ ಬುಟ್ಟಿಯನ್ನು ಇಟ್ಟು ಅದರಲ್ಲಿ ಕಸವನ್ನು ಸಂಗ್ರಹಿಸುತ್ತಿರುತ್ತಾರೆ . ಹೀಗೇ ಮಾಡುವುದು ವಾಸ್ತು ಶಾಸ್ತ್ರದ ಪ್ರಕಾರವಾಗಿ ಒಳ್ಳೆಯದಲ್ಲ . ಹೀಗೆ ಮಾಡುವುದರಿಂದ ಮನೆಯ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ . ಮನೆಯ ಪರಿಸರದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ . ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹುವಿನ ದುಷ್ಪರಿಣಾಮವನ್ನು ಹೆಚ್ಚಾಗಿಸುತ್ತದೆ . ಹಾಗಾಗಿ ಅಡುಗೆ ಮನೆಯಲ್ಲಿ ಕಸದ ಬುಟ್ಟಿ ಇಡಬಾರದು .
ಪ್ರಾಯೋಗಿಕ ದೃಷ್ಟಿಕೋನದಿಂದ ಅಡುಗೆ ಮನೆಯಲ್ಲಿ ಚಪ್ಪಲಿ ಅಥವಾ ಶೂಗಳನ್ನು ಹಾಕಿಕೊಂಡು ಓಡಾಡುವುದು ತುಂಬಾ ದೊಡ್ಡ ತಪ್ಪು. ಧಾರ್ಮಿಕ ದೃಷ್ಟಿಕೋನದಲ್ಲಿ ಇದನ್ನು ಮಾಡುವುದು ಕೂಡ ಸರಿಯಲ್ಲ . ಅಡುಗೆ ಮನೆಗೆ ಪಾದರಕ್ಷೆ ಅಥವಾ ಚಪ್ಪಲಿಯನ್ನು ಹಾಕಿಕೊಂಡು ಹೋಗುವುದರಿಂದ , ಆಹಾರ ಕಲುಷಿತಗೊಂಡು ಮನೆಯವರ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ . ಹೇಗೆ ದೇವಸ್ಥಾನಗಳಿಗೆ ಚಪ್ಪಲಿಯನ್ನು ಹಾಕಿಕೊಂಡು ಹೋಗುವುದಿಲ್ಲವೋ ಹಾಗೆಯೇ ಅಡುಗೆ ಮನೆಗೆ ಚಪ್ಪಲಿಯನ್ನು ಧರಿಸಬಾರದು.
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಗೆ ಚಪ್ಪಲಿ ಅಥವಾ ಶೂ ಹಾಕುವುದರಿಂದ , ಆರ್ಥಿಕ ಪರಿಸ್ಥಿತಿಯಲ್ಲಿ ದುರ್ಬಲವಾಗುತ್ತದೆ . ಮುಂಜಾನೆ ಅಡುಗೆ ಮಾಡುವ ಮೊದಲು ಒಲೆಗೆ ನಮಸ್ಕಾರ ಮಾಡುವುದು ಮಂಗಳಕರ ಎಂದು ಹೇಳಲಾಗಿದೆ . ಒಲೆಯು ಅಗ್ನಿ ದೇವರ ರೂಪವಾಗಿದೆ . ಆದ್ದರಿಂದ ಬೆಳಿಗ್ಗೆ ಒಲೆ ಪೂಜೆ ಮಾಡಿ ಅಡುಗೆ ಮಾಡಲು ಪ್ರಾರಂಭ ಮಾಡಿ .
ಅನೇಕ ಜನರು ಕಡಿಮೆ ಉರಿ ಇಟ್ಟುಕೊಂಡು ಇತರೆ ಕೆಲಸ ಮಾಡಲು ಪ್ರಾರಂಭ ಮಾಡುತ್ತಾರೆ. ನಂಬಿಕೆ ಪ್ರಕಾರ ಈ ರೀತಿ ಮಾಡುವುದು ಮಂಗಳಕರ ಇದು ಪರಿಗಣಿಸಲಾಗುವುದಿಲ್ಲ . ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ .ಇಂತಹ ತಪ್ಪನ್ನು ಮಾಡಿದರೆ , ನಿಮ್ಮ ಹಣ ಹೇಗೆ ಖರ್ಚಾಗುತ್ತದೆ ಎಂಬುದು ನಿಮಗೆ ಸರಿಯಾದ ರೀತಿಯಲ್ಲಿ ತಿಳಿಯುವುದಿಲ್ಲ . ಅಂದರೆ ಹಣ ನೀರಿನಂತೆ ಖರ್ಚಾಗುತ್ತದೆ . ಬಹಳ ವರ್ಷಗಳಿಂದ ನೀವು ಒಂದೇ ತವವನ್ನು ಬಳಕೆ ಮಾಡುತ್ತಿದ್ದರೆ ,
ಹೀಗೆ ಹೆಚ್ಚು ದಿನ ಬಳಕೆ ಮಾಡಿದರೆ , ಅದರ ದೋಷ ಮನೆಗೆ ಸಂಭವಿಸುತ್ತದೆ . ನೀವು ಹಲವಾರು ಸಮಸ್ಯೆಗಳನ್ನು ಇದರಲ್ಲಿ ಎದುರಿಸಬೇಕಾಗುತ್ತದೆ . ಹಾಗಾಗಿ ಬಹಳ ವರ್ಷಗಳಿಂದ ಬಳಸುತ್ತಿರುವ ತವವನ್ನು ಅಡುಗೆ ಮನೆಯಲ್ಲಿ ಇಡಬೇಡಿ . ಯಾವುದೇ ಕಾರಣಕ್ಕೂ ರೊಟ್ಟಿಯ ಹಂಚನ್ನ ಉಲ್ಟಾ ಇಡಬಾರದು .ಮನೆಯಲ್ಲಿ ವಸ್ತುಗಳನ್ನು ಉಲ್ಟಾ ಇಡುವುದು , ಅಥವಾ ಕಡಾಯಿ ಮತ್ತು ತವ ಉಲ್ಟಾ ಇಡುವುದು ಸೂತಕದ ಸಮಯದಲ್ಲಿ ಮಾತ್ರ . ಆದರೆ ಮನೆಯಲ್ಲಿ ಯಾರಾದರೂ ಇಲ್ಲ ಅಂದಾಗ ಮಾತ್ರ ಮನೆಯಲ್ಲಿ ಹಂಚನ್ನ ಉಲ್ಟಾ ಇಡಲಾಗುತ್ತದೆ .
ನೀವು ಅಡುಗೆ ಮಾಡುವ ಹಂಚನ್ನ ತಕ್ಷಣವೇ ತೊಳೆಯುವುದಕ್ಕೆ ಹಾಕುವುದು ಅಥವಾ ಅದು ಬೇಗನೆ ತಣ್ಣಗಾಗಲಿ ಎಂದು ನೀರನ್ನು ಚಿಮುಕಿಸುವುದನ್ನು ಮಾಡಬಾರದು . ಈ ರೀತಿ ಮಾಡುವುದರಿಂದ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ . ಆದ್ದರಿಂದ ಅಡುಗೆ ಮಾಡಿದ ತಕ್ಷಣ ಆ ಹಂಚನ್ನು ಸ್ವಚ್ಛ ಮಾಡಲು ಇಡಬೇಡಿ .ಅಥವಾ ಅದಕ್ಕೆ ನೀರನ್ನು ಚಿಮುಕಿಸಬೇಡಿ . ಪೂರ್ತಿಯಾಗಿ ಆರಿದ ಮೇಲೆ ಸ್ವಚ್ಛ ಮಾಡಲು ಇಡಿ . ವಾಸ್ತು ಪ್ರಕಾರ ಕೆಲವೊಂದು ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡಬಾರದು .
ಅಡುಗೆ ಮನೆಯಲ್ಲಿ ಕನ್ನಡಿ ಇಡಬಾರದು . ಅಡುಗೆ ಮನೆಯಲ್ಲಿ ಅಲಂಕಾರಿಕವಾಗಿ ಬಳಸುವುದಕ್ಕೆ ಕನ್ನಡಿ ಬಳಸುವವರು ಇರುತ್ತಾರೆ . ಆದರೆ ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಕನ್ನಡಿ ಇರುವುದು ಅಶುಭ . ಅಡುಗೆ ಮನೆಯಲ್ಲಿ ಇರುವ ಒಲೆಯ ಬೆಂಕಿ ದೇವರ ಸೂಚಕ .ಕನ್ನಡಿಯಲ್ಲಿ ಬೆಂಕಿಯ ಪ್ರತಿಬಿಂಬ ಕಾಣುವುದು ಅಶುಭ . ಮನೆಯ ಆರ್ಥಿಕ ಪರಿಸ್ಥಿತಿಯ ಮೇಲು ಇದರಿಂದ ಕೆಟ್ಟ ಪರಿಣಾಮ ಬೀರಬಹುದು . ಅಡುಗೆ ಮನೆಯಲ್ಲಿ ಹಳೆಯದಾದ ಪಾತ್ರೆಗಳು ಸಾಮಾನ್ಯವಾಗಿ ಒಡೆಯುತ್ತವೆ .
ಕೆಲವರು ಸ್ವಲ್ಪ ಒಡೆದ ಪಾತ್ರೆಯನ್ನು ಬಳಸುತ್ತಾರೆ . ಆದರೆ ಒಡೆದ ಪಾತ್ರೆಗಳನ್ನು ಬಳಸಬಾರದು ಎಂದು ವಾಸ್ತು ತಜ್ಞರು ತಿಳಿಸಿದ್ದಾರೆ . ಹೊಡೆದ ಪಾತ್ರೆಗಳನ್ನ ಅಡುಗೆ ಮನೆಯಲ್ಲಿ ಇಟ್ಟರೆ , ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ . ಕೆಲವರು ಅಡುಗೆ ಮನೆಯಲ್ಲಿ ಮಾತ್ರೆ ಔಷಧಿಗಳನ್ನು ಇಡುತ್ತಾರೆ .ಆದರೆ ಯಾವುದೇ ಕಾರಣಕ್ಕೂ ಔಷಧಿಗಳನ್ನು ಅಡುಗೆ ಮನೆಯಲ್ಲಿ ಇಡಬಾರದು . ಇದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ . ಅನಗತ್ಯ ಖರ್ಚು ವೆಚ್ಚಕ್ಕೆ ದಾರಿಯಾಗುತ್ತದೆ . ವಾಸ್ತು ಪ್ರಕಾರ ಮಾತ್ರವಲ್ಲದೆ , ಸುರಕ್ಷತೆಯ ದೃಷ್ಟಿಯಿಂದಲೂ ಹಲವು ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡದೇ ಇರುವುದು ಸೂಕ್ತ .
ಅಂದರೆ ಪೆಟ್ರೋಲ್ ,ದಿನಪತ್ರಿಕೆಗಳು , ಜಿರಳೆ ಔಷಧಿ , ಇತ್ಯಾದಿಗಳನ್ನು ಅಡುಗೆ ಮನೆಯಲ್ಲಿ ಇಡಬಾರದು . ಅಡುಗೆ ಮನೆ ಸುರಕ್ಷಿತವಾಗಿರಬೇಕು . ಮತ್ತು ವಾಸ್ತು ಪ್ರಕಾರವಾಗಿ ಇರಬೇಕು . ಅಡುಗೆ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ನೀವು ನೀವು ಪೂರ್ವ ಅಥವಾ ಉತ್ತರ ಗೋಡೆಯ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಬರೆಯಬಹುದು . ನಿಮ್ಮ ಮನೆಯಲ್ಲಿ ಸಮೃದ್ಧಿಗಾಗಿ ಮೊದಲನೇ ಆಹಾರವನ್ನು ಹಸುವಿಗೆ ಮತ್ತು ಎರಡನೇ ಆಹಾರವನ್ನು ನಾಯಿಗೆ ತಿನ್ನುವುದಕ್ಕೆ ಕೊಡಬೇಕು . ಅಡುಗೆ ಮತ್ತು ಬಚ್ಚಲ ಮನೆ ಪಕ್ಕದಲ್ಲಿ ಇರಬಾರದು . ಯಾಕೆಂದರೆ ಇದು ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುತ್ತದೆ . ಅಡುಗೆ ಮನೆಯಲ್ಲಿ ತಿಳಿ ಬಣ್ಣವನ್ನು ಗೋಡೆಗೆ ಬಳಸಬಹುದು . ಹೀಗೆ ಅಡುಗೆ ಮನೆಯ ಪ್ರಾಮುಖ್ಯತೆಯನ್ನು ಎಲ್ಲರೂ ತಿಳಿದುಕೊಳ್ಳಬೇಕು .