ಅಗಸ್ಟ್ ತಿಂಗಳಲ್ಲಿ ಮೇಷ ರಾಶಿಯವರಿಗೆ ಯಾವ ಫಲ ಸಿಗುತ್ತಾ ಇದೆ ಇವರಿಗೆ ಇರುವಂತಹ ಲಾಭಗಳೇನು?

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಅಗಸ್ಟ್ ತಿಂಗಳಲ್ಲಿ ಮೇಷ ರಾಶಿಯವರಿಗೆ ಯಾವ ಫಲ ಸಿಗುತ್ತಾ ಇದೆ ಇವರಿಗೆ ಇರುವಂತಹ ಲಾಭಗಳೇನು? ನಷ್ಟಗಳೇನು ಹಾಗೂ ನಿಮಗೆ ಇರುವಂತಹ ಸಮಸ್ಯೆಗಳು ಯಾವುವು ಎಚ್ಚರಿಕೆಗಳು ಯಾವುವು ಯಾವ ರೀತಿಯಲ್ಲಿ ಪ್ರಯತ್ನ ಪಟ್ಟರೆ ನಿಮಗೆ ಜಯ ಸಿಗುತ್ತದೆ ಹಾಗೂ ನಿಮಗೆ ಯಾವ ಪ್ರಯತ್ನವನ್ನು ಪಟ್ಟರೆ ನಿಮಗೆ ಫಲ ಸಿಗುತ್ತದೆ ಅನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಈ ಸಂಚಿಕೆ ಕೊನೆಯಲ್ಲಿ ನೀವು ಮಾಡಬೇಕಾದಂತಹ ಪರಿಹಾರ ಕ್ರಮಗಳ ಬಗ್ಗೆ ತಿಳಿಸುತ್ತೇವೆ

ಸ್ನೇಹಿತರೆ ಮೇಷ ರಾಶಿಯ ಜನ್ಮ ನಕ್ಷತ್ರಗಳು ಅಶ್ವಿನಿ ನಕ್ಷತ್ರದ ನಾಲ್ಕು ಚರಣಗಳು ಭರಣಿ ನಕ್ಷತ್ರದ ನಾಲ್ಕು ಚರಣ ಕೃತಿಕಾ ನಕ್ಷತ್ರದ ಮೊದಲನೇ ಚರಣ ಸೇರಿ ಆಗಿರುವಂತಹ ಮೇಷ ರಾಶಿಯಾಗಿದೆ ಮಿತ್ರ ರಾಶಿಗಳು ಸಿಂಹ ತುಲಾ ಧನಸ್ಸು ರಾಶಿಯಾದರೆ ಶತ್ರುರಾಶಿಗಳು ಮಿಥುನ ಮತ್ತು ಕನ್ಯಾ ರಾಶಿಯಾಗಿದೆ ಮೇಷ ರಾಶಿಯವರ ಪ್ಲಸ್ ಪಾಯಿಂಟ್ ಏನೆಂದರೆ ಎಂತಹ ಕಠಿಣವಾಗಿರುವಂತಹ ಸವಾಲುಗಳು ಇದ್ದರೂ ಕೂಡ ಅದನ್ನು ಸಮರ್ಥವಾಗಿ ಸ್ವೀಕಾರ ಮಾಡಿ ಎದುರಿಸುವಂತಹ ಗುಣ ಇವರದು ಹಾಗೆ ಮೈನಸ್ ಪಾಯಿಂಟ್ ಏನೆಂದರೆ ಸಡನ್ನಾಗಿ ಕೋಪ ಮಾಡಿಕೊಳ್ಳುವುದು ಇದರಿಂದ ಕೆಲಸದಲ್ಲಿ ಬಹಳ ವ್ಯತ್ಯರಿಕ್ತವಾದ ಪರಿಣಾಮ ಬೀರುತ್ತದೆ

ಸಂಬಂಧದಲ್ಲಿ ಬಿರುಕು ಮೂಡುತ್ತದೆ ಮೇಷ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಹಣಕಾಸಿನ ಕೆಲವೊಂದು ಗೊಂದಲಗಳು ಇರುತ್ತವೆ ಚಿಂತೆ ಇರುತ್ತದೆ ಏನೋ ಒಂದು ಕಮಿಟ್ಮೆಂಟ್ ಇರುತ್ತದೆ ನನಗೆ ಬರಬೇಕಾದ ಹಣ ಬರುತ್ತದ ಅಥವಾ ನಾನು ಯಾರಿಗೂ ಸಾಲ ಕೊಡಬೇಕು ಅದನ್ನು ಕೊಡುವುದಕ್ಕೆ ಆಗುತ್ತದೆ ಈ ರೀತಿಯ ಚಿಂತೆಗಳು ಇರುತ್ತವೆ ಆದರೆ ಚಿಂತೆ ಮಾಡುವಂತಹ ಅವಶ್ಯಕತೆ ಇಲ್ಲ ಹಣಕಾಸಿನ ವಿಚಾರದಲ್ಲಿ ಕೆಲವೊಂದಿಷ್ಟು ತೊಂದರೆಗಳು ಇರುತ್ತವೆ ಅವು ತಕ್ಕಮಟ್ಟಿಗೆ ನಿವಾರಣೆ ಆಗುತ್ತದೆ ಕೆಲವೊಂದಿಷ್ಟು ಜನ ಜಮೀನು ವಾಹನ ಇತ್ಯಾದಿಗಳನ್ನು ಖರೀದಿ ಮಾಡುವ ಯೋಗ ಇದೆ ಮೇಷ ರಾಶಿಯ

ವಿದ್ಯಾರ್ಥಿಗಳು ಬಹಳ ಶ್ರದ್ಧೆಯಿಂದ ಓದಬೇಕು ಶ್ರದ್ಧೆಯಿಂದ ಓದಿದರೆ ಬಹಳ ಒಳ್ಳೆಯ ಸಾಧನೆ ಮಾಡುವುದಕ್ಕೆ ಅವಕಾಶಗಳು ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ ವ್ಯಾಪಾರ ಕ್ಷೇತ್ರದಲ್ಲಿ ಬಹಳ ಕಾಂಪಿಟೇಶನ್ ಇರುತ್ತದೆ ಏರಿಳಿತಗಳು ಜಾಸ್ತಿ ಇರುತ್ತವೆ ಆದರೆ ನೀವು ಅದನ್ನು ಗೊಂದಲ ಮಾಡಿಕೊಳ್ಳುವುದಕ್ಕೆ ಹೋಗಬಾರದು ಸಮಯ ಹೇಗಿದೆ ಅದನ್ನು ಹಾಗೆ ಸರಿ ಮಾಡಿಕೊಳ್ಳುತ್ತಾ ಹೋಗಬೇಕು ನಿಮ್ಮ ಪ್ಲಾನ್ ಗುರಿ ಎಲ್ಲವೂ ನಿರಂತರವಾಗಿರಬೇಕು ಡಿಸ್ಕಂಟಿನ್ಯೂ ಆಗಬಾರದು ಇದರಿಂದ ಬಹಳಷ್ಟು ಅವಕಾಶಗಳು ಉಪಯೋಗಗಳಾಗುತ್ತವೆ ಸಂತಾನ ಪ್ರಾಪ್ತಿಗೆ ಇದು ಬಹಳ ಒಳ್ಳೆಯ ಅವಕಾಶ ಯೋಗಗಳು ತುಂಬಾ ಚೆನ್ನಾಗಿದೆ

ಹಣಕಾಸಿನ ವ್ಯವಹಾರದಲ್ಲಿ ಬೇರೆಯವರ ವ್ಯವಹಾರಕ್ಕೆ ಕೈ ಹಾಕುವುದಕ್ಕೆ ಹೋಗಬೇಡಿ ಬೇರೆಯವರ ವ್ಯವಹಾರಕ್ಕೆ ನೀವು ಸೆಕ್ಯೂರಿಟಿ ಹಾಕುವುದು ಪಾರ್ಟ್ನರ್ ಶಿಪ್ ಬಿಸಿನೆಸ್ ಇಂಥವುಗಳನ್ನು ಮಾಡುವುದಕ್ಕೆ ಹೋಗಬೇಡಿ ಇಂತಹ ವಿಚಾರಗಳಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕು ಅತಿಯಾದ ಆತ್ಮವಿಶ್ವಾಸ ಬೇಡ ಯಾವುದೇ ಹೆಜ್ಜೆಯನ್ನು ಇಡಬೇಕಾದರೆ ಅಳೆದು ತೂಗಿ ಹೆಜ್ಜೆಯನ್ನು ಇಟ್ಟರೆ ಬಹಳ ಒಳ್ಳೆಯದು ವಿವಾಹದ ಬಗ್ಗೆ ನೀವು ಚಿಂತೆ ಮಾಡುತ್ತಾ ಇದ್ದೀರಿ ಅಂದರೆ ಕೆಲವೊಂದು ಗೊಂದಲಗಳು ಇರುತ್ತವೆ

ಆದರೆ ನಿರಂತರ ಪ್ರಯತ್ನಗಳನ್ನು ಮಾಡುತ್ತಾ ಇರಬೇಕು ಅವಕಾಶಗಳು ಚೆನ್ನಾಗಿವೆ ಕಾನೂನಿನ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಯಾಕೆ ಅಂದರೆ ಬೇರೆಯವರು ಮಾಡಿರುವಂತಹ ತಪ್ಪುಗಳು ನಿಮ್ಮ ತಲೆಯ ಮೇಲೆ ಬರುವಂತಹ ಸಾಧ್ಯತೆ ಇರುತ್ತದೆ ಕೋಪದ ಕೈಗೆ ಬುದ್ಧಿ ಕೊಟ್ಟು ಕಾನೂನಿನ ಚೌಕಟ್ಟಿಗೆ ಸಿಕ್ಕಿ ಹಾಕಿಕೊಳ್ಳಬೇಡಿ ನಿಮ್ಮ ಮಕ್ಕಳು ಹೊರರಾಜ್ಯದಲ್ಲಿ ಹೊರದೇಶದಲ್ಲಿ ಓದುತ್ತಾ ಇದ್ದಾರೆ ಖಂಡಿತ ಅವರಿಗೆ ಒಳ್ಳೆಯ ಅವಕಾಶ ಇದೆ ಸಾಧನೆ ಮಾಡುವುದಕ್ಕೆ ಸಾಧ್ಯತೆಗಳು ಕಂಡು ಬರ್ತಾ ಇದೆ ಉದ್ಯೋಗದಲ್ಲಿ ಅವಕಾಶಗಳು ಇವೆ ಅಧಿಕಾರಿಗಳು ನೌಕರರೊಂದಿಗೆ ಸ್ನೇಹದಿಂದ ವರ್ತಿಸುವ ಸಾಧ್ಯತೆ ಇದೆ ಅಂದರೆ ಕಾರ್ಯಕ್ಷೇತ್ರದಲ್ಲಿ ಸರ್ಕಾರಿ

ಅರೆ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದಲ್ಲಿ ಆ ಕ್ಷೇತ್ರದಲ್ಲಿ ಬಹಳ ಸ್ನೇಹ ಸೌಹಾರ್ದತೆಯಿಂದ ಆಕ್ಟಿವ್ ಆಗಿ ಕೆಲಸ ಮಾಡುವ ಸಾಧ್ಯತೆ ಇದೆ ನಿಮ್ಮ ಕೆಲಸವನ್ನು ನೀವು ಪ್ರೀತಿಸಿದರೆ ನಿಮಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ ಹಣ ಸಂಪಾದನೆ ಆಗುತ್ತದೆ ಜೀವನದಲ್ಲಿ ತುಂಬಾ ಖುಷಿಯಾಗಿ ಇರುತ್ತೀರಾ ವಕೀಲರಿಗೆ ಉತ್ತಮ ಆಗಿರುವಂತಹ ಆದಾಯ ಇರುತ್ತದೆ ಉದ್ಯೋಗ ವ್ಯಾಪಾರಸ್ಥರಿಗೆ ಬಹಳ ಒಳ್ಳೆಯ ಅವಕಾಶ ಇರುತ್ತದೆ ಮನೆಯಲ್ಲಿ ಯಾವುದೋ ಒಂದು ಕಾರ್ಯಕ್ರಮ ಅಥವಾ ಎಲ್ಲಿಗೋ ಪ್ರಯಾಣ ಮಾಡುವುದು ಈ ರೀತಿ ಬಾಳ ಸಂತೋಷದಿಂದ ಇರುತ್ತೀರ ಮೇಷ ರಾಶಿಯವರು ಬಹಳಷ್ಟು ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುತ್ತೀರಾ

ರಾಜಕೀಯದಲ್ಲಿ ಗುರುತಿಸಿಕೊಂಡಿರುತ್ತೀರಾ ಸುಮ್ಮನೆ ಕೂರುವವರಲ್ಲ ಏನಾದರೂ ಒಂದು ಚಟುವಟಿಕೆಯಿಂದ ಇರುತ್ತೀರ ಒಳ್ಳೆಯ ಆದಾಯ ಇರುತ್ತದೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು ಊಟದ ಕಡೆ ಹೆಚ್ಚಿನ ಆಸಕ್ತಿಯನ್ನು ತೋರಿಸಬೇಕು ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭಗಳು ಕಂಡುಬರುತ್ತವೆ ಅಂದರೆ ಈ ತಿಂಗಳಲ್ಲಿ ನೀವು ಅಂದುಕೊಂಡಿದ್ದಕ್ಕಿಂತ ಅದ್ಭುತವಾದ ಲಾಭಗಳು ಪ್ರಯೋಜನಗಳು ಇವೆ ಅಂತ ಹೇಳಬಹುದು ಹಾಗೆ ಕೆಲವೊಂದು ಎಚ್ಚರಿಕೆಗಳನ್ನು ಹೇಳಿದ್ದೇವೆ ಅವುಗಳನ್ನು ಗಮನದಲ್ಲಿಟ್ಟುಕೊಂಡು ನೀವು ಕೆಲಸ ಕಾರ್ಯಗಳನ್ನು ಮಾಡಿದರೆ

ನೀವು ಅಂದುಕೊಂಡಂತಹ ಯಶಸ್ಸನ್ನು ಸಾಧಿಸುತ್ತೀರಾ ಹಾಗೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಏನೆಂದರೆ ನೀವು ಬಹಳ ಮುಖ್ಯವಾಗಿ ಆಂಜನೇಯ ಸ್ವಾಮಿಯ ದರ್ಶನವನ್ನು ಮಾಡಬೇಕು ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡಿ ಸಾಧು ಸಂತರಿಗೆ ದಾನವನ್ನು ಕೊಡಿ ಕುಲದೇವತಾ ಆರಾಧನೆಯಿಂದ ಬಹಳ ದೊಡ್ಡ ಬದಲಾವಣೆ ಕಂಡು ಬರುತ್ತದೆ ಇನ್ನೂ ಬದಲಾವಣೆ ಬೇಕೆಂದರೆ ನಿಮ್ಮಲ್ಲಿ ಇರುವಂತಹ ಕೆಟ್ಟ ವ್ಯಸನ ಕೆಟ್ಟ ಹವ್ಯಾಸಗಳನ್ನು ಬಿಡಿ ಅದರಿಂದ ಹೊರಗಡೆ ಬರುವುದಕ್ಕೆ ಎಷ್ಟು ಸಾಧ್ಯನೋ ಅಷ್ಟು ಬನ್ನಿ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಬದಲಾವಣೆ ಅನ್ನುವುದು ಕಂಡುಬರುತ್ತದೆ ಒಳ್ಳೆಯ ಫಲಗಳು ಸಿಗಲಿ ಆಂಜನೇಯ ಸ್ವಾಮಿಯ ದರ್ಶನವನ್ನು ಮಾಡಿ ಆದಷ್ಟು ದೇವರಲ್ಲಿ ನಂಬಿಕೆಯನ್ನು ಇಟ್ಟು ಪೂಜೆ ಪುನಸ್ಕಾರಗಳನ್ನು ಮಾಡಿ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment