ಆಂಜನೇಯಸ್ವಾಮಿಗೆ ವೀಳ್ಯದೆಲೆಯ ಹಾರವನ್ನು ಹಾಕುವುದರಿಂದ ಯಾವ ಯಾವ ಫಲಗಳು ಸಿಗುತ್ತವೆ ಎಂದರೆ ಆಂಜನೇಯಸ್ವಾಮಿಗೆ ಚಿಗುರು ವೀಳ್ಯದೆಲೆಯ ಹಾರವನ್ನು ಹಾಕಿದರೇ ಕಾಯಿಲೆಯಿಂದ ನರಳುವವರು ಬಹಳ ಬೇಗ ಗುಣಮುಖರಾಗುತ್ತಾರೆ. ಮನೆಯಲ್ಲಿ ಮಾಂತ್ರಿಕ ಕಾಟ ಇರುವವರು ಆಂಜನೇಯಸ್ವಾಮಿಗೆ ಚಿಗುರು ವೀಳ್ಯದೆಲೆಯ ಹಾರವನ್ನು ಹಾಕಿದರೇ ಮಾಂತ್ರಿಕ ಬಾಧೆ ನಿವಾರಣೆಯಾಗುತ್ತದೆ. ಸಂಸಾರದಲ್ಲಿ ನೆಮ್ಮದಿ ಇಲ್ಲದವರು ಸ್ವಾಮಿಗೆ ವೀಳ್ಯದೆಲೆಯ ಹಾರವನ್ನು ಹಾಕಿಸಿದರೇ ಸಂಸಾರದಲ್ಲಿ ನೆಮ್ಮದಿ ಸಿಗುತ್ತದೆ.
ಸಣ್ಣ ಮಕ್ಕಳು ಎಷ್ಟೇ ಆಹಾರ ತಿಂದರೂ ತುಂಬಾ ಸಣ್ಣಗಿದ್ದು, ನಿಶಕ್ತರಾಗಿದ್ದರೇ ಇಂತಹ ಸಮಯದಲ್ಲಿ ಸ್ವಾಮಿಗೆ ವೀಳ್ಯದೆಲೆಯ ಹಾರವನ್ನು ಹಾಕಿಸಿ ಪ್ರಾರ್ಥಿಸಿದರೇ ಮಕ್ಕಳ ಆರೋಗ್ಯ ಚೆನ್ನಾಗಿದ್ದು, ಚೆನ್ನಾಗಿ ಬೆಳೆಯುತ್ತಾರೆ. ವ್ಯಾಪಾರ ಮಾಡುವಾಗ ತುಂಬಾ ನಷ್ಟವಾದರೇ ಅಂತಹವರು ಸ್ವಾಮಿಗೆ ವೀಳ್ಯದೆಲೆಯ ಹಾರವನ್ನು ಹಾಕಿಸಿ, ವೀಳ್ಯದೆಲೆ, ಹಣ್ಣುಗಳು, ಹಾಗೂ ದಕ್ಷಿಣೆ ಸಮೇತ ತಾಂಬೂಲ ದಾನ ಮಾಡಿದರೇ ವ್ಯಾಪಾರ ಚೆನ್ನಾಗಿ ಆಗುತ್ತದೆ. ಶನಿ ದೇವರ
ದೃಷ್ಠಿ ಇರುವವರು ಸ್ವಾಮಿಗೆ ವೀಳ್ಯದೆಲೆಯ ಹಾರವನ್ನು ಹಾಕಿಸಿ ತುಳಸಿ ಅರ್ಚನೆ ಮಾಡಿಸಿದರೇ ಶನಿದೋಷ ನಿವಾರಣೆಯಾಗುತ್ತದೆ. ಸುಂದರ ಕಾಂಡ ಪಾರಾಯಣ ಮಾಡಿ ಆಂಜನೇಯಸ್ವಾಮಿಗೆ ವೀಳ್ಯದೆಲೆಯ ಹಾರವನ್ನು ಹಾಕಿಸಿದರೇ ಸಕಲ ಕಾರ್ಯಗಳು ನೆರವೇರುತ್ತದೆ. ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ಬೆಲೆ ಇಲ್ಲದಿದ್ದರೇ, ಕೀಳಾಗಿ ನೋಡುತ್ತಿದ್ದರೇ ಅಂತಹವರು ಆಂಜನೇಯಸ್ವಾಮಿಗೆ ವೀಳ್ಯದೆಲೆಯ ಹಾರವನ್ನು ಹಾಕಿಸಿ ಪ್ರಾರ್ಥಿಸಿದರೇ ಬಹಳ ಒಳ್ಳೆಯ ಗೌರವ ಸಿಗುತ್ತದೆ.
ಹನುಮಾನ್ ಚಾಲೀಸಾ ಓದಿ, ಸ್ವಾಮಿಗೆ ವೀಳ್ಯದೆಲೆಯ ಹಾರವನ್ನು ಹಾಕಿಸಿ ಪೂಜಿಸಿದರೇ ಪರಮಾತ್ಮನ ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ವಾದ ವಿವಾದಗಳಲ್ಲಿ ಸ್ವಾಮಿಯನ್ನು ಪ್ರಾರ್ಥಿಸಿ, ವೀಳ್ಯದೆಲೆಯ ಹಾರವನ್ನು ಹಾಕಿಸಿ ಪೂಜಿಸಿ, ಪ್ರಸಾದ ತಿಂದರೇ ಜಯವು ಸತ್ಯದ ಕಡೆ ಆಗುತ್ತದೆ. ಯಾವುದೇ ಕಾರಣಕ್ಕೂ ಹರಿದಿರುವ, ಒಣಗಿರುವ ವೀಳ್ಯದೆಲೆಯನ್ನು ಹಾರವಾಗಿ ಮಾಡಬೇಡಿ. ಹಸಿರಾಗಿರುವ, ಚಿಗುರಿನ ವೀಳ್ಯದೆಲೆಯ ಹಾರವನ್ನು ಹಾಕಿಸಿ. ಶ್ರೀರಾಮ ದೇವರ ಪ್ರಸಾದದ ತುಳಸಿಯನ್ನು ಆಂಜನೇಯಸ್ವಾಮಿಯ ತಲೆಯ ಮೇಲಿಟ್ಟು ಅರ್ಚನೆ ಮಾಡಿದರೇ ಇಷ್ಟಾರ್ಥ ಸಿದ್ಧಿ ಸಕಲ ಕಾರ್ಯಗಳು ಬಹಳ ಬೇಗ ನೆರವೇರುತ್ತದೆ.