ದೇವರ ಶುಭ ಸೂಚನೆಗಳು

ನಾವು ಈ ಲೇಖನದಲ್ಲಿ ದೇವರ ಶುಭ ಸೂಚನೆಗಳು ಯಾವುದು ಎಂದು ತಿಳಿಯೋಣ . ನಿಮಗೆ ಒಳ್ಳೆಯ ಸಮಯ ಬರುತ್ತಿದೆ ಎಂದರೆ ದೇವರು ಮುಂಚೆನೇ ಈ ಶುಭ ಸೂಚನೆಗಳನ್ನು ಕೊಡುತ್ತಾನೆ..!!

ಒಳ್ಳೆಯ ಕನಸು ಬಿದ್ದು ನಿಮಗೆ ಎಚ್ಚರವಾದರೆ ನಿಮ್ಮ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂದು ಇದರ ಅರ್ಥ. ನೀವು ಏನಾದರೂ ದೇವರಲ್ಲಿ ಹರಸಿಕೊಂಡಾಗ ಯಾರಾದರೂ ಗಂಟೆ ಬಾರಿಸಿದರೆ ನೀವು ಅಂದುಕೊಂಡ ವಿಷಯ ನೆರವೇರುತ್ತದೆ.

ನಿಮ್ಮ ಮನೆಯ ಹತ್ತಿರ ಇರುವ ಮರದಲ್ಲಿ ಹಕ್ಕಿ ಬಂದು ಆ ಮರದಲ್ಲಿ ಗೂಡು ಕಟ್ಟಿದರೆ ಇದು ನಿಮಗೆ ಒಂದು ಶುಭದ ಸಂಕೇತವಾಗಿದೆ. ದೇವರಿಗೆ ಪೂಜೆ ಮಾಡುವಾಗ ಮಂಗಳ ಆರತಿ ತಟ್ಟೆಯಲ್ಲಿ ದೇವರಿಗೆ ಇಟ್ಟಂತಹ ಹೂವು ಬಿದ್ದರೆ ಇದು ಸಹ ದೇವರು ಕೊಟ್ಟಂತಹ ಶುಭ ಸೂಚನೆಯಾಗಿದೆ.

ನೀವು ಮಲಗಿರುವಾಗ 3 ರಿಂದ 5 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ಇದಕ್ಕಿದಂತೆ ಎಚ್ಚರವಾದರೆ ಇದು ಒಂದು ಶುಭ ಸೂಚನೆ ಎಂದು ಹೇಳಲಾಗುತ್ತದೆ ದೇವಸ್ಥಾನದಲ್ಲಿ ದೇವರಿಗೆ ನೀವೇನಾದರು ಬೇಡಿಕೊಂಡಂತಹ ಸಮಯದಲ್ಲಿ ದೇವರು ಬಲಗಡೆ ಹೂವು ಬಿದ್ದರೆ, ನೀವು ಬೇಡಿರುವ ಕೋರಿಕೆ ನೆರವೇರುತ್ತದೆ.

ನಿಮ್ಮ ಮನೆಗೆ ಹಸು ಏನಾದರೂ ಬಂದರೆ ದೇವರು ಬಂದಂತೆ, ಆ ಹಸುವಿಗೆ ನೀವು ಆಹಾರವನ್ನು ಕೊಟ್ಟರೆ, ನಿಮ್ಮ ಕಷ್ಟಗಳು ಬೇಗನೆ ನಿವಾರಣೆಯಾಗುತ್ತದೆ. ದೇವರಿಗೆ ಪೂಜೆಯನ್ನು ಸಲ್ಲಿಸಿ ತೆಂಗಿನಕಾಯಿ ಒಡೆದಾಗ ಅದರಲ್ಲಿ ಹೂವು ಇದ್ದರೆ ಮುಂದೆ ನಿಮಗೆ ಏನೋ ಒಳ್ಳೆಯದಾಗುತ್ತದೆ ಎಂದು ಅರ್ಥ.

ನಮಗೆ ಕೆಲವೊಂದು ಭಾರಿ ಕಾರಣವಿಲ್ಲದೇ ಖುಷಿಯಾದಾಗ ಅಂದರೆ ಮನಸ್ಸು ನೆಮ್ಮದಿ ಆದಂತೆ ಆದರೆ ಮುಂದೆ ಒಳ್ಳೆಯದಾಗುತ್ತದೆ. ಎಂದು ಇದರ ಅರ್ಥ .

10 . ನಿಮ್ಮ ಮನೆಯಲ್ಲಿ ಇರುವ ಪುಟ್ಟ ಮಗುವು ನಗು ನಗುತ್ತಾ ಆಟವಾಡುತ್ತಿದ್ದರೆ, ನಿಮ್ಮ ಮುಖವನ್ನೇ ನೋಡಿ ನಗುತ್ತಿದ್ದರೆ ನಿಮ್ಮ ಮನೆಯಲ್ಲಿ ತಾಯಿ ಲಕ್ಷ್ಮೀ ದೇವಿಯು ತಾಂಡವವಾಡುತ್ತಿದ್ದಾಳೆ ಎಂದು ಹೇಳಬಹುದು.

Leave a Comment