ನಾವು ಈ ಲೇಖನದಲ್ಲಿ ಜರಿ ಕಾಣಿಸಿದರೆ ಏನಾಗುತ್ತದೆ…? ಎಂಬುದರ ಬಗ್ಗೆ ತಿಳಿಯೋಣ .
ಮನೆಯಲ್ಲಿ ಜರಿ ಕಾಣಿಸಿದರೆ , ಯಾವುದಕ್ಕೆ ಸಂಕೇತ . ಮನೆಯಲ್ಲಿ ಜರಿ ಕಾಣಿಸಿದರೆ ಶುಭವಾಗುತ್ತದೆಯೇ , ಅಥವಾ ಅಶುಭವಾಗುತ್ತದೆಯೇ .ಇದರ ಬಗ್ಗೆ ನಮ್ಮ ಶಾಸ್ತ್ರವು ಏನು ಹೇಳುತ್ತದೆ . ನಮ್ಮ ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಜರಿ ಕಾಣಿಸಿದರೆ ಏನು ನಡೆಯುತ್ತದೆ . ಹಾಗೆಯೇ ಕನಸಿನಲ್ಲಿ ಕಾಣಿಸುವಂತಹ ಕೆಲವೊಂದು ವಸ್ತುಗಳು ಕ್ರಿಮಿ ಕೀಟಗಳ ಬಗ್ಗೆ ಸ್ವಪ್ನ ಶಾಸ್ತ್ರವು ಏನು ಹೇಳುತ್ತದೆ . ಈ ಪ್ರಕೃತಿ ಸೂಚಿಸುವಂತಹ ಸಂಕೇತಗಳು ಯಾವುದು , ಯಾವ ವಿಧವಾಗಿ ಇರುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ .
ಮನೆಯಲ್ಲಿ ಸಹಜವಾಗಿ ಅನೇಕ ರೀತಿಯ ಕ್ರಿಮಿಕೀಟಗಳು ಕಾಣಿಸುತ್ತಿರುತ್ತವೆ . ಜರಿ, ಇರುವೆ, ಹಲ್ಲಿ ,ಇಲಿ ಗಳು ಹಾಗೆಯೇ ಅನೇಕ ಪ್ರಾಣಿಗಳು ಕಾಣಿಸುತ್ತಿರುತ್ತವೆ .ಮನೆಯಲ್ಲಿ ಇಷ್ಟಪಟ್ಟು ತಂದ ಸಾಕು ಪ್ರಾಣಿಗಳಲ್ಲದೇ ಬೇರೆ ವಿಧವಾದ ಕ್ರಿಮಿ ಕೀಟಗಳು ಕಾಣಿಸುತ್ತಿವೆ ಎಂದರೆ, ಅದಕ್ಕೆ ಮೊದಲ ಅರ್ಥ ಮನೆಯ ಶುಭ್ರವಾಗಿ ಇಲ್ಲ ಎಂದು . ಮನೆಯನ್ನು ನಿತ್ಯವೂ ಪರಿಶುದ್ಧವಾಗಿ ಇಟ್ಟು ಕೊಳ್ಳುವವರಿಗೆ ಯಾವುದೇ ರೀತಿಯ ಕ್ರಿಮಿ ಕೀಟಗಳು ಕಾಣಿಸುವುದಿಲ್ಲ .
ಆದರೂ ಸಹ ಕ್ರಿಮಿಕೀಟಗಳು ಕಾಣಿಸುತ್ತಿವೆ ಎಂದರೆ, ಮನೆ ಪರಿಶುದ್ಧವಾಗಿ ಇದ್ದರೂ ಕೂಡ ಇರುವೆ, ಜರಿ , ಹಲ್ಲಿಗಳು ಇತರೆ ಯಾವುದೇ ಬೇರೆ ಕ್ರಿಮಿ ಕೀಟಗಳು ಕಾಣಿಸುತ್ತಿದೆ ಎಂದರೆ , ಪ್ರಕೃತಿ ನಿಮಗೆ ಏನನ್ನೋ ಹೇಳಲು ಪ್ರಯತ್ನಿಸುತ್ತಿದೆ ಎಂದು ಅರ್ಥ . ನಿಮ್ಮ ಜೀವನದಲ್ಲಿ ಬರುವ ಕೆಲವು ಮುಖ್ಯವಾದ ವಿಷಯಗಳನ್ನು ಕುರಿತು ತಿಳಿಯ ಪಡಿಸುತ್ತದೆ ಎಂದರ್ಥ . ಜರಿಯನ್ನು ಶತ ಪಾದವೆಂದು ಕೂಡ ಕರೆಯುತ್ತಾರೆ . ಅಂದರೆ ಸಾವಿರ ಪಾದಗಳು ಇರುತ್ತವೆ ಎಂದರ್ಥ .
ಇದಕ್ಕೆ ಕಾಲುಗಳು ಹೆಚ್ಚು ಇರುತ್ತವೆ . ಆದ್ದರಿಂದ ಇದನ್ನು ಶತ ಪಾದ ಎಂದು ಕರೆಯುತ್ತಾರೆ .ಇದು ಯಾವ ಕಾಲದಲ್ಲಾದರೂ ಕಾಣಿಸುತ್ತದೆ . ಅಷ್ಟೇ ಅಲ್ಲದೆ ಇದು ಬಹಳ ವಿಷ ಪೂರಿತವಾದದ್ದು . ಇದು ಕಚ್ಚಿದರೆ ಆ ನೋವನ್ನು ಅನುಭವಿಸುವುದು ಬಹಳ ಕಷ್ಟ . ಈ ಜರಿ ಅನ್ನುವುದು ಕತ್ತಲು ಪ್ರದೇಶದಲ್ಲಿ ಹಾಗೂ ತೇವಾಂಶ ಇರುವ ಪ್ರದೇಶದಲ್ಲಿ ವಾಸಿಸುವುದಕ್ಕೆ ಮತ್ತು ಕೊಳೆ ಆಗಿರುವ ಪ್ರದೇಶದಲ್ಲಿ ವಾಸಿಸುವುದಕ್ಕೆ ಹೆಚ್ಚು ಇಷ್ಟ ಪಡುತ್ತದೆ . ಆದ್ದರಿಂದ ಮನೆಯಲ್ಲಿ ಅದಕ್ಕೆ ಇಷ್ಟವಾದ ಸ್ಥಳ ಯಾವುದೆಂದರೆ ಅಡುಗೆ ಮನೆ ಅಥವಾ ಸ್ನಾನದ ಮನೆ .
ಹೆಚ್ಚಾಗಿ ನಿಮಗೆ ಅಡುಗೆ ಮನೆಯಲ್ಲಿ ಜರಿ ಕಾಣಿಸುತ್ತಿರುತ್ತದೆ . ನಮ್ಮ ಶಾಸ್ತ್ರಗಳ ಪ್ರಕಾರ ಶುಭ ಮತ್ತು ಅಶುಭ ಸಂಕೇತಗಳಿಗೂ ಕೂಡ ಈ ಜರಿ ಬಹಳ ಮುಖ್ಯವಾದದ್ದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶತ ಪೀಠಕ್ಕೆ ಅಧಿಪತಿ ರಾಹು ಗ್ರಹ .ರಾಹು ಗ್ರಹವು ಒಂದು ರಹಸ್ಯ ಗ್ರಹ . ಈ ಗ್ರಹವು ಯಾರಿಗಾದರೂ ಅಷ್ಟ ಲಕ್ಷ್ಮಿ ಅನುಗ್ರಹವನ್ನು ಕೊಡಬಲ್ಲದು . ಸಹಜ ವಾಸಕ್ಕೆ ಅನುಕೂಲವಾಗಿ ಇರುವ ಮನೆಯಲ್ಲಿ ಶತ ಪಾದವು ಕಾಣಿಸಿದರೆ , ಅದು ಶುಭ ಅಥವಾ ಅಶುಭಕ್ಕೆ ಸಂಕೇತ ಎಂದು ಹೇಳುತ್ತಾರೆ .
ಒಂದು ವೇಳೆ ಜರಿ ಒಂದು ಕ್ಷಣದಲ್ಲಿ ನಿಮ್ಮನ್ನು ಹಣವಂತರನ್ನಾಗಿ ಅಥವಾ ಬಡವರನ್ನಾಗಿ ಮಾಡುತ್ತದೆ .ಕೆಲವು ಸಂದೇಶಗಳನ್ನು ಈ ಜರಿ ಗಳು ಸೂಚಿಸುತ್ತವೆ . ಆದ್ದರಿಂದ ನಾವು ಧನವಂತರನ್ನಾಗುತ್ತೀವಾ , ಅಥವಾ ಬಡವರಾಗುತ್ತೀವಾ ಎಂಬುದು ಕೂಡ ಆಧಾರವಾಗಿರುತ್ತದೆ. ಜರಿ ಯಾವಾಗಲಾದರೂ ಕಾಣಿಸಿದರೆ , ಬಹಳ ಮಂದಿ ಅದನ್ನು ಸಾಯಿಸುತ್ತಾರೆ. ಆದರೆ ಅದು ಬಹಳ ದೊಡ್ಡ ತಪ್ಪು . ಒಂದು ಜರಿಯು ನಮಗೆ ತಿಳಿಯದೆ ನಮ್ಮ ಪಾದಗಳ ಕೆಳಗೆ ಸತ್ತು ಹೋದರೆ ,
ಬಹಳ ಶುಭ ಸೂಚಕ ಎಂದು ಪರಿಗಣಿಸಬಹುದು . ಮನೆಯ ಪ್ರಧಾನ ದ್ವಾರದ ಬಳಿ ಜರಿಯ ಸತ್ತು ಹೋಗಿರುವುದು ಕಾಣಿಸಿದರೆ ಅದನ್ನು ಬಹಳ ಶುಭ ಫಲವೆಂದು ಪರಿಗಣಿಸಬಹುದು . ಹೀಗೆ ಕಾಣಿಸಿದಾಗ ಆ ಮನೆಯ ಮೇಲೆ ಕೆಟ್ಟ ದೃಷ್ಟಿ ಬಿದ್ದಿದೆ ಎಂದು ನೀವು ಪರಿಗಣಿಸಬಹುದು . ಅಷ್ಟೇ ಅಲ್ಲದೆ ಇದು ನಿಮ್ಮ ಕೆಲಸಗಳಿಂದ ದೂರ ಮಾಡುತ್ತದೆ ಎಂದು ಅರ್ಥೈಸಿಕೊಳ್ಳಬೇಕು . ರಾಹು ನಿಮ್ಮ ಬಳಿ ಸಂತೋಷವಾಗಿರುತ್ತಾನೆ . ಆದ್ದರಿಂದ ಈ ಸೂಚನೆಗಳನ್ನು ಕೊಡುವುದಕ್ಕೆ ಆತನ ಅನುಗ್ರಹದ ಕಾರಣವಾಗಿಯೇ ಮನೆಯ ಪ್ರಧಾನ ದ್ವಾರದ ಬಳಿ ಜರಿಯು ಸುತ್ತು ಹೋಗಿರುವುದು ಕಾಣಿಸುತ್ತದೆ.
ಒಬ್ಬರ ಕೆಟ್ಟ ದೃಷ್ಟಿ ಮನೆಯ ಕೆಲಸಗಳು ತಪ್ಪಾಗಿ ನಡೆಯುವುದಕ್ಕೆ ಶುರುವಾಗುತ್ತದೆ . ಇದರಿಂದ ಅನೇಕ ಸಮಸ್ಯೆಗಳು ತೊಂದರೆಗಳು ಉಂಟಾಗುತ್ತವೆ . ಆದ್ದರಿಂದ ಅವುಗಳಿಂದ ಜಾಗ್ರತೆ ವಹಿಸಿ ಎಂದು ಪ್ರಕೃತಿ ನಮಗೆ ಸೂಚಿಸುತ್ತದೆ . ನಮ್ಮ ಮೇಲೆ ಹಾಗೂ ನಮ್ಮ ಕುಟುಂಬದವರ ಮೇಲೆ ಹಾಗೂ ಮಾಡುವ ಕೆಲಸದ ಮೇಲೆ ನಕಾರಾತ್ಮಕ ಶಕ್ತಿ ಇದೆ ಎಂದು ತಿಳಿಸುತ್ತದೆ ಈ ಸೂಚನೆ . ಇದೇ ರೀತಿಯಾಗಿ ಯಾರಿಗಾದರೂ ಸೂಚನೆ ಸಿಕ್ಕರೆ, ನರ ದೃಷ್ಟಿ ತಗುಲದ ಹಾಗೆ ಜಾಗ್ರತೆ ವಹಿಸಬೇಕು .
ಹಾಗೆ ನೀವು ಮಾಡುವಂತ ಪ್ರತೀ ಕಾರ್ಯಗಳನ್ನು ಕೂಡ ಜಾಗ್ರತೆಯಿಂದ ಮಾಡಬೇಕು . ಮತ್ತು ಯಾವುದಾದರೂ ಮುಖ್ಯ ಕೆಲಸದ ಮೇಲೆ ಅಥವಾ ಆರೋಗ್ಯಕ್ಕೆ ಸಂಬಂಧಿಸಿದಂತೆ ಪರಿಹಾರ ಮಾರ್ಗಗಳಿಗೋಸ್ಕರ ಹೊರಗಡೆ ಹೋಗುತ್ತಿದ್ದಾಗ ಈ ಜರಿಯು ಕಾಣಿಸಿದರೆ , ಅದು ಅಶುಭಕ್ಕೆ ಸಂಕೇತ ಎಂದು ತಿಳಿಯಬೇಕು . ಹೋಗುವಂತಹ ಪ್ರಯಾಣವನ್ನು ನಿಲ್ಲಿಸುವುದೇ ಒಳ್ಳೆಯದು . ನೀವು ಮಾಡುವಂತ ಪ್ರಯಾಣದಲ್ಲಿ ಅನೇಕ ತೊಂದರೆಗಳು ಆಗುತ್ತವೆ ಎಂಬುದನ್ನು ಸೂಚಿಸುತ್ತದೆ .
ಹೋಗುತ್ತಿರುವ ಅಥವಾ ತಿಳಿಯಬೇಕು ಎಂಬುವ ಕಾರ್ಯದಲ್ಲಿ ವಿಜಯ ಲಭಿಸುವುದಿಲ್ಲ ಎಂಬುದರ ಸಂಕೇತ . ಆದ್ದರಿಂದ ಯಾರಾದರೂ ಸರಿ ತಮ್ಮ ಪ್ರಯಾಣವನ್ನು ಮುಂದುವರಿಸ ಬೇಕಾದರೆ ಈ ಜರಿ ಕಾಣಿಸಿದರೆ , ಸ್ವಲ್ಪ ಕಾಲದವರೆಗೆ ನಿಮ್ಮ ಪ್ರಯಾಣವನ್ನು ನಿಲ್ಲಿಸಿದರೆ ನಿಮಗೆ ಶ್ರೇಯಸ್ಕರ ಎಂದು ತಿಳಿದುಕೊಳ್ಳಬೇಕು . ಮನೆಯಿಂದ ಹೊರಗೆ ಹೋಗಬೇಕಾದರೆ ಈ ಜರಿ ಕಾಣಿಸಿದರೆ ಕನಿಷ್ಟ ಪಕ್ಷ ಅರ್ಧ ಗಂಟೆಯಾದರೂ ನಿಮ್ಮ ಪ್ರಯಾಣವನ್ನು ನಿಲ್ಲಿಸಿ . ಇಲ್ಲವಾದರೆ ಏನಾದರೂ ತೊಂದರೆಗಳು ಉಂಟಾಗಬಹುದು . ರಸ್ತೆ ಅಪಘಾತವಾಗುವುದು, ಆರ್ಥಿಕವಾಗಿ ನಷ್ಟವಾಗುವುದು , ಅನಾರೋಗ್ಯ ಸಮಸ್ಯೆ ಆಗಬಹುದು ,
ಮತ್ತು ನಿಮ್ಮನ್ನು ಇತರರು ತೊಂದರೆಗೆ ಎಳೆಯಬಹುದು . ಅಂದುಕೊಳ್ಳದ ಅಪಾಯಗಳು ಯಾವುದೋ ರೂಪದಲ್ಲಿ ನಿಮ್ಮ ಪ್ರಯಾಣದಲ್ಲಿ ಬರಬಹುದು ಎಂದು ಸೂಚಿಸುವ ಸಂಕೇತವೇ ಮನೆಯ ಪ್ರಧಾನ ದ್ವಾರದ ಬಳಿ ಜರಿ ಸತ್ತು ಹೋಗಿರುವುದು ಕಾಣಿಸುವುದು . ಇದನ್ನು ನೀವು ಅರ್ಥೈಸಿಕೊಂಡು ಜಾಗ್ರತೆಯಿಂದ ಇರಬೇಕು ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ . ಈ ಪ್ರಕೃತಿಯು ನಿಮಗೆ ಅನೇಕ ರೀತಿಯಲ್ಲಿ ನಡೆಯಲಿರುವ ಅಂಶಗಳನ್ನು ತಿಳಿಸುತ್ತಲೇ ಇರುತ್ತದೆ .
ಕನಸಿನ ರೂಪದಲ್ಲಿಯೂ ಕೂಡ ನಮ್ಮ ಭವಿಷ್ಯತ್ತಿನ ರೂಪದಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿಸಿಕೊಡುತ್ತದೆ . ಮುಖ್ಯವಾಗಿ ರಾತ್ರಿಯ ವೇಳೆ ಬೀಳುವ ಕನಸುಗಳು ಜೀವನದಲ್ಲಿ ನಡೆದಂತಹ ಅಥವಾ ಮುಂದೆ ನಡೆಯಲಿರುವ ಅಂಶಗಳನ್ನು ತಿಳಿಯ ಪಡಿಸುತ್ತದೆ . ನಾವು ಒಳ್ಳೆಯ ನಿದ್ದೆಯಲ್ಲಿ ಇದ್ದಾಗ ಸ್ವತಹ ನಾವೇ ಕುದುರೆಯಲ್ಲಿ ಸವಾರಿ ಮಾಡುವುದು ಕನಸಿನಲ್ಲಿ ಬಂದರೆ , ಅದು ಬಹಳ ಶುಭದಾಯಕ ಎನ್ನುತ್ತದೆ ಸ್ವಪ್ನ ಶಾಸ್ತ್ರ. ನಾವು ಪ್ರಸ್ತುತ ಕೆಲಸ ಮಾಡುತ್ತಿರುವ ರಂಗದಲ್ಲಿ ಮೆರುಗು ನೀಡುವ ಫಲಿತಾಂಶ ಬರುತ್ತದೆ ಎಂದು ಇದರ ಅರ್ಥ . ವ್ಯಾಪಾರಸ್ಥರಿಗೆ ಅತಿ ಶೀಘ್ರದಲ್ಲಿ ಲಾಭಗಳು ಪ್ರಾಪ್ತಿಯಾಗುತ್ತವೆ ಎಂದರ್ಥ .
ಇದೇ ಸಮಯದಲ್ಲಿ ಉದ್ಯೋಗಸ್ಥರಿಗಾದರೆ ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಾರೆ ಎಂದರ್ಥ . ಹಾಗೆಯೇ ಕನಸ್ಸಿನಲ್ಲಿ ಒಂದು ವೇಳೆ ನಿಮ್ಮ ಮುಖ ನೀವೇ ಕನ್ನಡಿಯಲ್ಲಿ ನೋಡಿಕೊಂಡಂತೆ ಕನಸು ಬಂದರೆ ಅದು ಶುಭ ಫಲಿತಾಂಶಗಳನ್ನು ನಮ್ಮ ಜೀವನದಲ್ಲಿ ಕೊಡುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು. ಪ್ರೇಮ ಜೀವನದಲ್ಲಿ ಮಧುರ ಅನುಭೂತಿಗಳನ್ನು ಪಡೆಯುತ್ತೀರಾ .
ಇಂತಹ ಕನಸುಗಳು ಮಹಿಳೆಯರಿಗೆ ಹೆಚ್ಚಾಗಿ ಬರುತ್ತಿರುತ್ತವೆ . ಹಾಗೆಯೇ ಕೆಲವು ಮಂದಿಗೆ ಕೂದಲನ್ನು ಕತ್ತರಿಸುವ ಹಾಗೆ ಕನಸು ಬೀಳುತ್ತದೆ . ಬಹಳ ಮಂದಿ ತಮ್ಮ ನಿಜ ಜೀವನದಲ್ಲಿ ಕೂದಲನ್ನು ಕತ್ತರಿಸಿಕೊಳ್ಳಲು ಇಷ್ಟಪಡುವುದಿಲ್ಲ . ಆದರೆ ಅವರಿಗೆ ಅಂತ ಕನಸುಗಳು ಬರುತ್ತಿರುತ್ತವೆ . ಅಂದರೆ ಇದರ ಅರ್ಥ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು . ಯಾವುದೋ ಒಂದು ಮುಖ್ಯವಾದ ಯೋಜನೆಯನ್ನು ರೂಪಿಸಿಕೊಂಡಿದ್ದರೆ , ಅದು ಸಕಾಲದಲ್ಲಿ ಪೂರ್ತಿ ಆಗುವುದಿಲ್ಲ . ಅಡ್ಡಿ ಆತಂಕಗಳು ಎದುರಾಗುತ್ತವೆ .
ನೀವು ಜಾಗ್ರತೆಯಿಂದ ಇರಬೇಕು ಎಂದು ಇದರ ಅರ್ಥ . ಹಾಗೆ ಕಪ್ಪು ಮೋಡಗಳು ಕವಿದ ಹಾಗೆ ಕನಸಿನಲ್ಲಿ ಕಾಣಿಸಿದರೆ , ಇದನ್ನು ಸಹ ಬಹಳ ಶುಭ ಪರಿಣಾಮ ಎಂದು ಭಾವಿಸಬಹುದು . ಯಾವುದಾದರೂ ಹೂಡಿಕೆಯನ್ನು ಮಾಡಿದರೆ ಅದರ ಮೂಲಕ ನಿಮಗೆ ಅನುಕೂಲಕರವಾದ ವಿಜಯವನ್ನು ಮತ್ತು ಆನಂದವನ್ನು ಕಲ್ಪಿಸುತ್ತದೆ ಎಂದು ಭಾವಿಸಬೇಕು . ಕನಸಿನಲ್ಲಿ ವೀಳ್ಯದೆಲೆ ಕಾಣಿಸಿದರೆ , ನಿಮಗೆ ಸಂತೋಷ ಬರುತ್ತಿದೆ ಎಂದರ್ಥ . ವೀಳ್ಯದೆಲೆಯನ್ನು ನಮ್ಮ ಹಿಂದೂ ಧರ್ಮದಲ್ಲಿ ಬಹಳ ಮಹತ್ವವಾಗಿ ಭಾವಿಸುತ್ತಾರೆ .
ಗಣೇಶನಿಗೆ ಆಗಲಿ, ಆಂಜನೇಯನಿಗೆ ಆಗಲಿ, ಅಥವಾ ಲಕ್ಷ್ಮಿಗೆ ಆಗಲಿ ವೀಳ್ಯದೆಲೆ ಎಂದರೆ ಬಹಳ ಇಷ್ಟ . ಕನಸಿನಲ್ಲಿ ಇದು ಬಂದರೆ ನಿಮ್ಮ ಜೀವನದಲ್ಲಿ ಸಂತೋಷ , ಸಂಪತ್ತು, ಮತ್ತು ಅಭಿವೃದ್ಧಿಯಾಗುತ್ತದೆ ಎಂದು ಸೂಚಿಸುವುದಕ್ಕೆ ವೀಳ್ಯದೆಲೆಗಳು ಕನಸ್ಸಿನಲ್ಲಿ ಕಾಣಿಸುತ್ತಿರುತ್ತದೆ . ಹಾಗೆಯೇ ಚಂದ್ರನು ಕನಸಿನಲ್ಲಿ ಕಾಣಿಸುವುದು ಕೂಡ ಬಹಳ ಶುಭದಾಯಕ ಎಂದು ಹೇಳುತ್ತದೆ. ಚಂದ್ರನು ತಂಪು ಮತ್ತು ಶಾಂತಿಗೆ ಸಂಕೇತ . ಸ್ಥಿರವಾಗಿ ಮತ್ತು ಸುಲಲಿತವಾಗಿ ನಿಮ್ಮ ಜೀವನ ಸಾಗುತ್ತದೆ ಎಂದು ಸೂಚಿಸಲು ಚಂದ್ರನು ನಿಮ್ಮ ಕನಸಿನಲ್ಲಿ ಕಾಣಿಸುತ್ತಿರುತ್ತಾನೆ .
ಕುಟುಂಬದಲ್ಲಿ ಯಾವುದೇ ರೀತಿಯ ವಿವಾದಗಳು , ಜಗಳಗಳು , ಕಲಹಗಳು ಇಲ್ಲದೆ ಆನಂದಕರವಾದ ಮತ್ತು ಸುಖಕರವಾದ ಜೀವನವು ಸ್ವಂತವಾಗುತ್ತದೆ ಎಂದು ಇಂತಹ ಕನಸುಗಳನ್ನು ಅರ್ಥೈಸಿಕೊಳ್ಳಬಹುದು . ಹಾಗೆಯೇ ಮನೆಯಲ್ಲಿ ಇರುವೆಗಳು ಕಾಣಿಸಿದರು ಕೂಡ ಅದನ್ನು ಶುಭ ಸಂಕೇತವೆಂದು ಭಾವಿಸಬೇಕು . ಆದರೆ ಇರುವೆಗಳಾಗಲಿ, ಜರಿಗಳಾಗಲಿ, ಹಲ್ಲಿಗಳಾಗಲಿ, ಅಥವಾ ಜಿರಳೆಗಳಾಗಲಿ ಮನೆಯು ಶುಭ್ರವಾಗಿ ಇಲ್ಲದಿದ್ದಾಗ ಕೊಳಕಿನಿಂದ ಇದ್ದಾಗ ಕಾಣಿಸಿದರೆ ಅದಕ್ಕೆ ಯಾವುದೇ ರೀತಿಯ ಅರ್ಥ ಇರುವುದಿಲ್ಲ .
ಒಂದು ವೇಳೆ ಮನೆಯು ಸಂಪೂರ್ಣ ಶುಭ್ರವಾಗಿದ್ದು , ಅಕಸ್ಮಾತಾಗಿ ಇವುಗಳು ಕಾಣಿಸಿದರೆ ಮಾತ್ರ , ಸ್ವಪ್ನ ಶಾಸ್ತ್ರದಲ್ಲಿ ಇರುವಂತೆ ಅರ್ಥೈಸಿಕೊಳ್ಳಬೇಕು . ಮನೆಯು ಶುದ್ಧವಾಗಿದ್ದು ಮನೆಯಲ್ಲಿ ಗುಂಪು ಗುಂಪಾಗಿ ಕಪ್ಪು ಇರುವೆಗಳು ಕಾಣಿಸಿದರೆ , ಮತ್ತು ಮೊಟ್ಟೆ ಹೊತ್ತು ತಿರುಗುತ್ತಿದ್ದರೆ ನಿಮ್ಮ ಮನೆಯಲ್ಲಿ ಅತಿ ಬೇಗ ಲಕ್ಷ್ಮೀ ಕಟಾಕ್ಷವಾಗುತ್ತದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ . ನಿಮ್ಮ ಮನೆಯಲ್ಲಿ ಯಾರಿಗಾದರೂ ಜರಿ ಕಾಣಿಸಿದರೆ ಅದು ಶುಭ ಸಂಕೇತವೆಂದು ಭಾವಿಸಬೇಕು .
ಮುಂಬರುವ ಆನಂದವನ್ನು ಮತ್ತು ಸೌಭಾಗ್ಯವನ್ನು ಸೂಚಿಸುವಂತಹ ಈ ಪ್ರಕೃತಿಯು ನಿಮಗೆ ಕೊಡುವಂತಹ ಸೂಚನೆಯಾಗಿ ನೀವು ಭಾವಿಸಬೇಕಾಗುತ್ತದೆ . ಆದರೆ ಇದು ನಿಮಗೆ ಕಾಣಿಸುವುದು ಎಷ್ಟು ಶುಭ ಸೂಚಕವೋ , ಇದು ನಿಮ್ಮ ಜೊತೆ ಸಹವಾಸ ಮಾಡಿದರೆ ಮಾತ್ರ ಬಹಳ ಅಪಾಯಕರ . ಕಚ್ಚಿದರೆ ಪ್ರಾಣ ಹೋಗುವ ಸಾಧ್ಯತೆ ಕೂಡ ಇರುತ್ತದೆ .ಆದ್ದರಿಂದ ಈ ಜರಿಗಳ ಬಳಿ ಜಾಗ್ರತೆಯಿಂದ ಇರಬೇಕು . ಒಂದು ವೇಳೆ ನಿಮಗೆ ಕಾಣಿಸಿದರೆ ಮನೆಯಿಂದ ಬಹಳ ದೂರಕ್ಕೆ ಎಸೆದು ಬಿಡಿ . ಆದರೆ ಕೊಲ್ಲುವ ಪ್ರಯತ್ನ ಮಾಡಬೇಡಿ ಎಂದು ಹೇಳುತ್ತದೆ ಸ್ವಪ್ನ ಶಾಸ್ತ್ರ .