ಅನ್ನವನ್ನು ಪರಬ್ರಹ್ಮ ಸ್ವರೂಪ ಎನ್ನುವರು. ಹಾಗೆಂದು ಭಾವಿಸುತ್ತಾರೆ ಕೂಡಾ ಅಂತಹ ಅನ್ನವನ್ನು ಊಟ ಮಾಡುವಾಗ ಅಪ್ಪಿತಪ್ಪಿಯು ಈ ಲೇಖನದಲ್ಲಿ ಹೇಳಿರುವ 15 ತಪ್ಪುಗಳನ್ನು ಮಾಡಬಾರದು.
ಊಟ ಮಾಡುವ ಮುಂಚೆ ಕೈ ಕಾಲು ಚೆನ್ನಾಗಿ ತೊಳೆದುಕೊಂಡು ನೆಲದ ಮೇಲೆ ಕಾಲು ಮಡಚಿ ಕೂತುಕೊಂಡು ಊಟ ಮಾಡಬೇಕು.
ಅನ್ನವನ್ನು ಒಂದೇ ಸ್ಥಳದಲ್ಲಿ ಕೂತುಕೊಂಡು ಊಟ ಮಾಡಬೇಕು. ಕೆಲವು ಜನ ಆ ಕಡೆ ಈ ಕಡೆ ತಿರುಗುತ್ತಾ ಮಾಡುತ್ತಾರೆ. ಆ ರೀತಿ ಖಂಡಿತ ಮಾಡಬಾರದು.
ಊಟ ಮಾಡುವಾಗ ಎಂಜಲು ಕೈಯಲ್ಲಿ ಇತರ ಆಹಾರವನ್ನು ಮುಟ್ಟಬಾರದು. ಅಪ್ಪಿತಪ್ಪಿಯೂ ಅನ್ನವನ್ನು ಕಾಲಲ್ಲಿ ತುಳಿಯಬಾರದು. ಎಡದ ಕೈಯಲ್ಲಿ ತಿನ್ನುವ ತಟ್ಟೆಯನ್ನು ಮುಟ್ಟಬಾರದು.
ಅನ್ನ ತಿನ್ನುವ ಸಮಯದಲ್ಲಿ ಯಾರ ಜೊತೆಗೂ ಕೂಡ ಜಗಳವಾಡಬಾರದು. ಊಟ ಮಾಡುವ ತಟ್ಟೆಯನ್ನು ಬಿಸಾಡುವುದು ಅತಿ ದೊಡ್ಡ ಪಾಪ. ಊಟ ಮಾಡುವಾಗ ಯಾವುದೇ ಕಾರಣಕ್ಕೂ ಮಧ್ಯದಲ್ಲಿ ಎದ್ದು ಹೋಗಬಾರದು.
ಊಟ ಮಾಡುವಾಗ ಗಟ್ಟಿಯಾಗಿ ನಗುವುದು ದೊಡ್ಡ ದೊಡ್ಡದಾಗಿ ಮಾತಾಡುವುದು ಮಾಡಬಾರದು ಮೌನವಾಗಿ ಊಟ ಮಾಡಿ ಮುಗಿಸಬೇಕು. ಊಟ ಮಾಡಿದ ನಂತರ ಅದೇ ತಟ್ಟೆಯಲ್ಲಿ ಕೈ ತೊಳೆದುಕೊಳ್ಳಬಾರದು. ಊಟ ಮುಗಿಸಿ ಕೈ ತೊಳೆದ ಮೇಲೆ ಕೈಯನ್ನು ಜಾಡಿಸಬಾರದು.
ಯಾವತ್ತೂ ಕೂಡ ಊಟಕ್ಕೆ ಕಾಯಬೇಕೆ ಹೊರತು ಊಟವನ್ನು ಕಾಯಿಸಬಾರದು. ಅಳುತ್ತಾ ಊಟ ಮಾಡಬಾರದು. ತಟ್ಟೆಯಲ್ಲಿ ತೆಗೆದುಕೊಂಡ ಅನ್ನವನ್ನು ಪೂರ್ತಿಯಾಗಿ ತಿನ್ನದೇ ಬಿಸಾಡಬಾರದು. ನಮಗೆ ಅನ್ನ ನೀಡಿದವರನ್ನು ಯಾವತ್ತಿಗೂ ದ್ವೇಷಿಸಬಾರದು.