ಆರೋಗ್ಯವೇ ಭಾಗ್ಯ

ಮಲವಿಸರ್ಜನೆಯು ಯಾವ ಬಲಪ್ರಯೋಗವೂ ಇಲ್ಲದೆ ಸಹಜವಾಗಿ ನಡೆಯಬೇಕೆಂದರೆ ಪ್ರತಿನಿತ್ಯ 8 ರಿಮದ 12 ಲೋಟಗಳಷ್ಟು ಉಗುರು ಬೆಚ್ಚಗಿನ ನೀರು ಕುಡಿಯಬೇಕು. ಕನಿಷ್ಠವೆಂದರೂ ಎರಡು ಗಂಟೆಗೊಮ್ಮೆ ನೀರು ಕುಡಿಯಬೇಕು.

ಪ್ರತಿನಿತ್ಯ ಎರಡು ಹೊತ್ತು ಮಲವಿಸರ್ಜನೆ ಆಗುವಂತೆ ಅಭ್ಯಾಸವನ್ನು ರೂಢಿಸಿಕೊಳ್ಳಿ.
ಊಟದ ನಂತರ ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದು ನಿದ್ರೆಗೂ, ಊಟಕ್ಕೂ ಕನಿಷ್ಠ 1,2 ಗಂಟೆಗಳ ಅಂತರ ಇರಬೇಕು.

ಬೆಳಗಿನ ಹೊತ್ತು ಅರ್ಥ ಗಂಟೆಯಷ್ಟಾದರೂ ನಡೆದಾಡುವ ಅಭ್ಯಾಸ ಒಳ್ಳೆಯದು. ಆಹಾರವನ್ನು ಅಗಿದು ನುಂಗಬೇಕು, ಹಸಿವಾದಾಗ ಮಾತ್ರ ತಿನ್ನಬೇಕು, ಹೊಟ್ಟೆ ತುಂಬಾ ತಿನ್ನಬಾರದು, ಒಂದು ಭಾಗ ಖಾಲಿ ಇರಬೇಕು. ತಿಂಡಿಗೆ ಅನುಕೂಲಕರ

ಸಮಯ ಎಂದರೆ ಬೆಳಿಗ್ಗೆ 9 ರಿಂದ 11 ಘಂಟೆ, ಊಟಕ್ಕೆ 12 ರಿಂದ 1 ಘಂಟೆ. ಕಾಳು ಅಥವಾ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಮರುದಿನ ತಿನ್ನಬೇಕು. ಅದೇ ರೀತಿ ಒಣಹಣ್ಣು (Dry fruits) ನೀರಿನಲ್ಲಿ ನೆನೆಸಿಟ್ಟು ಮರುದಿನ ತಿನ್ನಬೇಕು.
ಊಟದಲ್ಲಿ ದ್ವಿದಳ ಧಾನ್ಯಗಳು ತೃಣ ಧಾನ್ಯಗಳು ಮತ್ತು ತರಕಾರಿ ಇರಬೇಕು

ಹಸಿ ಪದಾರ್ಥ ಮತ್ತು ಬೇಯಿಸಿದ ಪದಾರ್ಥಗಳೆರಡನ್ನು ಒಟ್ಟಿಗೆ ತಿನ್ನಬಾರದು ಬಿಡಿಬಿಡಿಯಾಗಿ ಸೇವಿಸಬೇಕು.
ಮೊಳಕೆಕಾಳು, ಬೀಜಗಳು, ಹಣ್ಣುಗಳು, ಹಣ್ಣಿನ ರಸ, ಹಸಿರುಸೊಪ್ಪು, ಸಲಾಡ್ಗಳನ್ನು ಬಳಸಬೇಕು. ಹಾಲಿಗಿಂತಲೂ, ಮಜ್ಜಿಗೆ, ಮೊಸರು, ತಕ್ಕ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

ಉಪ್ಪು, ಸಕ್ಕರೆ, ಮಸಾಲೆಗಳು, ಐಸ್ಕ್ರೀಂ ಬಳಕೆಯನ್ನು ಕಡಿಮೆ ಮಾಡಬೇಕು. ಧೂಮಪಾನ ಮದ್ಯಪಾನ, ಡ್ರಗ್ಸ್ ಸಾಫ್ಟ್ ಡ್ರಿಂಕ್ಸ್, ತಂಬಾಕು, ಪಾನ್, ಬೀಡಿ, ಸಿಗರೇಟ್ ಬಳಕೆ ನಿಷೇಧಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.
ಮೈದಾ ಬಿಳಿ ಸಕ್ಕರೆ ಪಾಲಿಷ್ ಮಾಡಿಸಿದ

ಅಕ್ಕಿ ಬಳಸಬಾರದು, ಮಾಂಸಾಹಾರವನ್ನು ತ್ಯಜಿಸಿ, ಸಸ್ಯಾಹಾರಕ್ಕೆ ಆದ್ಯತೆ ಕೊಡಿ. ಸಂಗ್ರಹ ಮಾಡಿಟ್ಟ ಹಳೆಯ ಪದಾರ್ಥಗಳು ಬಣ್ಣ ಬೆರೆಸಿರುವಂತಹ ಪ್ಯಾಕ್ ಮಾಡಿರುವ ಫ್ರಿಜ್ನಲ್ಲಿರಿಸಿರುವಂತಹ ವಾಸನೆ ಹೋಗಬಾರದೆಂದು ಕೆಮಿಕಲ್ ಬಳಸಿ

ಮಾರಾಟ ಮಾಡುವಂತಹವನ್ನು ತಿನ್ನಬಾರದು. ಆಹಾರ ತುಂಬಾ ಬಿಸಿಯಾಗಿರಬಾರದು ಹಾಗೆಯೇ ತುಂಬ ತಣ್ಣಗೂ ಇರಬಾರದು. ವಾರಕ್ಕೊಮ್ಮೆ ಉಪವಾಸ ಮಾಡಿ ಆ ದಿನ ಪೂರ್ತಿ ಹಣ್ಣುಗಳ ಸೇವನೆಯಲ್ಲಿ ಕಾಲ ಕಳೆಯಬೇಕು.

Leave a Comment