ನಾವು ಈ ಲೇಖನದಲ್ಲಿ ಭಗವಂತ ವಿಷ್ಣು ಹೇಳಿದ ಮಾತು . ಯಾವ ಸ್ತ್ರೀ ಭಾಗ್ಯದಲ್ಲಿ ಪುತ್ರ ಸಂತಾನ ಇರುವುದಿಲ್ಲ , ಮತ್ತು ಯಾವ ಸ್ತ್ರೀ ವಿಧವೆ ಆಗುತ್ತಾಳೆ . ಎಂಬದನ್ನು ಈ ಲೇಖನದಲ್ಲಿ ನೋಡೋಣ . ಒಂದು ಬಾರಿ ತಾಯಿ ಲಕ್ಷ್ಮಿ ದೇವಿ, ಕ್ಷೀರ ಸಾಗರದಲ್ಲಿ ಭಗವಂತನಾದ ಶ್ರೀ ವಿಷ್ಣು ಅವರ ಕಾಲುಗಳನ್ನು ತಾಯಿ ಲಕ್ಷ್ಮಿದೇವಿ ಹೊತ್ತುತ್ತಿದ್ದಳು . ವಿಷ್ಟುವಿನ ಕಾಲುಗಳನ್ನು ಹೊತ್ತುತ್ತಿದ್ದ , ತಾಯಿ ಲಕ್ಷ್ಮಿ ದೇವಿ ಭಗವಂತನಾದ ವಿಷ್ಣುವಿಗೆ ಒಂದು ಪ್ರಶ್ನೆಯನ್ನು ಮಾಡುತ್ತಾಳೆ .
ಹೇ ಪ್ರಭು ಇಂದು ನನ್ನ ಮನಸ್ಸಿನಲ್ಲಿ ಮೂರು ಪ್ರಶ್ನೆಗಳು ಹುಟ್ಟುತ್ತಿವೆ .ಒಂದು ವೇಳೆ ಈ ಮೂರು ಪ್ರಶ್ನೆಗಳಿಗೆ ಉತ್ತರವನ್ನು ನನಗೆ ತಿಳಿಸಿ ಕೊಟ್ಟರೆ , ಅದರಿಂದ ನನ್ನ ಮನಸ್ಸಿಗೆ ತುಂಬಾ ಶಾಂತಿ ಸಿಗುತ್ತದೆ . ಆಗ ಭಗವಂತನಾದ ಶ್ರೀ ವಿಷ್ಣು ಈ ರೀತಿ ಹೇಳುತ್ತಾರೆ . ಹೇ ದೇವಿ ನಿನ್ನಲ್ಲಿ ಯಾವುದೇ ಪ್ರಶ್ನೆ ಇದ್ದರೂ , ನಿಸ್ಸಂಕೋಚವಾಗಿ
ಕೇಳು . ನಿನ್ನಲ್ಲಿರುವ ಸಂದೇಹಗಳನ್ನು ನಾನು ಖಂಡಿತವಾಗಿ ನಿವಾರಿಸುತ್ತೇನೆ .ಆಗ ತಾಯಿ ಲಕ್ಷ್ಮಿ ದೇವಿ ಹೇಳುತ್ತಾರೆ . ಹೇ ಪ್ರಭು , 1ನೇ ಪ್ರಶ್ನೆ ಯಾವ ರೀತಿ ಸ್ತ್ರೀಯರ ಭಾಗ್ಯದಲ್ಲಿ ಸಂತಾನ ಸುಖ ಇರುವುದಿಲ್ಲ .
2ನೇ ಪ್ರಶ್ನೆ . ಯಾವ ಸ್ತ್ರೀ ಸಮಯಕ್ಕೂ ಮುನ್ನ ವಿಧವೆ ಆಗುತ್ತಾರೆ . 3 ನೇ ಪ್ರಶ್ನೆ ಯಾವ ರೀತಿಯ ಶೃಂಗಾರ ಮಾಡುವುದರಿಂದ ಸ್ತ್ರೀಯರಿಗೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತದೆ . ಆಗ ಭಗವಂತನಾದ ಶ್ರೀ ವಿಷ್ಣು ಈ ರೀತಿಯಾಗಿ ಹೇಳುತ್ತಾರೆ . ಹೇ ದೇವಿ ನೀವು ಸರಿಯಾದ ಪ್ರಶ್ನೆಗಳನ್ನೇ ಕೇಳಿದ್ದೀರಿ . ನಿನ್ನ ಈ ಮೂರು ಪ್ರಶ್ನೆಗಳು ಅತ್ಯಂತ ಮಹತ್ವ ಪೂರ್ಣವಾಗಿ ಇದೆ . ಪ್ರಶ್ನೆಗಳಿಗೋಸ್ಕರ ಇರುವ ಉತ್ತರ ಜಗತ್ತಿನ ಕಲ್ಯಾಣಕ್ಕೋಸ್ಕರ ಇದೆ .ಯಾವ ಮನುಷ್ಯರ ಇವುಗಳನ್ನ ಗಮನ ಇಟ್ಟು ಕೇಳುತ್ತಾರೋ ,
ಅವರಿಗೆ ಭೂ ಲೋಕದಲ್ಲಿ ಸಂಪೂರ್ಣ ಸುಖ ಸಿಗುತ್ತದೆ.. ಮತ್ತು ಮೃತ್ಯುವಿನ ನಂತರ ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ . ಭಗವಂತನಾದ ಶ್ರೀ ವಿಷ್ಣು ದೇವಿ ಲಕ್ಷ್ಮಿ ಅವರಿಗೆ ಈ ರೀತಿ ಹೇಳುತ್ತಾನೆ . ಹೇ ದೇವಿ ನಾನು ಇಂದು ನಿನಗೆ ಒಂದು ಅತ್ಯಂತ ಪವಿತ್ರವಾದ ಕಥೆಯನ್ನು ಹೇಳುತ್ತೇನೆ . ಈ ಕಥೆಯ ಮಾಧ್ಯಮದ ಮೂಲಕ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನಿನಗೆ ಸಿಗುತ್ತದೆ . ಈ ಕಥೆಯನ್ನ ಗಮನವಿಟ್ಟು ಕೇಳಬೇಕು . ಮತ್ತು ಅರ್ಧ ಮತ್ತು ಅಪೂರ್ಣವಾಗಿ ಕೇಳಬಾರದು .
ಈ ಕಥೆಯಲ್ಲಿ ಇಡೀ ಜಗತ್ತಿನ ಕಲ್ಯಾಣ ಅಡಗಿದೆ . ಈ ಕಥೆಯನ್ನು ಯಾರೆಲ್ಲಾ ಪೂರ್ತಿ ಗಮನವಿಟ್ಟು ಕೇಳುತ್ತಾರೋ , ಅವರ 29 ಅಪರಾಧಗಳನ್ನು ಕ್ಷಮಿಸುತ್ತೇನೆ . ಆಗ ದೇವಿ ಲಕ್ಷ್ಮಿ ಈ ರೀತಿಯಾಗಿ ಹೇಳುತ್ತಾರೆ . ಪ್ರಭು ನಾನು ನಿಮಗೆ ಒಂದು ಮಾತನ್ನು ಕೊಡುತ್ತೇನೆ . ಆದರೆ ನಾನು ಈ ಕಥೆಯನ್ನು ತುಂಬಾ ಶ್ರದ್ಧೆಯಿಂದ ಮನಸ್ಸು ಕೊಟ್ಟು ಕೇಳುತ್ತೇನೆ .ದಯವಿಟ್ಟು ನೀವು ಆ ಕಥೆಯನ್ನು ಆರಂಭಿಸಿ . ಭಗವಂತನಾದ ವಿಷ್ಣು ಈ ರೀತಿ ಹೇಳುತ್ತಾರೆ . ಹೇ ದೇವಿ ಇದು ಒಂದು ಸಮಯದ ವಿಷಯವಾಗಿದೆ.
ಮಧ್ಯ ದೇಶದಲ್ಲಿ ಒಂದು ಚಿಕ್ಕ ನಗರ ಇತ್ತು . ಆ ನಗರದಲ್ಲಿ ಒಬ್ಬ ಶ್ರೀಮಂತ ಇದ್ದ . ಆತನಿಗೆ ಎರಡು ಮಕ್ಕಳು ಇದ್ದರು . ಆ ಎರಡು ಗಂಡು ಮಕ್ಕಳ ಮದುವೆ ಕೂಡ ಆಗಿತ್ತು . ಆ ಶ್ರೀಮಂತ ವ್ಯಕ್ತಿಯ ಮನೆಯಲ್ಲಿ ಯಾವುದೇ ವಿಷಯದ ಕೊರತೆ ಇರಲಿಲ್ಲ . ಈ ಶ್ರೀಮಂತ ವ್ಯಕ್ತಿಯ ಹೆಂಡತಿಯ ಸ್ವಭಾವ ಅತ್ಯಂತ ದುಷ್ಟವಾಗಿ ಇತ್ತು . ಇಲ್ಲಿ ಆ ಶ್ರೀಮಂತ ವ್ಯಕ್ತಿ ಯ ಹೆಂಡತಿ ಮತ್ತು ದೊಡ್ಡ ಮಗನ ಹೆಂಡತಿ ಇಬ್ಬರ ಸ್ವಭಾವ ಕೂಡ ತುಂಬಾ ದುಷ್ಟವಾಗಿತ್ತು . ಶ್ರೀಮಂತ ವ್ಯಕ್ತಿಯ ಹೆಂಡತಿ ಮೊದಲ ಸೊಸೆಯನ್ನು ತುಂಬಾ ಪ್ರೀತಿ ಮಾಡುತ್ತಿದ್ದಳು .
ಆದರೆ ಚಿಕ್ಕ ಮಗನ ಹೆಂಡತಿಯ ಜೊತೆ ಶ್ರೀಮಂತ ವ್ಯಕ್ತಿಯ ಹೆಂಡತಿ ಕೆಟ್ಟದಾಗಿ ನಡೆದು ಕೊಳ್ಳುತ್ತಿದ್ದಳು . ಮನೆಯ ಎಲ್ಲಕ್ಕಿಂತ ಚಿಕ್ಕ ಸೊಸೆ ಅಂದರೆ ಚಿಕ್ಕ ಮಗನ ಹೆಂಡತಿ ಒಳ್ಳೆಯ ಸ್ವಭಾವ ಇರುವಂತ ಈಶ್ವರನ ಮೇಲೆ ಶ್ರದ್ಧೆ ಇರುವಂತ ಪತಿವ್ರತೆ ನಾರಿ ಆಗಿದ್ದಳು . ಆಕೆ ಒಬ್ಬಳೇ ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಳು .ಇಷ್ಟೆಲ್ಲಾ ಒಳ್ಳೆಯ ಸ್ವಭಾವ ಇದ್ದರೂ ,
ಈಕೆಯ ಅತ್ತೆ ಇವಳೊಂದಿಗೆ ಕೆಟ್ಟದಾಗಿ ನಡೆದು ಕೊಳ್ಳುತ್ತಿದ್ದಳು . ಇವಳಿಗೆ ಅವಮಾನ ಮಾಡುತ್ತಿದ್ದಳು . ಇದರ ಹಿಂದೆ ಇರುವ ವಿಷಯ ಇಷ್ಟೇ ಇತ್ತು, ದೊಡ್ಡ ಸೊಸೆಗೆ ಒಬ್ಬ ಗಂಡು ಮಗ ಇದ್ದ . ಚಿಕ್ಕ ಸೊಸೆ ಒಂದು ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಳು .ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾರಣ ಆ ಶ್ರೀಮಂತ ವ್ಯಕ್ತಿಯ ಹೆಂಡತಿ ತನ್ನ ಸೊಸೆಗೆ ಪದೇಪದೇ ಅವಮಾನ ಮಾಡುತ್ತಿದ್ದಳು . ಯಾರ ಭಾಗ್ಯದಲ್ಲಿ ಏನು ಬರೆದಿರುತ್ತದೆಯೋ ಅದು ಆಗುತ್ತದೆ .ಭಗವಂತನಾದ ವಿಷ್ಣು ಈ ರೀತಿ ಹೇಳುತ್ತಾರೆ .
ನಾನು ಈಗ ಚಿಕ್ಕ ಸೊಸೆಯ ಕಥೆಯನ್ನು ಹೇಳುತ್ತೇನೆ . ನಿಮ್ಮ ಮೊದಲ ಪ್ರಶ್ನೆಗೆ ಉತ್ತರ ಸಿಗುತ್ತದೆ , ಅದು ಯಾವ ಸ್ತ್ರೀಗೆ ಪುತ್ರ ಪ್ರಾಪ್ತಿ ಆಗುವುದಿಲ್ಲ .ಹೇ ದೇವಿ ಶ್ರೀಮಂತ ವ್ಯಕ್ತಿಯ ಹೆಂಡತಿ ಮೊದಲೇ ದುಷ್ಟ ಸ್ವಭಾವದವಳು ಆಗಿದ್ದಳು . ಈಕೆಯ ಮೇಲೆ ಇವಳ ಅತ್ತೆಯು ಸಹ ಬೇಸರ ಗೊಂಡಿದ್ದಳು . ಶ್ರೀಮಂತ ವ್ಯಕ್ತಿಯ ಹೆಂಡತಿ ತನ್ನ ಚಿಕ್ಕ ಸೊಸೆಗೆ ತುಂಬಾ ದುಃಖವನ್ನು ಕೊಡುತ್ತಿದ್ದಳು . ಚಿಕ್ಕ ಸೊಸೆ ಹೆಸರು ಸುಕನ್ಯ . ಮತ್ತು ಸುಕನ್ಯಳಿಗೆ ತೊಂದರೆ ಮಾಡುವುದು ಎಂದರೆ ,
ಅವಳ ಅತ್ತೆಗೆ ತುಂಬಾ ಖುಷಿಯಾಗುತ್ತಿತ್ತು . ಈ ಸುಕನ್ಯ ಪ್ರತಿದಿನ ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ ಎದ್ದು , ತನ್ನ ಮನೆಯ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಳು . ಇಡೀ ದಿನ ಕೆಲಸ ಮಾಡಿದ ನಂತರ , ರಾತ್ರಿ ಅವಳಿಗೆ ನಿದ್ರೆ ಮಾಡಲು ಅವಕಾಶ ಸಿಗುತ್ತಿತ್ತು . ಇಷ್ಟೆಲ್ಲಾ ಮಾಡಿದರು ಆ ಶ್ರೀಮಂತ ವ್ಯಕ್ತಿಯ ಹೆಂಡತಿ ಚಿಕ್ಕ ಸೊಸೆಯ ಮೇಲೆ ದ್ವೇಷ ಸಾಧಿಸುತ್ತಿದ್ದಳು .ಯಾವಾಗ ಚಿಕ್ಕ ಸೊಸೆ ಕಸವನ್ನು ಗುಡಿಸುತ್ತಿರುತ್ತಾಳೋ , ಆಗ ಆಕೆಯ ಅತ್ತೆ ಬಂದು ಏನಾದರೂ ಕಿರಿಕಿರಿ ಮಾತುಗಳನ್ನು ಆಡುತ್ತಿದ್ದಳು .
ನಿನ್ನ ಕೈಯಲ್ಲಿ ತ್ತಾಣ ಇಲ್ಲವಾ , ಬೇಗ ಬೇಗ ಕಸ ಗುಡಿಸು , ನಾನು ದೇವಸ್ಥಾನಕ್ಕೆ ಹೋಗುತ್ತಿದ್ದೇನೆ .ದೇವಸ್ಥಾನಕ್ಕೆ ಹೋಗಿ ಬರುವ ಮುನ್ನ ನೀನು ಅಡಿಗೆಯನ್ನು ತಯಾರು ಮಾಡು .ಬರುತ್ತಿದ್ದಂತೆ ನಾನು ಊಟವನ್ನು ಮಾಡಬೇಕು .ಅನ್ನದ ಒಂದು ಅಗುಳು ಕೂಡ ಹಾಳಾಗಬಾರದು . ತನ್ನ ಅತ್ತೆ ಹೇಳಿದ ಎಲ್ಲ ಮಾತುಗಳನ್ನು ಸಹಿಸಿ ಕೊಳ್ಳುತ್ತಿದ್ದಳು . ಮತ್ತು ಅತ್ತೆ ಹೇಳಿದ ಎಲ್ಲ ಮಾತುಗಳನ್ನು ತುಂಬಾ ಗೌರವ ಇಟ್ಟು ಪಾಲಿಸುತ್ತಿದ್ದಳು . ನಂತರ ಚಿಕ್ಕ ಸೊಸೆ ಅಡುಗೆಯನ್ನು ಮಾಡುವಾಗ , ಈ ರೀತಿಯಾಗಿ ಯೋಚನೆ ಮಾಡುತ್ತಾಳೆ .
ನಾನು ಮನೆಯ ಇಷ್ಟೆಲ್ಲ ಕೆಲಸವನ್ನು ಮಾಡುತ್ತೇನೆ . ನನ್ನನ್ನು ನೆಮ್ಮದಿಯಾಗಿ ಉಸಿರಾಡಲು ಬಿಡುವುದಿಲ್ಲ . ನನ್ನ ಅತ್ತೆ ಯಾವುದಾದರೂ ವಿಷಯ ತೆಗೆದುಕೊಂಡು ಕೇವಲ ನನಗೆ ಮಾತ್ರ ಹಿಂಸೆ ಮಾಡುತ್ತಾರೆ . ಈ ಹವ್ಯಾಸಗಳು ಯಾವಾಗ ಕಡಿಮೆಯಾಗುತ್ತದೆ ಎಂಬುದು ನನಗೆ ತಿಳಿದಿಲ್ಲ . ಹೀಗೆ ಸುಕನ್ಯ ಯೋಚನೆ ಮಾಡುವ ಸಮಯದಲ್ಲಿ ತಕ್ಷಣ ದ್ವಾರದ ಬಳಿ ಸದ್ದು ಆಯಿತು . ಸೊಸೆ ಯೋಚನೆ ಮಾಡುತ್ತಾಳೆ ಇನ್ನು ಅಡುಗೆ ಆಗಿಲ್ಲ . ಅತ್ತೆ ಬೇಗ ಬಂದಿರಬಹುದು ಎಂದು .
ಇನ್ನು ಬೈಗುಳವನ್ನು ಕೇಳ ಬೇಕಾಗುತ್ತೆ ಎಂದುಕೊಂಡು ದ್ವಾರವನ್ನು ತೆಗೆಯುತ್ತಾಳೆ.. ದ್ವಾರದ ಹತ್ತಿರ ಒಬ್ಬ ಸನ್ಯಾಸಿ ನಿಂತಿರುವುದನ್ನು ಈಕೆ ನೋಡುತ್ತಾಳೆ . ಆ ಸನ್ಯಾಸಿ ಸುಕನ್ಯಳಿಗೆ ಹೇಳುತ್ತಾರೆ . ಮಗಳೇ ಯಾವತ್ತಿಗೂ ನೀನು ಸುಮಂಗಲಿ ಆಗಿ ಇರು . ಈ ಸನ್ಯಾಸಿಗೋಸ್ಕರ ಏನಾದರೂ ಆಹಾರವನ್ನು ದಾನ ಮಾಡು . ಹೇ ಮಗಳೇ ನನಗೆ ತುಂಬಾ ಹಸಿವಾಗಿದೆ ಎಂದು ಹೇಳುತ್ತಾರೆ . ಆಗ ಸುಕನ್ಯ ಯೋಚನೆ ಮಾಡುತ್ತಾಳೆ . ಒಂದು ವೇಳೆ ಇವರಿಗೆ ದಾನ ಮಾಡಿದರೆ , ಊಟ ಮಾಡುವಾಗ ನನ್ನ ಅತ್ತೆ ಬಂದರೆ , ನನ್ನ ಕಥೆ ಮುಗಿಯುತ್ತದೆ .
ಹೀಗೆ ಸ್ವಲ್ಪ ಸಮಯ ಯೋಚಿಸಿದ ನಂತರ ಸುಕನ್ಯ ನನ್ನ ಅತ್ತೆಯ ಮಾತಿಗೆ ಭಯಪಟ್ಟು ಈ ಸನ್ಯಾಸಿಗೆ ಊಟ ಬಡಿಸಲಿಲ್ಲ ಎಂದರೆ , ನನಗೆ ಮಹಾ ಪಾಪ ಅಂಟಿಕೊಳ್ಳುತ್ತದೆ . ನನ್ನ ಎಲ್ಲಾ ಪುಣ್ಯ ನಷ್ಟವಾಗುತ್ತದೆ . ಎಂದು ಯೋಚನೆ ಮಾಡಿ , ಸುಕನ್ಯ ಆ ಸನ್ಯಾಸಿಯನ್ನು ಮನೆಯ ಒಳಗೆ ಕರೆಯುತ್ತಾಳೆ . ಅತಿಥಿ ಧರ್ಮವನ್ನು ಪಾಲಿಸುತ್ತಾ , ಇವಳು ಆ ಸನ್ಯಾಸಿಗೆ ಊಟವನ್ನು ಬಡಿಸುತ್ತಾಳೆ . ಅಷ್ಟರಲ್ಲಿ ಆಕೆಯ ಅತ್ತೆಯು ಮನೆಗೆ ಬರುತ್ತಾಳೆ . ಆ ಸನ್ಯಾಸಿ ಮನೆಯ ಒಳಗೆ ಊಟ ಮಾಡುತ್ತಿರುವುದನ್ನು ನೋಡಿ , ಅತ್ತೆಗೆ ತುಂಬಾ ಸಿಟ್ಟು ಬರುತ್ತದೆ .
ಆಕೆ ಕಿರುಚಾಡುತ್ತಾ ಸುಕನ್ಯಳಿಗೆ ಹೇಳುತ್ತಾಳೆ . ಇಲ್ಲಿ ಯಾವ ಪ್ರಕಾರದ ಅನ್ನದಾಸೋಹ ನಡೆದಿಲ್ಲ , ನೀನು ದಾರಿಯಲ್ಲಿ ಭಿಕ್ಷೆ ಬೇಡುವವರನ್ನು ಮನೆಗೆ ಕರೆದು ಊಟ ಹಾಕಿರುವೆ . ಆಗ ಸುಕನ್ಯ ಅತ್ತೆಯ ಬಳಿ ಬೇಡಿಕೊಳ್ಳುತ್ತಾಳೆ .ಆಗ ಅತ್ತೆ ಈಕೆಯ ಒಂದು ಮಾತನ್ನು ಸಹ ಕೇಳುವುದಿಲ್ಲ , ಈಕೆಯ ಅತ್ತೆ ಆ ಸನ್ಯಾಸಿಯನ್ನು ಮನೆಯಿಂದ ಆಚೆ ಕಳಿಸುತ್ತಾರೆ .ಅವರು ಮಾಡುತ್ತಿರುವ ಊಟವನ್ನು ತೆಗೆದು ಕಸದಲ್ಲಿ ಎಸೆಯುತ್ತಾಳೆ . ನಂತರ ಅತ್ತೆಯು ತನ್ನ ಸೊಸೆಯ ಮೇಲೆ ಸಿಟ್ಟು ಮಾಡಿಕೊಳ್ಳುತ್ತಾಳೆ .
ಹೇ ದುಷ್ಟ ಹೆಣ್ಣೆ, ನಾನು ನಿನಗೆ ಒಂದು ಮಾತನ್ನು ಹೇಳಿದ್ದೆ , ಒಂದು ಅನ್ನದ ಅಗುಳನ್ನು ಕೂಡ ವ್ಯರ್ಥ ಮಾಡಬಾರದೆಂದು .ಆದರೆ ನೀನು ಮಾಡಿದ್ದು , ಆ ಭಿಕ್ಷುಕನಿಗೆ ಇರುವ ಊಟವನ್ನು ಬಡಿಸಿದ್ದೀಯಾ , ಆಗ ಸುಕನ್ಯ ಎದುರುತ್ತಾ ಒಂದು ಮಾತನ್ನು ಹೇಳುತ್ತಾಳೆ . ಅತ್ತೆ ನಾನು ನನ್ನ ಭಾಗದ ಊಟವನ್ನು ಸನ್ಯಾಸಿಗೆ ಕೊಟ್ಟಿದ್ದೇನೆ , ಇದರಲ್ಲಿ ಸಿಟ್ಟು ಮಾಡಿಕೊಳ್ಳುವ ವಿಷಯ ಏನಿದೆ , ದ್ವಾರದ ಬಳಿ ಬಂದಿರುವ ಅತಿಥಿಗಳನ್ನು ಯಾವತ್ತಿಗೂ ಬರೀ ಕೈಯಲ್ಲಿ ಕಳಿಸ ಬಾರದು .ಈ ರೀತಿ ಶಾಸ್ತ್ರ ಹೇಳುತ್ತದೆ .
ನಂತರ ಸುಕನ್ಯಳ ಅತ್ತೆ ಅವಳಿಗೆ ಚೆನ್ನಾಗಿ ಬೈಯುತ್ತಾಳೆ .ಇಬ್ಬರ ನಡುವೆ ತುಂಬಾ ವಾದ ವಿವಾದಗಳು ಜಗಳ ನಡೆಯುತ್ತವೆ .ಸುಕನ್ಯಳ ಅತ್ತೆ ಸಿಟ್ಟಿನಿಂದ ಬಂದು ಸುಕನ್ಯಳನ್ನು ಹೊಡೆದು ಮನೆಯಿಂದ ಆಚೆ ಓಡಿಸುತ್ತಾಳೆ .ನಂತರ ಮನೆಯ ದ್ವಾರವನ್ನು ಮುಚ್ಚಿ ಬಿಡುತ್ತಾಳೆ . ಸುಕನ್ಯ ತುಂಬಾ ಹೊತ್ತಿನವರೆಗೆ ಮನೆಯ ಮುಖ್ಯ ದ್ವಾರದ ಮುಂದೆ ನಿಂತಿರುತ್ತಾಳೆ .ಆಚೆಯಿಂದ ತನ್ನ ಅತ್ತೆಯನ್ನು ಕರೆಯುತ್ತಿರುತ್ತಾಳೆ .ಸುಕನ್ಯಳ ಅತ್ತೆ ಒಂದು ಮಾತನ್ನು ಸಹ ಕೇಳುವುದಿಲ್ಲ .
ಆಕೆಗೆ ಮನೆಯ ಒಳಗಡೆ ಬರಲು ಬಿಡುವುದಿಲ್ಲ . ನಂತರ ಸುಕನ್ಯ ತುಂಬಾ ದುಃಖ ಮತ್ತು ನಿರಾಸೆಯಿಂದ ತನ್ನ ತವರು ಮನೆಗೆ ಹೋಗುತ್ತಾಳೆ . ತವರು ಮನೆಗೆ ಹೋಗುವ ದಾರಿಯಲ್ಲಿ ತುಂಬಾ ದಟ್ಟವಾದ ಕಾಡು ಇತ್ತು. ಸುಕನ್ಯ ಹಸಿವು ಮತ್ತು ಬಾಯಾರಿಕೆಯಿಂದ ಕಾಡಿನ ಹಾದಿಯಲ್ಲಿ ಹೋಗಲು ಶುರು ಮಾಡುತ್ತಾಳೆ . ಅದೇ ಸಮಯದಲ್ಲಿ ಆಚಾನಕ್ಕಾಗಿ ಗುಡುಗು ಸಿಡಿಲು ಬರಲು ಶುರು ವಾಗುತ್ತದೆ .ತಕ್ಷಣವೇ ಮಳೆಯೂ ಕೂಡ ಬರಲು ಶುರುವಾಗುತ್ತದೆ .ಮಳೆಯಿಂದ ಕಾಪಾಡಿಕೊಳ್ಳಲು , ಸುಕನ್ಯ ಒಂದು ದೊಡ್ಡದಾದ ಮರದ ಬಳಿ ಹೋಗಿ ನಿಲ್ಲುತ್ತಾಳೆ .
ಅದೇ ಮರದ ಕೆಳಗಡೆ ಒಂದು ಕುಳಿ ಇರುವುದನ್ನು ಸುಕನ್ಯ ನೋಡುತ್ತಾಳೆ . ತಡ ಮಾಡದೆ ಆ ಕುಳಿಯ ಒಳಗಡೆ ಆಕೆ ಹೋಗುತ್ತಾಳೆ . ಆ ಕುಳಿಯ ಒಳಗಡೆ ಒಬ್ಬ ಸಾಧು ಮಹಾತ್ಮ ಕುಳಿತಿರುವುದನ್ನು ಸುಕನ್ಯ ನೋಡುತ್ತಾಳೆ . ಆ ಸನ್ಯಾಸಿ ಬೇರೆ ಯಾರು ಅಲ್ಲ ಬದಲಿಗೆ ಭಗವಂತನಾದ ಶ್ರೀ ವಿಷ್ಣುವೇ , ಸಾಧುವಿನ ರೂಪವನ್ನು ಧರಿಸಿಕೊಂಡು ಅಲ್ಲಿ ಕುಳಿತಿದ್ದರು . ಯಾವಾಗ ಆ ಸಾಧು ಸುಕನ್ಯಳನ್ನು ನೋಡುತ್ತಾರೋ ,ಒಂದು ಮಾತನ್ನು ಹೇಳುತ್ತಾರೆ . ಹೇ ಮಗಳೇ ಈ ದಟ್ಟವಾದ ಕಾಡಿನಲ್ಲಿ ಒಂಟಿ ಹೆಣ್ಣು ಮಗಳು ನೀನು ಏನು ಮಾಡುತ್ತಿರುವೆ, ಅಳುವುದನ್ನು ನಿಲ್ಲಿಸು .
ನಿನ್ನ ಬಗ್ಗೆ ನನಗೆ ಎಲ್ಲವೂ ಗೊತ್ತಿದೆ . ನಿನ್ನ ಗಂಡನ ಮನೆಯವರು ಅತ್ಯಂತ ದುಷ್ಟ ಸ್ವಭಾವದವರು ಆಗಿದ್ದಾರೆ . ಅವರು ನಿನಗೆ ತುಂಬಾ ದುಃಖವನ್ನು ಕೊಡುತ್ತಿದ್ದಾರೆ . ಇದಕ್ಕೆ ಇರುವ ಕಾರಣ ಕೇವಲ ಇಷ್ಟೇ , ಅದು ನಿನಗೆ ಪುತ್ರನ ಪ್ರಾಪ್ತಿ ಆಗಿಲ್ಲ ಅನ್ನುವುದು . ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾರಣದಿಂದಾಗಿ , ನಿನ್ನ ಅತ್ತೆಯಿಂದ ನೀನು ಕೆಟ್ಟ ಮಾತುಗಳನ್ನು ಕೇಳುತ್ತಿದ್ದೀಯಾ , ಹೇ ಮಗಳೇ ನೀನು ಚಿಂತೆ ಮಾಡಬೇಡ .ನಾನು ನಿನಗೆ ಒಂದು ಹಾಳೆಯನ್ನು ಕೊಡುತ್ತೇನೆ . ಇದರಲ್ಲಿ ಯಾವ ಉಪಾಯಗಳ ಬಗ್ಗೆ ಬರೆದಿದೆಯೋ ,
ಆ ಉಪಾಯವನ್ನು ನೀನು ಪೂರ್ತಿ ಮನಸ್ಸಿಟ್ಟು ಮಾಡು . ನಂತರ ನಿನಗೆ ಗುಣವಂತ ಪುತ್ರನ ಪ್ರಾಪ್ತಿಯಾಗುತ್ತದೆ . ನಂತರ ಸುಕನ್ಯ ಆ ಹಾಳೆಯನ್ನು ತೆಗೆದುಕೊಳ್ಳುತ್ತಾಳೆ . ಅಚಾನಕ್ಕಾಗಿ ಆ ಸಾಧು ಅಲ್ಲಿಂದ ಮಾಯವಾಗುತ್ತಾರೆ . ಇದನ್ನ ನೋಡಿದ ಸುಕನ್ಯ ಅಚ್ಚರಿ ಪಡುತ್ತಾಳೆ . ಯಾವಾಗ ಮಳೆ ನಿಲ್ಲುತ್ತದೆಯೋ , ಸುಕನ್ಯಳ ಗಂಡ ಆಕೆಯನ್ನು ಹುಡುಕುತ್ತಾ , ಆ ಸ್ಥಾನಕ್ಕೆ ಬಂದು ಬಿಡುತ್ತಾನೆ . ಆಗ ಸುಕನ್ಯ ಎಲ್ಲಾ ವಿಷಯವನ್ನು ತನ್ನ ಗಂಡನಿಗೆ ಹೇಳುತ್ತಾಳೆ . ಇಬ್ಬರೂ ಮರಳಿ ಮನೆಗೆ ಹೋಗದೆ ,
ಆ ಕಾಡಿನಲ್ಲಿಯೇ ಇರಲು ನಿರ್ಧಾರ ಮಾಡುತ್ತಾರೆ . ಅಲ್ಲಿಯೇ ಇದ್ದಾಗ , ಸುಕನ್ಯಳ ಮನಸ್ಸಿಗೆ ಪುತ್ರ ಪ್ರಾಪ್ತಿಯ ಯೋಚನೆ ಬರುತ್ತದೆ . ಆಕೆ ಮನಸ್ಸಿನಲ್ಲಿ ಯೋಚನೆ ಮಾಡುತ್ತಿರುತ್ತಾಳೆ . ಒಂದು ವೇಳೆ ಗಂಡು ಮಗು ನನಗೂ ಇದ್ದಿದ್ದರೆ , ಗಂಡನ ಮನೆಯಲ್ಲಿ ಗೌರವ ನನಗೆ ಸಿಗುತ್ತಿತ್ತು . ಆ ಕ್ಷಣದಲ್ಲಿ ಆ ಸಾಧು ಅವರು ನೀಡಿದ ಹಾಳೆ ನೆನಪಾಗುತ್ತದೆ . ಯಾವಾಗ ಆ ಹಾಳೆಯನ್ನು ತೆರೆದು ಆಕೆ ಓದುತ್ತಾಳೋ , ಅಲ್ಲಿ ಒಂದು ವಿಷಯ ಇತ್ತು . ಯಾವ ಸ್ತ್ರೀ ಪುತ್ರ ಪ್ರಾಪ್ತಿಯ ಇಚ್ಛೆಯನ್ನು ಹೊಂದಿರುತ್ತಾಳೋ ,
ಅವರು ರಾತ್ರಿಯ ಸಮಯದಲ್ಲಿ ತನ್ನ ಗಂಡನ ಎಡ ಭಾಗದಲ್ಲಿ ಮಲಗಿ ಕೊಳ್ಳಬೇಕು. ಈ ರೀತಿ ಮಾಡುವುದರಿಂದ , ಸ್ವಲ್ಪ ಸಮಯದ ನಂತರ ಎಡಭಾಗದಲ್ಲಿ ಮಲಗುವುದರಿಂದ ಬಲ ಮೂಗಿನ ಸ್ವರವು ಕ್ರಿಯಾ ಶೀಲವಾಗುತ್ತದೆ . ಬಲ ಭಾಗವನ್ನು ತೆಗೆದುಕೊಂಡರೆ , ಎಡ ಮೂಗಿನ ಭಾಗವು ಕ್ರಿಯಾ ಶೀಲವಾಗುತ್ತದೆ . ಮತ್ತು ಯಾವಾಗ ಪುತ್ರನ ಇಚ್ಚೆ ಇರುತ್ತದೆಯೋ , ಆ ಸ್ಥಿತಿಯಲ್ಲಿ ಮಿಲನಕ್ಕೂ ಮುನ್ನ ಒಂದು ವಿಷಯವನ್ನು ಖಚಿತಪಡಿಸಿಕೊಳ್ಳಬೇಕು .ಇಲ್ಲಿ ಪುರುಷನ ಬಲ ಮೂಗಿನ ಸ್ವರ ನಡೆಯುತ್ತಿರಬೇಕು . ಇಲ್ಲಿ ಹೆಂಡತಿಯ ಎಡ ಮೂಗಿನ ಸ್ವರ ನಡೆಯುತ್ತಿರಬೇಕು . ಮತ್ತು ಅದೇ ಸಮಯದಲ್ಲಿ ಗರ್ಭಧಾರಣೆ ಮಾಡಬೇಕು .
ಈ ರೀತಿ ಮಾಡುವುದರಿಂದ ಖಂಡಿತ ಪುತ್ರನ ಪ್ರಾಪ್ತಿಯಾಗುತ್ತದೆ . ಇದರ ವಿರುದ್ಧವಾಗಿ ಮೂಗಿನ ಸ್ವರ ನಡೆಯುತ್ತಿದ್ದರೆ , ಪುತ್ರಿಯ ಪ್ರಾಪ್ತಿ ಆಗುತ್ತದೆ . ಆ ಹಾಳೆಯಲ್ಲಿ ಮುಂದೆ ಈ ರೀತಿಯಾಗಿ ಬರೆದಿತ್ತು . ಇಲ್ಲಿ ಋತು ಚಕ್ರ ಶುರುವಾದ ನಂತರ , ಮೊದಲ ನಾಲ್ಕು ದಿನ ಪುರುಷನ ಜೊತೆ ಸೇರಿದಾಗ , ಪುರುಷನಿಗೆ ಘರ್ಜನೆ ಸಿಗುತ್ತದೆ . ಮತ್ತು ಐದನೇ ರಾತ್ರಿ ಸೇರಿದಾಗ , ಪುತ್ರಿಯ ಪ್ರಾಪ್ತಿ ಆಗುತ್ತದೆ . ಜೊತೆಗೆ ಆರನೇ ರಾತ್ರಿ ಸೇರಿದಾಗ ಪುತ್ರ ರತ್ನನ ಪ್ರಾಪ್ತಿ ಆಗುತ್ತದೆ. ಏಳನೇ ರಾತ್ರಿ ಮಿಲನ ಮಾಡಿದಾಗ ,
ವಂದ್ಯಾ ಪ್ರತ್ರಿ ಪ್ರಾಪ್ತಿಯಾಗುತ್ತದೆ. ಎಂಟನೇ ರಾತ್ರಿ ಮಿಲನವಾದಾಗ ಬಲಶಾಲಿ ಪುತ್ರನ ಪ್ರಾಪ್ತಿಯಾಗುತ್ತದೆ . 9ನೇ ರಾತ್ರಿ ಮಿಲನ ಮಾಡಿದಾಗ , ಸುಂದರ ಕನ್ಯೆಯ ಪ್ರಾಪ್ತಿ ಆಗುತ್ತದೆ . ಜೊತೆಗೆ 10 ನೇ ರಾತ್ರಿ ಮಿಲನ ಮಾಡಿದಾಗ , ವಿದ್ವಾನ ಮತ್ತು ಅತಿ ಶ್ರೇಷ್ಠವಾದ ಪುತ್ರನ ಪ್ರಾಪ್ತಿಯಾಗುತ್ತದೆ . 11ನೇ ರಾತ್ರಿ ಮಿಲನ ಮಾಡಿದಾಗ, ಸುಂದರ ಆಚರಣೆ ಮಾಡುವ ಕನ್ಯೆ ಯ ಪ್ರಾಪ್ತಿಯಾಗುತ್ತದೆ . 12 ನೇ ರಾತ್ರಿ ಮಿಲನ ಮಾಡಿದಾಗ , ಗುಣವಂತ ಪುತ್ತ ಪಾಪ್ತಿಯಾಗುತ್ತಾನೆ. 13 ನೇ ರಾತ್ರಿ ಸೇರಿ ಮಿಲನ ಆದಾಗ ,
ಲಕ್ಷ್ಮೀ ಸ್ವರೂಪ ಪುತ್ರಿಯ ಜನ್ಮ ಆಗುತ್ತದೆ..14ನೇ ರಾತ್ರಿ ಮಿಲನ ಮಾಡಿದಾಗ , ಬುದ್ಧಿವಂತ ಗುಣವಂತ ಮತ್ತು ಶಕ್ತಿಶಾಲಿ ಪುತ್ರನ ಪ್ರಾಪ್ತಿಯಾಗುತ್ತದೆ . ನಂತರ ಸುಕನ್ಯ ತನ್ನ ಮಾಸಿಕ ಧರ್ಮ ಆದ ನಂತರ , 14 ನೇ ರಾತ್ರಿ ತನ್ನ ಗಂಡನ ಜೊತೆ ಮಿಲನ ಮಾಡುತ್ತಾಳೆ . ನಂತರ ಆಕೆ ಗರ್ಭವನ್ನು ಧರಿಸುತ್ತಾಳೆ . ನಂತರ ಮಾರನೆಯ ದಿನ ಆಕೆಯ ಗಂಡ ಕಟ್ಟಿಗೆಯನ್ನು ಕಡಿಯಲು ಕಾಡಿಗೆ ಹೋಗುತ್ತಾನೆ . ಸುಕನ್ಯ ಮನೆಯಲ್ಲಿಯೇ ಇದ್ದಳು . ನಂತರ ಅಚಾನಕ್ಕಾಗಿ ವೇಗವಾದ ಗುಡುಗು ಸಿಡಿಲು ಶುರುವಾಗುತ್ತದೆ .
ಗಾಳಿಯ ರಭಸಕ್ಕೆ ಸುಕನ್ಯಳ ಗುಡಿಸಲು ಹಾರಿಹೋಗುತ್ತದೆ .ನಂತರ ಸುಕನ್ಯಾ ಅದೇ ಮರದ ಬಳಿಯ ಕೆಳಗೆ ಇರುವ ಕುಳಿಯ ಒಳಗೆ ಹೋಗಿ ನಿಂತು ಕೊಳ್ಳುತ್ತಾಳೆ . ಅಲ್ಲಿ ಆಕೆಗೆ ಆ ಸಾಧು ಸಿಕ್ಕಿದ್ದರು . ಸುಕನ್ಯ ಅಲ್ಲಿ ತನ್ನ ಗಂಡನ ಹಾದಿಯನ್ನು ಕಾಯುತ್ತಿದ್ದಳು . ಆದರೆ ಅಲ್ಲಿ ಅಚಾನಕ್ಕಾಗಿ ಇಬ್ಬರು ರಾಕ್ಷಸಿಯರು ಬಂದರು . ಆ ರಾಕ್ಷಸಿಯರು ಅತ್ಯಂತ ಭಯಾನಕವಾಗಿ ಇದ್ದರು . ನಂತರ ಅವರು ಆ ಕುಳಿಯ ಜೊತೆಗೆ ಆ ಮರವನ್ನು ಎತ್ತಿಕೊಂಡು , ಒಂದು ಯಾವ ರೀತಿಯ ಸ್ಥಾನಕ್ಕೆ ಹಾರಿ ಹೋದರು ಎಂದರೆ ,
ಅಲ್ಲಿ ತುಂಬಾ ಬಂಗಾರವಿತ್ತು .ಯಾವಾಗ ಸುಕನ್ಯ ಆ ದೃಶ್ಯವನ್ನು ನೋಡುತ್ತಾಳೋ , ತುಂಬಾ ಅಚ್ಚರಿಗೆ ಒಳಗಾಗುತ್ತಾಳೆ .ಸುಕನ್ಯ ಮರದ ಕುಳಿಯ ಒಳಗಡೆಯೇ ಅಡಗಿದಳು .ಯಾವಾಗ ಆ ರಾಕ್ಷಸಿಯರು ಆಹಾರವನ್ನು ಹುಡುಕಿಕೊಂಡು ಹೊರಗೆ ಹೋದರು .ಆಗ ಸುಕನ್ಯ ಆ ಸ್ಥಾನದಿಂದ ಸ್ವಲ್ಪ ಚಿನ್ನವನ್ನು ಎತ್ತಿಕೊಂಡಳು . ಯಾವಾಗ ಮರಳಿ ಆ ರಾಕ್ಷಸರು ಬರುತ್ತಾರೋ , ಮರಳಿ ಆ ಮರವನ್ನು ಎತ್ತಿಕೊಂಡು ಅದೇ ಸ್ಥಾನದಲ್ಲಿ ತಂದು ಇಡುತ್ತಾರೆ . ರಾಕ್ಷಸಿಯರು ಹೋದ ನಂತರ ,
ಸುಕನ್ಯ ಆ ಎಲ್ಲ ಬಂಗಾರವನ್ನು ತೆಗೆದುಕೊಂಡು , ನನ್ನ ಗಂಡನ ಬಳಿ ಹೋಗುತ್ತಾಳೆ . ತನ್ನ ಗಂಡನಿಗೆ ಆ ಎಲ್ಲಾ ಚಿನ್ನವನ್ನು ಕೊಡುತ್ತಾಳೆ . ನಂತರ ಗಂಡ ಮತ್ತು ಸುಕನ್ಯ ಇಬ್ಬರೂ ಮರಳಿ ತನ್ನ ಗಂಡನ ಮನೆಗೆ ಹೋಗುತ್ತಾರೆ . ಅಲ್ಲಿ ಹೋಗಿ ಸುಕನ್ಯ ಆ ಚಿನ್ನವನ್ನು ತನ್ನ ಅತ್ತೆಗೆ ಕೊಡುತ್ತಾಳೆ . ನಡೆದ ಎಲ್ಲಾ ವಿಷಯವನ್ನು ತನ್ನ ಅತ್ತೆಗೆ ತಿಳಿಸುತ್ತಾಳೆ . ಇದನ್ನು ಕೇಳಿದ ಆಕೆಯ ಅತ್ತೆಗೆ ತುಂಬಾ ಸಿಟ್ಟು ಬರುತ್ತದೆ . ನಂತರ ಹೇ ಮೂರ್ಖ ಹೆಣ್ಣೆ ನೀನು ಕೇವಲ ಇಷ್ಟೇ ಚಿನ್ನವನ್ನು ತಂದಿರುವೆ .ಕೇವಲ ಇಷ್ಟು ಚಿನ್ನದಿಂದ ಏನು ಆಗುತ್ತದೆ .
ನಾನು ಇದ್ದಿದ್ದರೆ ,ಎಲ್ಲಾ ಚಿನ್ನವನ್ನು ತೆಗೆದುಕೊಂಡು ಬರುತ್ತಿದ್ದೆ , ಮರಳಿ ಆಕೆಯ ಅತ್ತೆ ಆ ಕಾಡಿನಲ್ಲಿ ಇರುವ ಆ ಮರದ ಕೆಳಗಡೆ ಇರುವ ಕುಳಿಗೆ ಹೋಗಿ ಅಡಗಿ ಕೊಳ್ಳುತ್ತಾಳೆ . ನಂತರ ರಾಕ್ಷಸಿಯರ ಹಾದಿಯನ್ನು ಕಾಯಲು ಶುರು ಮಾಡುತ್ತಾಳೆ . ಸ್ವಲ್ಪ ಸಮಯದ ನಂತರ ಇಬ್ಬರು ರಾಕ್ಷಸಿಯರು ಆ ಸ್ಥಾನಕ್ಕೆ ಬರುತ್ತಾರೆ . ಮರಳಿ, ಆ ಮರವನ್ನು ಎತ್ತಿಕೊಂಡು ಒಂದು ಹಿಮದ ಬೆಟ್ಟದ ಮೇಲೆ ತೆಗೆದುಕೊಂಡು ಹೋಗಿ , ಆ ಮರವನ್ನು ಇಡುತ್ತಾರೆ .ಇದನ್ನು ನೋಡಿದ ಅತ್ತೆಗೆ ತುಂಬಾ ಸಿಟ್ಟು ಬರುತ್ತದೆ .
ಇವರು ಎಲ್ಲಿಗೆ ಕರೆದುಕೊಂಡು ಬಂದಿದ್ದಾರೆ .ನನ್ನನ್ನ ಹಿಮದ ಬೆಟ್ಟದ ಮೇಲೆ ಕರೆದುಕೊಂಡು ಬಂದಿದ್ದಾರೆ. ಎಂದು ಕಿರುಚುಡುತ್ತಾಳೆ. ಆಗ ರಾಕ್ಷಸಿಯರಿಗೆ ಆಕೆಯ ಧ್ವನಿ ಕೇಳುತ್ತದೆ . ಒಬ್ಬ ಮಹಿಳೆ ವೃದ್ದೆ ಆ ಮರದ ಕೆಳಗೆ ಅಡಗಿ ಕುಳಿತಿರುವುದನ್ನು ನೋಡುತ್ತಾರೆ .ಆ ವೃದ್ಧ ಮಹಿಳೆಯನ್ನ ಮರದಿಂದ ಆಚೆಗೆ ತೆಗೆದು ಹಾಕುತ್ತಾರೆ . ಆ ಹಿಮದ ಬೆಟ್ಟದ ಮೇಲೆ ಆ ವೃದ್ಧ ಮಹಿಳೆಯನ್ನ ಎಸೆದು ಬಿಡುತ್ತಾರೆ . ನೆಲದ ಮೇಲೆ ಬಂದು ಬೀಳುತ್ತಿದ್ದಂತೆ , ಆ ವೃದ್ಧೆ ಸತ್ತು ಹೋಗುತ್ತಾಳೆ . ಇಲ್ಲಿ ಸುಕನ್ಯ ತುಂಬಾ ಸಂತೋಷದಿಂದ ಇರುತ್ತಿದ್ದಳು .
ಆದರೆ ಸುಕನ್ಯಳ ಅತ್ತೆ ಮರಳಿ ಯಾವತ್ತಿಗೂ ಬರಲಿಲ್ಲ . ಒಂದು ಬಾರಿ ಸುಕನ್ಯ ಆ ಮರದ ಕುಳಿಯಲ್ಲಿ ಹೋಗಿ ನೋಡುತ್ತಾಳೆ . ಅಲ್ಲಿ ಆಕೆಯ ಅತ್ತೆ ಇರಲಿಲ್ಲ . ಆಕೆಗೆ ಒಂದು ಮಾತು ಅರ್ಥವಾಗುತ್ತದೆ. ದುರಾಸೆಯ ಕಾರಣದಿಂದ ಆಕೆಯ ಅತ್ತೆ ಸಾವನ್ನಪ್ಪುತ್ತಾಳೆ , ಭಗವಂತನಾದ ವಿಷ್ಣು ಈ ರೀತಿ ಹೇಳುತ್ತಾರೆ , ಹೇ ಲಕ್ಷ್ಮಿ ಯಾವ ಸ್ತ್ರೀಯರಿಗೆ ಪುತ್ರ ಪ್ರಾಪ್ತಿಯ ಇಚ್ಛೆ ಇರುತ್ತದೆ . ಅವರು ನಾನು ಸುಕನ್ಯಳಿಗೆ ಹಾಳೆಯ ಮೇಲೆ ತಿಳಿಸಿದ ಉಪಾಯವನ್ನು ಮಾಡಬೇಕು . ಇನ್ನು ಎರಡನೇ ಪ್ರಶ್ನೆ ಉತ್ತರ ಏನಿತ್ತು ಎಂದರೆ ,
ಅದು ಯಾವ ಕಾರಣದಿಂದ ಸ್ತ್ರೀ ಬೇಗ ವಿಧವೆ ಆಗುತ್ತಾರೆ . ಇಲ್ಲಿ ಯಾವ ಸ್ತ್ರೀ ಅತ್ಯಧಿಕವಾಗಿ ದುರಾಸೆಯನ್ನು ಪಡೆಯುತ್ತಾರೋ , ಆ ಸ್ತ್ರೀಯರು ಬೇಗ ವಿಧವೆ ಆಗುತ್ತಾರೆ . ಮತ್ತು ಯಾವ ಸ್ತ್ರೀ ಚರಿತ್ರೆ ಎಂಬ ಆಭರಣವನ್ನು ಧರಿಸುತ್ತಾಳೋ , ಆಕೆಗೆ ಮೃತ್ಯುವಿನ ನಂತರ ಸ್ವರ್ಗದ ಪ್ರಾಪ್ತಿಯೇ ಆಗುತ್ತದೆ .ಒಬ್ಬ ಸ್ತ್ರೀ ಚರಿತ್ರೆಯನ್ನು ಯಾವತ್ತಿಗೂ ತ್ಯಾಗ ಮಾಡಬಾರದು . ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ದೇವಿಗೆ ಈ ರೀತಿಯಾಗಿ ಕಥೆಯನ್ನು ಹೇಳುತ್ತಾರೆ .