ದೀಪಾವಳಿ ದಿನ ಇಷ್ಟೇ ದೀಪವನ್ನು ಹಚ್ಚಬೇಕು. ಹಚ್ಚುವಾಗ ಈ ಮಂತ್ರ ಪಠಿಸಬೇಕು. ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿಯನ್ನು ಆಚರಿಸಲಾಗುತ್ತದೆ. ಈ ದಿನ ಪ್ರತಿಯೊಂದು ಮನೆಯಲ್ಲೂ ದೀಪಗಳನ್ನು ಹಚ್ಚಿಡುತ್ತಾರೆ. ಆದರೆ ದೀಪಾವಳಿ ದಿನದಂದು ನಾವು ಎಷ್ಟು ದೀಪಗಳನ್ನು ಬೆಳಗಿಸಬೇಕು? ದೀಪಾವಳಿಗೆ ದೀಪವನ್ನು ಎಲ್ಲಿ ಹಚ್ಚಿಡಬೇಕು? ದೀಪ ಹಚ್ಚುವಾಗ ಈ ಮಂತ್ರವನ್ನೇ ಪಠಿಸಿ.
ದೀಪಾವಳಿ ಹಬ್ಬವು ಭಾರತದ್ಯಂತ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ. ಈ ಹಬ್ಬವನ್ನು ಪ್ರತಿ ವರ್ಷ ಆಶ್ವಯುಜ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಆಶ್ವಯುಜ ಮಾಸದ ಅಮಾವಾಸ್ಯೆಯ ದಿನದಂದು ಶ್ರೀರಾಮನು 14 ವರ್ಷಗಳ ವನವಾಸವನ್ನು ಮುಗಿಸಿ ಅಯೋಧ್ಯೆ ನಗರಕ್ಕೆ ಬಂದಾಗ, ಅಯೋಧ್ಯ ಜನರು ಅವರನ್ನು ಸ್ವಾಗತಿಸಲು ನಗರವನ್ನು ದೀಪಗಳಿಂದ ಅಲಂಕರಿಸಿದರು. ಆ ಸಮಯದಲ್ಲಿ ಅಯೋಧ್ಯಾ ನಗರವು ದೀಪಗಳ ಬೆಳಕಿನಿಂದ ಹೊಳೆಯುತ್ತಿತ್ತು.
ದೀಪಗಳನ್ನು ಬೆಳಗಿಸುವ ಈ ಸಂಪ್ರದಾಯವನ್ನು ಸ್ಮರಿಸಲು ಈ ಹಬ್ಬಕ್ಕೆ ದೀಪಾವಳಿ ಎಂದು ಹೆಸರಿಡಲಾಯಿತು. ಈ ದಿನ ಜನರು ತಮ್ಮ ಮನೆಯಲ್ಲಿ ದೀಪಗಳನ್ನು ಬೆಳಗಿಸುತ್ತಾರೆ. ಆದರೆ ನಮ್ಮೆಲ್ಲರ ಮನಸ್ಸಿನಲ್ಲಿ ಮೂಡುವ ಒಂದು ಪ್ರಶ್ನೆ ಎಂದರೆ ದೀಪಾವಳಿಯಲ್ಲಿ ಎಷ್ಟು ದೀಪಗಳನ್ನು ಹಚ್ಚಬೇಕು? ದೀಪಾವಳಿಯಂದು ಯಾವ ಸ್ಥಳದಲ್ಲಿ ದೀಪಗಳನ್ನು ಬೆಳಗಬೇಕು ಎಂಬುದಾಗಿದೆ. ಈ ಪ್ರಶ್ನೆ ನಿಮ್ಮಲ್ಲಿಯೂ ಇದ್ದರೆ, ತಪ್ಪದೇ ಲೇಖನ ಓದಿ.
ಮೊದಲ ದೀಪವನ್ನು ಯಮರಾಜನಿಗೆ ಅರ್ಪಿಸಿ: ದೀಪಾವಳಿಯ ಮೊದಲ ದೀಪವನ್ನು ಧನತೇರಸ್ ದಿನದಂದು ಬೆಳಗಿಸಲಾಗುತ್ತದೆ. ಈ ದೀಪವನ್ನು ಯಮದೀಪ ಎಂದು ಕರೆಯಲಾಗುತ್ತದೆ. ಮೃತ್ಯುವಿನ ದೇವರಾದ ಯಮರಾಜನಿಗೆ ಈ ದಿನ ಯಮ ದೀಪವನ್ನು ಬೆಳಗಿಸಲಾಗುತ್ತದೆ. ಧನತೇರಸ್ ದಿನದಂದು ಸಂಜೆ ಸೂರ್ಯಾಸ್ತದ ನಂತರ ಮನೆಯ ಮುಖ್ಯ ದ್ವಾರದ ಹೊರಗೆ ದಕ್ಷಿಣ ದಿಕ್ಕಿನಲ್ಲಿ
ಈ ದೀಪವನ್ನು ಬೆಳಗಿಸಲಾಗುತ್ತದೆ. ಯಮ ದೇವರಿಗೆ ದೀಪವನ್ನು ದಾನ ಮಾಡುವುದರಿಂದ ಕುಟುಂಬದ ಸದಸ್ಯರಿಗೆ ಎದುರಾಗಬಹುದಾದ ಅಕಾಲಿಕ ಮೃತ್ಯುವನ್ನು ತಡೆಯಬಹುದು. ಮನೆಯ ಹೊರಗೆ ದಕ್ಷಿಣ ದಿಕ್ಕಿಗೆ ಯಮದೀಪ ಹಚ್ಚಬೇಕು. ಮಣ್ಣಿನ ದೀಪಕ್ಕೆ ಸಾಸಿವೆ ಎಣ್ಣೆ ಹಾಕಿದ ನಂತರವೇ ದೀಪದಾನ ಮಾಡಬೇಕು. ಬ್ರಾಹ್ಮಣರಿಗೆ ಅಥವಾ ದೇವಸ್ಥಾನದಲ್ಲಿ ದೀಪವನ್ನು ದಾನ ಮಾಡಬೇಕು. ದೀಪವನ್ನು ದಾನ ಮಾಡಿದ ನಂತರ ಆ ದಿನ ಮನೆಯ ಯಾವುದೇ ಸದಸ್ಯರು ಹೊರಗೆ ಹೋಗಬಾರದು.
ದೀಪವನ್ನು ಎಲ್ಲಿ ಹಚ್ಚಬೇಕು? ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ನಾವು ಯಾವಾಗಲೂ ಶುಭ ಕಾರ್ಯವನ್ನು ಮಾಡುವಾಗ ಐದು, ಏಳು ಅಥವಾ ಒಂಬತ್ತು ಹೀಗೆ ಬೆಸ ಸಂಖ್ಯೆಯಲ್ಲಿ ದೀಪವನ್ನು ಬೆಳಗಿಸಬೇಕು. ದೀಪಾವಳಿಯಂದು ಸಾಸಿವೆ ಎಣ್ಣೆ ದೀಪವನ್ನು ಹಚ್ಚಬಹುದು.
ಶಾಸ್ತ್ರದ ಪ್ರಕಾರ ದೀಪಾವಳಿಯಂದು ಮುಖ್ಯವಾಗಿ ಐದು ದೀಪವನ್ನು ಹಚ್ಚುವುದು ಕಡ್ಡಾಯವಾಗಿದೆ. ಇವುಗಳಲ್ಲಿ ಒಂದು ದೀಪವನ್ನು ಮನೆಯ ಅತ್ಯಂತ ಎತ್ತರದ ಸ್ಥಳದಲ್ಲಿ ಇರಿಸಲಾಗುತ್ತದೆ. ಎರಡನೇ ದೀಪವು ಮನೆಯ ಅಡುಗೆ ಮನೆಯಲ್ಲಿ, ಮೂರನೇ ದೀಪವು ಕುಡಿಯುವ ನೀರಿನ ಬಳಿ, ನಾಲ್ಕನೇ ದೀಪವು ಅರಳಿಮರದ ಬಳಿ ಮತ್ತು ಐದನೇ ದೀಪವನ್ನು ಮನೆಯ ಮುಖ್ಯದ್ವಾರದಲ್ಲಿ ಹಚ್ಚಿಡಬೇಕು.
ಬೆಳಗುವ ದೀಪಗಳ ಸಂಖ್ಯೆ: ದೀಪಾವಳಿಯು ದೀಪಗಳ ಹಬ್ಬ ಆದ್ದರಿಂದ ಈ ದಿನ ದೀಪಗಳನ್ನು ಬೆಳಗಿಸಲು ಯಾವುದೇ ಮಿತಿಯಿಲ್ಲ. ನೀವು ಎಷ್ಟು ಬೇಕಾದರೂ ದೀಪಗಳನ್ನು ಬೆಳಗಿಸಬಹುದು. ಆದರೆ ಶಾಸ್ತ್ರಗಳ ಪ್ರಕಾರ ಮುಖ್ಯ ಐದು ದೀಪಗಳನ್ನು ಬೆಳಗುವುದು ಕಡ್ಡಾಯವಾಗಿದೆ. ಬೆಸ ಸಂಖ್ಯೆಯಲ್ಲಿ ನಿಮಗೆ ಬೇಕಾದಷ್ಟು ದೀಪಗಳನ್ನು ಈ ದಿನ ಬೆಳಗಿಸಬಹುದು.
ದೀಪಗಳನ್ನು ಬೆಳಗಿಸುವಾಗ ಈ ಮಂತ್ರ ಪಠಿಸಿ: “ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಾ
ಶತ್ರುಬುದ್ದಿವಿನಾಶಾಯ ದೀಪಕಾಯ ನಮೋಸ್ತುತೆ”
ದೀಪಾವಳಿಯ ದಿನದಂದು ಇಷ್ಟೇ ದೀಪಗಳನ್ನು ಬೆಳಗಿಸಬೇಕು, ಅಷ್ಟೇ ದೀಪಗಳನ್ನು ಬೆಳಗಿಸಬೇಕು ಎನ್ನುವ ಯಾವುದೇ ನಿಯಮಗಳಿಲ್ಲ. ಬೆಸ ಸಂಖ್ಯೆಯಲ್ಲಿ ನೀವು ಎಷ್ಟು ದೀಪಗಳನ್ನು ಬೇಕಾದರೂ ಬೆಳಗಿಸಬಹುದು.
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ದಯವಿಟ್ಟು ಒಂದು ಲೈಕ್ ಮಾಡಿ, ಶೇರ್ ಮಾಡಿ, ಚಾನಲ್ಗೆ ಸಬ್ಸ್ಕ್ರೈಬ್ ಮಾಡಿ. ಇದೇ ರೀತಿಯ ಉಪಯುಕ್ತವಾದ ಮಾಹಿತಿಗಳೊಂದಿಗೆ ಮತ್ತೆ ಭೇಟಿಯಾಗೋಣ. ಧನ್ಯವಾದಗಳು.