ಕನಸಿನಲ್ಲಿ ಈ ಐದು ಅಂಶಗಳು ಕಂಡರೆ ದೇವಿ ಲಕ್ಷ್ಮಿಯ ಆಗಮನದ ಸಂಕೇತ

ಕನಸಿನಲ್ಲಿ ಈ ಐದು ಅಂಶಗಳು ಕಂಡರೆ ದೇವಿ ಲಕ್ಷ್ಮಿಯ ಆಗಮನದ ಸಂಕೇತ ನಾವು ಕಾಣುವ ಕನಸಿಗೂ ನಾನಾ ಅರ್ಥಗಳಿವೆ. ಅದರಲ್ಲೂ ನಂಬಿಕೆಯ ಪ್ರಕಾರ ಕೆಲವೊಂದು ಕನಸುಗಳು ಶುಭ ಸೂಚಕ ಕೂಡ ಹೌದು. ಈ ರೀತಿಯ ಸಾಕಷ್ಟು ನಂಬಿಕೆಗಳು ನಮ್ಮಲ್ಲಿ ಇವೆ. ಸುಖ ನಿದ್ದೆಯಲ್ಲಿರುವಾಗ ಗೋಚರಿಸುವ ದೃಶ್ಯಗಳು, ಕಾಣುವ ಸನ್ನಿವೇಶಗಳಿಗೂ ವಾಸ್ತವ ಬದುಕಿಗೂ ಸಂಬಂಧ ಇದೆಯೇ?

ಕನಸಿನಲ್ಲಿ ಶುಭ ಅಶುಭಗಳ ಸೂಚನೆ ಸಿಗುತ್ತದೆಯೇ? ಕನಸಿನಲ್ಲಿ ಕಾಣುವ ಕೆಲವೊಂದು ದೃಶ್ಯಗಳು ಸಂಪತ್ತಿನ ಆಗಮನದ ಸೂಚನೆಯೇ?ಹೀಗೆ ಕೇಳುತ್ತಾ ಹೋದರೇ ಪ್ರಶ್ನೆಗಳು ಬೆಳೆಯುತ್ತಲೇ ಹೋಗುತ್ತದೆ ಆದರೇ, ಕನಸಿಗೂ ಒಳಿತು, ಕೆಡುಕಿಗೂ ನಂಟು ಇದೆ ಎಂಬ ನಂಬಿಕೆಯಂತೂ ಖಂಡಿತ ನಮ್ಮಲ್ಲಿದೆ. ಕನಸಿನಲ್ಲಿ ಕಾಣುವ ಸಂಗತಿಗಳನ್ನು ನಾನಾ ರೀತಿಯಲ್ಲಿ ವಿಶ್ಲೇಷಿಸಲಾಗುತ್ತದೆ.

ಅಂತೆಯೇ, ಕನಸಿನಲ್ಲಿ ಕಾಣುವ ಕೆಲವೊಂದು ವಿಷಯಗಳನ್ನು ದೇವಿ ಲಕ್ಷ್ಮಿಯ ಆಗಮನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬಗೆ ಬಗೆಯ ಹೂಗಳು: ದೇವಿ ಲಕ್ಷ್ಮಿಯು ಸಂಪತ್ತಿನ ದೇವತೆ. ಅವಳ ಆಗಮನದಿಂದ ಮನೆಯಲ್ಲಿ ಸಂತೋಷ, ಸಂಮೃದ್ಧಿ ಮನೆ ಮಾಡುತ್ತದೆ. ಅಂತೆಯೇ, ಕನಸಿನಲ್ಲಿ ಈ ಅಂಶಗಳು ಕಾಣಿಸಿಕೊಂಡರೆ ಲಕ್ಷ್ಮಿಯ ಆಗಮನವಾಗುತ್ತದೆ ಎಂಬ ನಂಬಿಕೆಯು ಇದೆ.

ಅದರಲ್ಲಿ ಒಂದು ಹೂಗಳು ನಿಮ್ಮ ಕನಸಿನಲ್ಲಿ ಕೆಂಪು, ಹಳದಿ ಸೇರಿದಂತೆ ಸಾಕಷ್ಟು ಹೂಗಳು, ಹೂವಿನ ಹಾಸಿಗೆಗಳು ಕಾಣಿಸಿಕೊಳ್ಳುತ್ತಿದ್ದರೆ ಶುಭ ಎಂದು ಪರಿಗಣಿಸಲಾಗಿದೆ. ಈ ಕನಸಿನಿಂದ ಜೀವನದಲ್ಲಿ ಆರ್ಥಿಕ ಲಾಭವಿದೆ ಎಂದು ಅರ್ಥೈಸಬಹುದು. ತೆರೆದ ಆಘಸದ ಕೆಳಗೆ ಹರಡುವ ಹೂಗಳನ್ನು ಲಕ್ಷ್ಮಿದೇವಿಯ ಆಗಮನದ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಭಾರಿ ಮಳೆ; ಕನಸಿನಲ್ಲಿ ಮಳೆ ಕಾಣಿಸಿಕೊಂಡರು ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಸ್ವಪ್ನದಲ್ಲಿ ಮಳೆ ಕಾಣಿಸಿಕೊಂಡರೆ ಸಾಮಾನ್ಯವಾಗಿ ಜೀವನದ ಬಗ್ಗೆ ಧನಾತ್ಮಕ ಮತ್ತು ಸಂತೋಷದ ಭಾವನೆಗಳನ್ನು ಸೂಚಿಸುತ್ತವೆ ಎಂದು ವಿಶ್ಲೇಷಿಸಲಾಗುತ್ತದೆ ಅಂದರೆ ನಿಮ್ಮ ಕನಸಿನಲ್ಲಿ ಭಾರಿ ಮಳೆಯನ್ನು ನೀವೇನಾದರೂ ನೋಡಿದರೆ ನಿಮ್ಮ ಜೀವನದಲ್ಲಿ ಧನಾತ್ಮಕವಾಗಲಿದೆ ಎಂದು ಅರ್ಥವಂತೆ,

ಜೊತೆಗೆ ಉದ್ಯೋಗದಲ್ಲಿ ಏಳಿಗೆ, ಆರ್ಥಿಕ ಪ್ರಗತಿಯ ಸೂಚಕ ಇದು ಎಂದು ಈ ಕನಸನ್ನು ಅರ್ಥೈಸಲಾಗುತ್ತದೆ.
ಕೆಂಪು ಸೀರೆ: ಕನಸಿನಲ್ಲಿ ಕೆಂಪು ಸೀರೆಯನ್ನು ಕಾಣುವುದು ಕೂಡ ಮಂಗಳಕರ ಎಂಬ ನಂಬಿಕೆ ಇದೆ. ಸಾಮಾನ್ಯವಾಗಿ ದೇವಿ ಲಕ್ಷ್ಮಿಯನ್ನು ಸದಾ ಕೆಂಪು ಸೀರೆಯಲ್ಲಿ ಮಾತ್ರ ಕಾಣುತ್ತೇವೆ. ಎಲ್ಲಾ ಪ್ರತಿಮೆ ಮತ್ತು ಫೋಟೋಗಳಲ್ಲಿ ಕೆಂಪು ಸೀರೆ ಧರಿಸಿರುವ ದೇವಿ ಲಕ್ಷ್ಮಿಯನ್ನು ನಾವು ನೋಡಬಹುದು.

ಜೊತೆಗೆ ಪೂಜೆಯ ಸಂದರ್ಭದಲ್ಲಿ ದೇವಿಗೆ ಕೆಂಪು ಸೀರೆಯನ್ನು ಅರ್ಪಿಸಲಾಗುತ್ತದೆ. ಹೀಗಾಗಿ ಕೆಂಪು ಸೀರೆಗೆ ಅದರದ್ದೇ ಮಹತ್ವ ಕೂಡ ಇದೆ. ಅಂತೆಯೇ ಕನಸಿನಲ್ಲಿ ಕೆಂಪು ಸೀರೆಯಲ್ಲಿ ನಿಮ್ಮನ್ನು ನೋಡುವುದು ಅಥವಾ ಕೆಂಪು ಸೀರೆಯನ್ನು ಬೇರೆಯವರನ್ನು ನೋಡುವುದು ಅಥವಾ ಕೆಂಪು ಸೀರೆಯನ್ನು ಮಾತ್ರ ನೋಡುವುದು ನಿಮ್ಮ ಜೀವನದಲ್ಲಿ ಲಕ್ಷ್ಮಿದೇವಿ ಆಗಮನದ ಸಂಕೇತವಂತೆ.

ದೇವಾಲಯ: ದೇಗುಲಗಳು ಪವಿತ್ರ ತಾಣಗಳು. ಮನಸ್ಸಿಗೆ ನೆಮ್ಮದಿ ನೀಡುವ ಜಾಗಗಳು ಹೌದು. ನಮ್ಮ ಇಷ್ಟದ ದೇವರು ನೆನಪಾದಾಗ ಆ ದೇವಾಲಯ ಕೂಡ ಅಷ್ಟೇ ಬೇಗ ನೆನಪಾಗುತ್ತದೆ. ಅಂತೆಯೇ, ದೇವಸ್ಥಾನಕ್ಕೆ ಸಂಬಂಧಿಸಿದ ಕನಸುಗಳನ್ನು ನೋಡುವುದು ಅಥವಾ ಕನಸಿನಲ್ಲಿ ದೇವಸ್ಥಾನವನ್ನು ನೋಡುವುದು ಮಂಗಳಕರವೆಂದೇ ಪರಿಗಣಿಸಲಾಗುತ್ತದೆ. ಇದು ದೇವಿಯ ಲಕ್ಷ್ಮಿಯ ಆಗಮನ ಮತ್ತು ಸಂಪತ್ತಿನ ಸೂಚಕ ಎಂಬುದು ಭಕ್ತರ ನಂಬಿಕೆ. ಕನಸಿನಲ್ಲಿ ದೇವಾಲಯವನ್ನು ಕಂಡರೆ ಒಳಿತಾಗುತ್ತದೆ ಎಂಬುದು ಆಸ್ತಿಕರ ಅಚಲ ನಂಬಿಕೆ.

ಉಳಿತಾಯ: ಹಲವರಿಗೆ ಹಣದ ಉಳಿತಾಯದ ಕನಸು ಬೀಳುತ್ತದೆ. ಇದು ಕೂಡ ಶುಭ ಸಂಕೇತ ಎಂಬ ನಂಬಿಕೆ ಇದೆ. ನಿಮ್ಮ ಕನಸಿನಲ್ಲಿ ನೀವು ಹಣವನ್ನು ಉಳಿಸುತ್ತಿದ್ದರೇ ಹಣವನ್ನು ಸೇರಿಸುತ್ತಿದ್ದರೆ ಅಥವಾ ನಿಮ್ಮೊಂದಿಗೆ ಹಣವನ್ನು ಇಟ್ಟುಕೊಳ್ಳುತ್ತಿದ್ದರೆ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆಗಳಿವೆ ಎಂದು ಅರ್ಥೈಸಲಾಗುತ್ತದೆ. ಇದೇ ಕಾರಣದಿಂದ

ಹಣವನ್ನು ಉಳಿತಾಯ ಮಾಡುವ ಕನಸು ಬಿದ್ದರೆ ಉತ್ತಮವಾಗುತ್ತದೆ ಎಂಬುದು ನಂಬಿಕೆ. ಹೀಗೆ ಈ ಎಲ್ಲಾ ಐದು ಅಂಶಗಳು ದೇವಿ ಲಕ್ಷ್ಮಿಯ ಆಗಮನದ ಸೂಚನೆಯನ್ನು ನಿಮಗೆ ನೀಡುತ್ತದೆ ಎಂಬ ರೀತಿಯಲ್ಲಿ ಈ ಕನಸುಗಳು ವಿಶ್ಲೇಷಣೆ ಮಾಡಲಾಗುತ್ತದೆ. ಕನಸು ಕಾಣುವುದು ಒಳ್ಳೆಯದೇ ಆದರೇ ಕನಸನ್ನು ನನಸು ಮಾಡಲು ಸತತ ಶ್ರಮ ಪ್ರಾಮಾಣಿಕ ಪ್ರಯತ್ನ, ಛಲ ಕೂಡ ಅಗತ್ಯ. ಶ್ರಮವಹಿಸಿ ದುಡಿದರೇ, ಪ್ರಾಮಾಣಿಕತೆಯಿಂದ ಬದುಕು ನಡೆಸಿದರೆ ಕನಸು ಸಾಕಾರಗೊಳ್ಳುವುದರಲ್ಲಿ, ದೇವಿ ಲಕ್ಷ್ಮಿಯ ಆಶೀರ್ವಾದ ಲಭಿಸುವುದರಲ್ಲಿ ಸಂಶಯವಿಲ್ಲ

Leave a Comment