ಒಂದ್ವೇಳೆ ಜೀವಂತ ಮನುಷ್ಯರು ಗರುಡ ಪುರಾಣ ಓದಿದರೆ ಏನಾಗುತ್ತದೆ ?

0

ಒಂದ್ವೇಳೆ ಜೀವಂತ ಮನುಷ್ಯರು ಗರುಡ ಪುರಾಣ ಓದಿದರೆ ಏನಾಗುತ್ತದೆ?ನಮಸ್ಕಾರ ಸ್ನೇಹಿತರೆ. ಸಾಮಾನ್ಯವಾಗಿ ನೀವು ಗರುಡ ಪುರಾಣದ ಬಗ್ಗೆ ಖಂಡಿತವಾಗಿಯೂ ಕೇಳಿರ್ತೀರಾ. ಸಮಾಜದಲ್ಲಿ ಹೆಚ್ಚಾಗಿ ಗರುಡ ಪುರಾಣವನ್ನ ಜೀವಂತವಾಗಿರುವ ವ್ಯಕ್ತಿಗಳು ಓದಬಾರದಂತ ಹೇಳ್ತಾರೆ. ಅಷ್ಟೇ ಅಲ್ಲ, ಹೆಚ್ಚಿನ ಜನರ ಮನಸ್ಸಿನಲ್ಲಿ ಯಾವ ಭಯವನ್ನ ಹುಟ್ಟಿಸಿದ್ದಾರೆಂದರೆ

ಒಂದು ವೇಳೆ ಯಾವುದಾದರೂ ಜೀವಂತವಾಗಿರುವಂತ ವ್ಯಕ್ತಿ ಈ ಪುರಾಣವನ್ನು ಓದಿದ್ರೆ ಅಥವಾ ತಮ್ಮ ಬಳಿ ಇಟ್ಟುಕೊಂಡರು ಅವರ ಜೀವನದಲ್ಲಿ ಪ್ರತಿ ಸಮಯ ಅಶುಭ ಘಟನೆಗಳು ನಡೆಯುತ್ತಲೇ ಇರುತ್ತವೆ ಅಂತ ಹೇಳ್ತಾರೆ. ಆದರೆ ಸ್ನೇಹಿತರೆ ಇಲ್ಲಿ ನಾವು ನಿಮಗೆ ಹೇಳಬೇಕೆಂದರೆ ಈ ರೀತಿ ಏನು ಸಹ ಇಲ್ಲ. ಯಾಕಂದರೆ ಇಂದು ನಾವು ನಿಮಗೆ ಗರುಡ ಪುರಾಣದ ಒಂದು ಯಾವ ರೀತಿ ಆದ ರಹಸ್ಯವನ್ನು ತಿಳಿಸಿ ಕೊಡ್ತೀವಿ

ಅಂದ್ರೆ ಇದನ್ನ ತಿಳಿದುಕೊಂಡ ನಂತರ ನೀವು ಈ ಭಯದಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತೀರಾ. ಅದು ಜೀವಂತವಾಗಿರುವ ಮನುಷ್ಯರು ಈ ಪುರಾಣವನ್ನು ಓದಬೇಕಾ ಓದಬಾರ್ದ. ಸ್ನೇಹಿತರೆ ನಿಮ್ಮೆಲ್ಲರಿಗೂ ನಮ್ಮ ಚಾನೆಲ್ ಗೆ ಮತ್ತೊಮ್ಮೆ ಸ್ವಾಗತ. ಎಲ್ಲರೂ ಭಕ್ತಿಯಿಂದ ಕಾಮೆಂಟ್ ಬಾಕ್ಸ್ ನಲ್ಲಿ ಓಂ ನಮಃ ಶಿವಾಯ ಹರ ಹರ ಮಹಾದೇವ ಅಂತ ಬರೆಯಿರಿ.

ಹಾಗೆ ಶಿವನಿಗೆ ಒಂದು ಚಿಕ್ಕ ಲೈಕ್ ಅನ್ನ ನೀಡಿರಿ. ಗರುಡ ಪುರಾಣದ ಪಾಠವನ್ನ ಯಾವುದೇ ಪರಿಚಯರ ಮೃತ್ಯುವಿನ ಮೊದಲು ಅಥವಾ ಯಾವಾಗ ಬೇಕಾದರೂ ಓದಬಹುದಾಗಿದೆ. ಯಾರಿಗೆ ಇದನ್ನ ಓದಲು ಇಷ್ಟ ಇರುತ್ತದೆಯೋ ಅವರು ಇದನ್ನು ಓದಬಹುದು. ಪವಿತ್ರ ಮತ್ತು ಶುದ್ಧವಾದ ಮನಸ್ಸಿನಿಂದ ಗರುಡ ಪುರಾಣದ ಪಾಠವನ್ನ ಓದಬಹುದು. ಗರುಡ ಪುರಾಣದಲ್ಲಿ ಸ್ವರ್ಗ,

ನರಕ, ಪಾಪ, ಪುಣ್ಯ ಇವುಗಳಷ್ಟೇ ಅಲ್ಲದೆ ಹಲವಾರು ರಹಸ್ಯಗಳು ಇದರಲ್ಲಿ ಇವೆ. ಇದರಲ್ಲಿ ಜ್ಞಾನ, ವಿಜ್ಞಾನ, ನೀತಿ, ನಿಯಮ ಮತ್ತು ಧರ್ಮಕ್ಕೆ ಸಂಬಂಧ ಪಟ್ಟಂತ ವಿಷಯಗಳಿವೆ. ಗರುಡ ಪುರಾಣವನ್ನ ಸನಾತನ ಧರ್ಮದಲ್ಲಿ 18 ಮಹಾಪುರಾಣಗಳಲ್ಲಿ ಒಂದು ಪುರಾಣ ಅಂತ ಹೇಳ್ತಾರೆ. ಗರುಡ ಪುರಾಣದ ಅಧಿಷ್ಟಾತ್ರಿ ದೇವರು ಭಗವಂತನಾದ ವಿಷ್ಣು ಆಗಿದ್ದಾರೆ.

ಹಿಂದೂ ಧರ್ಮದಲ್ಲಿ ಟೋಟಲ್ ಆಗಿ 18 ಪುರಾಣಗಳಿವೆ. ಇವುಗಳಲ್ಲಿಯೇ ಒಂದು ಗರುಡ ಪುರಾಣವು ಆಗಿದೆ. ಇದರಲ್ಲಿ ಟೋಟಲ್ ಆಗಿ ಹದಿನೆಂಟು ಸಾವಿರ ಶ್ಲೋಕಗಳು ಮತ್ತು 271 ಅಧ್ಯಾಯಗಳು ಇವೆ. ಒಂದು ವೇಳೆ ಗರುಡ ಪುರಾಣದಲ್ಲಿ ಸಾವಿನ ರಹಸ್ಯ ಇದ್ದರೆ ಇನ್ನೊಂದೆಡೆ ಜೀವನದ ರಹಸ್ಯ ಅಡಗಿದೆ. ಗರುಡ ಪುರಾಣದಿಂದ ನಮಗೆ ಹಲವಾರು ರೀತಿಯ ವಿಷಯಗಳು ಕಲಿಯಲು ಸಿಗುತ್ತವೆ.

ಗರುಡ ಪುರಾಣದಲ್ಲಿ ಮೃತ್ಯುವಿಗೂ ಮುನ್ನ ಮತ್ತು ಮೃತ್ಯುವಿನ ನಂತರ ಇರುವಂತಹ ಸ್ಥಿತಿಯ ಬಗ್ಗೆ ತಿಳಿಸಿದ್ದಾರೆ. ಗರುಡ ಪುರಾಣದಲ್ಲಿ ಭಗವಂತನಾದ ವಿಷ್ಣು ಮತ್ತು ಅವರ ವಾಹನವಾದ ಗರುಡ ದೇವರ ನಡುವೆ ಇರುವಂತ ಸಂಬಂಧವನ್ನ ತಿಳಿಸಿದ್ದಾರೆ. ಸ್ನೇಹಿತರೆ ಇಲ್ಲಿ ಸಾಮಾನ್ಯವಾಗಿ ಯಾರ ಕುಟುಂಬದಲ್ಲಿ ಯಾವುದಾದರೂ ವ್ಯಕ್ತಿಗಳು ತೀರಿಹೋಗ್ತಾರೋ ಅಲ್ಲಿ ಗರುಡ ಪಾಠವನ್ನು ಮಾಡುತ್ತಾರೆ.

ಇದನ್ನೆಲ್ಲ ನೋಡಿದ ನಂತರವೇ ಜನರ ಮನಸ್ಸಿನಲ್ಲಿ ಭಯ ಹುಟ್ಟುತ್ತದೆ. ಇಲ್ಲಿ ಜೀವಂತವಾಗಿರುವಂತ ಮನುಷ್ಯರು ಇದನ್ನ ಓದಬಾರದು ಮತ್ತು ತಮ್ಮ ಬಳಿ ಇಟ್ಟುಕೊಳ್ಳಬಾರದೆಂದು ತಪ್ಪು ಕಲ್ಪನೆ ಇವರಲ್ಲಿ ಹುಟ್ಟುತ್ತದೆ. ಇಲ್ಲಂತೂ ಗರುಡ ಪುರಾಣದ ಪ್ರಾರಂಭದಲ್ಲಿಯೇ ಇದನ್ನ ಓದುವುದರ ಮಹತ್ವವನ್ನು ತಿಳಿಸಿದ್ದಾರೆ. ಇದರ ಅನುಸಾರವಾಗಿ ಒಂದು ವೇಳೆ ಯಾವುದಾದರೂ ಜೀವಂತ ವ್ಯಕ್ತಿಗಳು ತಮ್ಮ ಜೀವನದಲ್ಲಿ

ಈ ಪವಿತ್ರವಾದ ಪುರಾಣವನ್ನು ಓದಿದ್ರೆ ಇವರಿಗೆ ವಿದ್ಯೆ, ಯಶಸ್ಸು, ಸೌಂದರ್ಯ, ಲಕ್ಷ್ಮಿ, ವಿಜಯದ ಜೊತೆಗೆ ಹಲವಾರು ಜ್ಞಾನದ ಪ್ರಾಪ್ತಿಯಾಗುತ್ತದೆ. ಯಾವ ಮನುಷ್ಯರು ಇದನ್ನು ನಿಯಮಿತವಾಗಿ ಪಾಠ ಮಾಡ್ತಾರೋ ಅಥವಾ ಕೇಳುತ್ತಾರೋ ಅವರು ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಅಂತ್ಯದಲ್ಲಿ ಅವರಿಗೆ ಸ್ವರ್ಗದ ಪ್ರಾಪ್ತಿಯಾಗುತ್ತದೆ. ಯಾವ ಮನುಷ್ಯರು ಏಕಾಗ್ರ ಚಿತ್ತರಾಗಿ ಈ ಮಹಾಪುರಾಣವನ್ನು ಓದುತ್ತಾರೋ,

ಕೇಳುತ್ತಾರೋ, ಬೇರೆಯವರಿಗೆ ಹೇಳುತ್ತಾರೋ, ಬೇರೆಯವರಿಂದ ಬರೆಸುತ್ತಾರೋ ಅಥವಾ ಪುಸ್ತಕದ ರೂಪದಲ್ಲಿ ಇದನ್ನ ತಮ್ಮ ಬಳಿ ಇಟ್ಟುಕೊಳ್ಳುತ್ತಾರೋ, ಒಂದು ವೇಳೆ ಅವರು ಧರ್ಮಾರ್ಥಿಗಳಾಗಿದ್ದರೆ ಧರ್ಮದ ಪ್ರಾಪ್ತಿಯಾಗುತ್ತದೆ. ಗರುಡ ಪುರಾಣದ ಅನುಸಾರವಾಗಿ ಯಾರು ತಮ್ಮ ತಂದೆ ತಾಯಿಗಳಿಗೆ ಮತ್ತು ತಮ್ಮ ಸಂತಾನಗಳಿಗೆ ದುಃಖವನ್ನು ಕೊಡುತ್ತಾರೋ

ಅವರು ಮುಂದಿನ ಜನ್ಮದಲ್ಲಿ ಭೂಮಿಯ ಮೇಲೆ ಜನ್ಮವನ್ನು ಪಡೆದುಕೊಳ್ಳುವುದಿಲ್ಲ. ಬದಲಿಗೆ ಅದಕ್ಕೂ ಮುನ್ನ ಗರ್ಭದಲ್ಲಿ ಅವರ ಮೃತ್ಯುವಾಗುತ್ತದೆ. ಯಾರು ಮಹಿಳೆಯರ ಮೇಲೆ ಶೋಷಣೆಯನ್ನು ಮಾಡುತ್ತಾರೋ ಅಥವಾ ಮಾಡಿಸುತ್ತಾರೋ ಅವರು ಮುಂದಿನ ಜನುಮದಲ್ಲಿ ಭಯಂಕರವಾದ ರೋಗಗಳಿಗೆ ಬಳಲುತ್ತಾರೆ ಮತ್ತು ಶಾರೀರಿಕ ಕಷ್ಟಗಳಿಂದ ಜೀವನ ಕಳೆಯುತ್ತಾರೆ.

ಯಾವ ಮನುಷ್ಯರ ಕೈಯಲ್ಲಿ ಈ ಮಹಾಪುರಾಣ ಇದೆಯೋ ಅವರ ಕೈಗಳಲ್ಲಿಯೇ ನೀತಿಯ ಭಂಡಾರವಿದೆ. ಯಾರು ಈ ಪುರಾಣವನ್ನು ಓದುತ್ತಾರೋ ಅಥವಾ ಕೇಳುತ್ತಾರೋ ಇವರು ಭೋಗ ಮತ್ತು ಮೋಕ್ಷಗಳನ್ನೆರಡು ಪಡೆದುಕೊಳ್ಳುತ್ತಾರೆ. ಈ ಮಹಾಪುರಾಣವನ್ನು ಕೇವಲ ಓದಿದ್ರೆ ಅಥವಾ ಕೇಳಿದ್ರೆ ಮನುಷ್ಯನಿಗೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದ ನಾಲ್ಕು ಪುರುಷಾರ್ಥಗಳು ಸಿದ್ಧಿಯಾಗುತ್ತವೆ.

ಈ ಮಹಾಪುರಾಣವನ್ನ ಓದಿ ಅಥವಾ ಇದನ್ನ ಕೇಳಿ ಸಂತಾನ ಪ್ರಾಪ್ತಿಗಾಗಿ ಇಚ್ಛೆ ಇದ್ದರೆ ಅದನ್ನ ಇವರು ಪೂರೈಸಿಕೊಳ್ಳುತ್ತಾರೆ. ಬಂಜೆ ಸ್ತ್ರೀ ಅಥವಾ ಯಾವ ಸ್ತ್ರೀಗೆ ಸಂತಾನ ಸುಖ ಸಿಕ್ಕಿರುವುದಿಲ್ವೋ ಅಂತವರಿಗೆ ಪುತ್ರ ಸುಖ, ಕನ್ಯೆಯರಿಗೆ ಒಳ್ಳೆಯ ಗಂಡ, ಕ್ಷೇಮಾರ್ಥಿಗಳಿಗೆ ಕ್ಷೇಮದ ಜೊತೆಗೆ ಭೋಗ ವಿಲಾಸಗಳನ್ನು ಬಯಸುವಂತವರಿಗೆ ಎಲ್ಲವೂ ಸಿಗುತ್ತದೆ.

ವಿದ್ಯಾರ್ಥಿಗಳಿಗೆ ವಿದ್ಯೆ, ಹೋರಾಡುವಂತ ಜನರಿಗೆ ಯಶಸ್ಸು, ಪಾಪಿಗಳಿಗೆ ಪಾಪದಿಂದ ಮುಕ್ತಿ ಸಿಗುತ್ತದೆ. ಅಷ್ಟೇ ಅಲ್ಲದೆ ಮಂಗಳವನ್ನ ಬಯಸುವಂತ ವ್ಯಕ್ತಿಗಳು ತಮ್ಮ ಮಂಗಳದ ಜತೆಗೆ ಗುಣಗಳ ಇಚ್ಛೆ ಇದ್ದವರು ಒಳ್ಳೆಯ ಗುಣಗಳನ್ನ, ಕಾವ್ಯದ ಇಚ್ಛೆ ಇರುವಂತ ಮನುಷ್ಯರು ಕವಿತೆಯನ್ನಾಗಲಿ, ಜೀವನದ ತತ್ವವನ್ನ ತಿಳಿಯಲು ಬಯಸುವಂತ ಜನರು ಸಾರ್ಥತ್ವವನ್ನ ಪಡೆದುಕೊಳ್ಳುತ್ತಾರೆ.

ಜ್ಞಾನಾರ್ಥಿಗಳು ಇಡೀ ಜಗತ್ತನ್ನ ಆಳುವಂತ ಜ್ಞಾನವನ್ನ ಪಡೆದುಕೊಳ್ಳುತ್ತಾರೆ. ಪಕ್ಷಿ ಶ್ರೇಷ್ಠ ಗರುಡ ದೇವರು ಈ ರೀತಿ ಹೇಳ್ತಾರೆ. ಈ ಗರುಡ ಪುರಾಣ ಧನ್ಯವಾಗಿದೆ. ಇದಂತೂ ಎಲ್ಲರಿಗೂ ಒಳ್ಳೆಯದನ್ನ ಮಾಡುವಂತ ಗ್ರಂಥವಾಗಿದೆ. ಯಾವ ಮನುಷ್ಯರು ಇದರಲ್ಲಿ ಇರುವಂತ ಕೇವಲ ಒಂದು ಶ್ಲೋಕವನ್ನ ಜಪ ಮಾಡಿದ್ರು ಅವರಿಗೆ ಅಕಾಲ ಮೃತ್ಯು ಬರುವುದಿಲ್ಲ. ಇಲ್ಲಿ ಕೇವಲ ಇದರ ಅರ್ಧ ಶ್ಲೋಕಗಳನ್ನ ಓದುದ್ರು ಖಂಡಿತವಾಗಿ ಶತ್ರುಗಳು ನಾಶ ಆಗ್ತಾರೆ. ಹಾಗಾಗಿ ಈ ಗರುಡ ಪುರಾಣವು ಮುಖ್ಯ ಮತ್ತು ಶಾಸ್ತ್ರಕ್ಕೆ ಸಂಬಂಧಪಟ್ಟಂತಹ ಪುರಾಣವಾಗಿದೆ.

ವಿಷ್ಣುಧರ್ಮದ ಪ್ರದರ್ಶನದಲ್ಲಿ ಗರುಡ ಪುರಾಣಕ್ಕೆ ಸಮಾನವಾದ ಬೇರೆ ಪುರಾಣ ಯಾವುದು ಇಲ್ಲ. ಹೇಗೆ ದೇವರಲ್ಲಿ ಜನಾರ್ಧನನು ಶ್ರೇಷ್ಠ ಆಗಿದ್ದಾರೋ ಅದೇ ರೀತಿಯಾಗಿ ಪುರಾಣಗಳಲ್ಲಿ ಈ ಗರುಡ ಪುರಾಣವು. ಹರಿ ತತ್ವ ನಿರೂಪಣದಲ್ಲಿ ತುಂಬಾನೇ ಮುಖ್ಯವಾದದ್ದು ಅಂತ ತಿಳಿಸಿದ್ದಾರೆ. ಈ ಗರುಡ ಪುರಾಣದಲ್ಲಿ ಹರಿಯೇ ಪ್ರತಿಪಾದ್ಯರಾಗಿದ್ದಾರೆ. ಹಾಗಾಗಿ ಹರಿಯೇ ನಮಸ್ಕಾರ ಮಾಡಲು ಯೋಗ್ಯರಾಗಿದ್ದಾರೆ.

ಹರಿಯೇ ಶರಣ್ಯರಾಗಿದ್ದಾರೆ. ಹರಿಯೇ ಎಲ್ಲ ಪ್ರಕಾರದ ಸೇವೆಯನ್ನ ಮಾಡಲು ಯೋಗ್ಯರಾಗಿದ್ದಾರೆ. ಈ ಗರುಡ ಪುರಾಣ ತುಂಬಾನೇ ಪವಿತ್ರ ಮತ್ತು ಪುಣ್ಯದಾಯಕ ಆಗಿದೆ. ಇದು ಎಲ್ಲಾ ಪಾಪಗಳನ್ನ ನಾಶ ಮಾಡುವಂತ ಕೇಳಿದವರ ಎಲ್ಲಾ ಮನಸ್ಸಿಚ್ಛೆಗಳನ್ನ ಈಡೇರಿಸುವಂತ ಗ್ರಂಥ ಆಗಿದೆ. ಇದನ್ನ ಯಾವತ್ತಿಗೂ ಓದಬೇಕು. ಯಾವ ಮನುಷ್ಯರು ಈ ಮಹಾಪುರಾಣವನ್ನ ಓದುತ್ತಾರೋ ಅಥವಾ ಕೇಳುತ್ತಾರೋ

ಇವರು ನಿಷ್ಪಾಪಿಗಳಾಗಿಯೇ ಯಮರಾಜರ ಭಯಂಕರವಾದ ತೊಂದರೆಗಳನ್ನ ದೂರ ಮಾಡಿ ಸ್ವರ್ಗವನ್ನ ಪಡೆದುಕೊಳ್ತಾರೆ. ಸ್ನೇಹಿತರೆ ಇಲ್ಲಿ ನೀವೇ ಹೇಳಿ, ಇಲ್ಲಿ ಈ ರೀತಿಯಾಗಲು ಹೇಗೆ ಸಾಧ್ಯ ಹೇಳಿ, ಒಂದ್ ವೇಳೆ ಯಾವುದಾದರೂ ಮನುಷ್ಯರು ತಮ್ಮ ಜೀವನ ಕಾಲದಲ್ಲಿ ಈ ಪವಿತ್ರ ಪುರಾಣವನ್ನ ನಿಯಮಿತ ರೂಪದಲ್ಲಿ ಓದಿದ್ರೆ ಅವರ ಜೊತೆ ಯಾವುದಾದ್ರೂ ಅಶುಭ ಘಟನೆಗಳು ನಡೆಯಲು ಸಾಧ್ಯವಿದ್ಯಾ?

ಅಥವಾ ಅವರಿಗೆ ಅಕಾಲಿಕ ಮೃತ್ಯು ಆಗತ್ತಾ? ಸಾಧಾರಣವಾದ ಜನರು ಗರುಡ ಪುರಾಣವನ್ನು ಓದಲು ಹೆದರುತ್ತಾರೆ. ಯಾಕಂದ್ರೆ ಗರುಡ ಪುರಾಣವನ್ನ ಯಾವುದಾದರೂ ವ್ಯಕ್ತಿಯ ಮರಣ ಆದ ನಂತರವೇ ಓದಿಸಲಾಗುತ್ತದೆ. ವಾಸ್ತವದಲ್ಲಿ ಗರುಡ ಪುರಾಣದಲ್ಲಿ ಯಾವುದಾದರೂ ವ್ಯಕ್ತಿಯ ಮೃತ್ಯುವಾದ ನಂತರ ನಡೆಯುವಂತ ಘಟನೆಗಳ ಬಗ್ಗೆ ವರ್ಣಿಸಿದ್ದಾರೆ.

ಹೆಚ್ಚಾಗಿ ಜನರು ಪುರಾಣಗಳನ್ನ ಯಾವುದಾದರೂ ವ್ಯಕ್ತಿಯ ಮರಣವಾದ ನಂತರವೇ ಓದೋದನ್ನ ಕಂಡಿರ್ತಾರೆ. ಹಾಗಾಗಿ ಕೆಲವು ಜನರಲ್ಲಿ ಈ ತಪ್ಪು ಕಲ್ಪನೆ ಭಯ ಹುಟ್ಟುತ್ತದೆ. ಆದರೆ ಈ ರೀತಿ ಏನೂ ಇಲ್ಲ. ಇದನ್ನ ಯಾವಾಗ ಬೇಕಾದ್ರೂ ಓದಬಹುದು. ಹಾಗಾಗಿ ಸಮಯ ಸಿಕ್ಕಾಗ ಈ ಪವಿತ್ರವಾದ ಗ್ರಂಥವನ್ನ ಓದಿ ನಿಮ್ಮ ಜೀವನವನ್ನ ನೀವು ಸುಖಮಯವನ್ನಾಗಿಸಿಕೊಳ್ಳಬಹುದು.

ಈ ಮಹಾಪುರಾಣವನ್ನ ನಿಯಮಿತ ರೂಪದಲ್ಲಿ ಪಾಠ ಮಾಡುವುದರಿಂದ ಎಲ್ಲಕ್ಕಿಂತ ದೊಡ್ಡದಾಗಿರುವ ಲಾಭ ಏನಿದೆ ಅಂದ್ರೆ ಮನುಷ್ಯನು ಜೀವನದಲ್ಲಿ ಮತ್ತು ಮೃತ್ಯುವಾದ ನಂತರ ನಡೆಯುವಂತ ಕೆಲವು ರಹಸ್ಯಗಳ ಬಗ್ಗೆ ಸುಲಭವಾಗಿ ತಿಳಿಯಬಹುದು. ಯಾಕಂದರೆ ಗರುಡ ಪುರಾಣದಲ್ಲಿ ಮನುಷ್ಯನು ಜೀವಂತವಿದ್ದಾಗ ಮಾಡುವಂತ ಕರ್ಮಗಳ ಬಗ್ಗೆ ತಿಳಿಸಿದ್ದಾರೆ.

ಇಲ್ಲಿ ಯಾವ ಕರ್ಮಗಳು ಒಳ್ಳೆಯದು, ಯಾವ ಕರ್ಮಗಳನ್ನ ಮಾಡಬಾರದು ಅಂತ ತಿಳಿಸಿದ್ದಾರೆ. ಇವುಗಳಷ್ಟೇ ಅಲ್ಲದೆ ಈ ಪುರಾಣದಲ್ಲಿ ಮೃತ್ಯುವಾದ ನಂತರ ಸಿಗುವಂತ ಶಿಕ್ಷೆಗಳ ಬಗ್ಗೆನೂ ತಿಳಿಸಿದ್ದಾರೆ. ಅಂದ್ರೆ ಇಲ್ಲಿ ಗ್ರಂಥದ ಮುಖ್ಯ ಉದ್ದೇಶ ಏನಿದೆ ಅಂದ್ರೆ, ಒಂದ್ ವೇಳೆ ಈ ಪುರಾಣದಲ್ಲಿರುವಂತ ಎಲ್ಲ ವಿಷಯಗಳನ್ನ ಮಾನವ ಜಾತಿ ತಿಳಿದುಕೊಂಡರೆ ಒಂದು ಒಳ್ಳೆಯ ಸಮಾಜದ ನಿರ್ಮಾಣವನ್ನ ಮಾಡಬಹುದು. ವಿಡಿಯೋ ಇಷ್ಟವಾದರೆ ಲೈಕ್ ಮಾಡಿ ನಿಮ್ಮ ಅನಿಸಿಕೆಯನ್ನು ಕಮೆಂಟ್ ನಲ್ಲಿ ಬರೆಯಿರಿ. ಹೊಸ ವಿಡಿಯೋಗಳನ್ನು ಮಿಸ್ ಮಾಡದೆ ನೋಡಲು ಚಾನಲ್ಗೆ ಕೂಡ ಸಬ್ಸ್ಕ್ರೈಬ್ ಮಾಡಿಕೊಳ್ಳಿ, ಧನ್ಯವಾದಗಳು.

Leave A Reply

Your email address will not be published.