ದೇವರ ಮನೆಯನ್ನು ಎಷ್ಟು ದಿನಗಳಿಗೆ ಕ್ಲೀನ್ ಮಾಡಬೇಕು, ಕಳಸದ ಕಾಯಿಯನ್ನು ಎಷ್ಟು ದಿನದ ನಂತರ ಬದಲಾಯಿಸಬೇಕು? ಎಷ್ಟು ದಿನಗಳಿಗೆ ಒಮ್ಮೆ ಕಳಸವನ್ನು ಸಲ್ಲಿಸಬೇಕು? ಸಾಕಷ್ಟು ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಗುರುವಾರ ಅಥವಾ ಭಾನುವಾರ ದೇವರ ಕೋಣೆಯನ್ನು ಶುದ್ಧೀಕರಿಸಿ, ರಂಗೋಲಿಯನ್ನು ಬಿಡಬೇಕು.
ದೇವರ ಪಾತ್ರೆಗಳನ್ನು ತೊಳೆದು ನೀಟಾಗಿ ಹೊರೆಸಿ ಇಟ್ಟುಕೊಳ್ಳಿ. ಮಾರನೇ ದಿನ ದೇವರ ವಿಗ್ರಹಗಳಿಗೆ ಮತ್ತು ಪೋಟೋಗಳಿಗೆ ವಿಭೂತಿ, ಅರಿಶಿಣ ಕುಂಕುಮವನ್ನು ಧರಿಸಿ. ದೇವರ ಮನೆಯಲ್ಲಿ ಒಂದು ಪೀಠವನ್ನು ಇಟ್ಟು ಒಂದು ತಟ್ಟೆಗೆ ಮೂರು ಇಡಿ ಅಥವಾ ಐದು ಇಡಿ ಅಕ್ಕಿಯನ್ನು ಹಾಕಿರಿ. ಅಕ್ಕಿಯನ್ನು ಹಾಕಿದ ನಂತರ ಉಂಗುರದ ಬೆರಳಿನಿಂದ ಶ್ರೀಂ ಎಂದು ಬೀಜಾಕ್ಷರಿ ಮಂತ್ರವನ್ನು ಬರೆದು ಅದಕ್ಕೆ ಅಕ್ಷತೆ, ಕುಂಕುಮ, ಅರಿಶಿನ ಕೆಂಪು ಹೂವನ್ನು ಹಾಕಿರಿ ಮತ್ತು
ಬಿಲ್ವ ಪತ್ರೆ ಎಲೆ ಇದ್ದರೆ ಅದನ್ನು ಕೂಡ ಹಾಕಿ ಕಳಸವನ್ನು ಪ್ರತಿಷ್ಟಾಪನೆಯನ್ನು ಮಾಡಬೇಕು.ಕಳಸದ ನೀರಿಗೆ ಅರಿಶಿಣ ಕುಂಕುಮವನ್ನು ಹಾಕಿ ಕಳಸಕ್ಕೆ ಅರಿಶಿನ ಕುಂಕುಮನ್ನು ಧರಿಸಬೇಕು. ಬೆಳ್ಳಿಯ ಕಾಯಿನ್ ಅನ್ನು ಕಳಸದ ಚಂಬಿಗೆ ಹಾಕಬೇಕು. ಕಳಸಕ್ಕೆ ಐದು ವೀಳ್ಯದೆಲೆಯನ್ನು ಹಾಕಿರಿ. ಬಲಿತಿರುವ ಕಾಯಿಯನ್ನು ತೆಗೆದುಕೊಂಡು ಅದಕ್ಕೆ ಅರಿಶಿಣವನ್ನು ಹಾಕಿ ಕೆಂಪು ತಿಳಕವನ್ನು ಹಾಕಿ ಕಳಸದ ಮೇಲೆ ಇರಿಸಬೇಕು. ಕೆಲವರು ಹದಿನೈದು ದಿನಕ್ಕೆ ಒಮ್ಮೆ ಕಳಸವನ್ನು ಬದಲಾಯಿಸುತೀವಿ ಎನ್ನುತ್ತಾರೆ
ಅದು ತಪ್ಪೇನಲ್ಲ ಅವರವರ ಅನುಕೂಲ ಆದ್ದರಿಂದ ಭಕ್ತಿ ಮತ್ತು ಶ್ರದ್ಧೆಯಿಂದ ಮಾಡಿದರೇ ಒಳ್ಳೆಯದು. ಪ್ರತಿದಿನ ಪೂಜೆ ಮಾಡುವಾಗ ಎರಡು ಎಲೆ ಗೆಜ್ಜೆವಸ್ತ್ರವನ್ನು ಧರಿಸಿ. ನೀವು ವೆಂಕಟೇಶ್ವರನನ್ನು ಪೂಜೆ ಮಾಡುವವರು ಆಗಿದ್ದರೇ ಆಂಜನೇಯಸ್ವಾಮಿ ಇರುವ ಗಂಟೆಯನ್ನು ಬಳಸಿ, ಈಶ್ವರನನ್ನು ಪೂಜೆ ಮಾಡುವವರು ಆಗಿದ್ದರೇ ನಂದಿ ಇರುವ ಗಂಟೆಯನ್ನು ಬಳಸಿ. ದೀಪವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ತೊಳೆದುಕೊಳ್ಳಿ. ಹೊಸ್ತಿಲನ್ನು ನೀಟಾಗಿ ಹೊರೆಸಿ ಅರಿಶಿಣ ಕುಂಕುಮವನ್ನು ಧರಿಸಿ. ದೇವರ ಪೂಜೆಗೆ ಹಣ್ಣುಗಳು, ಡ್ರೈಫ್ರೂಟ್ಸ್ ಅಥವಾ ಹಸಿವಿನ ಹಾಲನ್ನು ನೈವೇದ್ಯಕ್ಕೆ ಇಡಬಹುದು.