ದೇವರ ಮನೆಯಲ್ಲಿ ಯಾವ ವಿಗ್ರಹವನ್ನು ಯಾವ ವಿ ದಿಕ್ಕಿನಲ್ಲಿ ಇಟ್ಟರೆ ಶ್ರೇಷ್ಠ. ಎಲ್ಲರ ಮನೆಯಲ್ಲೂ ದೇವರು ಕೋಣೆ ಇದ್ದೇ ಇರುತ್ತದೆ ಕೆಲವರು ಪ್ರತಿ ದಿನ ದೇವರನ್ನು ಪೂಜಿಸುತ್ತಾರೆ ಇನ್ನು ಕೆಲವರು ದೇವರ ಮನೆಯ ಕಡೆ ಹೋಗುವುದೇ ಇಲ್ಲ. ಇನ್ನು ಕೆಲವರು ಎಲ್ಲಾ ತರಹದ ಪೂಜೆಯನ್ನು ಮಾಡಿದರು ಮನೆಯಲ್ಲಿ ಸುಖ ಶಾಂತಿ ಇರುವುದೇ ಇಲ್ಲ. ಹಣದ ಸಮಸ್ಯೆಯೂ ಇರುತ್ತದೆ.
ಇದಕ್ಕೆ ಮೂಲ ಕಾರಣ ದೇವರ ಮನೆಯಲ್ಲಿ ದೇವರ ಮೂರ್ತಿಯನ್ನು ನೀವು ಯಾವ ದಿಕ್ಕಿನಲ್ಲಿ ಪ್ರತಿಷ್ಠಾಪನೆ ಮಾಡಿರುವಿರಿ ಎಂಬುದಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ದೇವರ ಮನೆಯಲ್ಲಿ ಯಾವ ದಿಕ್ಕಿನಲ್ಲಿ ದೇವರ ಮೂರ್ತಿಯನ್ನು ಇಟ್ಟರೆ ಒಳ್ಳೆಯದಾಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಲೇಬೇಕು. ನಿಮ್ಮ ಮನೆಯಲ್ಲಿ ಆಗಲಿ ಕೆಲಸ ಮಾಡುವ ಜಾಗದಲ್ಲಾಗಲಿ ಅಥವಾ ವ್ಯಾಪಾರದ ಸ್ಥಳದಲ್ಲಾಗಲಿ ವಾಸ್ತುಶಾಸ್ತ್ರದ ಪ್ರಕಾರವೇ ದೇವರ ಮೂರ್ತಿಗಳನ್ನು ಇಡಬೇಕು.
ಮನೆಯ ದೇವರ ಮೂರ್ತಿಯ ಕಾರಣದಿಂದಲೇ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರವಾಹ ವಾಗುತ್ತದೆ. ಆ ಶಕ್ತಿಯೇ ನಿಮ್ಮ ಮನೆ ಮನೆತನವನ್ನು ಕಾಪಾಡುತ್ತವೆ. ವಾಸ್ತುಶಾಸ್ತ್ರದ ಪ್ರಕಾರವಾಗಿಯೇ ದೇವರ ಮನೆಯಲ್ಲಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಮನೆಯಲ್ಲಿರುವ ದೇವರ ಮೂರ್ತಿಯು ಸರಿಯಾದ ದಿಕ್ಕಿನಲ್ಲಿ ಇರದೇ ಇದ್ದರೂ ಸಹ ಪೂಜೆಯ ಫಲ ದೊರಕುವುದಿಲ್ಲ.
ಹಾಗಾಗಿ ಪೂಜೆಯ ಕೋಣೆಯನ್ನು ನಿರ್ಮಿಸುವಾಗ ಹಲವಾರು ವಿಷಯಗಳನ್ನು ಗಮನದಲ್ಲಿರಿಸಿಕೊಂಡು ನಿರ್ಮಿಸಬೇಕು. ನಿಮ್ಮ ಮನೆಯಲ್ಲಿ ಈಗಾಗಲೇ ದೇವರ ಕೋಣೆಯನ್ನು ಸ್ಥಾಪಿಸಿಯಾಗಿದ್ದರೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಪರಿಹಾರಗಳನ್ನು ಅನುಸರಿಸುವ ಮೂಲಕ ವಾಸ್ತುದೋಷದಿಂದ ಮುಕ್ತಿಯನ್ನು ಪಡೆಯಬಹುದು. ದೇವರನ್ನು ಮೂರ್ತಿ ರೂಪದಲ್ಲಿ ಪೂಜಿಸಲು ಧಾರ್ಮಿಕ ಕಾರಣವಷ್ಟೇ ಅಲ್ಲ ವೈಜ್ಞಾನಿಕ ಕಾರಣವೂ ಇದೆ.
ನಾವು ದೇವರನ್ನು ಮೂರ್ತಿಯ ರೂಪದಲ್ಲಿ ಪೂಜಿಸಿದಾಗ ಮನ ಮತ್ತು ಮಸ್ತಿಷ್ಕವು ದೇವರ ಆರಾಧನೆಯಲ್ಲಿ ತಲಿನವಾಗುತ್ತದೆ ಮತ್ತು ಇದರಿಂದ ನಾವು ನಮ್ಮನ್ನು ದೇವರಿಗೆ ಸಮರ್ಪಿಸಿಕೊಂಡಂತೆ ಆಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ದೇವರ ಕೋಣೆಯು ಉತ್ತರ ಪೂರ್ವ ದಿಕ್ಕಿನಲ್ಲಿ ಇರಬೇಕು. ಉತ್ತರ ಪೂರ್ವದಿ ಕಮಿಷನ್ ಮೂಲೆ ಎಂದು ಕರೆಯುತ್ತಾರೆ. ಈ ದಿಕ್ಕಲಿ ಶಕ್ತಿಯ ಬಂಡಾರವೇ ಇರುತ್ತದೆ.
ಈ ದಿಕ್ಕನ್ನ ದೇವಮೂಲೆ ಎಂದು ಕರೆಯುತ್ತಾರೆ. ಆದ್ದರಿಂದ ದೇವರು ಕುಣಿಯುವುದೇ ದಿಕ್ಕಿನಲ್ಲಿ ಇರಬೇಕು. ಒಂದು ವೇಳೆ ಈ ದಿಕ್ಕಿನಲ್ಲಿ ದೇವರಕೋಣೆಯನ್ನು ಮಾಡಲು ಸಾಧ್ಯವೇ ಇಲ್ಲದಿದ್ದಲ್ಲಿ ಪೂರ್ವ ಅಥವ ಉತ್ತರಕ್ಕೆ ದೇವರ ಕೋಣೆಯನ್ನು ನಿರ್ಮಿಸಬಹುದು. ಪೂಜಾ ಕಣಿವೆ ಯಾವ ದಿಕ್ಕಿನಲ್ಲಿ ಇರಬೇಕು ಎಂಬುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಪೂಜೆ ಮಾಡುವಾಗ ನಿಮ್ಮ ಮುಖ ಯಾವ ದಿಕ್ಕಿನಲ್ಲಿ ಇರುತ್ತದೆ ಎಂಬುದಾಗಿದೆ.
ಪೂಜೆ ಮಾಡುವಾಗ ನಮ್ಮ ಮುಖ ಪೂರ್ವ ದಿಕ್ಕಿನ ಕಡೆಗೆ ಇರಬೇಕು. ಒಂದು ವೇಳೆ ಸಾಧ್ಯವಾಗದಿದ್ದರೆ ಪಶ್ಚಿಮ ದಿಕ್ಕು ಕೂಡ ಶುಭ. ಈ ಎರಡು ದಿಕ್ಕುಗಳು ಪೂಜೆ ಮಾಡಲು ಉತ್ತಮ. ದೇವರ ಕೋಣೆಯ ಅಡುಗೆ ಮನೆ ವಚನ ಮನೆ ಅಥವಾ ಟಾಯ್ಲೆಟ್ ಅಂಟಿಕೊಂಡು ಇರಬಾರದು. ಹೀಗೆ ಅಂಟಿಕೊಂಡಿರುವ ದೇವರಕೊನೆ ಅಷ್ಟು ಸೂಕ್ತವಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ದೇವರಕೋಣೆ ಬೆಡ್ರೂಮ್ ನಲ್ಲಿ ಸಹ ಇರಬಾರದು ಇದರಿಂದ ಪತಿ ಪತ್ನಿಯರಲ್ಲಿ ವಿರೆಸ ಉಂಟಾಗುತ್ತದೆ.
ಮೆಟ್ಟಿಲುಗಳ ಕೆಳಗೆ ಯಾವುದೇ ಕಾರಣಕ್ಕೂ ಪೂಜಾ ಗ್ರಹ ಕಟ್ಟಬಾರದು. ಇದರಿಂದ ಮಾನಸಿಕ ಹಿಂಸೆ ರೋಗದ ದಿನಗಳು ಅಂಟಿಕೊಳ್ಳುವುದು ಗ್ಯಾರಂಟಿ. ವಾಸ್ತುದೋಷದ ಪರಿಣಾಮದಿಂದ ಸಾಲದ ಸುಳಿಗೆ ತಿಳುಕಿರುವ ಉದಾಹರಣೆಗಳು ಸಾಕಷ್ಟು ಇದೆ. ಕೆಲವರು ದೇವರ ಫೋಟೋಗಳನ್ನು ನೆಲದ ಮೇಲೆ ಇಡುತ್ತಾರೆ. ಅಥವಾ ಪೂಜಾ ಕೋಣೆಯನ್ನು ನೆಲದ ಮೇಲೆ ಕಟ್ಟಿರುತ್ತಾರೆ.
ಇದು ಸರಿಯಾದ ಪದ್ಧತಿಯಲ್ಲ. ದೇವರು ಕೋಣೆಯಲ್ಲಿ ಒಂದು ಮಂಟಪವನ್ನು ನಿರ್ಮಿಸಬೇಕು ಅಥವಾ ಕಥೆಯನ್ನು ಕಟ್ಟಬೇಕು. ಇದರ ಎತ್ತರ ದೇವರ ಮೂರ್ತಿಯ ಕಾಲುಗಳು ನಿಮ್ಮ ಹೃದಯಕ್ಕೆ ಸಮವಾಗಿ ಬರುವಂತೆ ಇರಬೇಕು. ಏಕೆಂದರೆ ದೇವಸ್ಥಾನ ಸರ್ವೋಚ್ಚ ಸ್ಥಾನವಾಗಿದೆ. ಪೂಜಾ ಕೋಣೆಯಲ್ಲಿ ಧಾರ್ಮಿಕ ಪುಸ್ತಕಗಳನ್ನು ಇಟ್ಟಿದ್ದರೆ ಅವುಗಳನ್ನು ಕೆಂಪು ವಸ್ತ್ರದಲ್ಲಿ ಕಟ್ಟಿಡಬೇಕು.
ಪೂಜೆ ಮಾಡುವಾಗ ಒಂದು ಮನೆಯ ಮೇಲೆ ಅಥವಾ ಶುಭ್ರವಾದ ಬಟ್ಟೆಯನ್ನು ಹಾಸಿ ಕುಳಿತುಕೊಂಡು ಮಾಡಬೇಕು. ನಂತರದ ನಿಯತಿ ಪಕ್ಕ ಇಡಬೇಕು. ಬೇರೆ ಯಾವುದೇ ಫೋಟೋವನ್ನು ಅಥವಾ ತೀರಿಹೋದ ಸದಸ್ಯರ ಫೋಟೋವನ್ನು ಪೂಜಾ ಕೊಠಡಿ ಒಳಗೆ ಇಡಬಾರದು. ಪೂಜಾ ಕೋಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪ್ರತಿದಿನ ಒರೆಸಿ ಶುಚಿಗೊಳಿಸಬೇಕು.
ಪ್ರತಿ ದಿನ ದೀಪವನ್ನು ಹಚ್ಚಬೇಕು ಸಂಜೆಯ ಸಮಯದಲ್ಲಿ ದೀಪವನ್ನು ಹಚ್ಚಲೇಬೇಕು. ಸ್ನಾನ ಮಾಡದೆ ದೇವರೇ ಕೋಣೆಯ ಒಳಗಡೆ ಹೋಗಲೇಬಾರದು. ಹಿಂದೂ ಧಾರ್ಮಿಕ ಆಚರಣೆಯ ಪ್ರಕಾರ ಮೊದಲು ವಿಗ್ನ ವಿನಾಶಕನಿಗೆ ಪೂಜೆಯನ್ನು ಮಾಡುತ್ತಾರೆ. ಆದ್ದರಿಂದ ಗಣೇಶನ ವಿಗ್ರಹ ಒಂದು ದೇವರ ಮನೆಯಲ್ಲಿ ಇರಲೇಬೇಕು. ವಾಸ್ತು ಶಾಸ್ತ್ರದ ಪ್ರಕಾರ
ಗಣೇಶ ವಿಗ್ರಹದ ಬಲಕ್ಕೆ ಲಕ್ಷ್ಮೀದೇವಿಯನ್ನು ಎಡಕ್ಕೆ ಸರಸ್ವತಿಯನ್ನು ಪ್ರತಿಷ್ಠಾಪಿಸಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ಪ್ಲಾಸ್ಟಿಕ್ ಗಣಪತಿ ವಿಗ್ರಹವನ್ನು ಇಡಲೇಬಾರದು. ಕುಣಿಯುತ್ತಿರುವ ಗಣೇಶನ ವಿಗ್ರಹವನ್ನು ಸ್ಥಾಪಿಸಬಾರದು. ಪ್ರಶಾಂತವಾಗಿ ಕುಳಿತಿರುವ ಆಶೀರ್ವಾದ ನೀಡುವ ಬಂಗಿಯಲ್ಲಿರುವ ಗಣೇಶನ ವಿಗ್ರಹವನ್ನು ಇಡಬೇಕು. ಲಕ್ಷ್ಮೀದೇವಿಯನ್ನು ಮನೆಯಲ್ಲಿ ಅವಶ್ಯವಾಗಿ ಇಡಬೇಕು. ಈ ದೇವಿ ಮನೆಗೆ ಸುಖ ಶಾಂತಿಯನ್ನು ದಯಪಾಲಿಸುತ್ತಾಳೆ.
ಕುಳಿತ ದೇವಿಯ ಮೂರ್ತಿಯನ್ನು ಇಡುವುದರಿಂದ ಮನೆಯಲ್ಲಿ ಯಾವತ್ತೂ ದರಿದ್ರ ಬರುವುದಿಲ್ಲ. ನಿಂತಿರುವ ದೇವಿಯನ್ನು ಇಡಬೇಡಿ. ಶ್ರೀ ಲಕ್ಷ್ಮಿ ದೇವಿಯ ವಿಗ್ರಹ ದೊಂದಿಗೆ ಶ್ರೀ ವಿಷ್ಣುವಿನ ವಿಗ್ರಹವನ್ನು ಇಟ್ಟರೆ ಅತ್ಯಂತ ಒಳ್ಳೆಯದು. ಶ್ರೀ ಲಕ್ಷ್ಮಿ ದೇವಿಯ ವಿಗ್ರಹವನ್ನು ದೇವರ ಮನೆಯ ಉತ್ತರ ದಿಕ್ಕಿಗೆ ಇಡಬೇಕು. ಪೂಜಾ ಕೋಣೆಯಲ್ಲಿ ಶ್ರೀ ಹನುಮಂತನ ವಿಗ್ರಹವನ್ನು ಇಡಬೇಕು.
ಹನುಮಂತನ ನಿಮ್ಮ ಮನೆಯ ಕಷ್ಟಗಳನ್ನು ನಾಶ ಮಾಡುತ್ತಾನೆ. ಆದ್ದರಿಂದ ಕುಳಿತ ಹನುಮಂತನನ್ನು ನಿಮ್ಮ ಮನೆಗೆ ಅವಶ್ಯಕವಾಗಿ ತನ್ನಿ. ವಾಸ್ತುಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಪಂಚಮುಖಿ ಆಂಜನೇಯನನ್ನು ಸ್ಥಾಪಿಸುವುದರಿಂದ. ಮನೆಗೆ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುವುದಿಲ್ಲ. ಹಾಗಾಗಿ ನೀವು ಹನುಮಂತನ ಫೋಟೋ
ಅಥವಾ ಮೂರ್ತಿಯನ್ನು ತಂದು ದಕ್ಷಿಣ ದಿಕ್ಕಿಗೆ ಇಟ್ಟು ಪೂಜಿಸುವುದನ್ನು ಆರಂಭಿಸಿ. ಶನಿ ದೇವರ ಮೂರ್ತಿಯನ್ನು ಮನೆಯಲ್ಲಿ ಇಡಬಾರದು. ಶನಿ ದೇವರ ದೃಷ್ಟಿ ಮನೆಯಲ್ಲಿ ಬೀಳುವುದು ಅಶುಭದ ಸಂಕೇತ. ಶನಿ ದೇವರ ದೇವಸ್ಥಾನಕ್ಕೆ ಹೋದಾಗ ಮೂರ್ತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲೇಬಾರದು. ಆದೇವನ ಪಾದದ ಕಡೆಯಿಂದ ನಿಮ್ಮ ದೃಷ್ಟಿಯನ್ನು ಮೇಲಕ್ಕೆ ತೆಗೆದುಕೊಂಡು ಹೋಗಬೇಕು. ಪೂಜಾ ಮನೆಯಲ್ಲಿ ರಾಹು ಕೇತು ಶನಿ ಮತ್ತು ಕಾಳಿಕಾಂಬಾತೆಯ ವಿಗ್ರಹ ಇಡಬಾರದು ಏಕೆಂದರೆ ಈ ಎಲ್ಲ ದೇವರು ಕೃ ದೇವತೆಗಳಾಗಿರುತ್ತಾರೆ. ಮತ್ತೆ ಇವರ ಪೂಜೆ ಮಾಡುವುದು ತುಂಬಾ ಕಠಿಣವಾಗಿರುತ್ತದೆ.