ದೇವರಿಗೆ ಪ್ರಿಯವಾದ ಹೂವುಗಳು, ಇಂತಹ ಹೂವುಗಳು ಸಿಕ್ಕಿದರೆ ಬಿಡಬೇಡಿ,ನಮ್ಮ ಅದೃಷ್ಟವನ್ನೆ ಬದಲಾಯಿಸುವ ಹೂಗಳು.

ಪ್ರತಿದಿನ ಎಲ್ಲರ ಮನೆಯಲ್ಲಿ ಪೂಜೆ ಮಾಡುವ ಅಭ್ಯಾಸ ಇದ್ದೇ ಇರುತ್ತದೆ. ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಪಾಸಿಟಿವ್ ವಾತಾವರಣವಿರುತ್ತದೆಂದು ನಿಮಗೆಲ್ಲಾ ಗೊತ್ತೇ ಇದೆ. ಈ ಲೇಖನದಲ್ಲಿ ಕೆಲವೊಂದು ಹೂವುಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ ಮತ್ತು ನಾವು ಯಾರನ್ನಾದರೂ ಒಲಿಸಿಕೊಳ್ಳಬೇಕೆಂದರೆ ಅವರಿಗೆ ಇಷ್ಟವಾದ ವಸ್ತುಗಳನ್ನು ಕೊಡುವುದರ ಮೂಲಕ ಸುಲಭವಾಗಿ ಅವರನ್ನು ಒಲಿಸಿಕೊಳ್ಳಬಹುದು. ಯಾವ ಯಾವ ದೇವರಿಗೆ ಯಾವ ಯಾವ ಹೂಗಳು ಇಷ್ಟ ಎಂದು ತಿಳಿದುಕೊಂಡು ಪೂಜೆ ಮಾಡುವುದರಿಂದ ನಮ್ಮ ಅದೃಷ್ಟ ಬದಲಾಗುತ್ತದೆ.

ಕೆಲವು ಹೂಗಳು ಕೆಲವು ದೇವರಿಗೆ ಬಹಳ ಪ್ರಿಯವಾಗಿರುತ್ತದೆ. ಅಂತಹ ಹೂವುಗಳಿಂದ ಪೂಜೆ ಮಾಡುವುದರಿಂದ ದೇವರ ಪ್ರೀತಿಗೆ ಪಾತ್ರರಾಗುತ್ತೀವಿ. ಇನ್ನು ಕೆಲವರು ತಮಗೆ ಯಾವುದು ಆ ಸಮಯದಲ್ಲಿ ಸಿಗುತ್ತದೆಯೋ ಅದನ್ನೇ ದೇವರಿಗೆ ಅರ್ಪಿಸುತ್ತಾರೆ ಆದರೇ ಯಾವ ದೇವರಿಗೆ ಯಾವ ಹೂ ಅನ್ನು ಅರ್ಪಿಸಬೇಕು ಎಂಬುದನ್ನು ಈ ಲೇಖನವನ್ನು ಪೂರ್ತಿಯಾಗಿ ಓದಿ ನಿಮಗೆ ತಿಳಿಯುತ್ತದೆ.

ಎಕ್ಕದ ಹೂ: ಈ ಹೂವು ಗಣೇಶನಿಗೆ ತುಂಬಾನೇ ಪ್ರಿಯವಾದ ಹೂವಾಗಿದೆ. ಈ ಹೂವಿನ ಜೊತೆಗೆ ಗರಿಕೆಯನ್ನು ಸೇರಿಸಿ ಅರ್ಪಿಸಿದರೆ ಗಣೇಶನ ಸಂಪೂರ್ಣ ಆಶೀರ್ವಾದ ಸಿಗುತ್ತದೆ. ಜೊತೆಗೆ ಈ ಹೂವಿನಲ್ಲಿ ಎರಡು ವಿಧಗಳಿರುತ್ತವೆ. ಬಿಳಿ ಎಕ್ಕದ ಹೂವು ಮತ್ತೊಂದು ಸ್ವಲ್ಪ ತಿಳಿ ನೀಲಿ ಬಣ್ಣ. ಈ ಎರಡು ಹೂಗಳ ವ್ಯತ್ಯಾಸದ ಬಗ್ಗೆ ತಿಳಿದುಕೊಳ್ಳಿ. ಬಿಳಿ ಬಣ್ಣದ ಹೂವನ್ನು ಶುಭ ಕೆಲಸಗಳಿಗೆ ಉಪಯೋಗಿಸಲಾಗುತ್ತದೆ. ಪೂಜೆಯ ಜೊತೆಗೆ ವ್ಯಾಪಾರದ ಸ್ಥಳಗಳಲ್ಲಿ ಧನಾಕರ್ಷಣೆ ಮತ್ತು ಜನಾಕರ್ಷಣೆ ಆಗುತ್ತದೆ.

ತಿಳಿ ನೇರಳೆ ಬಣ್ಣದ ಎಕ್ಕದ ಹೂವನ್ನು ವಾಮಚಾರದಂತಹ ಮಾಟ, ಮಂತ್ರದ ಪ್ರಯೋಗಗಳಲ್ಲಿ ಬಳಸಲಾಗುತ್ತದೆ. ಪ್ತತೀ ಮಂಗಳವಾರ ಬಿಳಿ ಎಕ್ಕದ ಜೊತೆ ಗರಿಕೆಯನ್ನು ಗಣೇಶನ ದೇವಸ್ಥಾನಕ್ಕೆ ಕೊಡುವುದರಿಂದ ಮತ್ತು ಗಣೇಶನ ಪೂಜೆ ಮಾಡುವುದರಿಂದ ನಮ್ಮ ಎಲ್ಲಾ ಕಾರ್ಯಗಳು ಸಿದ್ಧಿಯಾಗುತ್ತದೆ. ಔಷಧೀಯ ಗುಣವನ್ನು ಹೊಂದಿರುವ ಈ ಎಕ್ಕದ ಹೂವು ವಾಸ್ತುದೋಷ ಮತ್ತು ಕೆಟ್ಟ ದೃಷ್ಟಿ ನಿವಾರಣೆಯಲ್ಲೂ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಉಮ್ಮತ್ತಿ ಹೂವು: ಉಮ್ಮತ್ತಿ ಕಾಯಿ ಮತ್ತು ಉಮ್ಮತ್ತಿ ಹೂ ಶಿವನ ಪೂಜೆಗೆ ತುಂಬಾ ಶ್ರೇಷ್ಠ. ಶಿವನಿಗೆ ಬಿಲ್ವಪತ್ರೆ, ತುಂಬೆ ಹೂ ಹಾಗೂ ಎಲ್ಲಾ ತರಹದ ಬಿಳಿ ಹೂ ಇಷ್ಟ.

ಹಳ್ಳಿಗಳಲ್ಲಿ ಖಾಲಿ ಜಾಗಗಳಲ್ಲಿ ಈ ಉಮ್ಮತ್ತಿ ಗಿಡವು ಬೆಳೆದುಕೊಂಡಿರುವುದರಿಂದ ಈ ಹೂ ಸುಲಭವಾಗಿ ಸಿಗುತ್ತದೆ. ದೃಷ್ಠಿಪರಿಹಾರ ಹಾಗೂ ಪಾಸಿಟಿವ್ ಎನರ್ಜಿಗಾಗಿ ಈ ಉಮ್ಮತ್ತಿ ಕಾಯಿ ಮತ್ತು ಹೂವನ್ನು ಬಳಸಲಾಗುತ್ತದೆ. ಈ ಹೂವನ್ನು ಬಳಸುವುದರಿಂದ ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಆರ್ಥಿಕ ಸಮಸ್ಯೆಗಳಿಗೆ ಒಳ್ಳೆಯ ಪರಿಹಾರ ಸಿಗುತ್ತದೆ. ಉಮ್ಮತ್ತಿ ಕಾಯಿಯ ದೀಪವನ್ನು ಪ್ರತಿ ಕಾರ್ತೀಕ ಸೋಮವಾರ ದೀಪವನ್ನು ಹಚ್ಚುವುದರಿಂದ ಎಂತಹ ಮಾಟ ಮಂತ್ರ ಪ್ರಯೋಗವಾಗಿದ್ದರೂ ಅದು ಬೇಗನೇ ಪರಿಹಾರವಾಗುತ್ತದೆ.

ನಾಗಸಂಪಿಗೆ: ನಾಗಸಂಪಿಗೆ ಅಥವಾ ನಾಗಲಿಂಗಪುಷ್ಪ ವನ್ನು ಶಿವನ ಪೂಜೆಗೆ ಬಳಸಿದರೇ ಉತ್ತಮ. ಈ ಹೂವಿನ ಮಧ್ಯದಲ್ಲಿ ಲಿಂಗವಿರುತ್ತದೆ ಅದರ ಮೇಲೆ ನಾಗದ ಸೆಡೆ ಇರುತ್ತದೆ. ಪಲಾಶ ಪುಷ್ಪ: ಮುತ್ತುಗದ ಎಲೆಯಿಂದ ಶಿವನಿಗೆ ಅಥವಾ ಲಕ್ಷ್ಮಿಗೆ ನೈವೇದ್ಯವನ್ನು ಅರ್ಪಿಸಿದರೆ ಚಂದ್ರನ ದೋಷವಿದ್ದರೇ ಬಹಳ ಬೇಗ ಕಡಿಮೆಯಾಗುತ್ತದೆ. ಮುತ್ತುಗದ ಹೂವು ಅಥವಾ ಪಲಾಶ ಪುಷ್ಪವನ್ನು ಸರಸ್ವತಿ ದೇವರಿಗೆ ಅರ್ಪಿಸುವುದರಿಂದ ಒಳ್ಳೆಯ ಜ್ಞಾನ, ವಿದ್ಯೆ, ಬುದ್ಧಿ ಎಲ್ಲವೂ ಸಿಗುತ್ತದೆ. ಮಕ್ಕಳು ವಿದ್ಯಾವಂತರಾಗಬೇಕಾದರೇ ಈ ಹೂವನ್ನು ತಾಯಿ ಸರಸ್ವತಿಗೆ ಅರ್ಪಿಸುವುದರಿಂದ ಸರಸ್ವತಿ ಸ್ತ್ರೋತ್ರಗಳನ್ನು ಮಕ್ಕಳು ಪಠಿಸಿದರೇ ತುಂಬಾನೇ ಒಳ್ಳೆಯದು.

ಕೆಂಪು ದಾಸವಾಳ: ಮಂದಾರ ಪುಷ್ಪ ಅಥವಾ ದಾಸವಾಳವನ್ನು ಲಕ್ಷ್ಮಿದೇವಿಗೆ ಅರ್ಪಿಸುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕಾಳಿ, ಚಾಮುಂಡೇಶ್ವರಿ, ಗೌರಿ ಪೂಜೆಯಲ್ಲಿ ಕೆಂಪು ದಾಸವಾಳವನ್ನು ಪೂಜೆಗೆ ಉಪಯೋಗಿಸಬೇಕು ತುಂಬಾನೇ ಒಳ್ಳೆಯದು. 108 ದಾಸವಾಳವನ್ನು ಸೇರಿಸಿ ಹಾರ ಮಾಡಿ ದುರ್ಗಾದೇವಿಗೆ ಅರ್ಪಣೆ ಮಾಡುವುದರಿಂದ ದೇವಿ ಪ್ರಸನ್ನಳಾಗಿ ಮನೆಗೆ ಒಳ್ಳೆಯದಾಗುತ್ತದೆ. ಪ್ರತೀ ಮಂಗಳವಾರ ದಾಸವಾಳವನ್ನು ದುರ್ಗಾದೇವಿಗೆ ಅರ್ಪಣೆ ಮಾಡಬೇಕು. ಶುಕ್ರವಾರದ ದಾಸವಾಳವನ್ನು ಲಕ್ಷ್ಮಿದೇವಿಗೆ ಅರ್ಪಿಸುವುದರಿಂದ ಸಂಪತ್ತು ಸಿಗುತ್ತದೆ.

ತುಳಸಿ: ವಿಷ್ಣುವಿನ ಪೂಜೆಗೆ ತುಳಸಿಯನ್ನು ಅರ್ಪಿಸಿದರೇ ಭಗವಾನ್ ವಿಷ್ಣುದೇವರು ಪ್ರಸನ್ನನಾಗುತ್ತಾನೆ. ದೇವರಿಗೆ ಏನೇ ನೈವೇದ್ಯವನ್ನು ಅರ್ಪಿಸಿದರು ಒಂದು ದಳ ತುಳಸಿಯನ್ನು ಹಾಕಬೇಕು. ಶ್ರಾವಣ ಶನಿವಾರ ಮತ್ತು ಕಾರ್ತೀಕ ಶನಿವಾರ ತುಳಸಿಯನ್ನು ವಿಷ್ಣುವಿಗೆ ಅರ್ಪಿಸಬೇಕು ಭಗವಾನ್ ವಿಷ್ಣು ಪ್ರಸನ್ನನಾಗುತ್ತಾನೆ.
ಮಲ್ಲಿಗೆ ಹೂ: ಆಂಜನೇಯಸ್ವಾಮಿಗೆ ಮಲ್ಲಿಗೆ ಹೂ ಎಂದರೆ ಬಹಳ ಇಷ್ಟ. ತುಳಸಿ ಮತ್ತು ವೀಳ್ಯದೆಲೆ ಹನುಮಂತನಿಗೆ ಇಷ್ಟವೆಂದು ಅರ್ಪಿಸುತ್ತೇವೆ ಅದು ಕೂಡ ದೇವರಿಗೆ ತುಂಬಾ ಇಷ್ಟ.

ಪಾರಿಜಾತ : ವಿಷ್ಣುವಿಗೆ ನೆಚ್ಚಿನ ಹೂ ಎಂದರೆ ಪಾರಿಜಾತ. ಸೂರ್ಯನಾರಾಯಣನಿಗೆ ಪಾರಿಜಾತ ಹೂವನ್ನು ಅರ್ಪಿಸುವುದರಿಂದ ಎಂತಹ ಆರೋಗ್ಯ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ. ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತದೆ. ತಾವರೆ ಹೂವು: ತಾವರೆ ಹೂವು ಲಕ್ಷ್ಮಿಗೆ ಪ್ರಿಯವಾದ ಹೂವಾಗಿದೆ. ಶ್ರಾವಣ ಮಾಸದ ಶುಕ್ರವಾರಗಳಲ್ಲಿ ತಾವರೆ ಹೂವನ್ನು ಲಕ್ಷ್ಮಿದೇವಿಗೆ ಅರ್ಪಿಸುವುದರಿಂದ ಲಕ್ಷ್ಮಿದೇವಿಯ ಕೃಪೆಗೆ ಪಾತ್ರರಾಗುತ್ತೀರಿ. ಬುಧವಾರ ಬಿಳಿ ತಾವರೆ ಹೂವು ಸಿಕ್ಕಿದರೆ ಪೂಜಿಸಿ ಒಳ್ಳೆಯದಾಗುತ್ತದೆ. ಕೇದಿಗೆ ಹೂವನ್ನು ಬಳಸಿದರೆ ಒಳ್ಳೆಯದು ಮತ್ತು ಸಂಪಿಗೆ ಹೂವನ್ನು ಬಳಸಿದರೆ ಆ ಮನೆಯಲ್ಲಿ ಸಂಮೃದ್ಧಿ ಹೆಚ್ಚಾಗುತ್ತದೆ.

Leave a Comment