ದೇವರುತಿಳಿಸುವ 9 ಸಂಕೇತಗಳು

ನಾವು ಈ ಲೇಖನದಲ್ಲಿ ದೇವರು ತಿಳಿಸುವ 9 ಸಂಕೇತಗಳು ಯಾವುದು ಎಂದು ತಿಳಿಯೋಣ .
ದೇವರು ನಮ್ಮೊಂದಿಗೆ ಏನನ್ನಾದರೂ ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂದು ನಮಗೆ ತಿಳಿಸುವ 9 ಸಂಕೇತಗಳು…ನಮ್ಮ ಮುಂದೆ ನಮ್ಮನ್ನು ಸದಾ ರಕ್ಷಿಸಲು ದೇವದೂತರಂತೆ ಅಶ್ವಿನಿ ದೇವತೆಗಳು ಇರುತ್ತಾರೆ. ಹಾಗೆ ಇದ್ದು ನಮ್ಮನ್ನು ಮುನ್ನಡೆಸುತ್ತಾರೆ . ಎಂದು ಹಿರಿಯರು ಹೇಳುವುದುಂಟು .ಇನ್ನು ಸಾಮಾನ್ಯವಾಗಿ ಹೀಗೆ ನಮ್ಮ ಹಿಂದೆ ಈ ದೇವತೆಗಳು ಇದ್ದಾರೆ ಅನ್ನೋದಕ್ಕೆ

ಈ 9 ಸಂಕೇತಗಳು ನಮಗೆ ನಮ್ಮನ್ನು ಮುಂದೆ ನಡೆಸಲು ನಮ್ಮೊಂದಿಗೆ ಇದ್ದಾರೆ ಎನ್ನುವ ಧೈರ್ಯವನ್ನು ನೀಡುತ್ತದೆ. ಈ ಸಂಕೇತಗಳಿಂದ ನಾವು ಈ ದೇವ ಧೂತರೂ ನಮ್ಮ ಹಿಂದೆ ಇದ್ದು. ನಮ್ಮನ್ನು ಮುನ್ನಡೆಸುತ್ತಿದ್ದಾರೆ ಎಂದು ತಿಳಿಯಬಹುದು . ಜೀವನದಲ್ಲಿ ಯಾವಾಗಲಾದರೂ ಯಾವುದೇ ಸಮಸ್ಯೆಗಳು ಬಂದಾಗ ಅಥವಾ ಸೋಲು ಅನುಭವಿಸಿದಾಗ ನಮ್ಮೊಂದಿಗೆ ಯಾರಾದರೂ ನಮ್ಮ ಆಪ್ತರು ಇರಬೇಕು ಎಂದು ಬಯಸುವುದು ಸಹಜ. ಆಪತ್ಕಾಲದಲ್ಲಿ ಆಗುವವನನ್ನು ಸ್ನೇಹಿತ ಎನ್ನುತ್ತಾರೆ.

ಹೌದು,ನಮ್ಮೊಂದಿಗೆ ಕಷ್ಟ ಕಾಲದಲ್ಲಿ ಇರುವಂತವರೆ ನಿಜವಾದ ಆಪ್ತರು ಆಗಿದ್ದರು .ಈ ಅಶ್ವಿನಿ ದೇವತೆಗಳು ಈ ದೇವದೂತರಂತೆ ನಮ್ಮನ್ನು ಸದಾಕಾಲ ರಕ್ಷಿಸುತ್ತಾರೆ..ಅದೃಷ್ಟ ದೇವತೆಯರಂತೆ ಕಷ್ಟಗಳು ಬಂದಾಗ ದುರದೃಷ್ಟದಂತೆ ಸಂಕೇತಗಳು ನೀಡುತ್ತಾರೆ. ಮುಖ್ಯವಾಗಿ ಅದೃಷ್ಟ ಕೂಡಿ ಬಂದಾಗ ಅವುಗಳ ಸಂಕೇತ ಈ ಒಂಬತ್ತು ರೀತಿಯಲ್ಲಿರುತ್ತದೆ ಎಂದು ಹೇಳುವುದುಂಟು . ಮುಖ್ಯವಾಗಿ ಅದೃಷ್ಟ ನಿಮಗೆ ಒಲಿದು ಬಂದರೆ, ಅದೃಷ್ಟ ನಮಗೆ ಯಾವ ರೀತಿ ಸಹಾಯವನ್ನು ಒದಗಿಸುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಈ ಸಂಕೇತಗಳು ಇನ್ನೂ ಹಾಗಾದರೆ ಯಾವ ಸಂಕೇತಗಳಿಂದ ದೇವತೆಗಳು ನಮ್ಮ ಹಿಂದೆ ನಮ್ಮನ್ನು ಮುನ್ನಡೆಸುತ್ತಾರೆ ಎನ್ನುವುದನ್ನು ನೋಡುವುದಾದರೆ ….

1.ಮೊದಲಿಗೆ ನಾವು ನಮಗೆ ತಿಳಿಯದೇ ನಮ್ಮ ಕಣ್ಣ ಮುಂದೆ ಬಣ್ಣಗಳು ಅಂದರೆ ಕಾಮನ ಬಿಲ್ಲಿನ ಬಣ್ಣಗಳು ಹಾದು ಹೋದಾಗ ಅವು ಒಂದು ಶುಭ ಸೂಚನೆಯನ್ನು ನೀಡುತ್ತವೆ . ನಿರ್ದಿಷ್ಟವಾದ ಸಮಯ ನಿರ್ದಿಷ್ಟ ವಾದ ಕಾಲದಲ್ಲಿ ಇವುಗಳು ಕಾಣಸಿಕೊಳ್ಳುವುದಿಲ್ಲ. ಆದರೆ ಗೊತ್ತಿಲ್ಲದಂತೆ ಅವು ಕಣ್ಣ ಮುಂದೆ ಸುಳಿದು ಹೋದಾಗ ನಮಗೆ ಶುಭ ಶಕುನ ಏರ್ಪಡುತ್ತದೆ. ಶುಭ ಸಂಕೇತ ಅದರಿಂದ ದೊರೆಯುತ್ತದೆ. ಇದರಿಂದ ಆ ಸಂಧರ್ಭ ನೀವು ಯಾವುದೇ ಕೆಲಸ ಮಾಡಿದರು ಕೂಡ ಮುನ್ನಡೆಯಲು ಯಶಸ್ವಿಯಾಗಲು ಸಹಾಯ ಒದಗಿಸುತ್ತದೆ.

2.ಮೇಲಿಂದ ಅತಿ ಹಗುರವಾದ ಹತ್ತಿ ಅಥವಾ ಗುಬ್ಬಿಯ ರೆಕ್ಕೆಗಳು ಬಂದು ನಮ್ಮ ಮೈ ಮೇಲೆ ಬಿದ್ದರೆ , ಅದು ಶುಭ ಸಂಕೇತ ಎಂದು ಹೇಳಲಾಗುತ್ತದೆ. ನೀವು ಒಳ್ಳೆಯ ಕಾರ್ಯಕ್ಕಾಗಿ ಹೊರಗೆ ಹೋಗುವಾಗ ಇಂತಹ ಯಾವುದಾದರೂ ಶಕುನ ಜರುಗಿದರೆ ಅದು ಶುಭ ಸಂಕೇತ ಎಂದು ಹೇಳಲಾಗುತ್ತದೆ . ಶುಭಾ ಜರುಗುವುದಕ್ಕೆ ಅದು ಸಂಕೇತವನ್ನು ನೀಡುತ್ತದೆ.

3 . ನಿಮಗೆ ಸುತ್ತಮುತ್ತಲು ಸುಗಂಧ ಭರಿತ ವಾದ ವಸ್ತುಗಳು ಇಲ್ಲದಿದ್ದರೂ ಕೂಡ ಮೂಗಿಗೆ ಒಂದು ಸುಗಂಧ ವಾಸನೆ ಅಥವಾ ಪರಿಮಳ ಬರುತ್ತಾ ಇದ್ದರೆ , ನಿಮ್ಮ ಹಿಂದೆ ಮತ್ತು ನಿಮ್ಮ ಮುಂದೆ ದೇವತೆಗಳಿದ್ದು ನಿಮಗೆ ಕಾಯುತ್ತಾ ಇದ್ದಾರೆ , ಮತ್ತು ಶುಭವನ್ನು ಕೋರಿದ್ದಾರೆ ಎನ್ನುವುದರ ಸಂಕೇತ.

ನಿಮ್ಮ ಸುತ್ತ ಮುತ್ತಲು ಯಾರು ಇರೋದಿಲ್ಲ.ಆದರೆ ನೀವು ಒಬ್ಬರೇ ಇರುತ್ತೀರಿ. ನಿಮ್ಮ ಕಿವಿಗಳಿಗೆ ಮಾತ್ರ ಇರಿಸು ಪಿಸು ಮಾತುಗಳು ಕೇಳಿಸುತ್ತಾ ಇರುತ್ತದೆ . ಇದರ ಅರ್ಥ ನಿಮ್ಮ ಹಿಂದೆ ದೇವತೆಗಳು ಇದ್ದು ನಿಮ್ಮನ್ನು ಮುನ್ನಡೆಸುತ್ತಿದ್ದಾರೆ ಎಂದು ಅರ್ಥ . ಇದರಿಂದ ನೀವು ಅದೃಷ್ಟವಂತರು ದೇವತೆಗಳು ನಿಮ್ಮನ್ನು ಕಾಯುತ್ತಾರೆ ಇರುತ್ತಾರೆ ಎಂದು ಹೇಳಲಾಗುತ್ತದೆ.

5 .ಆಕಾಶ ನೀಲಿಯಾಗಿರುತ್ತದೆ . ಆಕಾಶದಲ್ಲಿ ಮೋಡಗಳನ್ನು ನೋಡಿ ನಾವು ಆನಂದಿಸುತ್ತೇವೆ. ಆದರೆ ಈ ಮೋಡಗಳಲ್ಲೆ ಒಮ್ಮೊಮ್ಮೆ ನಮಗೆ ತಿಳಿದು ತಿಳಿಯದೆ ನಾವು ನೋಡುವಾಗ ಹಕ್ಕಿಯ ಆಕಾರದಲ್ಲಿ ಅಥವಾ ನಮಗೆ ಇಷ್ಟವಾದ ಒಂದು ವಸ್ತುವಿನ ಆಕಾರದಲ್ಲಿ ಇಲ್ಲವೇ ಆನೆ ,ಕುದುರೆ ಅಥವಾ ಪಕ್ಷಿ ಇತ್ಯಾದಿ ಜಂತುಗಳ ರೂಪದಲ್ಲಿ ಕಂಡುಬರುವುದು ಶುಭ ಸಂಕೇತ ಅಂಥ ಹೇಳುತ್ತಾರೆ.

ಮನೆಯ ಅಂಗಳದಲ್ಲಿ ಗುಬ್ಬಚ್ಚಿ ಚಿಲಿಪಿಲಿ ಕೇಳಿದರೆ , ಅದು ಶುಭೆ ಸಂಕೇತವಾಗಿದೆ. ಒಳ್ಳೆಯ ದಿನಗಳು ಮುಂಬರುವ ಸಂಕೇತವಾಗಿದೆ . ಒಂದು ಒಳ್ಳೆಯ ದಿನ ಆಗಮಿಸುವ ಮುನ್ನ ನಿಮ್ಮ ಮನೆಯ ಅಂಗಳದಲ್ಲಿ ಅಥವಾ ಮೇಲ್ಚಾವಣಿಯ ಮೇಲೆ ಗುಬ್ಬಚ್ಚಿಯ ಚಿಲಿಪಿಲಿ ಕೇಳಿ ಬಂದರೆ ಅಥವಾ ಗುಬ್ಬಚ್ಚಿಗಳು ಬಂದುಹೋಗುತ್ತಾ ಇದ್ದರೆ, ಇದು ನಿಮಗೆ ಹೆಚ್ಚು ಶುಭವಾಗುತ್ತದೆ. ಗುಬ್ಬಚ್ಚಿ ನಿಮ್ಮ ಮನೆಯ ಅಂಗಳದಲ್ಲಿ ಹಾರಾಡುತ್ತಾ ಇದ್ದರೆ, ಅವುಗಳಿಗೆ ಆಹಾರ, ನೀರು ಇಡುವ ವ್ಯವಸ್ಥೆಯನ್ನು ಮಾಡಬೇಕು . ಇದರಿಂದ ನಿಮ್ಮ ಸಮೃದ್ಧಿ ಹೆಚ್ಚಾಗುತ್ತದೆ ಒಳ್ಳೆಯ ದಿನಗಳು ಶುಭವಾಗುತ್ತದೆ . ಹಾಗೆಯೇ ಎಲ್ಲಾ ರೀತಿಯ ಸಮಸ್ಯೆಗಳು ಬಗೆಹರಿಯುತ್ತದೆ.

ಎಕ್ಕದ ಗಿಡ ಕೂಡ ಶುಭ ಸಂಕೇತವಾಗಿದೆ. ವ್ಯಕ್ತಿ ಸಂಕಷ್ಟದ ಸಮಯದಲ್ಲಿ ಆತನ ಮನೆ ಮುಂದೆ ಎಕ್ಕದ ಗಿಡ ಬೆಳೆಯುತ್ತಿದ್ದರೆ, ಖಂಡಿತ ಇದು ಒಂದು ಒಳ್ಳೆಯ ದಿನದ ಸಂಕೇತವಾಗಿದೆ . ಎಕ್ಕದ ಗಿಡ ಮನೆಯ ಮುಂದೆ ಎಷ್ಟು ಸಮೃದ್ಧವಾಗಿ ಬೆಳೆಯುತ್ತದೆಯೋ ಅದೇ ರೀತಿಯಲ್ಲಿ ಆ ಪರಿವಾರವೂ ಕೂಡ ಅಷ್ಟೇ ಆರ್ಥಿಕವಾಗಿ ಸಮೃದ್ಧಿ ಹೊಂದುತ್ತದೆ.

8.ನಿಮ್ಮ ಮನೆಯ ಬಾಗಿಲಿಗೆ ಗೋಮಾತೆ ಪ್ರತ್ಯಕ್ಷವಾದರೆ , ಅಥವಾ ಅಲ್ಲಿಯೇ ಸುತ್ತಮುತ್ತ ತುಂಬಾ ಸಮಯವೂ ಅಲ್ಲೇ ಕಳೆದರೆ ಅದು ನಿಮಗೆ ಹೆಚ್ಚು ಶುಭವಾಗುತ್ತದೆ . ಹೀಗೆ ಗೋಮಾತೆ ಪದೇ ಪದೇ ನಿಮ್ಮ ಮನೆ ಅಂಗಳದಲ್ಲಿ ಆಗಮಿಸಿದರೆ ಅವುಗಳಿಗೆ ಆಹಾರ , ರೊಟ್ಟಿ , ಹಣ್ಣುಗಳನ್ನು ತಿನ್ನಿಸಬೇಕು . ಇದರಿಂದ ನಿಮಗೆ ವಿಶೇಷವಾದ ಲಾಭ ಮತ್ತು ಶುಭಕರವಾಗುತ್ತದೆ .

  1. ಪಾರಿವಾಳದಿಂದ ಶುಭವಾಗುತ್ತದೆ . ನಿಮ್ಮ ಮನೆಯ ವಾತಾವರಣದಲ್ಲಿ ಬಿಳಿ ಬಣ್ಣದ ಪಾರಿವಾಳ ಬಂದು ಕುಳಿತುಕೊಂಡರೆ , ಅಥವಾ ಗೂಡು ನಿರ್ಮಿಸಿಕೊಂಡಿದ್ದರೆ , ಇದು ಕೂಡ ಒಳ್ಳೆಯ ಸಂಕೇತವಾಗಿದೆ .

Leave a Comment