ಧನು ರಾಶಿ ಮೇ ಮಾಸ ಭವಿಷ್ಯ

ನಾವು ಈ ‌ ಲೇಖನದಲ್ಲಿ ಧನುಸ್ಸು ರಾಶಿಯವರ ಮೇ ಮಾಸ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ. ಸಾಡೇ ಸಾತಿ ಮುಗಿದ ನಂತರ ಶನಿ ಗ್ರಹವು ನಿಮ್ಮನ್ನು ದಡ ತಲುಪಿಸುತ್ತಿದೆ. ಬಹಳಷ್ಟು ವ್ಯಕ್ತಿಗಳಿಗೆ ಕೆಲಸ ಕಳೆದುಕೊಂಡಿರುವುದು ಕರೋನ ಪ್ರಭಾವದಿಂದ ನೋವನ್ನು ಅನುಭವಿಸಿರುವಂತಹವರು ಕೆಲಸ ಕಳೆದುಕೊಂಡಿರುವವರಿಗೆ ಕೆಲಸ ಸಿಕ್ಕಿರುತ್ತದೆ. ಕೆಲಸ ಕಳೆದುಕೊಂಡಿರುವವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಉದ್ಯೋಗ ಕಾರಕನಾಗಿರುವಂತಹ ಶನಿ ಗ್ರಹ ತೃತೀಯ ಭಾಗದಲ್ಲಿ ಇರುವಾಗ ಪದೇ ಪದೇ ಪ್ರಯತ್ನವನ್ನು ಮಾಡುವಂತ ತಾಕತ್ತನ್ನು ನಿಮಗೆ ಕೊಟ್ಟಿರುತ್ತಾನೆ .

ಧೈರ್ಯದಿಂದ ಮುನ್ನುಗ್ಗಿ ಎಷ್ಟು ಸಾಧ್ಯವೊ ಅಷ್ಟು ನಿಮ್ಮ ಶ್ರಮವನ್ನು ಹಾಕಿ. ವ್ಯವಹಾರಸ್ಥರ ಪರಿಸ್ಥಿತಿಯು ಅಷ್ಟೇನೂ ಚೆನ್ನಾಗಿರುವುದಿಲ್ಲ. ಹೆಚ್ಚಾಗಿ ಬಂಡವಾಳ ನೀವು ಹಾಕಿದ್ದರೆ ನಿಮ್ಮ ಪರಿಸ್ಥಿತಿ ಡೋಲಾಯಮಾನವಾಗಿರುತ್ತದೆ. ವ್ಯಾಪಾರದಲ್ಲಿ ಜೊತೆಗಾರರ ಜೊತೆ ಕಿರಿಕಿರಿ ಜಗಳ ಉಂಟಾಗಬಹುದು. ಕಿರಿಕಿರಿಯ ವಾತಾವರಣ ಇರುತ್ತದೆ . ಎಲ್ಲ ಮೂಲಗಳಿಂದಲೂ ಸಹ ನಿಮಗೆ ಪ್ರಶ್ನೆಯು ಎದರಾಗುತ್ತದೆ. ಏಕೆಂದರೆ ಜವಾಬ್ದಾರಿಯು ನಿಮ್ಮ ಮೇಲಿರುತ್ತದೆ.

ಮತ್ತಷ್ಟು ಹೊಸ ಜವಾಬ್ದಾರಿಗಳು ನಿಮಗೆ ಎದುರಾಗಲಿದೆ. ನಿಮಗೆ ಹೆಚ್ಚು ವಂತಹ ಜವಾಬ್ದಾರಿಗಳು ಒಳ್ಳೆಯ ಆದಾಯ ಒಳ್ಳೆ ಭವಿಷ್ಯಕ್ಕೆ ಭದ್ರವಾದ ಅಡಿಪಾಯವನ್ನು ಹಾಕಿ ಕೊಡುತ್ತದೆ. ನಿಮಗೆ ಎಷ್ಟೇ ಕಿರಿಕಿರಿ ಇರಲಿ ನಿಮ್ಮನ್ನು ಎಷ್ಟೇ ಜನರ ಪ್ರಶ್ನೆ ಮಾಡಿದರೂ ಸಹ ಯಾರೇ ಕೂಗಾಡಿದರು ಸಹ ನಿಮ್ಮ ಯಶಸ್ಸನ್ನು ತಡೆಯಲು ಯಾರ ಕೈಯಿಂದಲೂ ಸಾಧ್ಯವಿಲ್ಲ. ಇದಕ್ಕೆ ನಿಮ್ಮ ಪರಿಶ್ರಮದ ಅಗತ್ಯವಿದೆ. ಗುರು ಪರಿವರ್ತನೆಯಾಗಿ ಶುಭ ಸ್ಥಾನ ಪಂಚಮ ಸ್ಥಾನಕ್ಕೆ ಅಲ್ಲಿಂದ ಷಷ್ಠಕೆ ಅಂದರೆ ಮೇ ಒಂದಕ್ಕೆ ಪರಿವರ್ತನೆಯಾಗಲಿದೆ.

ಈ ಬೆಳವಣಿಗೆಯು ನಿಮಗೆ ನಕಾರಾತ್ಮಕ ಬದಲಾವಣೆಯನ್ನು ತಂದುಕೊಡುತ್ತದೆ. ನಿಮ್ಮ ಪರಿಸ್ಥಿತಿಯು ಡೋಲಾಯಮಾನವಾಗಿರುತ್ತದೆ. ರಾಶಿಯಾಧಿಪತಿ ಗುರುಗ್ರಹವು ಷಷ್ಟ ಭಾಗದಲ್ಲಿರುವುದರಿಂದ ಮೇ ತಿಂಗಳಿನಲ್ಲಿ ನಿಮಗೆ ಮಿಶ್ರಫಲ ದೊರಕುತ್ತದೆ. ಗುರು ಗ್ರಹವು ನಿಮ್ಮ ಷಷ್ಟ ಭಾಗದಲ್ಲಿರುವುದರಿಂದ ನಿಮಗೆ ಒಳ್ಳೆಯದನ್ನು ನೀಡುವುದಿಲ್ಲ . ಆದರೆ ನಿಮ್ಮ ಶತ್ರುಗಳಿಗೆ ಒಳ್ಳೆಯದಾಗುತ್ತದೆ. ಆದರೆ ಯೋಚನೆ ಮಾಡುವ ಅಗತ್ಯವಿಲ್ಲ. ವಿಶೇಷವಾಗಿ ನಿಮ್ಮ ಷಷ್ಟ ಭಾಗಕ್ಕೆ ಮೇ 14ನೇ ತಾರೀಕು ರವಿ ಗ್ರಹವು ಸಹ ಬರಲಿದೆ. ಇದು ಬಹಳ ಒಳ್ಳೆಯ ಪರಿವರ್ತನೆಯಾಗಿದೆ.

ನಿಮ್ಮ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾಗಿದ್ದರೆ ಅಂದರೆ ಅರ್ಧಕ್ಕೆ ನಿಂತು ಹೋಗಿದ್ದರೆ ರವೀಗ್ರಹವು ಅದನ್ನು ನಡೆಸಿಕೊಡುವುದಕ್ಕೆ ಏನು ವ್ಯವಸ್ಥೆ ಬೇಕು ಅದನ್ನು ಮಾಡುತ್ತದೆ. ದಿಡೀರ್ ಎಂದು ಯಶಸ್ಸು ನಿಮ್ಮದಾಗುತ್ತದೆ ಯಾರಾದರೂ ನಿಮ್ಮ ಕೆಲಸಕ್ಕೆ ಉದ್ದೇಶಪೂರ್ವಕವಾಗಿ ವಿಘ್ನ ಉಂಟು ಮಾಡುತ್ತಿದ್ದರೆ ಅಂತ ವ್ಯಕ್ತಿಗಳು ಪಕ್ಕಕ್ಕೆ ಸರಿಯಬೇಕಾಗುತ್ತದೆ. ನಿಮ್ಮ ಪ್ರಯತ್ನ ನಿಮ್ಮ ವರ್ಚಸ್ಸು ನಿಮ್ಮ ಶತ್ರುಗಳ ಗಮನಕ್ಕೆ ಬರುತ್ತದೆ. ನಿಮ್ಮ ಛಲ ಮತ್ತು ಶ್ರಮವನ್ನು ಕಂಡು ನಿಮ್ಮ ಶತ್ರುಗಳು ಹಿಂದೆ ಸರಿಯುತ್ತಾರೆ.

ನೀವು ಯೋಚನೆ ಮಾಡಬೇಕಾದಂತಹ ಪರಿಸ್ಥಿತಿ ಇಲ್ಲ. ವಿಶೇಷವಾಗಿ ರವಿಗ್ರಹವು ಷ್ಟಷಭಾವದಲ್ಲಿ ಚಿಂತೆ ತಳಮಳ ಅಸಹಾಯಕತೆಯನ್ನು ಸಹ ದೂರ ಮಾಡುತ್ತದೆ. ಮನಸ್ಸು ಪ್ರಶಾಂತತೆಯತ್ತ ತಿರುಗುತ್ತದೆ. ಬಹಳಷ್ಟು ರೋಗಗಳು ದೂರವಾಗುತ್ತದೆ. ಆತ್ಮವಿಶ್ವಾಸವು ಬರುತ್ತದೆ. ಸರ್ಕಾರಿ ಕೆಲಸ ಮಾಡುವವರಿಗೆ ಒಂದು ಮಟ್ಟದಲ್ಲಿ ಯಶಸ್ಸು ದೊರಕುತ್ತದೆ. ಗುರು ಮತ್ತು ರವಿ ಷಷ್ಟಭಾಗದಲ್ಲಿ ಇರುವುದರಿಂದ ಕೆಲಸದ ವಿಚಾರದಲ್ಲಿ ತುಂಬಾ ಯಶಸ್ಸು ತಂದುಕೊಡುತ್ತದೆ.

ಸಾಲದಲ್ಲಿ ಕೊಟ್ಟು ತೆಗೆದುಕೊಳ್ಳುವುದು ಮತ್ತು ವಸೂಲಾಗದೆ ಇರುವಂತಹ ಹಣ ಕಳೆದುಕೊಂಡಿರುವಂತಹ ಸಂಪತ್ತು ಇತ್ಯರ್ಥವಾಗದೇ ಇರುವಂತಹ ಪ್ರಕರಣ ಬಾರದೆ ಇರುವಂತಹ ದುಡ್ಡು ಇಂಥ ವಿಚಾರಗಳಲ್ಲಿ ಮಿಶ್ರಫಲಗಳು ಮತ್ತು ಮನಸ್ಸಿನಲ್ಲಿ ಜಿಜ್ಞಾಸೆಗಳು ಉಂಟಾಗುತ್ತದೆ. ಮತ್ತು ಡೋಲಾಯಮಾನವಾಗಿರುತ್ತದೆ. ನೀವು ಮರೆತು ಹೋದಂತಹ ವಿಚಾರಗಳನ್ನು ಕೆಲಸಗಳನ್ನು ತೆಗೆದುಕೊಂಡು ಮುಗಿಸುವಂತಹ ಆಲೋಚನೆ ನಿಮ್ಮ ಮನಸ್ಸಿಗೆ ಬರುತ್ತದೆ. ಬಹಳಷ್ಟು ಗ್ರಹಗಳು ನಿಮ್ಮ ಷ್ಟಷಭಾವದಲ್ಲಿ ಇರುತ್ತವೆ. ಕೆಲವು ವಿಚಾರಗಳಲ್ಲಿ ನೀವು ಪಡೆದುಕೊಳ್ಳುವಂತಹ ಅನುಭವ ಪಾಠ ಜೀವನದಲ್ಲಿ ಅದರ ಪ್ರಭಾವ ನಿಮ್ಮ ಮುಂದೆ ತುಂಬಾ ಪರಿಣಾಮ ಬೀರಲಿದೆ. ಇಡೀ ವರ್ಷದ ಗಮನ ಷಷ್ಠ ಭಾಗದಲ್ಲಿರುತ್ತದೆ. ಏಕೆಂದರೆ ನಿಮ್ಮ ರಾಶ್ಯಾಧಿಪತಿ ಗುರುವಾಗಿದ್ದಾನೆ. ತಾಳ್ಮೆಯ ಅವಶ್ಯಕತೆ ಇದೆ.

Leave a Comment