ಯಾವ ದಿನಾಂಕದಲ್ಲಿ ಹುಟ್ಟಿರುವಂತಹವರಿಗೆ ಸರ್ಕಾರಿ ಕೆಲಸ ಸಿಗುತ್ತದೆ? ಈ ಅವಕಾಶ ಯಾವ ದಿನಾಂಕದವರಿಗೆ ಹೆಚ್ಚು ಇರುತ್ತದೆ? ಸರ್ಕಾರಿ ಕೆಲಸ ಪಡೆಯುವುದು ಒಂದು ಕನಸು, ಆದರೇ ಕೆಲವರು ತುಂಬಾ ಕಷ್ಟಪಡುತ್ತಿರುತ್ತಾರೆ. ಮತ್ತೆ ಕೆಲವರಿಗೆ ತುಂಬಾ ಸುಲಭವಾಗಿ ಸರ್ಕಾರಿ ಕೆಲಸ ಸಿಗುತ್ತದೆ. ಎಷ್ಟೇ ಕೋಚಿಂಗ್ ತೆಗೆದುಕೊಂಡರೂ, ಪ್ರಯತ್ನ ಪಟ್ಟರೂ ಕೆಲಸ ಸಿಗುವುದಿಲ್ಲ.
ಇದಕ್ಕೆ ಏನು ಕಾರಣ ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಹುಟ್ಟಿದ ದಿನಾಂಕದಲ್ಲಿ ಸರ್ಕಾರಿ ಕೆಲಸ ಇದ್ದರೇ ಖಂಡಿತ ಕೆಲಸ ಸಿಗುತ್ತದೆ. ಕೆಲವರು ವ್ಯಾಪಾರ ಮಾಡುವ ನಂಬರ್ ನಲ್ಲಿ ಹುಟ್ಟಿರುತ್ತಾರೆ. ಇನ್ನು ಕೆಲವರು ವ್ಯಾಪಾರ ಮಾಡಬಹುದು ಮತ್ತು ಸರ್ಕಾರಿ ಕೆಲಸದಲ್ಲೂ ಸೇರಬಹುದು ಮತ್ತು ಕೆಲವರು ಖಾಸಗಿ ಕೆಲಸದಲ್ಲಿ ಮುಂದುವರೆಯುತ್ತಾರೆ.
ಯಾವ ದಿನಾಂಕದಲ್ಲಿ ಹುಟ್ಟಿದ್ದಾರೆ ಎಂಬುದಕ್ಕಿಂತ ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನ, ತಿಂಗಳು ವರ್ಷವನ್ನು ಕೂಡಿದರೆ ಬರುವುದೇ ಡಿಸ್ಟಿನಿ ಅಥವಾ ಭಾಗ್ಯಸಂಖ್ಯೆ ಎಂದು ಕರೆಯುತ್ತಾರೆ. ಈ ತರಹ ಕೂಡಿದ ಸಂಖ್ಯೆಯು 1,3,4,5 ಮತ್ತು 8 ಬಂದರೆ ಸರ್ಕಾರಿ ಕೆಲಸ ಸಿಗುವ ಅವಕಾಶ ಶೇ 100ರಷ್ಟು ಇರುತ್ತದೆ. ಆದರೇ 1,3, 5 ಸಂಖ್ಯೆಯವರಿಗೆ ಸರ್ಕಾರಿ ಕೆಲಸ ಸಿಗುವ ಅವಕಾಶ ಹೆಚ್ಚು ಇರುತ್ತದೆ.
ಆದರೆ 4,8 ಈ ಸಂಖ್ಯೆಯವರಿಗೆ ಸರ್ಕಾರಿ ಕೆಲಸ ಸಿಗಬೇಕಾದರೇ ತುಂಬಾ ಕಷ್ಟಪಡಬೇಕಾಗುತ್ತದೆ. ಇಂತಹವರು ಕೋಚಿಂಗ್ ತೆಗೆದುಕೊಂಡು ಪ್ರಯತ್ನಪಟ್ಟರೇ ಖಂಡಿತವಾಗಿ ಕೆಲಸ ಸಿಗುತ್ತದೆ. ಕೆಲವರು ಸ್ಕೂಲಿಗೆ ಸೇರಿಸುವಾಗ ದಾಖಲೆಯಲ್ಲಿ ದಿನಾಂಕವನ್ನು ಹಿಂದೆ ಮುಂದೆ ಮಾಡಿ ಸೇರಿಸುತ್ತಿದ್ದರೂ ಇಂತಹವರಿಗೂ ಸರ್ಕಾರಿ ಕೆಲಸ ಸಿಗುತ್ತದೆ. ದಿನಾಂಕವನ್ನು ಬದಲಾವಣೆಯನ್ನು ಮಾಡಿದ್ದರೂ ಅದು ಶಾಶ್ವತ ದಾಖಲೆಯಾಗಿರುವುದರಿಂದ ಇಂತಹವರಿಗೆ ಸರ್ಕಾರಿ ಕೆಲಸ ಸಿಗುತ್ತದೆ.
ನಾವು ಹೇಳಿದ ನಂಬರ್ ಹೊರತು ಪಡಿಸಿ ಬೇರೆ ನಂಬರ್ ನವರು ಎಷ್ಟೇ ಪ್ರಯತ್ನ ಪಟ್ಟರೂ ಸರಕಾರಿ ಕೆಲಸ ತುಂಬಾ ಕಷ್ಟಕರ. ಈಗ ಸರಕಾರಿ ಕೆಲಸದಲ್ಲಿರುವವರನ್ನು ಪರಿಶೀಲಿಸಿದರೇ ಶೇ 99ರಷ್ಟು ನಾವು ಹೇಳಿದ ಸಂಖ್ಯೆಗಳು ಇದ್ದೇ ಇರುತ್ತದೆ. ಕೆಲವರಿಗೆ ನಾವು ಹೇಳಿದ ಸಂಖ್ಯೆ ಇಲ್ಲದೇ ಇದ್ದರೂ ಬಂದಿದೆ ಎಂದರೆ ನೀವು ರಿಜಿಸ್ಟ್ರರ್ ನಲ್ಲಿ ದಾಖಲೆ ಮಾಡಿರುವ ದಿನಾಂಕ ಪರಿಶೀಲಿಸಿ, ಖಂಡಿತ ನಾವು ಹೇಳಿದ ನಂಬರ್ ಬರುತ್ತದೆ. ಕೆಲವೊಂದ ಪರಿಹಾರಗಳನ್ನು ಮಾಡಿಕೊಂಡರೆ ಸರ್ಕಾರಿ ಕೆಲಸ ಖಂಡಿತ ಸಿಗುತ್ತದೆ.