ಪಶುಪಕ್ಷಿ ಕೀಟಗಳು

0

ಮನೆಗೆ ಈ ರೀತಿಯಾದ ಪಶು ಪಕ್ಷಿ, ಕೀಟಗಳು ಬರುವುದು ಅತ್ಯಂತ ಶುಭದಾಯಕ ಹಿಂದೂ ಪುರಾಣಗಳ ಪ್ರಕಾರ ಪಶು ಪಕ್ಷಿಗಳನ್ನು ಪೂಜನೀಯ ಭಾವನೆಯಿಂದ ನೋಡುತ್ತಾರೆ. ಪಶು ಪಕ್ಷಿಗಳು ದೇವತೆಗಳ ವಾಹನಗಳ ರೂಪದಲ್ಲಿ ಶ್ರೇಷ್ಠವಾಗಿವೆ. ಇಂತಹ ಪಶು ಪಕ್ಷಿಗಳು ಕೀಟಗಳು ನಮ್ಮ ಮನೆಗೆ ಬರುವುದು ಶುಭದ ಸಂಕೇತ. ಇವುಗಳ ಹಿಂದೆ ವೈಜ್ಞಾನಿಕ ಮತ್ತು ಶಾಸ್ತ್ರೀಯ ಕಾರಣವಿದೆ.

ಕೆಲವೊಂದು ಪಶು ಪಕ್ಷಿಗಳು ವಾತಾವರಣದಲ್ಲಿರುವ ನಕಾರಾತ್ಮಕ ಅಂಶಗಳನ್ನು ಪತ್ತೆ ಹಚ್ಚುತ್ತವೆ ಮತ್ತು ಆ ಶಕ್ತಿಯನ್ನು ಹಿಂಬಾಲಿಸುತ್ತಾ ಬೇರೆ ಬೇರೆ ಪ್ರದೇಶಗಳಿಗೆ ಹೋಗುತ್ತವೆ. ನಾವು ಸುಖ ಶಾಂತಿ ನೆಮ್ಮದಿಯನ್ನು ಹುಡುಕಿಕೊಂಡು ದೇವಸ್ಥಾನಗಳಿಗೆ ಹೋಗುತ್ತೇವೆ. ಅದೇ ರೀತಿ ಪಶುಪಕ್ಷಿಗಳು ಸಕಾರಾತ್ಮಕತೆ ಇರುವ ಸ್ಥಳಕ್ಕೆ ಹೋದಾಗ ಅಲ್ಲಿ ನೆಮ್ಮದಿಯ ಅನುಭವವಾಗುತ್ತದೆ. ಆದ ಕಾರಣ ಯಾವ ರೀತಿ ಮನೆಗಳಿಗೆ ಪ್ರವೇಶ ಮಾಡುತ್ತವೆ ತಿಳಿಯೋಣ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯನ್ನು ಯಾವಾಗಲೂ ಶುದ್ಧವಾಗಿ ಪವಿತ್ರವಾಗಿಟ್ಟುಕೊಳ್ಳಬೇಕು. ನಕಾರಾತ್ಮಕ ಶಕ್ತಿಯನ್ನು ಹರಡುವಂತಹ ಪಶು ಪಕ್ಷಿ ಕೀಟಗಳನ್ನು ಯಾವಾಗಲೂ ದೂರವೇ ಇಡಬೇಕು. ಇಲ್ಲವಾದರೆ ಮನೆಯ ವಾತಾವರಣ ಅಶುಭವಾಗುತ್ತದೆ ಮತ್ತು ಮನೆಯ ಆರ್ಥಿಕ ಸ್ಥಿತಿಯ ಮೇಲೆ ತುಂಬಾ ಪರಿಣಾಮ ಬೀರುವುದು. ಉನ್ನತಿ ಕುಂಠಿತವಾಗುವುದು. ಶಾಸ್ತ್ರದ ಪ್ರಕಾರ ಕೆಲವು ಕೀಟಗಳು ಶುಭದ ಸಂಕೇತವಾಗಿವೆ.

ಶಂಖದ ಹುಳು- ಈ ಹುಳು ಬರುವುದ ಮತ್ತು ಗೋಡೆಯ ಮೇಲೆ ಏರುವುದು ಶುಭದ ಸಂಕೇತವಾಗಿದೆ. ದೊಡ್ಡ ದೊಡ್ಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು.

ಕಪ್ಪು ಇರುವೆ- ಇವು ಮನೆಯಲ್ಲಿದ್ದರೆ ಸುಖ ಸಮೃದ್ಧಿ ಉನ್ನತಿಯ ಸಂಕೇತ. ಅದರಲ್ಲಿಯೂ ಕಪ್ಪು ಇರುವೆಗಳು ಬಿಳಿ ತತ್ತಿ ಹೊತ್ತುಕೊಂಡು ಎದ್ದರೆ ಸಿರಿ ಸಂಪತ್ತು ಬರುವ ಸೂಚನೆ. ಇರುವೆಗಳಿಗೆ ಸಕ್ಕರೆಯನ್ನು ಹಾಕಿದರೆ ಶುಭ. ಅಕ್ಕಿ ಡಬ್ಬಿಯಿಂದ ಇರುವೆಗಳು

ಆಚೆ ಬರುವುದು ಕಂಡರೆ ಮುಂದಿನ ದಿನಗಳಲ್ಲಿ ಹಣದ ಹರಿವು ಹೆಚ್ಚಾಗುವುದು ಮತ್ತು ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಇರುವೆಗಳು ವೃತ್ತಾಕಾರವಾಗಿ ತಿರುಗಿದರೆ ಲಕ್ಷ್ಮಿ ಆಗಮನವಾಗಿದೆ ಎಂದರ್ಥ. ಇರುವೆಗಳು ಉತ್ತರ ದಿಕ್ಕಿನಿಂದ ಬರುವುದು ಶುಭ. ದಕ್ಷಿಣಕ್ಕೆ ಹೋಗುವುದು ಕಂಡರೆ ಅಶುಭ ಸಂಕೇತ. ಪೂರ್ವದಿಂದ ಬರುವುದು ಸಕಾರಾತ್ಮಕತೆ ಹೆಚ್ಚುವುದು ಮತ್ತು ಪಶ್ಚಿಮದಿಂದ ಬರುವುದು ಪ್ರಯಾಣ ಯೋಗ.

ಹಲ್ಲಿ-ಹಲ್ಲಿಯನ್ನು ಕಂಡರೆ ಶುಭದ ಸಂಕೇತ. ದೇವರ ಮನೆಯಲ್ಲಿ ಹಲ್ಲಿ ಇದ್ದರೆ ಸೌಭಾಗ್ಯದ ಪ್ರತೀಕ. ಧನಸಂಪತ್ತು ವೃದ್ಧಿಯಾಗುತ್ತದೆ. ಕಪ್ಪು ಬಣ್ಣದ ಹಲ್ಲಿ ಬರುವುದು ಅಶುಭ.ಚೇಳು- ಯಾರ ಮನೆಯಲ್ಲಿ ಚೇಳು ಹೊರಗೆ ಹೋದರೆ ಲಕ್ಷ್ಮಿಯು ಆಚೆ ಹೋದಂತೆ. ಹಬ್ಬ ಹರಿದಿನಗಳಲ್ಲಿ ಹಳದಿ ಬಣ್ಣದ ಚೇಳು ಮನೆಗೆ ಬಂದರೆ ಲಕ್ಷ್ಮಿಯ ಆಗಮನ.

ಬೋರಂಗಿ – ಮನೆಗೆ ಕಪ್ಪು ಬಣ್ಣದ ಬೋರಂಗಿ ಬರುವುದು ಶುಭದ ಸೂಚಕ ಮತ್ತು ಬೇಗನೆ ವಿವಾಹಕ್ಕೆ ಸಂಬಂಧಿಸಿದ ಸಮಾಚಾರ ಸಿಗುವುದು. ಅದನ್ನು ಹೊಡೆಯಬಾರದು ಏಕೆಂದರೆ ಇದು ಕೆಟ್ಟ ಸಮಯ ದೂರವಾಗಿರುವ ಸಂದೇಶಗಳನ್ನು ತಂದಿರುವುದು. ಅದು ಮನೆಗೆ ಬಂದು ಹೋದರೆ ಒಳ್ಳೆಯ ಜೀವನ ಪ್ರಾರಂಭವಾಗುವ ಸೂಚಕ.

ಚಿಟ್ಟೆಗಳು- ಇವುಗಳು ಮನೆಗೆ ಬರುವುದು ಶುಭ ಮತ್ತು ಸೌಭಾಗ್ಯದಾಯಕ. ಒಳ್ಳೆಯ ಶುಭ ಸಮಾಚಾರವನ್ನು ತರುವುದು. ಪದೇ ಪದೇ ಕಾಣಿಸಿದರೆ ಜೀವನದಲ್ಲಿ ಬೇಗನೆ ಶುಭ ಸುದ್ದಿಯನ್ನು ಕೇಳುವುದು ಮತ್ತು ಜೀವನದಲ್ಲಿ ಸುಖ ಸಂತೋಷವನ್ನು ತರುತ್ತವೆ.

ಜೇಡರ ಬಲೆ- ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಜೇಡರ ಬಲೆ ಕಟ್ಟುವುದು ಶುಭವಲ್ಲ. ಇದು ದರಿದ್ರತೆಯ ಮತ್ತು ಸೋಮಾರಿತನದ ಸಂಕೇತ. ಇವು ಜೀವನಕ್ಕೆ ಸಂಕಟ ಮತ್ತು ದರಿದ್ರತೆಯನ್ನು ತರುತ್ತವೆ. ಇದರಿಂದಾಗಿ ಲಕ್ಷ್ಮಿದೇವಿಯ ಕೋಪಕ್ಕೆ ಗುರಿಯಾಗುತ್ತೇವೆ. ಆದ ಕಾರಣ ಜೇಡರ ಬಲೆ ಕಟ್ಟದಂತೆ ಎಚ್ಚರ ವಹಿಸಬೇಕು, ಸ್ವಚ್ಛವಾಗಿಟ್ಟುಕೊಳ್ಳಬೇಕು.

ಜೇನುಹುಳು- ದುರಾದೃಷ್ಟಕ್ಕೆ ಸೂಚಕ. ಇದು ಮನೆಯಲ್ಲಿ ಕಟ್ಟಿದರೆ ಅಶುಭ. ಜೀವನದಲ್ಲಿ ಬಹಳ ಕಷ್ಟಗಳನ್ನು ಅನುಭವಿಸಬೇಕಾಗುವುದು. ಇದು ಅಪಾಯಕಾರಿಯೂ ಹೌದು. ಗೂಡು ಕಟ್ಟಲು ಪ್ರಾರಂಭಿಸಿದ ತಕ್ಷಣವೇ ತೆಗೆಯುವುದು ಒಳ್ಳೆಯದು.

ಇಲಿಗಳು- ಇವುಗಳು ಮನೆಯಲ್ಲಿದ್ದರೆ ಜನರ ಬುದ್ಧಿಯ ವಿನಾಶವನ್ನು ಮಾಡುವವು. ಗಣೇಶನ ವಾಹನವಾದರೂ ಇವು ಅಶುಭಕರವಾಗಿವೆ. ರೋಗವನ್ನು ಹರಡುವ ಕೆಲಸವನ್ನು ಮಾಡುತ್ತವೆ ಮತ್ತು ವಾತಾವರಣ ದೂಷಿತ ಮಾಡುವವು. ಇವು ನಷ್ಟಕಾರಕವೂ ಹೌದು.

Leave A Reply

Your email address will not be published.