ಇವ್ರನ್ ಲವ್ ಮಾಡದೋರೇ ಇಲ್ಲ!

0

ನಾವು ಈ ಲೇಖನದಲ್ಲಿ ಈ ರಾಶಿಯವರನ್ನು ಇಷ್ಟ ಪಡದೇ ಇರುವವರು ಇಲ್ಲ . ಆ ರಾಶಿಗಳು ಯಾವುದು ಎಂಬುದನ್ನು ನೋಡೋಣ .ಈ ಪ್ರೀತಿ ಎನ್ನುವುದು ಒಂದು ಸುಂದರವಾದ ಭಾವನೆ ಆಗಿರುತ್ತದೆ . ಪ್ರತಿಯೊಬ್ಬ ವ್ಯಕ್ತಿಗೂ ಪ್ರೀತಿ ಬೇಕೇ ಬೇಕು . ಪ್ರತಿಯೊಬ್ಬರು ಜೀವನದಲ್ಲಿ ಯಾರನ್ನಾದರೂ ಒಂದು ಸಲ ಪ್ರೀತಿಸಿಯೇ ಇರುತ್ತಾರೆ . ಅದಕ್ಕೆ ಸಂಬಂಧಿಸಿದಂತೆ ಪ್ರೀತಿ ಪ್ರೇಮದ ವಿಚಾರದಲ್ಲಿ ಯಾವ ರಾಶಿಯವರು ಲಕ್ಕಿ ಮತ್ತು ಯಾವ ರಾಶಿಯವರಿಗೆ ಪ್ರೀತಿ ಸಿಗುವುದಿಲ್ಲ ಎಂಬುದನ್ನು ಲೇಖನದಲ್ಲಿ ನಾವು ನೋಡೋಣ .

ಮೊದಲನೆಯದಾಗಿ ನಾವು ನ್ಯಾಯ ನೀತಿ ಸತ್ಯದ ಪರವಾಗಿ ನಿಂತು ಹೋರಾಡುವ ತುಲಾ ರಾಶಿಯ ಬಗ್ಗೆ ನೋಡೋಣ . ಯಾಕೆಂದರೆ ತುಲಾ ರಾಶಿಯವರು ಈ ಪಟ್ಟಿಯಲ್ಲಿ ಮೊದಲನೇಯ ವರಾಗಿರುತ್ತಾರೆ .ಶುಕ್ರ ಅಧಿಪತಿಯಾಗಿ ಇರುವುದರಿಂದ ಇವರದು ಆಕರ್ಷಕ ವ್ಯಕ್ತಿತ್ವ ಆಗಿರುತ್ತದೆ .ಮತ್ತೆ ಇವರು ನೋಡುವುದಕ್ಕೆ ತುಂಬಾ ಸುಂದರವಾಗಿ ಇರುತ್ತಾರೆ .

ಮನಸ್ಸು ಕೂಡ ಅಷ್ಟೇ ಶುದ್ಧವಾಗಿರುತ್ತದೆ . ಸೌಂದರ್ಯದ ವಿಚಾರದಲ್ಲಿ ತುಂಬಾ ಹೆಮ್ಮೆ ಇರುತ್ತದೆ . ಇವರ ಸೌಂದರ್ಯವನ್ನು ಆರಾಧಿಸುವ ಜನರು ಕೂಡ ಕಡಿಮೆ ಇರುವುದಿಲ್ಲ . ಎಲ್ಲೇ ಗಲಾಟೆ ಅಥವಾ ಗದ್ದಲ ನಡೆಯುತ್ತಿದ್ದರು ಅಲ್ಲಿ ಶಾಂತಿ ಸಂಧಾನ ನಡೆಸಲು ಮುಂದೆ ಹೋಗುತ್ತಾರೆ . ಒಂದು ಸಮತೋಲನವನ್ನು ಕಾಪಾಡಲು ಇವರು ಹೆಚ್ಚಿನ ಪಾತ್ರ ವಹಿಸುವುದರಿಂದ ಜನರು ತುಲಾ ರಾಶಿಯವರನ್ನು ಹೆಚ್ಚಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ .

ಸರಿ ತಪ್ಪುಗಳನ್ನು ವಿಮರ್ಶೆ ಮಾಡುವಲ್ಲಿ ಜನರು ಇವರ ಮಾತನ್ನು ಕೇಳಿ ಮುಂದುವರಿಯುತ್ತಾರೆ . ಜನ ಮೆಚ್ಚುವ ಹಾಗೆ ತೀರ್ಪು ಕೊಡುವುದರಲ್ಲಿ ಮತ್ತು ತಮ್ಮ ಸುತ್ತಮುತ್ತಲಿನ ಜನರು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ತಿಳುವಳಿಕೆ ಕೊಡುವುದರಲ್ಲಿ ಇವರು ಹಿಂಜರಿಯೋದಿಲ್ಲ . ಇವರ ಸಲಹೆ ಸೂಚನೆಗಳು ಚೆನ್ನಾಗಿರುತ್ತದೆ . ಮತ್ತೆ ತಮ್ಮ ಪ್ರೀತಿ ಪಾತ್ರರಾದವರ ಬಗ್ಗೆ ತುಂಬಾ ಕಾಳಜಿಯನ್ನು ವಹಿಸುತ್ತಾರೆ . ತಮಗೆ ಪರಿಚಯ ಇಲ್ಲದವರನ್ನು ಕೂಡ

ಗಮನಹರಿಸುವುದರಿಂದ ಇವರು ಹೆಚ್ಚಿನ ಗೌರವವನ್ನು ಪಡೆಯುತ್ತಾರೆ . ಎರಡನೇ ರಾಶಿ ಆದ ರಾಜಸ್ಥಾನದಲ್ಲಿ ಇರುವ ಸಿಂಹ ರಾಶಿಯ ಬಗ್ಗೆ ನೋಡೋಣ .ಇವರ ಗತ್ತು ಗಾಂಭೀರ್ಯ ಆಕರ್ಷಕ ಗುಣ ಸೌಂದರ್ಯದಿಂದಲೇ ಇವರ ಗಮನ ಸೆಳೆಯುತ್ತಾರೆ .ಇವರಿಗೆ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ . ಏನೇ ಕೆಲಸ ಕೊಟ್ಟರು ಮಾಡುತ್ತೇನೆ ಎಂಬ ಛಲ ಇರುತ್ತದೆ. ಸೌರವ್ಯೂಹಕ್ಕೆ ಕೇಂದ್ರ ಈ ಸಿಂಹ ರಾಶಿಗೆ ಅಧಿಪತಿಯಾಗಿರುವ

ಸೂರ್ಯ . ಹಾಗಾಗಿ ಸೂರ್ಯನ ರಾಶಿಯಲ್ಲಿ ಹುಟ್ಟಿದ ಜನಕ್ಕೆ ತಾವು ಕೂಡ ಕೆಂದ್ರ ಬಿಂದು ಆಗಬೇಕು ಎಂಬ ಆಸೆ ಇರುತ್ತದೆ . ಅದಕ್ಕೆ ತಕ್ಕ ಹಾಗೆ ಇವರು ಹೊಳೆಯುತ್ತಿರುತ್ತಾರೆ. ಇವರ ಆಕರ್ಷಕ ಗುಣವನ್ನು ನೋಡಿ ಜನರು ಇಷ್ಟ ಪಡುತ್ತಾರೆ . ಇವರು ನಾಯಕನ ಸ್ಥಾನದಲ್ಲಿ ನಿಂತು ಮಾರ್ಗದರ್ಶನವನ್ನು ನೀಡುತ್ತಾರೆ . ಎಲ್ಲಾ ವಿಚಾರದಲ್ಲೂ ಸಲಹೆ ಸೂಚನೆಗಳನ್ನು ನೀಡಿ ಮುಂದುವರೆಸಿಕೊಂಡು ಹೋಗುತ್ತಾರೆ . ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ವಿಶೇಷವಾದ ಗುಣ ಇರುತ್ತದೆ .

ಅದನ್ನ ಬೆಳಕಿಗೆ ತಂದು ಒಂದು ಒಳ್ಳೆಯ ಭವಿಷ್ಯ ಕಟ್ಟಿಕೊಡುವ ಗುಣ ಈ ರಾಶಿಯವರಿಗೆ ಇರುತ್ತದೆ . ಅಂದರೆ ತಾವು ಬೆಳೆಯುವುದರ ಜೊತೆಗೆ ಬೇರೆಯವರನ್ನು ಕೂಡ ಬೆಳೆಸುವ ಗುಣ ಇವರಲ್ಲಿ ಇರುತ್ತದೆ . ಇವರನ್ನು ನೆನಪಿನಲ್ಲಿ ಇಟ್ಟು ಕೊಳ್ಳುವುದಕ್ಕೆ ಜನರಿಗೆ ಮುಖ್ಯವಾದ ಕಾರಣ ಇದೆ ಆಗಿರುತ್ತದೆ . ಆತ್ಮವಿಶ್ವಾಸ ಹೆಚ್ಚಾಗಿರುವುದರಿಂದ ಜನರು ಇವರಲ್ಲಿ ಆಕರ್ಷಿತರಾಗುತ್ತಾರೆ .

ಮೂರನೇ ರಾಶಿ ಯಾವುದೆಂದರೆ, ಮೀನ ರಾಶಿ . ಇವರಲ್ಲಿ ಹೆಚ್ಚಾಗಿ ಸಹಾನುಭೂತಿ ಇರುತ್ತದೆ . ಯಾರೇ ಸಹಾಯ ಬೇಡಿ ಬಂದರೂ ಅವರಿಗೆ ಸಹಾಯ ಮಾಡುವ ಗುಣ ಇರುತ್ತದೆ . ಮನೆಗೆ ಅತಿಥಿಗಳು ಬಂದಾಗ ಒಳ್ಳೆಯ ಸತ್ಕಾರವನ್ನು ಕೂಡ ಈ ರಾಶಿಯವರು ಮಾಡುತ್ತಾರೆ . ಇವರು ಹೆಚ್ಚಾಗಿ ಕನಸು ಕಾಣುವ ವರು ಆಗಿರುತ್ತಾರೆ . ಅಂದರೆ ಇವರು ಕನಸು ಕಾಣುವುದರ ಜೊತೆಗೆ ಅದನ್ನು ನನಸು ಮಾಡುವ ಶಕ್ತಿಯನ್ನು ಕೂಡ ಹೊಂದಿರುತ್ತಾರೆ . ಇವರು ಜನರ ಜೊತೆಯಲ್ಲಿ ಚೆನ್ನಾಗಿ ಬೆರೆಯುತ್ತಾರೆ .

ಈ ರಾಶಿಗೆ ಅಧಿಪತಿ ಗುರು ಆಗಿರುವುದರಿಂದ ಬುದ್ಧಿವಂತರಾಗಿರುತ್ತಾರೆ . ಇವರು ಓದುವುದರಲ್ಲಿ ಮುಂದೆ ಇರುತ್ತಾರೆ .ಮತ್ತೆ ಯಾವುದು ಸರಿ ಯಾವುದು ತಪ್ಪುನಿರ್ಣಯ ಮಾಡುವ ಸಾಮರ್ಥ್ಯ ಮತ್ತು ತಿಳುವಳಿಕೆ ಇರುತ್ತದೆ ಎಂದು ಹೇಳಲಾಗುತ್ತದೆ . ಬೇರೆಯವರ ಮಾತಿಗೆ ತಲೆದೂಗುವ ಗುಣ ಇವರಲ್ಲಿ ಇರುತ್ತದೆ .ಆದ ಕಾರಣದಿಂದ ಜನರು ಈ ರಾಶಿಯವರನ್ನು ಬಹಳ ಇಷ್ಟಪಡುತ್ತಾರೆ ಎಂದು ಹೇಳಬಹುದು .

ನಾಲ್ಕನೇ ರಾಶಿ ಯಾವುದೆಂದರೆ ಮಿಥುನ ರಾಶಿ .ಈ ರಾಶಿಯ ಜನ ಮಾತಿನಿಂದಲೇ ಜನರ ಮನಸ್ಸನ್ನು ಗೆಲ್ಲುತ್ತಾರೆ . ಬುದ್ಧಿವಂತ ಬುಧ ಅಧಿಪತಿಯಾಗಿರುವುದರಿಂದ ಕೆಲಸದಲ್ಲಿ ಕೂಡ ತುಂಬಾ ಜೋರಾಗಿ ಇರುತ್ತಾರೆ . ಒಂದು ನಿಮಿಷ ಕೂಡ ಖಾಲಿ ಕೂತು ಅಭ್ಯಾಸ ಇರುವುದಿಲ್ಲ . ಒಂದಲ್ಲ ಒಂದು ಕೆಲಸದಲ್ಲಿ ಓಡಾಡುತ್ತಿರುತ್ತಾರೆ . ಪಾದರಸದ ಅಷ್ಟೇ ಚುರುಕಾಗಿ ಇರುತ್ತಾರೆ .

ಮಾತಲ್ಲೂ ಕೂಡ ಪರಿಚಯ ಇಲ್ಲದವರನ್ನು ಕೂಡ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾರೆ . ಜನರ ಜೊತೆ ಬೆರೆಯುವ ಗುಣ ಇರುತ್ತದೆ . ಒಂದು ವಿಷಯ ಇವರಿಗೆ ಕೊಟ್ಟರೆ ಅದರ ಬಗ್ಗೆ ಸರಾಗವಾಗಿ ಮಾತನಾಡುವ ಗುಣ ಇವರದಾಗಿರುತ್ತದೆ . ಈ ರಾಶಿಯವರು ಡ್ರಾಮಾ ಮಿಮಿಕ್ರಿ ಮಾಡುವುದರ ಮೂಲಕ ಬೇರೆಯವರನ್ನು ಖುಷಿ ಪಡಿಸುತ್ತಾರೆ . ಈ ರಾಶಿಯವರು ಜೊತೆಗೆ ಇದ್ದಾಗ ಸಮಯ ಕಳೆಯುವುದು ಕೂಡ ತಿಳಿಯುವುದಿಲ್ಲ . ಈ ರಾಶಿಯ ಜನರಿಗೆ ತುಂಬಾ ಕುತೂಹಲ ಹೆಚ್ಚಾಗಿರುತ್ತದೆ .

ಕಲಿಯುವ ಆಸಕ್ತಿ ಇವರಲ್ಲಿ ಹೆಚ್ಚಾಗಿರುತ್ತದೆ . ಆದ್ದರಿಂದ ಜನರು ಈ ಮಿಥುನ ರಾಶಿಯವರನ್ನು ತುಂಬಾ ಇಷ್ಟ ಪಡುತ್ತಾರೆ .ಆದ್ದರಿಂದ ಇವರು ಜನರಿಗೆ ಹೆಚ್ಚಾಗಿ ಪ್ರೀತಿ ಗೌರವ ನೀಡುತ್ತಾರೆ ಎಂದು ಹೇಳಲಾಗುತ್ತದೆ .
ಐದನೇ ರಾಶಿ ಯಾವುದೆಂದರೆ ಚಂದ್ರ ಅಧಿಪತಿಯಾಗಿರುವ ಚಂದ್ರ ಹೇಗೆ ಮಾತ್ರ ಕಾರಕನ ಹಾಗೋ ಈ ರಾಶಿಯವರಿಗೂ ತಾಯಿ ಮೇಲೆ ಪ್ರೀತಿ ಹೆಚ್ಚಾಗಿರುತ್ತದೆ . ಹಿರಿಯರ ಮೇಲೆ ಪ್ರೀತಿ ಗೌರವ ಹೆಚ್ಚಾಗಿರುತ್ತದೆ . ಹಾಗಾಗಿ ಜನರ ಮನಸ್ಸಲ್ಲಿ ಇವರು ಒಂದು ವಿಶೇಷವಾದ ಸ್ಥಾನ ಪಡೆದುಕೊಳ್ಳುತ್ತಾರೆ .

ಆ ರಾಶಿ ಯಾವುದೆಂದರೆ ಕಟಕ ರಾಶಿ . ಈ ಕಟಕ ರಾಶಿಯವರು ಹಿರಿಯರು ತಾಯಿ ಸಮಾನರಾದವರು ಅಥವಾ ಮಕ್ಕಳನ್ನು ಕೂಡ ತುಂಬಾ ಗೌರವಿಸುತ್ತಾರೆ .ಅವರ ಜೊತೆಯಲ್ಲಿ ಸಮಯ ಕಳೆಯುವ ಗುಣ ಇವರದಾಗಿರುತ್ತದೆ .ಒಂದು ಸಲ ಇವರು ಪ್ರೀತಿಯಲ್ಲಿ ಬಿದ್ದರೆ ಸಂಗಾತಿಗೆ ತುಂಬಾ ಸಮಯ ಕೊಡುವ ಗುಣ ಇವರದು ಆಗಿರುತ್ತದೆ . ಮತ್ತು ಅವರ ಆಕಾಂಕ್ಷೆಗೆ ಬೆಲೆ ಕೊಡುತ್ತಾರೆ .ಇವರು ತಾವು ಇಷ್ಟಪಡುವವರನ್ನು ರಕ್ಷಣೆ ಮಾಡುವುದರಲ್ಲಿ ಸದಾ ಮುಂದೆ ಇರುತ್ತಾರೆ .

ಇವರು ಬಹಳ ಶುದ್ಧ ಮನಸ್ಸಿನಿಂದ ಪ್ರೀತಿಯನ್ನು ತೋರಿಸುತ್ತಾರೆ .ಈ ರಾಶಿಯ ಚಿಹ್ನೆ ಏಡಿಯಾಗಿರುತ್ತದೆ . ಏಡಿಯ ಹಾಗೆ ಇವರು ಸ್ವಯಂ ರಕ್ಷಣೆಗೆ ಮೊದಲು ಇರುತ್ತಾರೆ . ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ . ಮನೆಯ ಮುಂದೆ ಬೇಡಿ ಬಂದವರಿಗೆ ಇವರು ಬರಿಗೈಯಲ್ಲಿ ವಾಪಸ್ ಕಳುಹಿಸುವುದಿಲ್ಲ .ಈ ಎಲ್ಲಾ ಕಾರಣದಿಂದ ಈ ರಾಶಿಯವರನ್ನು ಜನರು ತುಂಬಾ ಗೌರವಿಸುತ್ತಾರೆ ಮತ್ತು ಅಭಿಮಾನವನ್ನು ಇಟ್ಟುಕೊಂಡಿರುತ್ತಾರೆ .ಇವರು ಜನರ ಪ್ರೀತಿಗೂ ಕೂಡ ಪಾತ್ರರಾಗಿರುತ್ತಾರೆ ಎಂದು ಹೇಳಲಾಗುತ್ತದೆ .ಹೀಗೆ ಈ 5 ರಾಶಿಯವರು ಜನರ ಪ್ರೀತಿ ಗೌರವಕ್ಕೆ ಪಾತ್ರರಾಗಿ ಇರುತ್ತಾರೆ ಎಂದು ಹೇಳಬಹುದು .

Leave A Reply

Your email address will not be published.