ಮೀನ ರಾಶಿ: 5 ವರ್ಷದ ಗುರು ಫಲ 

0

ನಾವು ಈ ಲೇಖನದಲ್ಲಿ ದೇವಗುರು ದೇವತೆಗಳ ಕೋಶಾಧ್ಯಕ್ಷ ಅಂತ ಹೆಸರು ಇರುವ ಬೃಹಸ್ಪತಿ ಎಲ್ಲರ ವಿದ್ಯೆ , ಹಣಕಾಸಿನ ಸ್ಥಿತಿ, ಮದುವೆ ಹೀಗೆ ಎಲ್ಲಾ ವಿಷಯದಲ್ಲೂ ಪರಿಣಾಮ ಬೀರುತ್ತದೆ . ಎಲ್ಲಾ ರಾಶಿ ಗಳಿಗೂ ಒಮ್ಮೆ ಹೋಗಿ ಬರುವುದಕ್ಕೆ 12 ವರ್ಷ ಬೇಕಾಗುತ್ತದೆ . ಗಾತ್ರದಲ್ಲೂ ಕೂಡ ದೊಡ್ಡದು ಮತ್ತು ಕೈ ಎತ್ತಿ ಕೊಡುವುದರಲ್ಲೂ ಕೂಡ ದೊಡ್ಡದಾಗಿರುತ್ತದೆ .

ಗಜಕೇಸರಿ ಯೋಗದಲ್ಲೂ ಕೊಡುಗೆ ಇರುವ ಈ ಗುರುವಿನಿಂದ ಮೀನ ರಾಶಿಯವರಿಗೆ ಯಾವೆಲ್ಲ ಪ್ರಯೋಜನಗಳು ಇದೆ ಎಂದು ನೋಡುವ ಸಮಯ ಇದಾಗಿರುತ್ತದೆ . ಗುರು ನಿಮ್ಮ ರಾಶಿಯ ಅಧಿಪತಿ ಕೂಡ ಆಗಿರುತ್ತದೆ . ವಿಶೇಷವಾದ ಕೃಪೆ ಯಾವುದು ಎಂದು ನೋಡುವುದಾದರೆ ಐದು ವರ್ಷಗಳು ಗುರುವಿನಿಂದ ಯಾವ ಯಾವ ಲಾಭಗಳು ಇದೆ ಎಂತಹ ಫಲಗಳನ್ನು ಅನುಭವಿಸುತ್ತೀರಾ , ಎಂಬುದನ್ನು ನೋಡೋಣ .ಅಂಗೀರಸ ಪುತ್ರನಾದ ಈ ಗುರು ಒಳ್ಳೆಯ ಆರೋಗ್ಯವನ್ನು ಯಾವಾಗ ಕೊಡುತ್ತಾನೆ ಎಂಬುದನ್ನು ನೋಡೋಣ .

ನೀವು ಎಚ್ಚರಿಕೆಯಿಂದ ಮೀನಿನ ಹಾಗೆ ಹೆಜ್ಜೆ ಹಾಕುವ ಸಮಯ ಕೂಡ ಬಂದಿರುತ್ತದೆ . ಈ ಸಮಯದಲ್ಲಿ ಗುರುವಿನ ಅನುಗ್ರಹಕ್ಕೆ ಏನು ಮಾಡಬೇಕು ಎಂಬುದನ್ನು ನೋಡೋಣ . ಗುರುವಿನಿಂದ ಒಳ್ಳೆಯದಾಗುವುದು ಮೊದಲನೇ ಅವಧಿ ಎಂದರೆ ಏಪ್ರಿಲ್ 22 2023 ರಿಂದ ಶುರುವಾಗಿ ಮೇ ಒಂದು 2024ರ ವರೆಗಿನ ದಿನಗಳು . ಎರಡನೇ ಮನೆಯಾದ ಮೇಷ ರಾಶಿ ನಿಮಗೆ ಲಾಟರಿ ತಂದು ಕೊಡುತ್ತದೆ.

ಚಿನ್ನ ಸಂಪತ್ತು ಹಣಕಾಸಿನ ಕಾರಕನು ಆಗಿರುವ ಗುರು ಬೇಡಿದ ಅವರಿಗೆ ಮೊದಲು ಅನುಗ್ರಹಿಸುವುದು ಇದನ್ನೇ .ಆದರೆ ಗುರು ಒಲಿದಿರುವ ನಿಮಗೆ ಈ ಅವಧಿಯಲ್ಲೂ ಒಂದು ಕೈ ಹೆಚ್ಚಾಗಿ ಸಿಗುತ್ತದೆ ಎಂದು ಹೇಳಬಹುದು . ಮುಖ್ಯವಾಗಿ ಹಣಕಾಸು ಲಾಭ, ಆರ್ಥಿಕ ಸ್ಥಿತಿ ಚೆನ್ನಾಗಿರುವುದು ಇಂತಹುದಕ್ಕೆ ಸಂಬಂಧ ಪಟ್ಟಿರುತ್ತದೆ.
ಸಾಲ ಮಾಡುವುದು ತುಂಬಾ ಕಡಿಮೆ ಇರುತ್ತದೆ . ಅದೃಷ್ಟ ಸೌಭಾಗ್ಯ ಗಳು ನಿಮ್ಮ ಮನೆಯಲ್ಲೇ ತುಂಬಿರುವ ಶುಭ ಗಳಿಗೆ ಎಂದು ಹೇಳಬಹುದು .

ನೀವು ಕೆಲಸ ಮಾಡುವ ಕಡೆ ನಿಮ್ಮ ಗೌರವ ಉತ್ತುಂಗಕ್ಕೆ ಹೇರುವ ಸಾಧ್ಯತೆ ಇರುತ್ತದೆ .ಯಾವುದೇ ಯಶಸ್ಸು ಬೆಂಬಲ ಸುಮ್ಮನೆ ಕೂತರೆ ಬರುವುದಿಲ್ಲ . ಏನೇ ಗಳಿಸಬೇಕು ಎಂದರು ಕಷ್ಟ ಪಡಬೇಕು . ಶ್ರಮವಹಿಸಿ ದುಡಿಯುವುದನ್ನು ಗುರು ಹೇಳಿ ಕೊಡುತ್ತಾನೆ . ಬುದ್ಧಿ ಶಕ್ತಿಯಿಂದ ಆಗುವ ಎಲ್ಲಾ ಕೆಲಸಗಳನ್ನು ಶ್ರದ್ಧೆಯಿಂದ ಮಾಡುವುದನ್ನು ಗುರು ಇಲ್ಲಿ ಹೇಳಿ ಕೊಡುತ್ತಾನೆ . ಸ್ಪೂರ್ತಿಯಾಗಿ ಇರುವ ಅವಕಾಶವನ್ನು ಗುರು ಇಲ್ಲಿ ಕೊಡುತ್ತಾನೆ . ಕೆಲಸದಲ್ಲಿ ಒಳ್ಳೆಯ ಸ್ಥಾನಮಾನವನ್ನು ಕೂಡ ಸಿಗುವಂತೆ ಮಾಡುತ್ತಾನೆ .

ಹೆಚ್ಚಿನ ಅಭಿವೃದ್ಧಿ ಆಗುವ ಸೂಚನೆ ಇರುತ್ತದೆ .ನೀವು ಕೊರತೆ ಇಲ್ಲದ ಜೀವನವನ್ನು ನಡೆಸುತ್ತೀರಿ ಎಂದು ಹೇಳಬಹುದು . ನಿಮಗೆ ದಾರಿ ದೀಪದ ತರ ಗುರುವಿನ ಆಶೀರ್ವಾದ ನಿಮಗೆ ಸಿಗುತ್ತದೆ . ಭಯ ನಿವಾರಣೆ ಮಾಡುವುದಕ್ಕೆ ಗುರು ನಿಮಗೆ ಸಹಾಯವನ್ನು ಮಾಡುತ್ತಾನೆ .ಕೆಲಸದಲ್ಲಿ ಗೊಂದಲ ಕಂಡು ಬಂದಾಗ ಈ ಸಮಯದಲ್ಲಿ ನಿಮಗೆ ಪರಿಹಾರ ದೊರಕುತ್ತದೆ .

ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಲು ಕೂಡ ಸಹಾಯ ಮಾಡುತ್ತದೆ .ಮನೆ ಮಕ್ಕಳ ವಿಚಾರದಲ್ಲಿ ಈ ರಾಶಿ ಅವರಿಗೆ ಹೆಚ್ಚಿನ ಪ್ರೀತಿ ಗೌರವ ಇರುತ್ತದೆ . ಮನೆಯಲ್ಲಿ ಶಾಂತಿ ನೆಮ್ಮದಿ ಸಮೃದ್ಧಿ ನೆಲೆಸುವ ಈ ಸಮಯದಲ್ಲಿ ಆಸ್ತಿ ವಿಚಾರದಲ್ಲಿ ಮನಸ್ತಾಪಗಳು ಇದ್ದರೂ ದೂರವಾಗುವ ಸಾಧ್ಯತೆ ಇದೆ . ಕಂಕಣ ಭಾಗ್ಯ ಒದಗಿ ಬರಲು ಗುರು ಕಾರಣ ಕರ್ತನಾಗಿರುತ್ತಾನೆ .ಮಾಂಗಲ್ಯ ಕಾರಕ ಅನ್ನುವುದು ಜೀವನದಲ್ಲಿ ಸುಖ ಸಂತೋಷ ನೆಮ್ಮದಿ ಇದಕ್ಕೆ ಮೂಲ ಗುರು ಆಗಿರುತ್ತದೆ . ಗುರುವಿನಿಂದ ಹೀಗೆ ಒಳ್ಳೆಯ ಘಟನೆಗಳು ಮರು ಕಳಿಸುತ್ತಿರುತ್ತವೆ .

ಕಷ್ಟಗಳು ಮುಗಿದ ಮೇಲೆ ಸುಖ ಸಂತೋಷ ಬಂದೇ ಬರುತ್ತದೆ .ಏಪ್ರಿಲ್ 13 2022ಕ್ಕೆ ಗುರು ನಿಮ್ಮದೇ ರಾಶಿಗೆ ಪ್ರವೇಶ ಮಾಡಿ ಆಗಿದೆ .12 ವರ್ಷಗಳ ನಂತರ ಜನ್ಮ ಸ್ಥಾನದಲ್ಲಿ ಗುರು ಬರುವುದರಿಂದ ಹೆಚ್ಚಿನ ಲಾಭ ಆಗುವುದರ ಜೊತೆಗೆ ಸ್ವಲ್ಪ ಮಟ್ಟಿನ ಅಶುಭ ಕೂಡ ಇರುತ್ತದೆ . ಬೇರೆ ರಾಶಿಗೆ ಗುರು ಜನ್ಮ ಸ್ಥಾನಕ್ಕೆ ಬಂದಾಗ ತುಂಬಾ ಶುಭ ಎಂದು ಹೇಳುತ್ತಾರೆ .ಅನ್ನ ಕೊಟ್ಟ ನೆಲವನ್ನು ಬಿಡುವ ಸ್ಥಿತಿ ಬರಬಹುದು . ಹಣಕಾಸಿನ ತೊಂದರೆಗಳು , ಹೆಚ್ಚಿನ ಖರ್ಚು , ಅನಾರೋಗ್ಯ , ವಾದ ವಿವಾದಗಳು ಹೀಗೆ ಹಲವಾರು ರೀತಿಯ ಘಟನೆಗಳು ನಡೆಯುತ್ತವೆ .

ಸ್ವಲ್ಪ ಚೇತರಿಸಿಕೊಳ್ಳುವ ಹಾಗೆ ಮುಂದಿನ ಕಿರಿಕಿರಿ ಸರದಿ ಪ್ರಾರಂಭವಾಗುತ್ತದೆ .ಆದರೆ ಭಯ ಬೇಡ ತಾನೇ ರಾಶಿಯ ಅಧಿಪತಿ ಆಗಿರುವುದರಿಂದ ಮೀನ ರಾಶಿಯವರಿಗೆ ಅಷ್ಟೊಂದು ಕಷ್ಟ ಕೊಡುವುದಿಲ್ಲ ಎಂದು ಹೇಳಲಾಗಿದೆ .
ಕೆಲವರಿಗೆ ಸಾಲದಿಂದ ಮುಕ್ತಿ ಸಿಗುತ್ತದೆ .ದೇಶ ವಿದೇಶ ಪ್ರಯಾಣ ಮಾಡುವ ಸಂಭವ ಕೂಡ ಇರುತ್ತದೆ . ಅನುಕೂಲಕರ ಸಮಯ ಆಗಿರುತ್ತದೆ .

ಓದು ಬಿಟ್ಟಿರುವವರಿಗೆ ಈ ಸಮಯದಲ್ಲಿ ಮುಂದೆ ಓದಲು ಪ್ರೇರಣೆ ಯಾಗುತ್ತದೆ .ಒಟ್ಟಿನಲ್ಲಿ ಮಿಶ್ರಫಲ ಇದೆ ಎಂದು ಹೇಳಬಹುದು .ಮೇ 14 2025 ರಿಂದ ಜೂನ್ ಎರಡು 2026 ವರೆಗೆ ಮಿಥುನ ರಾಶಿಯಲ್ಲಿ ಇದ್ದಾಗಲೂ ಇದೇ ರೀತಿಯ ಮಿಶ್ರಫಲ ಅನುಭವ ಹೆಚ್ಚಾಗಿರುತ್ತದೆ .ದನಕರುಗಳು ನಾಯಿ ಯಾವುದೇ ಸಾಕು ಪ್ರಾಣಿಗಳ ಕೀಟಲೆ ಮಾಡುವುದಕ್ಕೆ ಹೋಗಬೇಡಿ . ಈ ಸಮಯದಲ್ಲಿ ತೊಂದರೆ ಕೂಡ ಆಗಬಹುದು .ಹಣಕಾಸಿನ ಮಟ್ಟದಲ್ಲಿ ಒಳ್ಳೆಯ ಸ್ಥಾನದಲ್ಲಿ ಇರುತ್ತಾರೆ .

ಮುಖ್ಯವಾಗಿ ಹುಷಾರಾಗಿ ಇರಬೇಕಾದ ಸಮಯ ಯಾವುದೆಂದರೆ ಮೇ ಒಂದು 2024 ರಿಂದ ಮೇ 14 2025ರ ಅವಧಿ .ಕೆಲವರು ಈ ಅವಧಿಯಲ್ಲಿ ಕಿತಾಪತಿ ಮಾಡಿ ನಿಮ್ಮ ಕಡೆಗೆ ಕೈ ತೋರಿಸುವ ತೊಂದರೆಗಳು ಇರುತ್ತದೆ . ಕೇವಲ ಹೊರಗಡೆ ಅಲ್ಲದೆ ಮನೆಯಲ್ಲೂ ಕೂಡ ನೆಂಟರ ಮಧ್ಯೆ ಸ್ನೇಹಿತರ ಮಧ್ಯೆ ಹುಳಿ ಹಿಂಡುವ ಜನರು ಇರುತ್ತಾರೆ . ಕೊಂಕು ತೆಗೆಯುವ ಜನರಿಂದ ದೂರ ಇರುವುದು ಒಳ್ಳೆಯದು .ಅಂದರೆ ಸಮಸ್ಯೆಗೆ ಅವರ ಹತ್ತಿರ ಉತ್ತರ ಇರುವುದಿಲ್ಲ .ಒಂದು ಉತ್ತರಕ್ಕೂ ಒಂದು ಸಮಸ್ಯೆಯನ್ನು ತರುತ್ತಾರೆ .

ಗುರು ಬಲ ಕಡಿಮೆ ಇದ್ದಾಗ ಹಣಕಾಸಿನ ಸ್ಥಿತಿ ಸ್ವಲ್ಪ ಹದಗೆಟ್ಟಿರುತ್ತದೆ . ಕಷ್ಟದ ಅನುಭವ ಹೆಚ್ಚಿನವರಿಗೆ ಆಗುತ್ತದೆ . ಹೆಚ್ಚಿನ ಕಷ್ಟಗಳನ್ನು ನೋಡದೆ ಒಳ್ಳೆಯದರ ಕಡೆಗೆ ಮನಸ್ಸನ್ನು ತೆಗೆದುಕೊಂಡು ಹೋಗಬೇಕು..ಗುರುವಿನ ಪರಿವರ್ತನೆ ಕೆಲವು ಸಲ ಒಳ್ಳೆಯ ಫಲ ನೀಡಿದರೆ ಕೆಲವು ಸಲ ಮಿಶ್ರಫಲ ನೀಡುತ್ತದೆ .ಹಾಗಂತ ತಲೆಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ .ಈ ಸಮಸ್ಯೆಗೆ ಒಂದು ಮಂತ್ರ ಇದ್ದೇ ಇರುತ್ತದೆ .ಸಮಯ ಸಿಕ್ಕಾಗ ಅದನ್ನು ಪಠಣೆ ಮಾಡುವುದರಿಂದ ಒಳ್ಳೆಯದಾಗುತ್ತದೆ .

ನಿಮ್ಮ ರಾಶಿಗೆ ಸಲಹೆ ಕೊಡುವ ಮಂತ್ರ ಯಾವುದೆಂದರೆ . ”ಹಂಸಾ ಬ್ಯಾಂ ಪರಿ ವೃತ್ತ ಆರ್ದಾ ಕಮಲೇ ಶುದ್ಧೇ ಜಗತ್ಕಾರಣಾಂ ವಿಶ್ವಾಕಾರ ಮನೇ ಕದೇ ಅನಿಲಯಂ ಸ್ವಚ್ಛಂಧ ಮಾನಂದ ಕಂ ಸರ್ವಾಧಾರ ಮಖಂಡ ಚಿತ್ಗ ನರಸಂ ಪೂರ್ಣ o ಅನಂತ o ಶುಭ೦ ಪ್ರತ್ಯಕ್ಷಾಕ್ಷರ ವಿಗ್ರಹಂ ಗುರುವರಂ ಧ್ಯಾಯೇ ದಿವಂ ಶಾಶ್ವತಂ ” .. ಸಮಯ ಇರುವಾಗ ಮತ್ತು ಕಷ್ಟ ಆಗುತ್ತಿರುವಾಗ ಭಕ್ತಿಯಿಂದ ಈ ಮಂತ್ರವನ್ನು ಪಠಣೆ ಮಾಡಿ .ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ .

ಗುರುವಿನ ಬಲ ಹೇಗೆ ಪ್ರೂ ಆಗುತ್ತದೆ ಎಂಬುದನ್ನು ನೋಡುವ ಸಮಯ ಇದಾಗಿರುತ್ತದೆ .ಜೂನ್ 2 .2026ಕ್ಕೆ ಕಟಕ ರಾಶಿಗೆ ಪ್ರವೇಶ ಮಾಡಿದ ಮೇಲೆ ಧನಾತ್ಮಕ ಚಿಂತನೆಗಳು ಶುರುವಾಗುತ್ತದೆ . ಹೊಸ ರೀತಿಯ ಬದಲಾವಣೆಗಳು ಜಗತ್ತನ್ನ ನೀವು ನೋಡುವ ದೃಷ್ಟಿಕೋನಗಳು ಇಂತಹ ಅನುಭವಗಳು ಒಂದೊಂದಾಗಿ ನಿಮ್ಮ ಗಮನಕ್ಕೆ ಬರುತ್ತವೆ .ಹಣಕಾಸಿನ ಅಭಿವೃದ್ಧಿ ಹೂಡಿಕೆ ಮಾಡಿರುವ ಹಣ ಒಳ್ಳೆಯ ಲಾಭದ ಜೊತೆಗೆ ಹಿಂತಿರುಗಿ ಬರುವುದು .ಮದುವೆಯಾದವರಿಗೆ ಸಂತಾನ ಸುಖ ಸೂಚನೆಗಳು ಹೆಚ್ಚಾಗಿ ಸಿಗುತ್ತವೆ .

ವಿದ್ಯಾರ್ಥಿಗಳಿಗೆ ಒಳ್ಳೆಯ ಅಂಕ ಗಳಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ .ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಳ್ಳೆಯ ಉತ್ತೇಜನ ಸಿಗುವುದರಿಂದ ಒಳ್ಳೆಯ ಫಲಿತಾಂಶ ಸಿಗುವ ನಿರೀಕ್ಷೆ ಇರುತ್ತದೆ .ಪ್ರಸಿದ್ಧಿ ಹೆಚ್ಚಾಗುತ್ತದೆ .ಪೂರ್ವ ಪುಣ್ಯಗಳ ಪ್ರತಿಫಲ ಸಿಗುವ ಸಮಯ ಇದಾಗಿರುತ್ತದೆ . ಸ್ವಾಭಾವಿಕವಾಗಿ ಒಳ್ಳೆಯ ಕೆಲಸದಿಂದ ಜನರಿಗೆ ಮಾದರಿಯಾಗುವ ಗುಣ ಇರುತ್ತದೆ ಗುರುವಿನಿಂದ ಒಳ್ಳೆಯ ಯಶಸ್ಸು ದೊರಕುತ್ತದೆ .ಋಣಾತ್ಮಕ ಚಿಂತನೆಗಳು ನಿಮ್ಮಿಂದ ದೂರವಾಗುತ್ತದೆ .ಆದಷ್ಟು ಧನಾತ್ಮಕ ಚಿಂತನೆಗಳು ಮಾಡುವುದರಿಂದ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ . ಖುಷಿಯನ್ನು ಹಂಚುವ ಜನರು ಈ ರಾಶಿಯವರು ಆಗಿರುತ್ತಾರೆ .

ಸತ್ಯವಂತರು ಪ್ರಾಮಾಣಿಕರು ಹಾಗೆ ಎಲ್ಲರ ನಂಬಿಕೆ ಗಳಿಸುವ ಜನರಲ್ಲಿ ನೀವು ಕೂಡ ಒಬ್ಬರಾಗಿರುತ್ತೀರಿ . ದೇವರ ಅನುಗ್ರಹ ನಿಮ್ಮ ಮೇಲೆ ಇರುತ್ತದೆ . ದೇಹದ ಬೆಳವಣಿಗೆ ಬುದ್ಧಿವಂತಿಕೆ ಮಾತು ಇವೆಲ್ಲವೂ ಕೂಡ ಗುರುವಿಗೆ ಸಂಬಂಧಪಟ್ಟರುತ್ತದೆ .ಆರೋಗ್ಯದ ಸಮಸ್ಯೆ ಕಾಡುವುದು ಬಹಳ ಕಡಿಮೆ . ಅಂಗೀರಸ ಪುತ್ರ ಮತ್ತು ಆರೋಗ್ಯ ಕಾರಕ ಕೂಡ ಹೌದು .ಶಾಂತ ರೀತಿ ಹಾಗೆ ಒಳ್ಳೆಯ ಮಾತನಾಡಿಸುವಲ್ಲಿ ಗುರುವಿನ ಪಾತ್ರ ಹೆಚ್ಚಾಗಿರುತ್ತದೆ . ಈ ಸಮಯದಲ್ಲಿ ಈ ರಾಶಿಯವರು ಇದ್ದ ಕಡೆ ಜಗಳ ತುಂಬಾ ಕಡಿಮೆ ಇರುತ್ತದೆ .ಇವೆಲ್ಲ ಗುರುವಿನ ಕೃಪೆಯಿಂದ ನಿಮಗೆ ಆಗುವ ಲಾಭಗಳು .

Leave A Reply

Your email address will not be published.