ಪೂಜೆಗೆ ಯಾವ ಸಮಯ ತುಂಬಾ ಒಳ್ಳೆಯದುಪೂಜೆಗೆ ಯಾವ ಸಮಯ ತುಂಬಾ….? ಬೆಳಗ್ಗೆ 4:30 ರಿಂದ 5:00 ಗಂಟೆ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡಿದರೆ ತುಂಬಾ ಒಳ್ಳೆಯದು.. ಬೆಳಿಗ್ಗೆ 9:00ಗೆ ಕೂಡ ಪೂಜೆ ಮಾಡಬಹುದು…
ಮಧ್ಯಾಹ್ನ 12:00 ಗಂಟೆಗೆ ಕೂಡ ಪೂಜೆ ಮಾಡಬಹುದು ಸಂಜೆ 4:30 ರಿಂದ 6 ಗಂಟೆಯೊಳಗೆ ಪೂಜೆ ಮಾಡಬಹುದು ಇದನ್ನು ಸಂಧ್ಯಾ ಪೂಜೆ ಎಂದು ಕರೆಯಲಾಗುವುದು….
ರಾತ್ರಿ 9 ಗಂಟೆಗೆ ದೇವರು ಮಲಗುತ್ತಾನೆ ಎಂದು ಹೇಳಲಾಗುವುದು, ಈ ಹೊತ್ತಿನಲ್ಲಿ ಮಾಡುವ ಪೂಜೆಗೆ ಶಯನ ಪೂಜೆ ಎಂದು ಕರೆಯಲಾಗುವುದು… ಪೂಜಾ ವಿಧಿಗಳೇನು? ಮೊದಲು ಸ್ನಾನ ಮಾಡಿ ದೇಹವನ್ನು ಸ್ವಚ್ಛ ಮಾಡಿ ಮಡಿ ಬಟ್ಟೆ ಧರಿಸಿ… ಹೆಗಲು ಸ್ನಾನವನ್ನಾದರೂ ಮಾಡಿರಲೇಬೇಕು…. ನಂತರ ಪೂ ರ್ವ ದಿಕ್ಕಿಗೆ ಮುಖ ಮಾಡಿ ನಿಂತು ಇಷ್ಟ ದೇವರನ್ನು ಮನಸ್ಸಿನಲ್ಲಿ ಧ್ಯಾನಿಸಬೇಕು.
ದೇವರ ಕೋಣೆಯನ್ನು ಸ್ವಚ್ಛ ಮಾಡಿ .ನಂತರ ಮೊದಲಿಗೆ ಗಣೇಶನ ಆರಾಧನೆಯೊಂದಿಗೆ ಪೂಜೆಯನ್ನು ಮಾಡಿ. ದೀಪ ಹಚ್ಚಿ, ಅಗರಬತ್ತಿ, ಧೂಪ ಹಚ್ಚಿಡಿ. ದೇವರಿಗೆ ಧಾನ್ಯಗಳು, ಹಣ್ಣುಗಳು, ನೈವೇದ್ಯ ಅರ್ಪಿಸಬಹುದು, ಈ ರೀತಿ ಸಾಮಾನ್ಯವಾಗಿ ವ್ರತದ ಸಂದರ್ಭದಲ್ಲಿ ಇಡಲಾಗುವುದು. ನಂತರ ದೇವರ ಮಂತ್ರಗಳನ್ನು ಪಠಿಸಿ ,ಧ್ಯಾನ ಮಾಡಿ. ಪೂಜೆ ಮಾಡುವಾಗ ಏನು ಮಾಡಬಾರದು?
ಸ್ನಾನ ಮಾಡದೆ ದೇವರ ದೀಪ ಹಚ್ಚಬಾರದು. ಸುಖಾಸನದಲ್ಲಿ ಕೂತು ಪೂಜೆ ಪ್ರಾರಂಭಿಸಿ, ಪೂಜೆ ಕೂತಾಗ ಆಗಾಗ ಎಂದು ಹೋಗಬೇಡಿ. ನಿಮ್ಮ ಮೊಬೈಲ್ ಸೈಲೆಂಟಿನಲ್ಲಿಡಿ. ದೇವರಿಗೆ ಬೆನ್ನು ಹಾಕಿ ಕೂತು ಪೂಜೆ ಮಾಡಬೇಡಿ. ಬರಿಗೈಯಲ್ಲಿ ದೇವರಿಗೆ ಏನು ಅರ್ಪಿಸಬೇಡಿ, ತಟ್ಟೆಯಲ್ಲಿಟ್ಟು ಅರ್ಪಿಸಿ ಒಂದು ದೀಪದಿಂದ ಮತ್ತೊಂದು ದೀಪ ಹಚ್ಚಬೇಡಿ ಹಬ್ಬದ ದಿನಗಳಲ್ಲಿ,ಶುಕ್ರವಾರ,
ಭಾನುವಾರ, 11, 12 ನೇ ಅಂದರೆ ಏಕಾದಶಿ ದ್ವಾದಶಿ ದಿನ ತುಳಸಿ ಎಲೆ ಕೀಳಬಾರದು.ಗಣೇಶ,ಲಕ್ಷ್ಮಿ ,ಸರಸ್ವತಿ ನಿಂತುಕೊಂಡಿರುವ ಮೂರ್ತಿ ಅಥವಾ ಫೋಟೋ ಬಳಸಬೇಡಿ. 11 ಇಂಚಿಗಿಂತ ಚಿಕ್ಕದಾದ ದೇವರ ಮೂರ್ತಿ ಬಳಸಿ. ಪೂಜಾ ಸಾಮಗ್ರಿ ನೀಟಾಗಿ ಇಡಿ ದಿನನಿತ್ಯದ ಪೂಜೆಯನ್ನು ಯಾರು ಮಾಡಬಹುದು? ಇವರೇ ಮಾಡಬೇಕು ಎಂಬ ಕಟ್ಟುನಿಟ್ಟಿನ ನಿಯಮವಿಲ್ಲ ,
ಮನೆಯಲ್ಲಿ ಪೂಜೆ ಯಾರು ಬೇಕಾದರೂ ಮಾಡಬಹುದು ,ಆದರೆ ಪೂಜೆ ಮಾಡುವವರು ಮಡಿಯಿಂದ ಇರಬೇಕು . ಬೆಳಿಗ್ಗೆ ಎದ್ದು ಸ್ನಾನ ಮಾಡಿದ ಬಳಿಕವಷ್ಟೇ ಪೂಜೆ ಮಾಡಬೇಕು. ಪೂಜೆಗೆ ಹೂಗಳನ್ನು ಅರ್ಪಿಸಿ, ಮಂತ್ರಗಳನ್ನು ಹೇಳಬೇಕು. ಮನೆಯಲ್ಲಿ ಒಬ್ಬರು ದೀಪ ಹಚ್ಚಿದ ಮೇಲೆ ಬೇರೆಯವರು ಹಚ್ಚಬಾರದು, ಅವರು ಬಂದು ಪ್ರಾರ್ಥಿಸಿ ಹೋಗಬಹುದು.
ಮನೆಯಲ್ಲಿ ಆರತಿ ಮಾಡುವಾಗ ಮನೆ ಮಂದಿಯಲ್ಲ ಬಂದು ಪ್ರಾರ್ಥಿಸಿದರೆ ಮನೆಗೆ ಮತ್ತಷ್ಟು ಒಳ್ಳೆಯದು. ಯಾರು ಮತ್ತು ಯಾವಾಗ ಪೂಜೆ ಮಾಡಬಾರದು? ಮನೆಯಲ್ಲಿ ಸೂತಕವಿದ್ದಾಗ ಪೂಜೆ ಮಾಡಬಾರದು. ಮನೆಯಲ್ಲಿ ಮರಣ ಸಂಭವಿಸಿದರೆ, ಹೆರಿಗೆಯಾಗಿದ್ದರೆ ಪೂಜೆ ಮಾಡಬಾರದು.
ಮುಟ್ಟಿನ ಸಮಯದಲ್ಲಿ ಮಹಿಳೆಯರು ದೀಪ ಹಚ್ಚಬಾರದು. ಮುಟ್ಟಿನ ಸಮಯದಲ್ಲಿ ರಜ ಅಂಶ ಅಧಿಕವಿರುತ್ತದೆ .ಇದು ಸಾತ್ವಿಕ ಶಕ್ತಿಯ ಮೇಲೆ ಪ್ರಭಾವ ಬೀರುವುದು ಆದ್ದರಿಂದ ಪೂಜೆಯನ್ನು ಮಾಡಬಾರದು ಸ್ನೇಹಿತರಿಗೆ ಈ ಮಾಹಿತಿ ನಿಮಗೆ ಇಷ್ಟವಾದರೆ ದಯವಿಟ್ಟು ಲೈಕ್ ಮಾಡೋದನ್ನ ಮರಿಬೇಡಿ ಹಾಗೂ ವಿಡಿಯೋಗಳಿಗಾಗಿ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ