ಹೆಂಡತಿ ರಾತ್ರಿ ಇಂಥ ಕೆಲಸಗಳು ಮಾಡಿದರೆ ದೇವರು ಕೂಡ ಕಾಪಾಡಲು ಸಾಧ್ಯವಿಲ್ವಂತೆ. ಮನೆಯಲ್ಲಿ ಹೆಣ್ಣು ಮಕ್ಕಳು ಮಾಡುವ ಇಂತಹ ಕೆಲಸದಿಂದ ಕೆಲವು ಕಷ್ಟಗಳು ಮತ್ತು ದರಿದ್ರ ಬರುತ್ತದೆಯಂತೆ, ಮನೆಯಲ್ಲಿ ಇಂತಹ ಕೆಲಸಗಳನ್ನು ಮಾಡಿ ಹೆಣ್ಣು ಮಕ್ಕಳು ಕೆಲವು ಕಷ್ಟಗಳನ್ನು ಬರುಸುತ್ತಾರಂತೆ. ಮನೆಯಲ್ಲಿ ಹೆಂಡತಿ ಕೆಲವು ಮಾಡಬಾರದ ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿದೇವಿ ಕೋಪಗೊಂಡು ಮನಗೆ ಬರಲು ಇಷ್ಟಪಡುವುದಿಲ್ಲವಂತೆ.
ಅಂತಹ ಕೆಲಸಗಳು ಯಾವುವು ಎಂದು ಈಗ ತಿಳಿದುಕೊಳ್ಳೋಣ. ಮನೆ ಹತ್ತಿರ ಇರುವವರು ರಾತ್ರಿ ಹೊತ್ತು ಹಾಲಿಗೆ ಹೆಪ್ಪು ಹಾಕಲು ಮೊಸರು ಅಥವಾ ಹಾಲನ್ನು ಕೇಳಿದರೆ ಕೊಡಬಾರದು. ಮೊಸರು ಲಕ್ಷ್ಮಿದೇವಿಯ ಸಮಾನ ಅಂತಹ ಹಾಲು ಮತ್ತು ಮೊಸರು ಲಕ್ಷ್ಮಿದೇವಿಯ ಸಮಾನ ಅಂತಹ ಹಾಲು ಮತ್ತು ಮೊಸರನ್ನು ಮನೆ ಇಂದ ರಾತ್ರಿ ಹೊತ್ತು ಕೊಡುವುದರಿಂದ ಲಕ್ಷ್ಮಿ ದೇವಿ ಮನೆಯಿಂದ ಹೊರಗಡೆ ಹೋಗುತ್ತಾಳಂತೆ.
ಶುಕ್ರವಾರ ಮತ್ತು ಮಂಗಳವಾರ ಮನೆಯ ಹೆಣ್ಣು ಮಕ್ಕಳು ಕಣ್ಣೀರು ಹಾಕಬಾರದಂತೆ ಆ ರೀತಿ ಮಾಡುವುದರಿಂದ ಮನೆಗೆ ಏನು ಒಳ್ಳೆಯದಲ್ಲ ಅದಲ್ಲದೇ ಮನೆಗೆ ದರಿದ್ರ ಬರುತ್ತದೆ. ಮನೆಯಲ್ಲಿ ಹೆಣ್ಣು ಮಕ್ಕಳು ಖಂಡಿತ ಈ ತಪ್ಪು ಮಾಡಬೇಡಿ. ರಾತ್ರಿ ಹೊತ್ತು ತಲೆ ಸ್ನಾನ ಮಾಡುವುದು ಮಾಡಬಾರದು. ಪ್ರತ್ಯೇಕವಾಗಿ ಮಂಗಳವಾರ ಮತ್ತು ಶುಕ್ರವಾರ ರಾತ್ರಿ ಹೊತ್ತು ತಲೆ ಸ್ನಾನ ಮಾಡಲೇಬಾರದು.
ಮಂಗಳವಾರ ಮತ್ತು ಶುಕ್ರವಾರ ಯಾವುದೇ ಕಾರಣಕ್ಕೂ ಜೇಡರ ಬಲೆ ತೆಗೆಯಬೇಡಿ. ಅದು ಮನೆಗೆ ಒಳ್ಳೆಯದಲ್ಲ. ಮನೆಯಲ್ಲಿರುವ ಹೆಣ್ಣು ಮಕ್ಕಳು ಸಿಕ್ಕಿದಲ್ಲಿ ತಲೆ ಬಾಚಬೇಡಿ, ಮನೆಯ ನಡುವಿನ್ನಲ್ಲಿ ನಿಂತು ಖಂಡಿತಾ ತಲೆ ಬಾಚಲೇಬಾರದು.ಹೆಣ್ಣು ಮಕ್ಕಳು ಪ್ರತ್ಯೇಕವಾಗಿ ಶುಕ್ರವಾರ ಮತ್ತು ಮಂಗಳವಾರ ದೇವರ ದೀಪ ಹಚ್ಚದೆ ಇರಬಾರದು.
ಪ್ರತಿದಿನವೂ ಮನೆಯಲ್ಲಿ ದೇವರ ದೀಪ ಹಚ್ಚಬೇಕು. ಮುಟ್ಟಾದ ಸಮಯ ಬಿಟ್ಟು ಬೇರೆ ಎಲ್ಲಾ ಸಮಯದಲ್ಲೂ ಖಂಡಿತವಾಗಿ ದೇವರ ದೀಪ ಮರೆಯದೆ ಹಚ್ಚಬೇಕು ಇದು ಮನೆಗೆ ಒಳ್ಳೆಯದು. ದೇವರ ದೀಪ ಸುಮ್ಮನೆ ಅಚ್ಚದೆ ಇದ್ದರೆ ಮನೆಗೆ ಬಡತನ ಹಾಗೂ ದರಿದ್ರ ಬರುತ್ತದೆ ಒಳ್ಳೆಯದಲ್ಲ.