ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ, ಪಾಪಗಳನ್ನು ಯಾವ ರೀತಿಯಾಗಿ ಪರಿಹರಿಸಬಹುದು ತಿಳಿದುಕೊಳ್ಳೋಣ. ಸ್ನೇಹಿತರೆ ಗಂಗೋತ್ರಿ ಚಾದಾಯಾತ್ರೆಯಲ್ಲಿ ಎರಡನೆಯ ಧಾಮ ಅಂತ ಹೇಳ್ತೇವೆ ಒಂದನೆಯದು ಯಮನೋತ್ರಿ ಎರಡನೆಯದು ಗಂಗೋತ್ರಿ. ಈ ಗಂಗೋತ್ರಿ ಪುಣ್ಯತಿ ಪುಣ್ಯಕ್ಷೇತ್ರಗಳಲ್ಲಿ ಒಂದು. ಗಂಗೆ ಭೂಮಿಗೆ, ಯಾಕೆ ಬಂದಳು? ಆ ಹಿನ್ನೆಲೆ ಕತೆಯನ್ನು ಮೊದಲು ತಿಳಿದುಕೊಳ್ಳೋಣ ಹಿಂದೆ ಹಿವಂಷು ವಂಶವಂಶದಲ್ಲಿ ಸಕಾರ ಎನ್ನುವ ಚಕ್ರವರ್ತಿ ಇರುತ್ತಾನೆ ಆತನಿಗೆ ಇಬ್ಬರು ಹೆಂಡತಿಯರು ಒಬ್ಬಳ ಹೆಸರು ಸುಮತಿ ಹಾಗೂ ಇನ್ನೊಬ್ಬಳು ಹೆಸರು ಕೇಶನಿ. ಆತನಿಗೆ ಎಷ್ಟೇ ವರ್ಷಗಳಾದರೂ ಮಕ್ಕಳ ಆಗಿರುವುದಿಲ್ಲ ನೊಂದುಕೊಂಡಿರುವ ರಾಜ ತನ್ನ ಇಬ್ಬರು ಹೆಂಡತಿಯರನ್ನು ಕರೆದುಕೊಂಡು ಬೃಹ ಮಹರ್ಷಿಯ ಆಶ್ರಮಕ್ಕೆ ಬಂದು ಅವರ ಸೇವೆಯಲ್ಲಿ ತೊಡಗುತ್ತಾನೆ.
ಬೃಹ ಮಹರ್ಷಿಗಳು ಸಂತೃಪ್ತರಾಗಿ ಅವರಿಗೆ ವರವನ್ನು ಕೊಡುತ್ತಾರೆ ನಿನಗೆ ಒಳ್ಳೆಯ ಸಂತಾನ ಪ್ರಾಪ್ತಿಯಾಗಲಿ ಎಂದು ವರವನ್ನು ನೀಡುತ್ತಾರೆ. ಒಬ್ಬಳಿಗೆ ಒಬ್ಬನೇ ಮಗ ಹುಟ್ಟುತ್ತಾನೆ, ಇನ್ನೊಬ್ಬಳಿಗೆ ಶೂರರಾದಂತಹ 60,000 ಮಕ್ಕಳು ಹುಟ್ಟುತ್ತಾರೆ. ಮೊದಲನೇ ಹೆಂಡತಿಗೆ ವಂಶೋದ್ಧಾರಕರಾದ ಒಬ್ಬನೇ ಮಗ ಹುಟ್ಟುತ್ತಾನೆ ಎರಡನೇ ಹೆಂಡತಿ ಸುಮತಿಗೆ 60 ಸಾವಿರ ಮಕ್ಕಳು ಹುಟ್ಟುತ್ತವೆ. ಹಿರಿಯ ಹೆಂಡತಿಯ ಮಗ ಬಾಳನೇ ಕ್ರೂರವಾಗಿರುತ್ತಾನೆ ಜಗಳ ಆಡುವುದು ಹೊಡೆದು ಸಾಯುವುದು ಈ ರೀತಿಯಾಗಿ ಮಾಡುತ್ತಿರುತ್ತಾನೆ. ಈ ರೀತಿ ಮಾಡಿರುವುದರಿಂದ ಸಗರ ಅವನನ್ನು ದೇಶ ಭ್ರಷ್ಟನಾಗಿ ಮಾಡಿ ಹೊರಗೆ ಹಾಕಿಬಿಡುತ್ತಾನೆ.
ಅಸಮಂಜರಿಗೆ ಒಬ್ಬನೇ ಮಗ ಹುಟ್ಟುತ್ತಾನೆ ಅವನಿಗೆ ಅಂಶಮಂತ, ಇವನಿಂದಲೇ ಒಂದು ವಂಶೋದ್ಧಾರಕ ಎನ್ನುವ ಹೆಸರು ಬರುತ್ತದೆ ಹಾಗೆ ಸದರನ ಎರಡನೇ ಹೆಂಡತಿಗೆ ಹುಟ್ಟಿದಂತಹ 60 ಸಾವಿರ ಗಂಡು ಮಕ್ಕಳು ಅವರು ಅತಿಯಾಗಿ ಶೂರವಂತರು ಆಗಿರುತ್ತಾರೆ ಅವರ ಶೂರತ್ವದಿಂದ ದೇವತೆಗಳು ಕೂಡ ಉಪಟಳವನ್ನು ಅನುಭವಿಸುತ್ತಾರೆ ಈ ಉಪಟಳವನ್ನು ತಾಳದಂತಹ ದೇವತೆಗಳು ಬ್ರಹ್ಮನ ಮೊರೆ ಹೋಗುತ್ತಾರೆ ಆಗ ಬ್ರಹ್ಮದೇವರು ಹೇಳುತ್ತಾರೆ ಈ 60,000 ಮಕ್ಕಳು ಕಪಿಲ ಮಹರ್ಷಿ ಸಿಟ್ಟಿಗೆ ಒಳಗಾಗುತ್ತಾರೆ ಅಂತ ಹೇಳುತ್ತಾರೆ ಕಪಿಲ ಮಹರ್ಷಿಯ ಸಿಟ್ಟಿಗೆ ಸುಟ್ಟು ಬೂದಿಯಾಗುವಂತಹ ಸಮಯ ಅತ್ಯಂತ ಹತ್ತಿರ ಇದೆ ಅಂತ ಹೇಳುತ್ತಾರೆ
ಹೀಗೆ ಇರಬೇಕಾದರೆ ಚಕ್ರವರ್ತಿ ಅಶ್ವಮೇಧ ಯಾಗವನ್ನು ಮಾಡಬೇಕು ಅಂತ ನಿಶ್ಚಯಿಸುತ್ತಾನೆ ನಿಶ್ಚಯಿಸಿ ಯಾಗದ ಕುದುರೆಯನ್ನು ಬಿಡುತ್ತಾನೆ ಇದರ ಹಿಂದೆ ತನ್ನ 60,000 ಮಕ್ಕಳನ್ನು ಕಳಿಸುತ್ತಾನೆ ಇದನ್ನು ಯಾರಾದರೂ ಕಟ್ಟಿ ಹಾಕಿದರೆ ಅವರ ವಿರುದ್ಧ ಯುದ್ಧವನ್ನು ಮಾಡಿ ಗೆಲ್ಲಬೇಕು ಇಡೀ ಭೂಮಂಡಲವನ್ನು ನಾನು ಗೆಲ್ಲಬೇಕು ಅಂತ ಹೇಳುತ್ತಾನೆ ಇದನ್ನು ತಿಳಿದ ಇಂದ್ರ ಹೇಗಾದರೂ ಮಾಡಿ ಇದನ್ನು ಕದ್ದು ಒಯ್ಯಬೇಕು ಅಂತ ಯೋಚನೆ ಮಾಡುತ್ತಾನೆ ಯಾಕೆ ಅಂದರೆ ಅಶ್ವಮೇಧ ಯಾಗ ಪೂರ್ತಿ ಆದರೆ ಇಡೀ ಮೂರು ಲೋಕಕ್ಕೂ ಅವನು ಚಕ್ರವರ್ತಿ ಆಗುತ್ತಾನೆ ಅಂತ ಅಂತ ಯೋಚನೆ ಮಾಡಿ ಆಗ ಇಂದ್ರ
ಈ ಕುದುರೆಯನ್ನು ಕದ್ದು ಒಯ್ದು ಕಪಿಲ ಮಹರ್ಷಿ ಆಶ್ರಮದಲ್ಲಿ ಯಾರಿಗೂ ಗೊತ್ತಾಗದಂತೆ ತನ್ನ ಇಂದ್ರಜಾಲದಲ್ಲಿ ಬಚ್ಚಿಡುತ್ತಾನೆ ಆಗ ಈ 60,000 ಮಕ್ಕಳು ಭೂಮಿಯ ಮೇಲೆ ಎಲ್ಲಾ ಕಡೆ ಶೋಧಿಸುತ್ತಾರೆ ಕುದುರೆ ಎಲ್ಲೂ ಸಿಗುವುದಿಲ್ಲ ಭೂಮಿಯನ್ನು ಅಗಿಯುತ್ತಾರೆ ಎಷ್ಟೇ ಅಗೆದರೂ ಕೂಡ ಕುದುರೆ ಸಿಗುವುದಿಲ್ಲ ಕುದುರೆ ಸಿಕ್ಕಿಲ್ಲ ಅಂತ ಹೇಳಿ ಸದರನ 60,000 ಮಕ್ಕಳು ವಾಪಸ್ ಬರುತ್ತಾರೆ ನಂತರ ಏನಾದರೂ ಆಗಲಿ ಆ ಕುದುರೆಯನ್ನು ಹುಡುಕಿ ತರಲೇಬೇಕು ಅಂತ ಮತ್ತೆ ವಾಪಸ್ ಕಳಿಸುತ್ತಾನೆ ಆಗ ಅತ್ಯಂತ ಸಿಟ್ಟಿನಿಂದ ತಮ್ಮ ಉಗುರಿನಿಂದ ಪಾತಾಳವನ್ನು ಅಗಿಯಲು ಶುರು ಮಾಡುತ್ತಾರೆ ಪಾತಾಳ ಲೋಕಕ್ಕೆ ಹೋಗುತ್ತಾರೆ ಅಲ್ಲಿ ಒಂದು ಆಶ್ರಮ ಅವರಿಗೆ ಕಾಣಿಸುತ್ತದೆ ಆ ಆಶ್ರಮದಲ್ಲಿ ಕಪಿಲ ಋಷಿ ಹಾಗೂ ಕುದುರೆ ಕಾಣಿಸುತ್ತದೆ
ಆಗ ಕುದುರೆ ಸಿಕ್ಕಿದ್ದು ಅವರಿಗೆ ಬಹಳ ಸಂತೋಷವಾಗುತ್ತದೆ ಋಷಿಯ ಮೇಲೆ ಬಹಳ ಸಿಟ್ಟು ಬರುತ್ತದೆ ಆಗ 60,000 ಮಂದಿ ಏಕಕಾಲದಲ್ಲಿ ಋಷಿಯ ಮೇಲೆ ಯುದ್ಧಕ್ಕೆ ಹೋಗಬೇಕು ಅನ್ನುವಷ್ಟರಲ್ಲಿ ಕಪಿಲ ಋಷಿ ಓಂಕಾರವನ್ನು ಮಾಡುತ್ತಾರೆ ದೃಷ್ಟಿಯನ್ನು ಬಿಡುವಷ್ಟರಲ್ಲಿ 60,000 ಮಂದಿ ದಿಗ್ಭ್ರಮೆಯಾಗುತ್ತಾರೆ 60,000 ಮಂದಿ ಏಕಕಾಲದಲ್ಲಿ ಸುಟ್ಟು ಬೂದಿಯಾಗುತ್ತಾರೆ ಮಹರ್ಷಿಯ ಕೋಪವೇ ಅಂತದ್ದು ಎಷ್ಟೋ ವರ್ಷದ ತಪಸ್ಸಿನ ಫಲ ಇರುತ್ತದೆ ನಂತರ ಸದರನಿಗೆ ಚಿಂತೆಯಾಗುತ್ತದೆ ಎಷ್ಟೇ ವರ್ಷ ಆದರೂ ತನ್ನ ಮಕ್ಕಳು ವಾಪಸ್ ಬರಲಿಲ್ಲ ಅಂತ ಹೇಳಿ ಆಗ ಅಂಶುಮಂತನನ್ನು ಕರೆದು ನಿನ್ನ ಚಿಕ್ಕಪ್ಪಂದಿರು ಇನ್ನೂ ಬರಲಿಲ್ಲ ನೋಡಿಕೊಂಡು ಬಾ ಹೋಗಿ ಅಂತ ಅವನನ್ನು ಕಳಿಸುತ್ತಾನೆ ನಂತರ ಅವನು ಹೋದಾಗ ಅವನಿಗೆ ಅವರು ಸುಟ್ಟು ಬೂದಿಯಾಗಿರುತ್ತಾರೆ
ಅಂತ ವಿಷಯ ತಿಳಿಯುತ್ತದೆ ನಂತರ ಅವರಿಗೆ ಜಲತರ್ಪಣವನ್ನು ನೀಡಲು ನೀರನ್ನು ಹುಡುಕುತ್ತಾ ಇರುತ್ತಾನೆ ಆಗ ಗರುಡ ದೇವರು ಅಲ್ಲಿಗೆ ಬರುತ್ತಾರೆ ಗರುಡದೇವರು ಎರಡನೇ ಹೆಂಡತಿಯ ಸಹೋದರ ಅಲ್ಲಿಗೆ ಬಂದ ಸೋದರ ಮಾವ ಅವನಿಗೆ ಸಮಾಧಾನ ಹೇಳಿ ಇವರಿಗೆ ಸಾಮಾನ್ಯ ಜಲದಿಂದ ತರ್ಪಣ ನೀಡಬೇಡ ಗಂಗೆ ಭೂಮಿಗೆ ಇಳಿದು ಬಂದರೆ ಮಾತ್ರ ಇವರಿಗೆ ಮೋಕ್ಷ ಸಿಗುತ್ತದೆ ಅಂತ ಹೇಳುತ್ತಾನೆ ಅದಕ್ಕಾಗಿ ಈ ಕುದುರೆಯನ್ನು ನೀನು ತೆಗೆದುಕೊಂಡು ಹೋಗಿ ಸದರನ ಯಜ್ಞವನ್ನು ಪೂರ್ಣ ಮಾಡಿ ಮುಂದೆ ತಂಗಿಯನ್ನು ಹೇಗೆ ಭೂಮಿಗೆ ತರುವುದು ಹೇಗೆ ಅಂತ ಯೋಚನೆ ಮಾಡೋಣ ಅಂತ ಹೇಳಿ ಆ ಕುದುರೆಯನ್ನು ಕೊಟ್ಟು ಕಳಿಸುತ್ತಾನೆ ಕುದುರೆಯನ್ನು ತೆಗೆದುಕೊಂಡು ಬಂದು ಸದರನ ಮುಂದೆ ಎಲ್ಲಾ ವಿಷಯವನ್ನು ಹೇಳುತ್ತಾರೆ
ಯಜ್ಞ ಪೂರ್ಣವಾಗಿ ಮುಗಿತದ ನಂತರ ಗಂಗೆಯನ್ನು ಹೇಗೆ ಭೂಮಿಗೆ ತರುವುದು ಅಂತ ಯೋಚನೆ ಮಾಡುತ್ತಾ ಮಾಡುತ್ತಾ ಸದರ ಪ್ರಾಣವನ್ನು ಬಿಡುತ್ತಾನೆ ಮುಂದೆ ಅಂಶುಮಂತ ಪಟ್ಟಕ್ಕೆ ಬರುತ್ತಾನೆ ಅವನ ಮಗ ದಿಲೀಪ ಇಬ್ಬರೂ ಕೂಡ ಗಂಗೆಯನ್ನು ಹೇಗೆ ಭೂಮಿಗೆ ತರುವುದು ಅಂತ ಯೋಚನೆ ಮಾಡಿ ಅವರ ಕಾಲ ಕೂಡ ಕಳೆದು ಹೋಗುತ್ತದೆ ಮುಂದೆ ದಿಲೀಪನ ಮಗ ಭಗೀರಥ ಪಟ್ಟಕ್ಕೆ ಬರುತ್ತಾನೆ ಆತನಿಗೂ ಕೂಡ ಎಷ್ಟೋ ವರ್ಷಗಳು ಕೂಡ ಮಕ್ಕಳೇ ಆಗುವುದಿಲ್ಲ ಆಗ ಮಕ್ಕಳಿಗಾಗಿ ತನಗೆ ಮಕ್ಕಳು ಹುಟ್ಟಬೇಕು ಎಂದರೆ ಮುತ್ತಾತಂದರಿಗೆ ಸದ್ಗತಿ ದೊರೆಯಬೇಕು ಇಲ್ಲವಾದರೆ ಪಿತೃ ದೋಷ ಬರುತ್ತದೆ
ನಿಮ್ಮ ಮುತ್ತಾತಂದರಿಗೆ ಸದ್ಗತಿ ಕೊಟ್ಟಾಗ ಮಾತ್ರ ನಿಮಗೆ ಮಕ್ಕಳಾಗುತ್ತವೆ ಅಂತ ಹೇಳಿದಾಗ ಅವರಿಗೆ ಯಾವ ರೀತಿ ಸದ್ಗತಿ ಕೊಡಬೇಕು ಅಂತ ನಡೆದ ಘಟನೆಗಳನ್ನೆಲ್ಲ ಕೇಳಿಸಿಕೊಳ್ಳುತ್ತಾನೆ ಗಂಗೆಯನ್ನು ಭೂಮಿಗೆ ತರುವುದಕ್ಕಾಗಿ ಹಿಮ ಪರ್ವತದಲ್ಲಿ ಹೋಗಿ ತಪಸ್ಸನ್ನು ಮಾಡುವುದಕ್ಕೆ ಶುರು ಮಾಡುತ್ತಾನೆ ತಪಸ್ಸು ಎಷ್ಟು ಗೌರವವಾಗಿರುತ್ತದೆ ಅಂತ ಹೇಳಿದರೆ ಹಿಮಾಲಯ ಪರ್ವತ ಕೂಡ ಅಲುಗಾಡಲು ಶುರುವಾಗುತ್ತದೆ ಅಂತೆ ಪಂಚ ಅಗ್ನಿಯ ಮುಂದೆ ಕೈ ಎತ್ತಿ ನಿಂತು ಎಷ್ಟೋ ವರ್ಷಗಳ ಕಾಲ ಬ್ರಹ್ಮನನ್ನು ಕುರಿತು ತಪಸ್ಸನ್ನು ಮಾಡುತ್ತಾನೆ ಆಗ ಅವನ ತಪಸ್ಸಿಗೆ ಮೆಚ್ಚಿದ ಅಂತಹ ಬ್ರಹ್ಮದೇವನು ಬಂದು ನಿನಗೆ ಯಾವ ವರ ಬೇಕು ಅಂತ ಕೇಳಿದಾಗ ನನ್ನ ವಂಶ ಉದ್ಧಾರ ಆಗಬೇಕು ನನ್ನ ಮುತ್ತಾತಂದರಿಗೆ
ಸದ್ಧಗತಿ ದೊರೆಯಬೇಕು ಅಂತ ಹೇಳಿದಾಗ ಆಗ ಗಂಗೆ ಭೂಮಿಗೆ ಬರಬೇಕು ಅನ್ನುವುದೇ ಇವನ ಉದ್ದೇಶ ಆಗ ಬ್ರಹ್ಮದೇವರು ಆಗಲಿ ಅಂತ ಮಾತನ್ನು ಕೊಡುತ್ತಾರೆ ಆಗ ಬ್ರಹ್ಮದೇವರು ಗಂಗೆಯನ್ನು ವಿನಂತಿ ಮಾಡಿಕೊಳ್ಳುತ್ತಾರೆ ನೀನು ಭೂಲೋಕಕ್ಕೆ ಹೋಗಿ ಅವರನ್ನು ಉದ್ಧಾರ ಮಾಡಬೇಕು ಅಂತ ಹೇಳಿ ಆಗ ಗಂಗೆ ಹೇಳುತ್ತಾಳೆ ನನ್ನ ರಭಸವನ್ನು ಭೂಮಿ ತಡೆದುಕೊಳ್ಳುವುದಕ್ಕೆ ಸಾಧ್ಯನಾ ಅಂತ ಆಗ ಬ್ರಹ್ಮ ದೇವರು ಹೇಳುತ್ತಾರೆ ಶಿವ ಒಪ್ಪಿದರೆ ಅದು ಸಾಧ್ಯ ಅಂತ ಮತ್ತೆ ಭಗೀರಥ ಅತ್ಯಂತ ಕಠಿಣವಾಗಿ ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ ಆಗ ಶಿವನು ಒಲಿಯುತ್ತಾನೆ ಆಗ ಶಿವನು ಒಪ್ಪಿಕೊಂಡು ತನ್ನ ತಲೆಯ ಮೇಲೆ ಗಂಗೆಯನ್ನು ಧರಿಸುತ್ತೇನೆ ನಂತರ ಗಂಗೆಯನ್ನು ಯಾವ ರಭಸದಲ್ಲಿ ಬಿಡಬೇಕು ಆ ರಭಸದಲ್ಲಿ ಬಿಡುತ್ತೇನೆ
ಅಂತ ಹೇಳಿ ಆಗ ಗಂಗೆ ಹೇಳುತ್ತಾಳೆ ನನ್ನ ತಡೆಯುವಂತಹ ಶಕ್ತಿ ಶಿವನಿಗೆ ಇದೆಯಾ ಅಹಂಕಾರದ ಮಾತನ್ನು ಕೇಳಿದಂತಹ ಶಿವನು ಸುಮ್ಮನೆ ನಕ್ಕು ನೀನು ಗಂಗೆ ಧುಮ್ಕಿ ನೋಡು ಅಂತ ಹೇಳುತ್ತಾನೆ ಆಗ ದೇವಲೋಕದಿಂದ ಧುಮುಕಿದಂತಹ ಗಂಗೆಯನ್ನು ಶಿವನು ತನ್ನ ಜಟೆಯಲ್ಲಿ ತಡೆದು ಆ ಜಡೆಯನ್ನು ಕಟ್ಟಿ ಬಿಡುತ್ತಾನೆ ಗಂಗೆಯನ್ನು ತಲೆಯಲ್ಲಿ ಬಂಧಿಸಿ ಬಿಡುತ್ತಾನೆ ಒಂದು ತೊಟ್ಟು ನೀರು ಕೂಡ ಕೆಳಗೆ ಬೀಳದಂತೆ ನೋಡಿಕೊಳ್ಳುತ್ತಾನೆ ನಂತರ ಶಿವನಲ್ಲಿ ಕ್ಷಮೆಯನ್ನು ಬೇಡುತ್ತಾಳೆ ಒಂದು ತೊಟ್ಟು ನೀರು ಕೂಡ ಕೆಳಗೆ ಬೀಳದಂತಹ ಗಂಗೆಯನ್ನು ನೋಡಿ ಭಗೀರಥ ಮತ್ತೆ ಶಿವನನ್ನು ಬೇಡಿಕೊಳ್ಳುತ್ತಾನೆ ಸಂತುಷ್ಟನಾದಂತಹ ಶಿವನು ಗಂಗೆಯನ್ನು ಒಂದು ಸರೋವರದಲ್ಲಿ ಬಿಡುತ್ತಾನೆ ಇವನ ಜತೆಯಿಂದ ಹೊರಬಂದಂತಹ ಗಂಗೆ 7 ಕವಲುಗಳಾಗಿ ಒಡೆಯುತ್ತಾಳೆ
7ನೇ ಕವಲು ಭಗೀರಥನನ್ನು ಹಿಂಬಲಿಸುತ್ತದೆ ಭಗೀರಥ ಎಲ್ಲಿ ಹೋಗುತ್ತಾನೋ ಅಲ್ಲಿ ಹೋಗುತ್ತದೆ ಯಾಕೆ ಅಂದರೆ ಅವನ ಮುತ್ತಾತಂದಿರು ಸುಟ್ಟುಹೋದಲ್ಲಿ ಗಂಗೆ ಹೋಗಬೇಕಾಗಿರುತ್ತದೆ ಇಂತಹ ಗಂಗೆ ಏನು ಮಾಡುತ್ತಾಳೆ ಅಂದರೆ ಭಗೀರಥನ ಹಿಂದೆ ಹೋಗುವಂತಹ ಸಂದರ್ಭದಲ್ಲಿ ಗಂಗೆ ಅತಿರಭಸವಾಗಿ ಹರಿಯುತ್ತಾಳೆ ಹೀಗೆ ಹರಿಯುವಂತಹ ಸಂದರ್ಭದಲ್ಲಿ ಒಬ್ಬ ಮಹರ್ಷಿಯ ಆಶ್ರಮ ಈ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತದೆ ಇದರಿಂದ ಮಹರ್ಷಿಗೆ ಬಹಳ ಸಿಟ್ಟು ಬರುತ್ತದೆ ಗಂಗೆಯನ್ನು ಮತ್ತೆ ತಡೆದು ನಿಲ್ಲಿಸುತ್ತಾನೆ ಆಗ ಭಗೀರಥನಿಗೆ ಮತ್ತೆ ಆಪತ್ತು ಬರುತ್ತದೆ ಆಗ ಮತ್ತೆ ಭಗೀರಥ ಋಷಿಯನ್ನು ಒಲಿಸಿಕೊಳ್ಳುತ್ತಾನೆ ಸಂತುಷ್ಟನಾದ ಮಹರ್ಷಿಯು ಗಂಗೆಯನ್ನು ಕಿವಿಯಿಂದ ಹೊರಗೆ ಬಿಡುತ್ತಾನೆ ನಂತರ ಮತ್ತೆ ಗಂಗೆಯು ಭಗೀರಥನ ಹಿಂದೆ ಹೋಗಲು ಶುರು ಮಾಡುತ್ತಾಳೆ ಭಗೀರಥ ಸಾಗರವನ್ನು ಪ್ರವೇಶಿಸಿ ಪಾತಾಳಕ್ಕೆ ಬಂದು ಬೂದಿಯ ಮೇಲೆ ಹರಿಯುವಂತೆ ಬೇಡಿಕೊಳ್ಳುತ್ತಾನೆ
ಹೀಗೆ ಹರಿದಾಗ ಅವರಿಗೆಲ್ಲರಿಗೂ ಸದ್ಗತಿ ದೊರೆಯುತ್ತದೆ ನಂತರ ಪಿತೃಗಳಿಗೆ ಗಂಗೆಯಿಂದಲೇ ತರ್ಪಣವನ್ನು ಕೊಟ್ಟು ಅವರಿಗೆ ಸದ್ಗತಿಗೆ ಕಾರಣರಾದಂತಹ ಭಗೀರಥನಿಗೆ ಎಲ್ಲಾ ಪಿತೃಗಳು ಆಶೀರ್ವಾದ ಮಾಡಿ ಹೋಗುತ್ತಾರೆ ಭಗೀರಥನ ಪ್ರಯತ್ನವನ್ನು ನೋಡಿದಂತಹ ಗಂಗೆ ಭಗೀರಥನನ್ನು ನೀನು ನನ್ನ ತಂದೆ ಇದ್ದಹಾಗೆ ನೀನು ನನ್ನನ್ನು ಭೂಮಿಗೆ ಬರುವಂತೆ ಮಾಡಿದೆ ನಾನು ಇನ್ನು ಮುಂದೆ ಭಾಗೀರಥಿ ಅಂತ ಕರೆಸಿಕೊಳ್ಳುತ್ತೇನೆ ಅಂತ ಹೇಳುತ್ತಾಳೆ ಆದ್ದರಿಂದ ಅವತ್ತಿನಿಂದ ಭಾಗಿರತಿ ಅಂತ ಕರೆಯುತ್ತಾರೆ ಇದೇ ರೀತಿ ಮುಂದೆ ಯಾರು ನನ್ನಲ್ಲಿಗೆ ಬಂದು ಪಿತೃಗಳಿಗೆ ತರ್ಪಣವನ್ನು ಕೊಡುತ್ತಾರೋ ಅವರಿಗೆ ಎಲ್ಲರಿಗೂ ಸದ್ದತಿಯನ್ನು ಕೊಡುತ್ತೇನೆ ಅಂತ ಮಾತು ಕೊಡುತ್ತಾಳೆ ಅದಕ್ಕಾಗಿ ಗಂಗಾ ನದಿಯ ದಡಕ್ಕೆ ಹೋಗಿ
ಪಿತ್ರುಗಳಿಗೆ ತರ್ಪಣವನ್ನು ಕೊಡಬೇಕು ಗಂಗೆ ಭೂಲೋಕ ಪಾತಾಳ ಲೋಕ ದೇವಲೋಕದಲ್ಲೂ ಮೂರು ಲೋಕದಲ್ಲೂ ಹರಿದಿದ್ದಾಳೆ ಆದ್ದರಿಂದ ಪರಮ ಶ್ರೇಷ್ಠ ಅಂತ ಕರೆಯುತ್ತಾರೆ ಹಾಗೆ ಗಂಗೆಯ ದರ್ಶನವನ್ನು ಮಾಡುವುದಾದರೆ ಗಂಗೆ ಉದ್ಭವವಾದ ಸ್ಥಳ ಗೋಮುಖ ಅಂತ ಕರೆಯುತ್ತಾರೆ ಇದು ಗಂಗೋತ್ರಿ ಇಂದ 18 ಕಿಲೋಮೀಟರ್ ಎತ್ತರದಲ್ಲಿದೆ ಇಲ್ಲಿಗೆ ಹೋಗಬೇಕು ಅಂದರೆ ಕಾಲುನಡಿಗೆಯಿಂದ ಮಾತ್ರ ಹೋಗುವುದಕ್ಕೆ ಸಾಧ್ಯ ಬಹಳಾನೇ ಚಳಿ ಇರುತ್ತದೆ ಅದಕ್ಕಾಗಿ ಎಲ್ಲರಿಗೂ ಸಾಧ್ಯ ಆಗುವುದಿಲ್ಲ ಇದೇ ಸ್ಥಳದಲ್ಲಿ ದೇವಲೋಕದಿಂದ ಭೂಲೋಕಕ್ಕೆ ಗಂಗೆ ಬಂದಿದ್ದು ಕೆಳಗಡೆ ಶಿವಲಿಂಗ ಇದೆ, ಶಿವಲಿಂಗದ ಮೇಲೆ ನೀರು ಬೀಳುತ್ತದೆ ಗಂಗೆಯ ದರ್ಶನವೇ ಪರಮ ಭಾಗ್ಯ ಅಂತ ಹೇಳುತ್ತಾರೆ ಹಲವಾರು ವಿದೇಶಗಳಿಂದ ದೇಶ ವಿದೇಶಗಳಿಂದ ಬರುತ್ತಾರೆ ಬಹಳಾನೇ ರಶ್ ಇರುತ್ತದೆ ಇಂತಹ ದರ್ಶನವನ್ನು ಮಾಡಬೇಕು ಅಂದರೆ ನಾವು ಪುಣ್ಯವನ್ನು ಮಾಡಿರಬೇಕು
ಇಲ್ಲಿ ಎರಡು ಹೊತ್ತು ಆರತಿಯನ್ನು ಮಾಡುತ್ತಾರೆ ಬ್ರಾಹ್ಮೀ ಮುಹೂರ್ತ ಹಾಗೂ ಸಾಯಂಕಾಲ ಇಲ್ಲಿಗೆ ಗಂಗಾ ಸ್ತೋತ್ರವನ್ನು ಹೇಳಬೇಕು ಇದರಿಂದ ಬಹಳ ಒಳ್ಳೆಯ ಫಲ ಸಿಗುತ್ತದೆ ನಿತ್ಯ ನಿಮ್ಮ ಮನೆಯಲ್ಲಿ ಗಂಗಾ ಸ್ತೋತ್ರವನ್ನು ಹೇಳಿಕೊಳ್ಳಿ ಹಾಗೆ ಈ ಸ್ಥಳಕ್ಕೆ ಹೋಗಬೇಕಾದರೆ ಗಂಗೋತ್ರಿ ಗೆ ಹೋಗಬೇಕಾದರೆ ಉಡಿಯನ್ನು ತೆಗೆದುಕೊಂಡು ಹೋಗಿ ಬಾಗಿನವನ್ನು ತೆಗೆದುಕೊಂಡು ಹೋಗಿ ನದಿಯಲ್ಲಿ ಬಾಗಿನವನ್ನು ಕೊಡುವುದಕ್ಕೆ ಅವಕಾಶ ಇದೆ ಅರಿಶಿಣ ಕುಂಕುಮ ಎಲ್ಲದನ್ನು ತೆಗೆದುಕೊಂಡು ಹೋಗಿ ದೇವಸ್ಥಾನಕ್ಕೆ ಹೋಗಿ ಉಡಿಯನ್ನು ಕೊಟ್ಟರೆ ಅದನ್ನು ತೆಗೆದುಕೊಳ್ಳುತ್ತಾರೆ ಅಲ್ಲಿ ಹೋಗಿ ಒಬ್ಬ ಭಟ್ಟರನ್ನು ಕರೆದುಕೊಂಡು ಬಂದು ಮೂರು ಸಲ ಪ್ರೋಕ್ಷಣೆಯನ್ನು ಮಾಡಿಕೊಂಡು ಒಂದು ತಂಬಿಗೆಯಲ್ಲಿ ಗಂಗೆಯನ್ನು ತುಂಬಿಕೊಂಡು ಬರಬೇಕು ಯಾರಿಗೆ ಹೆಣ್ಣು ಮಕ್ಕಳು ಇಲ್ಲವೋ ಅವರಿಗೆ ಕನ್ಯಾ ದಾನ ಮಾಡಿದಷ್ಟು ಪುಣ್ಯ ಬರಬೇಕು
ಅಂದರೆ ಗಂಗೆಯನ್ನು ದಾನವಾಗಿ ಕೊಡಬೇಕು ಯಾರಿಗೆ ಹೆಣ್ಣು ಮಕ್ಕಳು ಇಲ್ಲವೋ ಅವರು ಊರಿಂದ ಒಂದು ತಂಬಿಗೆಯನ್ನು ತೆಗೆದುಕೊಂಡು ಹೋಗಬೇಕು ತಾಮ್ರದ ತಂಬಿಗೆಯನ್ನು ತೆಗೆದುಕೊಂಡು ಹೋಗಬೇಕು ಮತ್ತು ಹೆಣ್ಣು ಮಕ್ಕಳಿಗೆ ಹಾಕುವಂಥ ಬಳೆ ವಸ್ತ್ರ ಎಲ್ಲವನ್ನು ತೆಗೆದುಕೊಂಡು ಹೋಗಬೇಕು ಗಂಗೆಯನ್ನು ಕೂರಿಸಿ ಕಳಸವನ್ನು ಇಟ್ಟು ಎಲ್ಲಾ ಅಲಂಕಾರವನ್ನು ಮಾಡಿ ಹಣ್ಣು ಎಲ್ಲವನ್ನು ಹಾಕಿ ಉಡಿ ತುಂಬಬೇಕು ವಸ್ತ್ರ ಸಮೇತವಾಗಿ ಅಲ್ಲಿರುವಂತಹ ಭಟ್ಟರಿಗೆ ದಾನವಾಗಿ ಕೊಡಬೇಕು ಅಂದರೆ ಕನ್ಯಾದಾನ ಹಾಗೂ ಅಶ್ವಮೇಧ ಯಾಗ ಮಾಡಿದಷ್ಟು ಪುಣ್ಯ ಬರುತ್ತದೆ ಅಂತ ಹೇಳಿ ಅಂದರೆ ತಾಂಬೂಲ ಎಲ್ಲವನ್ನು ಊರಿಂದ ರೆಡಿ ಮಾಡಿಕೊಂಡು ಹೋಗಿ ಯಾಕೆಂದರೆ ಅಲ್ಲಿ ಎಲ್ಲವೂ ಸಿಗುವುದಿಲ್ಲ ಅಲ್ಲಿ ದೀಪದ ದಾನ ಕೂಡ ಕೊಡುವುದಕ್ಕೆ ಸಾಧ್ಯ ಇದೆ ನೀವು ಸೀರೆ ಕೂಡ ತೆಗೆದುಕೊಂಡು ಹೋಗಬಹುದು ದಾನ ಕೊಡುವುದಕ್ಕೆ ಸ್ನೇಹಿತರೆ ಗಂಗೆಯ ಜನ್ಮಸ್ಥಳದ ಕುರಿತಾದ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು