ಕಡಲೆ ಹಿಟ್ಟು ಇದು ಅಜ್ಜಿ ಕಾಲದ ಸೌಂದರ್ಯದ ಗುಟ್ಟು ಕಡಲೆ ಹಿಟ್ಟು ಕೇವಲ ಬಜ್ಜಿ, ಬೋಂಡ ತಯಾರಿಕೆಗೆ ಮಾತ್ರವಲ್ಲ, ಸೌಂದರ್ಯ ಮತ್ತು ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ. ಕಡಲೆ ಹಿಟ್ಟಿನಲ್ಲಿರುವ ಗುಣಗಳು ಚರ್ಮಕ್ಕೆ ಚಮತ್ಕಾರವನ್ನು ಮಾಡುತ್ತದೆ. ನೀವು ಶುಷ್ಕ ಅಥವಾ ಎಣ್ಣೆ ಚರ್ಮ ಹೊಂದಿದ್ದರು ಕೂಡ ಕಡಲೆಹಿಟ್ಟನ್ನು ಬಳಸಬಹುದು.
ಇದು ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ನಿಮ್ಮ ಚರ್ಮಕ್ಕೆ ಉಂಟುಮಾಡುವುದಿಲ್ಲ. ಕಡಲೆ ಹಿಟ್ಟನ್ನು ನಿಮ್ಮ ಚರ್ಮಕ್ಕೆ ಹಚ್ಚಿದಾಗ ಅದು ತೇವಾಂಶವನ್ನು ಕಾಪಾಡುವುದಲ್ಲದೇ ಪಿಎಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಅಲ್ಲದೆ ಹೆಚ್ಚುವರಿ ಎಣ್ಣೆಯನ್ನು ಕೂಡ ತೆಗೆದು ಹಾಕಿ ಚರ್ಮದ ಮೃದುತ್ವವನ್ನು ಕಾಪಾಡುತ್ತದೆ. ಮೊಡವೆಗಳನ್ನು ಶಮನ ಮಾಡುತ್ತದೆ.
ಸ್ನಾನ ಮಾಡುವಾಗ ಮತ್ತು ಮುಖ ತೊಳೆಯುವಾಗ ರಸಾಯನಿಕಗಳಿಂದ ಕೂಡಿರುವ ಸಾಬೂನಿನ ಹೊರತಾಗಿ ಕಡಲೆ ಹಿಟ್ಟನ್ನು ಚರ್ಮಕ್ಕೆ ಬಳಸಿ. ನಿಮ್ಮ ಮುಖದಲ್ಲಿರುವ ಮೊಡವೆಗಳನ್ನು ವಾರಕ್ಕೆ ಕನಿಷ್ಠ ಪಕ್ಷ ಮೂರರಿಂದ ನಾಲ್ಕು ಬಾರಿ ಕಡಲೆ ಹಿಟ್ಟಿನ ಫೇಸ್ ಪ್ಯಾಕ್ ಹಚ್ಚಿ. ತ್ವಚೆಯಲ್ಲಿನ ಕೊಳೆಯನ್ನು ತೆಗೆಯುತ್ತದೆ. ಆಗಾಗ ಕಡಲೆ ಹಿಟ್ಟನ್ನು ಫೇಸ್ ಪ್ಯಾಕ್ ನಂತೆ ಬಳಕೆ ಮಾಡಿ ಇದರಿಂದ ಆರೋಗ್ಯವಾದ ಮತ್ತು ಹೊಳೆಯುವ ಚರ್ಮವನ್ನು ನೀವು ಪಡೆಯಬಹುದು.
ಬೇಡವಾದ ಕೂದಲನ್ನು ತೆಗೆದು ಹಾಕುತ್ತದೆ. ಶತಮಾನಗಳಿಂದಲೂ ಬಳಸಲಾಗುತ್ತಿರುವ ಕಡಲೆ ಹಿಟ್ಟು ನಿಮ್ಮ ಬೇಡವಾದ ಕೂದಲನ್ನು ಶಾಶ್ವತವಾಗಿ ಶಮನ ಮಾಡುವ ಗುಣವನ್ನು ಹೊಂದಿದೆ. ಸಾಕಷ್ಟು ಮಂದಿ ತಮ್ಮ ತುಟಿ, ಗಡ್ಡ, ಕೈ, ಕಾಲು ಮತ್ತು ತ್ವಚೆಯ ಮೇಲೆ ಸೂಕ್ಷ್ಮವಾದ ಕೂದಲನ್ನು ಹೊಂದಿರುತ್ತಾರೆ. ಅಂತವರು ಶಾಶ್ವತವಾಗಿ ಬೇಡವಾದ ಕೂದಲನ್ನು ತೆಗೆದು ಹಾಕಬಹುದು. ನೈಸರ್ಗಿಕ ಬ್ಲೀಚಿಂಗ್. ಕಡಲೆ ಹಿಟ್ಟು ನೈಸರ್ಗಿಕವಾದ ಬ್ಲೀಚಿಂಗ್ ಗುಣವನ್ನು ಹೊಂದಿದೆ. ಅಲ್ಲದೆ ಅದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ.
ಚರ್ಮಕ್ಕೆ ಬಣ್ಣ ನೀಡುತ್ತದೆ. ಚರ್ಮದ ಮೇಲಿರುವ ಕಪ್ಪು ಚುಕ್ಕೆಗಳು, ಸೂರ್ಯನ ಕಿರಣಗಳಿಂದ ಹಾನಿಗೊಳಗಾದ ಚರ್ಮ, ಸುಕ್ಕುಗಳು, ಗೆರೆಗಳನ್ನು ಈ ಕಡಲೆ ಹಿಟ್ಟು ಗುಣಪಡಿಸುತ್ತದೆ ಅಲ್ಲದೇ ತ್ವಚೆಗೆ ವಿಶೇಷವಾದ ಬಣ್ಣವನ್ನು ನೀಡಿ ಮೃದುವಾಗಿಸುತ್ತದೆ. ಹಾಗಿದ್ದರೆ ಕಡಲೆಹಿಟ್ಟಿನ ಫೇಸ್ ಪ್ಯಾಕ್ ಹೇಗೆ ಮಾಡುವುದು ಎಂದರೆ ಕಡಲೆ ಹಿಟ್ಟಿಗೆ ರೋಜ್ ವಾಟರ್, ಮೊಸರು ಅಥವಾ ಹಾಲು ಮಿಶ್ರಣ ಮಾಡಿ ಅದನ್ನು ಹಚ್ಚಿಕೊಳ್ಳಿ. ಅದಕ್ಕೆ ಜೇನುತುಪ್ಪ ಅರಿಶಿನ ಸೇರಿಸಿ ಬಳಸಿದರೆ ಮತ್ತಷ್ಟು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು.