“S ” ಹೆಸರಿನ ಜನರಿಗೆ 2024 ಹೇಗಿರುತ್ತದೆ

ನಾವು ಈ ಲೇಖನದಲ್ಲಿ “S ” ಹೆಸರಿನ ಜನರಿಗೆ 2024 ಹೇಗಿರುತ್ತದೆ . ಮತ್ತು ‘ಎಸ್’ ” ಅಕ್ಷರದ ಕುಂಭ ರಾಶಿಯ ಜನರ ಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ . ನಿಮ್ಮ ಹೆಸರಿನ ಮೊದಲ ಅಕ್ಷರ “ಎಸ್ ” ಆಗಿದ್ದರೆ ಅಂದರೆ ಈ ಅಕ್ಷರರಿಂದ ಪ್ರಾರಂಭ ಆಗುತ್ತಿದ್ದರೆ , 2004 ರ ವರ್ಷದ ರಾಶಿಯ ಫಲ ಹೇಗಿರುತ್ತದೆ ಎಂದು ನೋಡೋಣ. ಇಲ್ಲಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಮತ್ತು ನಿಮ್ಮ ವಿಶೇಷತೆಯ ಬಗ್ಗೆ ಮೊದಲು ತಿಳಿಸಿಕೊಡಲಾಗುತ್ತದೆ. ನಿಮ್ಮ ಕೊರತೆಯ ಬಗ್ಗೆ . ಆ ನಂತರ 2024ರ ವರ್ಷ ಹೇಗಿರುತ್ತದೆ ಎಂಬುದನ್ನು ಕೂಡ ತಿಳಿಸಲಾಗುತ್ತದೆ.

ನಿಮಗೆ 2024 ರಿಂದ 2027 ರ ವರೆಗೆ ಯಾವ ರೀತಿಯ ಫಲ ದೊರೆಯುತ್ತದೆ ಎಂದು ಕೂಡ ತಿಳಿಸಲಾಗಿದೆ. ವೇದಿಕ ಜ್ಯೋತಿಷ್ಯದ ಅನುಸಾರವಾಗಿ ಯಾವ ವ್ಯಕ್ತಿಯ ಹೆಸರು ಎಸ್ ಅಥವಾ ” ಸ” ಅಕ್ಷರದಿಂದ ಶುರುವಾಗುತ್ತದೆಯೋ ಸಾಮಾನ್ಯವಾಗಿ ಇಂತಹ ಜನರಲ್ಲಿ ಕೆಲವು ವಿಶೇಷತೆಗಳು ಇರುತ್ತವೆ. ಇವರು ಬೇರೆಯವರ ಬಗ್ಗೆ ಹೆಚ್ಚಾಗಿ ಯೋಚನೆ ಮಾಡುತ್ತಾರೆ. ಇವರು ತಮ್ಮ ಇಚ್ಚೆಯ ಪ್ರಕಾರ ಕೆಲಸಗಳು ನಡೆಯಲಿ ಎಂದು ಇಷ್ಟ ಪಡುತ್ತಾರೆ. ಇವರು ತಮ್ಮ ಮುಂದೆ ಇರುವ ಜನರಿಗೆ ಭಾವನಾತ್ಮಕವಾಗಿ ಗೌರವ ಕೊಡುತ್ತಾರೆ.

ಮತ್ತು ಸ್ಪಂಧಿಸುತ್ತಾರೆ. ಇವರ ಸ್ವಭಾವ ಈ ರೀತಿಯಾಗಿಯೇ ಇರುತ್ತದೆ . ಪ್ರೀತಿಯ ವಿಷಯದಲ್ಲಿ ಇವರು ಅದೃಷ್ಟವಂತರಲ್ಲ ಎಂದು ಹೇಳಬಹುದು . ಸಾಮಾನ್ಯವಾಗಿ ಜೀವನದಲ್ಲಿ ನಿಜವಾದ ಪ್ರೀತಿ ಸಿಗುತ್ತದೆ. ಕೆಲವೊಮ್ಮೆ ಸಿಗುವುದಿಲ್ಲ. ಒಂದು ವೇಳೆ ಸಂಬಂಧಗಳ ಬಗ್ಗೆ ನೋಡುವುದಾದರೆ , ಜೀವನವನ್ನು ಇವರು ಚೆನ್ನಾಗಿ ನಡೆಸುತ್ತಾರೆ. ಜೀವನ ಸಂಗಾತಿಯ ಮೇಲೆ ತುಂಬಾ ಗೌರವ ಇರುತ್ತದೆ. ಇವರ ಜೀವನದಲ್ಲಿ ತುಂಬಾ ಏರು – ಪೇರುಗಳು ನಡೆಯುತ್ತಿರುತ್ತವೆ.

ಇವರಿಗೆ 35 ವರ್ಷಗಳು ಕಳೆದ ನಂತರ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ . ಇವರ ವೃತ್ತಿ ಆಯ್ಕೆ ಮಾಡಿಕೊಳ್ಳುವಾಗ ಎಡಗುತ್ತಾರೆ . ಕೆಲವು ಕಠಿಣ ಸಮಸ್ಯೆಗಳು ಕೂಡ ಎದುರಾಗುತ್ತವೆ. ಇವರಿಗೆ 35 ಅಥವಾ 36 ವರ್ಷಗಳು ಕಳೆದ ನಂತರ ಇವರು ತಮ್ಮ ಜೀವನದಲ್ಲಿ ಹೆಚ್ಚಾಗಿ ಅದ್ಭುತವಾದ ಬದಲಾವಣೆಗಳು ನಡೆಯುತ್ತವೆ. ಅಂದರೆ ಯಾವುದೇ ವಿಷಯಗಳು ಇವರ ಪಕ್ಷದಲ್ಲಿ ಬರಲು ಶುರು ಆಗುತ್ತದೆ. ಇವರು ತಮ್ಮದೇ ಕೆಲಸ ಕಾರ್ಯಗಳನ್ನು ಮಾಡಲು ಇಷ್ಟಪಡುತ್ತಾರೆ .

ಇವರಿಗೆ ಕೃಷಿ ಕೆಲಸ ಮಾಡಲು ಬಹಳ ಆಸಕ್ತಿ ಇರುತ್ತದೆ .ಇವರಲ್ಲಿ ಚಾಲಾಕಿ ಗುಣ ಹೆಚ್ಚಾಗಿರುತ್ತದೆ . ಇವರಿಗೆ ಬೇರೆಯವರ ಕೈ ಕೆಳಗಡೆ ಕೆಲಸ ಮಾಡಲು ಇಷ್ಟ ಆಗುವುದಿಲ್ಲ .ಈ ವಿಷಯಗಳ ಜೊತೆಗೆ ಇವರಲ್ಲಿ ಹೆಚ್ಚಿನ ಏರುಪೇರುಗಳು ನಡೆಯುತ್ತಲೇ ಇರುತ್ತವೆ . ಇದೇ ಕಾರಣದಿಂದ ಇವರು ಎಲ್ಲರೊಂದಿಗೆ ಒಂದೇ ತರ ಇರುವುದಿಲ್ಲ .ಯಾರಾದರೂ ವ್ಯಕ್ತಿ ಇವರ ಕಣ್ಣಿನಲ್ಲಿ ಕೆಳಗೆ ಬಿದ್ದರೆ , ಅವರು ಎಷ್ಟೇ ಪ್ರಯತ್ನ ಮಾಡಿದರು ಇವರು ಹಿಂತುರುಗಿ ನೋಡುವುದಿಲ್ಲ .

ಇಂಥಹ ವ್ಯಕ್ತಿಗಳು ಒಂದು ಬಾರಿ ಮೋಸ ಮಾಡಿದರೆ , ಮರಳಿ ಮೋಸ ಮಾಡುತ್ತಾರೆ ಎಂಬುದು ಇವರಿಗೆ ಚೆನ್ನಾಗಿ ಗೊತ್ತಿರುತ್ತದೆ .ಸ್ವಭಾವದಲ್ಲಿ ಇವರು ಸ್ವಲ್ಪ ಹಠ ವಾದಿಗಳು ಆಗಿರುತ್ತಾರೆ .ಇಲ್ಲಿ ಜನರು ಇವರ ಬಗ್ಗೆ ಅಂದುಕೊಂಡ ಹಾಗೆ ಇವರು ಇರುವುದಿಲ್ಲ .ಇವರಿಗೆ ಒಂದು ಬಾರಿ ಏನನ್ನಾದರೂ ಪಡೆಯುವ ಇಚ್ಛೆ ಆದರೆ , ಅದನ್ನ ಪಡೆಯುವವರೆಗೂ ಬಿಡುವುದಿಲ್ಲ .ಇವರು ಬೇರೆಯವರ ಕಷ್ಟಗಳಿಗೆ ಮುರುಗುವ ಗುಣವಿದೆ ..ಮತ್ತು ಸಹಾಯವನ್ನು ಕೂಡ ಮಾಡುತ್ತಾರೆ .

ಇವರು ಜೀವನ ನಡೆಸುವ ಸಿದ್ಧಾಂತ ಸ್ವಲ್ಪ ಭಿನ್ನವಾಗಿರುತ್ತದೆ . ಕುಟುಂಬದಲ್ಲಿ ಜನರ ನಡುವಿನ ಸಂಬಂಧವನ್ನು ಇವರು ಚೆನ್ನಾಗಿ ಇಟ್ಟುಕೊಂಡಿರುತ್ತಾರೆ . ತಮ್ಮ ಬಗ್ಗೆ ಕಾಳಜಿ ಕಮ್ಮಿ ಆದರೂ ಕುಟುಂಬದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ . ಎಸ್ ಹೆಸರಿನ ವ್ಯಕ್ತಿಗಳು ಯಾರಿಗೂ ಸಹ ಹೆದರುವುದಿಲ್ಲ . ಒಂದು ವೇಳೆ ಇವರ ಕಾರಣದಿಂದ ಬೇರೆಯವರ ಹೃದಯಕ್ಕೆ ನೋವಾದರೆ ಅದರ ಬಗ್ಗೆ ಕೊರಗುತ್ತಾರೆ . ಅಂದರೆ ಪಶ್ಚಾತಾಪ ಪಡುತ್ತಾರೆ . ಪ್ರೀತಿಯಲ್ಲಿ ಸ್ವಲ್ಪ ಅದೃಷ್ಟ ಕಮ್ಮಿ ಇರುವುದರಿಂದ ,

ಪ್ರೀತಿಗಾಗಿ ಇವರು ಜೀವನವಿಡಿ ಕಾಯುತ್ತಾರೆ..ಇವರು ಯಾವುದೇ ಕಾರಣಕ್ಕೂ ಸಂಗಾತಿಯನ್ನು ಬಿಟ್ಟು ಕೊಡುವುದಿಲ್ಲ . ಇವರು ತಮ್ಮ ಹೃದಯದಿಂದ ಪೂರ್ತಿಯಾಗಿ ಒಪ್ಪಿ ಕೊಂಡಿರುತ್ತಾರೆ . ಎಸ್ ಹೆಸರಿನ ವ್ಯಕ್ತಿಯ ರಾಶಿ ಏನು ಇರುತ್ತದೆ ಎಂಬುದನ್ನು ನೋಡುವುದಾದರೆ , ಕುಂಭ ರಾಶಿಯು ಬರುತ್ತದೆ . ಇದು ಜ್ಯೋತಿಷ್ಯ ಶಾಸ್ತ್ರದ 12 ರಾಶಿಗಳಲ್ಲಿ ಒಂದು ರಾಶಿಯಾಗಿದ್ದು , ವ್ಯಕ್ತಿಯ ಹೆಸರಿನ ಮೊದಲನೇ ಅಕ್ಷರವೂ ಅವರ ರಾಶಿಯ ಬಗ್ಗೆ ತಿಳಿಸಿಕೊಡುತ್ತದೆ .

ಹಲವಾರು ಬಾರಿ ಜನರ ಜನ್ಮ ತಿಥಿ ಇಲ್ಲದ ಕಾರಣದಿಂದಾಗಿ , ರಾಶಿಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ . ಆದರೆ ಯಾವ ಹೆಸರಿನಿಂದ ನಿಮ್ಮನ್ನು ಕರೆಯತ್ತಿರುತ್ತಾರೋ ಅದರ ಪ್ರಭಾವ ಜೀವನವಿಡೀ ಇರುತ್ತದೆ. ಇದರ ಜೊತೆಗೆ ಗ್ರಹ ನಕ್ಷತ್ರಗಳು ಕೂಡ ಇದರ ಪ್ರಭಾವವನ್ನು ಬೀರುತ್ತದೆ . ಹಾಗಾಗಿ ಇಲ್ಲಿ ಹೆಸರಿನ ಮೊದಲ ಅಕ್ಷರವೂ ನಿಮಗಾಗಿ ತುಂಬಾ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ . ಹೆಸರಿನ ಮೇಲೆ ನಿಮ್ಮ ಜೀವನವೂ ಕೂಡ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ .

ಎಸ್ ಹೆಸರಿನ ಜನರು ಕುಂಭ ರಾಶಿಯಲ್ಲಿ ಬರುತ್ತಾರೆ .ಇವರ ಜೀವನದಲ್ಲಿ ಸ್ವಲ್ಪ ಕಷ್ಟಗಳು ಏರುಪೇರುಗಳು ಬರುತ್ತವೆ . ತಮ್ಮ ಕಡೆಯಿಂದ ಯಾವುದೇ ಕೆಲಸವನ್ನು ಮುರಿಯುವ ಕಾರ್ಯ ಮಾಡುವುದಿಲ್ಲ .ಹಾಗೆಯೇ ಇವರಲ್ಲಿ ದಯೆಯನ್ನು ತೋರುವ ಗುಣ ಹೆಚ್ಚಾಗಿರುತ್ತದೆ . ಇವರಲ್ಲಿ ಸಂಕೋಚದ ಸ್ವಭಾವವು ಕೂಡ ಇರುತ್ತದೆ .ಇವರ ಉಳಿದ ಜೀವನ ಸುಖ ಮಯವಾಗಿ ಇರುತ್ತದೆ . ಇವರ ಜೀವನದ ಮೊದಲನೆಯ ಭಾಗ ಸುಖದಿಂದ ಇರುತ್ತದೆ . ಎರಡನೇ ಭಾಗ ಜೀವನದಲ್ಲಿ ಸ್ವಲ್ಪ ಕಠಿಣತೆಯನ್ನು ಹೊಂದಿರುತ್ತದೆ .

ಉಳಿದ ಜೀವನ ಹೆಸರನ್ನು ಮತ್ತು ಹಣವನ್ನು ಗಳಿಸಲು ಸಹಾಯ ಮಾಡುತ್ತದೆ . ಇವರ ವ್ಯಕ್ತಿತ್ವ ತುಂಬಾ ಚೆನ್ನಾಗಿರುತ್ತದೆ.. ಆಚೆಯಿಂದ ನೋಡಲು ಇವರು ತುಂಬಾ ಶಾಂತವಾಗಿ ಮತ್ತು ಸುಂದರವಾಗಿ ಕಂಡರೂ , ಒಳ ಮನಸ್ಸಿನಲ್ಲಿ ಏರುಪೇರುಗಳು ಹೆಚ್ಚಾಗಿರುತ್ತದೆ . ಜೀವನದಲ್ಲಿ ಹಲವಾರು ಬಾರಿ ಮೋಸಕ್ಕೆ ಒಳಗಾಗುತ್ತಾರೆ . ಆದರೆ ಧೈರ್ಯ ಕಳೆದುಕೊಳ್ಳುವುದಿಲ್ಲ . ಯಾವುದೇ ಕಾರಣಕ್ಕೂ ಇವರು ತಮ್ಮ ತಂದೆ ತಾಯಿಗಳ ವಿರುದ್ಧವಾಗಿ ನಡೆದು ಕೊಳ್ಳುವುದಿಲ್ಲ .

ವಿದ್ಯಾರ್ಥಿಗಳಿಗೆ ಜೀವನದಲ್ಲಿ ತುಂಬಾ ಯಶಸ್ಸು ದೊರೆಯುತ್ತದೆ . ಇವರು ಸ್ಪರ್ಧೆಗಳಲ್ಲಿ ಹೆಚ್ಚಿನ ಫಲಿತಾಂಶವನ್ನು ಪಡೆಯುತ್ತಾರೆ . ಏನೇ ಸಮಸ್ಯೆ ಬಂದರೂ ಅವುಗಳಿಗೆ ಸಮಾಧಾನವನ್ನು ಇವರೇ ಹುಡುಕಿ ಕೊಳ್ಳುತ್ತಾರೆ . ಇವರು ತಮ್ಮ ವ್ಯಕ್ತಿತ್ವದ ಪರವಾಗಿ ಲಾಭವನ್ನು ಖಂಡಿತ ಗಳಿಸುತ್ತಾರೆ . ಕುಂಭ ರಾಶಿಯವರ ಜನರ ಜೀವನದಲ್ಲಿ 2024 ರಿಂದ 2027ರ ವರೆಗೆ ಯಾವ ರೀತಿಯ ಘಟನೆಗಳು ನಡೆಯುತ್ತವೆ ಎಂಬುದನ್ನು ತಿಳಿಯೋಣ . ಇಲ್ಲಿ ತುಂಬಾ ದೊಡ್ಡ ಬದಲಾವಣೆಗಳು ಆಗಲಿದೆ . ಆರ್ಥಿಕ ಸ್ಥಿತಿ ಚೆನ್ನಾಗಿರಲು ನಿಮಗೆ ಇದು ಒಳ್ಳೆಯ ಸಮಯ ಆಗಿರುತ್ತದೆ . ಕುಂಭ ರಾಶಿಯ ಸ್ವಾಮಿ ಶನಿ ದೇವರು ಆಗಿರುತ್ತಾರೆ .

ಶನಿ ದೇವರ ಕೃಪೆಯಿಂದ ನಿಮಗೆ ಒಳ್ಳೆಯ ಲಾಭಗಳು ಆಗುತ್ತದೆ . ಶನಿ ಮತ್ತು ಬುಧ ನಿಮಗೆ ಒಳ್ಳೆಯ ಯೋಗವನ್ನು ನೀಡುತ್ತಾರೆ . ನೌಕರಿಯನ್ನು ಮಾಡುವ ಜನರಿಗೆ 2024ರಲ್ಲಿ ಯಶಸ್ಸು ದೊರೆಯುತ್ತದೆ . ನಿಮ್ಮ ಯೋಜನೆಯಲ್ಲಿ ಯಶಸ್ಸನ್ನು ಗಳಿಸಬಹುದು . ನೀವು ಯಾವುದೇ ವಿಚಾರಗಳನ್ನು ಮಾಡಿದರು ಅದರಲ್ಲಿ ಫಲ ದೊರೆಯುತ್ತದೆ . ನಿಂತು ಹೋಗಿರುವ ಕಾರ್ಯಗಳು ಮತ್ತೆ ಪುನರಾರಂಭ ಆಗುತ್ತದೆ . ಕುಟುಂಬದವರ ಸಹಾಯ ಕೂಡ ನಿಮಗೆ ಸಿಗುತ್ತದೆ . ವ್ಯವಸಾಯದಲ್ಲಿ ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ .

ನೀವು ಬೇರೆಯವರ ಮಾತನ್ನು ಕೇಳಿ ಹಣ ಹೂಡಿಕೆ ಮಾಡಬೇಡಿ .ಇತಿಹಾಸ ಬದಲಾಗಲಿದೆ . ವಿದೇಶಕ್ಕೆ ಹೋಗುವ ಯೋಗ ಕೂಡ ಇದೆ .ಗೃಹಸ್ಥ ಜೀವನ ನಿಮ್ಮ ವಿಷಯದಲ್ಲಿ ತುಂಬಾ ಚೆನ್ನಾಗಿರುತ್ತದೆ . 2024 ಜನವರಿ , ಫೆಬ್ರವರಿ , ಮತ್ತು ಮಾರ್ಚ್ ಉತ್ತಮವಾದ ಮಾಸಗಳು . ಕೆಲಸದಲ್ಲಿ ವರ್ಗಾವಣೆಯ ಯೋಗ ಕೂಡ ಇದೆ . ನಿಮಗೆ ತುಂಬಾ ಒಳ್ಳೆಯ ಅವಕಾಶಗಳು ಒದಗಿ ಬರುತ್ತದೆ . 2೦24ರ ಅಕ್ಟೋಬರ್ , ನವಂಬರ್ , ಮತ್ತು ಡಿಸೆಂಬರ್ ಮಾಸಗಳು ಕೂಡ ನಿಮಗೆ ಒಳ್ಳೆಯ ಮಾಸಗಳು ಆಗಿರುತ್ತದೆ .

ಡಿಸೆಂಬರ್ ನಲ್ಲಿ ನಿಮಗೆ ತುಂಬಾ ಒಳ್ಳೆಯ ಅವಕಾಶಗಳು ಕೂಡ ಸಿಗುತ್ತದೆ . ದೊಡ್ಡ ಜನರಿಂದ ನಿಮಗೆ ಗೌರವ ಘನತೆಗಳು ಕೂಡ ಸಿಗುತ್ತದೆ . ನೀವು ತುಂಬಾ ಖುಷಿಯಾಗಿ ಇರುತ್ತೀರಾ . ನಿಮಗೆ ಹಳೆಯ ವರ್ಷಕ್ಕಿಂತ ಮುಂದಿನ ವರ್ಷಗಳಲ್ಲಿ ಒಳ್ಳೆಯ ಅವಕಾಶಗಳು ಮತ್ತು ಲಾಭಗಳು ದೊರೆಯುತ್ತವೆ . ಬ್ಯಾಂಕ್ ಕಡೆಯಿಂದ ನಿಮಗೆ ಲೋನ್ ದೊರೆಯುವುದರಿಂದ ನಿಮ್ಮ ಆರ್ಥಿಕ ಸುಧಾರಣೆ ಸುಧಾರಿಸುತ್ತದೆ ಎಂದು ಹೇಳಬಹುದು . ತುಂಬಾ ದಿನಗಳ ನಂತರ ನಿಮ್ಮ ಮನಸ್ಥಿತಿಗಳು ಈಡೇರಲು ಸಾಧ್ಯವಾಗುತ್ತಿದೆ . ಹಳೆಯ ವರ್ಷದ ಸಮಸ್ಯೆಗಳು ಎಲ್ಲವೂ ಈ ವರ್ಷ ಮುಕ್ತಾಯವಾಗುತ್ತದೆ .

Leave a Comment