ನಾವು ಈ ಲೇಖನದಲ್ಲಿ 2024ರಲ್ಲಿ ಕನ್ಯಾ ರಾಶಿಗೆ ಶನಿ ಫಲ ಹೇಗೆ ಇರುತ್ತದೆ. ಎಂದು ತಿಳಿಯೋಣ.
2024ರಲ್ಲಿ ಶನಿ ಪರಿವರ್ತನೆ ಇಲ್ಲ. ಶನಿ ಹಸ್ತನಾಗುತ್ತಾನೆ. ಜೊತೆಗೆ ವಕ್ರನಾಗಿ ಕಾಡುವುದಕ್ಕೆ ಶುರು ಮಾಡುತ್ತಾನೆ. ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ . ಅನ್ನುವ ಹಾಗೆ ಇಂತಹ ಘಟನೆ ಈ ವರ್ಷ ನಡೆಯುತ್ತದೆ. ಕೆಲವರಿಗೆ ಭಯ , ಆತಂಕ, ಗೊಂದಲ ಕಾಡಬಹುದು . ಮತ್ತು ಒಂದಷ್ಟು ದಿನ ಹಣಕಾಸಿನ ವಿಚಾರದಲ್ಲಿ ತುಂಬಾ ನಷ್ಟ ಆಗುವ ಸಾಧ್ಯತೆ ಇರುತ್ತದೆ . ಈ ವಿಷಯ ಎಚ್ಚರಿಕೆಯ ಮಾತು ಆಗಿರುತ್ತದೆ.
ನೀವು ಎಚ್ಚರಿಕೆಯಿಂದ ಇರಬೇಕಾದ ದಿನಗಳು ಮತ್ತು ಯಾವಾಗ ಶನಿ ನಿಮ್ಮ ನಷ್ಟವನ್ನು ತುಂಬಿ ಕೊಡುತ್ತಾನೆ. ಎಂಬುದನ್ನು ನೋಡೋಣ. ಯಾವ ತಿಂಗಳಲ್ಲಿ ಹುಷಾರಾಗಿ ಇರಬೇಕು ಎಂದರೆ, ಈ ವರ್ಷ ಎರಡು ಮುಖ್ಯ ಘಟನೆಗಳು ನಡೆಯುತ್ತದೆ . ಅದರಲ್ಲಿ ಮೊದಲನೆಯದಾಗಿ ಫೆಬ್ರವರಿ 11 ಕ್ಕೆ ಶನಿ ಹಸ್ತನಾಗುತ್ತಾನೆ. ಹಸ್ತನಾಗುವುದು ಎಂದರೆ , ಭೂಮಿಯಿಂದ ಶನಿ ದೂರ ಹೋಗುತ್ತಾ , ಸೂರ್ಯನಿಗೆ ಹತ್ತಿರ ಆಗುತ್ತಾನೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಸಮಯದಲ್ಲಿ ಶನಿಯಿಂದ ನಷ್ಟ ಆಗುವ ಸೂಚನೆ ಕಾಣುತ್ತಿದೆ. ಕನ್ಯಾ ರಾಶಿಯವರು ತುಂಬಾ ಆಕರ್ಷಕವಾಗಿ ಇರುತ್ತಾರೆ .
ಮತ್ತು ತುಂಬಾ ಬುದ್ಧಿವಂತರು ಕೂಡ ಆಗಿರುತ್ತಾರೆ . ಈ ರಾಶಿಯವರಿಗೆ ಅಂದುಕೊಂಡ ಕೆಲಸವನ್ನು ಸಾಧಿಸುವ ತನಕ ನೆಮ್ಮದಿ ಇರುವುದಿಲ್ಲ . ಕೆಲವರಂತೂ ಬೇಗ ಕೆಲಸ ಮುಗಿಸುತ್ತಾರೆ .ಆದರೆ ಶನಿಯ ಹಸ್ತ ಅನ್ನೋದು ನಿಮ್ಮ ವೇಗದ ಮಿತಿಯನ್ನು ಕಡಿಮೆ ಮಾಡುತ್ತದೆ . ನಿಮ್ಮನ್ನು ಶನಿ ನಿಯಂತ್ರಣದಲ್ಲಿ ಇಡುತ್ತಾನೆ .ಬೇಗ ಕೆಲಸ ಮುಗಿಸುತ್ತಿದ್ದ ಈ ರಾಶಿಯವರು ಶನಿಯ ಪ್ರಭಾವದಿಂದ ಕೆಲಸವನ್ನು ಮುಗಿಸಲು ತುಂಬಾ ಕಷ್ಟ ಪಡಬಹುದು . ಶನಿ ಹಸ್ತನಾಗುತ್ತಿರುವುದು
ನಿಮ್ಮ ಷಷ್ಟ ಭಾವದಲ್ಲಿ, ಷಷ್ಟ ಭಾವ ಎಂದರೆ, ಆರನೇ ಮನೆ . ಆದರೆ ಹೊಸ ಕೆಲಸ ಮಾಡುವವರಿಗೆ ಕೆಲಸ ಮಾಡುವ ಜಾಗದಲ್ಲಿ ಅಡೆ -ತಡೆಗಳು , ಇಲ್ಲ ಅಂದರೆ ಶತ್ರುಗಳು ಸಹ ಇರಬಹುದು. ಸಾಲ ಮಾಡುವ ಪರಿಸ್ಥಿತಿ ಬಂದರೂ ಬರಬಹುದು. ಹಣದ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಆರನೇ ಮನೆ ಮುಖ್ಯವಾಗಿ ಆರೋಗ್ಯಕ್ಕೆ ಸಂಬಂಧ ಪಟ್ಟಿರುತ್ತದೆ. ಆದರೆ ಆರೋಗ್ಯ ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲೆಯೇ ಇರುತ್ತದೆ. ಈ ಶನಿ ಜಾಸ್ತಿ ದಿನ ಹಸ್ತನಾಗಿರುವುದಿಲ್ಲ. ಫೆಬ್ರವರಿ 11 ರಿಂದ ಮಾರ್ಚ್ 18 ರ ವರೆಗೆ ಅಂದರೆ 37 ದಿನಗಳ ಕಾಲ ಅಷ್ಟೇ ಹಸ್ತನಾಗಿರುತ್ತಾನೆ.
ನಂತರ ಶನಿ ಉದಯ ಆದ ಮೇಲೆ ನಿಮ್ಮ ಕೆಲಸ ವೇಗವಾಗಿ ನಡೆಯುತ್ತದೆ. ನೀವು ಕೆಲಸ ಮಾಡುವ ಕಡೆ ಅಭಿವೃದ್ಧಿಯಾಗುತ್ತದೆ. ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ಹಾಗೆಯೇ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಒಟ್ಟಾರೆಯಾಗಿ ಶನಿ ಒಳ್ಳೆಯ ಫಲವನ್ನು ಕೊಡಲು ಶುರು ಮಾಡುತ್ತಾನೆ. ಅದರಲ್ಲೂ ಮೇ ನಂತರ ಗುರು ಭಾಗ್ಯಕ್ಕೆ ಹೋಗುವುದರಿಂದ, ಸ್ವಲ್ಪ ಹೆಚ್ಚಾಗಿ ಲಾಭ ಆಗುವ ನಿರೀಕ್ಷೆ ಇದೆ. ಶುಭ ಫಲಗಳು ಹೆಚ್ಚಿನ ದಿನ ಉಳಿಯುವುದಿಲ್ಲ. ನಿಮಗೆ ದೊಡ್ಡದಾದ ಶಾಕ್ ನೀಡಲು ಜೂನ್ ಕೊನೆಯಲ್ಲಿ ತಯಾರು ಆಗುತ್ತಿದ್ದಾನೆ. ವಕ್ರ ಶನಿಯ ರೂಪದಲ್ಲಿ ಮತ್ತಷ್ಟು ಕಷ್ಟಗಳನ್ನು ನೀಡುತ್ತಾನೆ.
ಶನಿ 2023 ಜನವರಿ 17 ರಿಂದ ಕುಂಭ ರಾಶಿಯಲ್ಲಿ ಇದ್ದಾನೆ. ಆದರೆ ಇಷ್ಟು ದಿನ ನೇರ ಚಲನೆಯಲ್ಲಿ ಇದ್ದ, ಈ ವರ್ಷ ಜೂನ್ 29ಕ್ಕೆ ಹಿಮ್ಮುಖ ಚಲನೆಯನ್ನು ಶುರು ಮಾಡುತ್ತಾನೆ. ಹಿಮ್ಮುಖ ಚಲನೆ ಎಂದರೆ, ಇದಕ್ಕೆ ವಕ್ರ ಶನಿ ಎಂದೂ ಕೂಡ ಕರೆಯುತ್ತಾರೆ . ವಕ್ರ ಶನಿ ಬಂದಾಗ ಮೇ ತಿಂಗಳಲ್ಲಿ ಆರೋಗ್ಯದ ಬಗ್ಗೆ ನೀವು ಕಾಳಜಿಯನ್ನು ತೆಗೆದುಕೊಳ್ಳಬೇಕು. ಸಣ್ಣ ನಿರ್ಲಕ್ಷ್ಯ ದೊಡ್ಡ ಹೊಡೆತ ಕೊಡುವ ಸಾಧ್ಯತೆ ಇದೆ. ಇದೇ ರೀತಿಯಾಗಿ ನಿಮ್ಮ ಜೀವನದಲ್ಲಿ ಒಂದಷ್ಟು ಘಟನೆಗಳು ನಡೆಯುತ್ತವೆ.
ಹಣಕಾಸಿನ ವಿಚಾರದಲ್ಲಿ ಸ್ವಲ್ಪ ನಿರ್ಣಾಯ ದಾಯಕವಾಗಬಹುದು. ಜೊತೆಗೆ ನಿಮ್ಮ ಜಾತಕದಲ್ಲಿ ಬೇರೆ ಗ್ರಹಗಳು ದುರ್ಬಲವಾಗಿದೆ, ಅಂದರೆ ಹೆಚ್ಚು ನಷ್ಟ ಕೂಡ ಆಗಬಹುದು. ಕೆಲವರಿಗೆ ವೃತ್ತಿ ಜೀವನದಲ್ಲಿ ಹಿನ್ನಡೆ ಆಗುವ ಸಾಧ್ಯತೆ ಇದೆ. ಮಾಡುವ ಕೆಲಸದಲ್ಲಿ ತೃಪ್ತಿ ಇರುವುದಿಲ್ಲ . ಅವಮಾನ ಕೂಡ ಆಗುವ ಸಾಧ್ಯತೆ ಇದೆ. ಶನಿಯನ್ನು ನಾವು ಮಂದ ಎಂದು ಕರೆಯುತ್ತೇವೆ. ಮಂದ ಎಂದರೆ, ನಿಧಾನ ಎಂದರ್ಥ . ನೀವು ಅಂದುಕೊಳ್ಳುವ ಕೆಲಸಗಳು ಕೂಡ ನಿಧಾನ ಆಗುವ ಸಾಧ್ಯತೆ ಹೆಚ್ಚು .
ನಿಮ್ಮ ಧೈರ್ಯ ಕುಂದುವ ಸಾಧ್ಯತೆ ಇರುತ್ತದೆ . ಎಲ್ಲಾ ತರಹದ ಭಯಗಳು ಕಾಡುವುದಕ್ಕೆ ಶುರು ಆಗುತ್ತದೆ. ಶನಿ ವಕ್ರವಾಗಿರುವ ಸಮಯದಲ್ಲಿ ಹೆಚ್ಚಿನ ಎಚ್ಚರಿಕೆ ಒಳ್ಳೆಯದು . ಜೂನ್ 29 ರಿಂದ ನವೆಂಬರ್ 15ರ ತನಕದ ದಿನಗಳು . ನಾಲ್ಕುವರೆ ತಿಂಗಳು ಅಲ್ಲಿಯ ತನಕ ಶನಿಯ ಕಾಟದಿಂದ ಮುಕ್ತಿ ಸಿಗಬೇಕು ಎಂದರೆ, ಶನಿಯ ಮಂತ್ರಗಳನ್ನು ಪಠಣೆ ಮಾಡಿ, ಶನಿ ಆರನೇ ಮನೆಯಲ್ಲಿ ಇದ್ದಾಗ ತುಂಬಾ ಒಳ್ಳೆಯ ಫಲಗಳನ್ನು ಕೊಡುತ್ತಾನೆ. ಒಳ್ಳೆಯ ಫಲಗಳ ದಿಕ್ಕು ತಪ್ಪಿಸುವುದಕ್ಕೆ ಶನಿ ಹಸ್ತ , ವಕ್ರ ಶನಿ ಇರುವ ದಿನಗಳಲ್ಲಿ ಬಿಟ್ಟು ಉಳಿದಿರುವ ದಿನಗಳು ನಿಮಗೆ ಶುಭ ದಿನಗಳು ಆಗಿರುತ್ತದೆ.
ಅದರಲ್ಲೂ ಆರೋಗ್ಯದ ವಿಚಾರದಲ್ಲೂ ಒಳ್ಳೆಯದು ಆಗುತ್ತದೆ. ವೃತ್ತಿ ಜೀವನಕ್ಕೆ ಸಂಬಂಧ ಪಟ್ಟಂತೆ ಒಳ್ಳೆಯ ಯಶಸ್ಸು ದೊರೆಯುತ್ತದೆ. ಅದೃಷ್ಟ ಚೆನ್ನಾಗಿರುತ್ತದೆ. ಹಣಕಾಸಿನ ವಿಚಾರದಲ್ಲಿ ಸ್ಥಿರತೆ ಇರುತ್ತದೆ. ಅಂದರೆ ನಿಮ್ಮ ಪರಿಶ್ರಮ ಕೂಡ ಇರಬೇಕು. ಕೆಲಸ ಬದಲಾಯಿಸುವವರಿಗೆ ಒಳ್ಳೆಯ ಅವಕಾಶ ದೊರೆಯುತ್ತದೆ. ವರ್ಗಾವಣೆಯ ಸಾಧ್ಯತೆ ಕೂಡ ಇದೆ. ಈ ವರ್ಷ 65% ಅಷ್ಟು ಶನಿಯಿಂದ ಚೆನ್ನಾಗಿ ಕಳೆಯುತ್ತದೆ. ಆದರೆ ನಿಮಗೆ ಹೆಚ್ಚಿನ ತಾಳ್ಮೆ ಇರಬೇಕು.