ನಾವು ಈ ಲೇಖನದಲ್ಲಿ ಇಂತಹ ಕಪ್ಪು ದಾರ ಮರೆತರೂ ಕಟ್ಟಿ ಕೊಳ್ಳಬಾರದು ಇದರ ನಕಾರಾತ್ಮಕ ಪ್ರಭಾವ ಹೇಗೆ ಬೀರುತ್ತದೆ. ಎಂದು ತಿಳಿದುಕೊಳ್ಳೊಣ . ಕಪ್ಪು ದಾರದ ರಹಸ್ಯವನ್ನು ತಿಳಿದುಕೊಳ್ಳೋಣ.
ಪ್ರಾಚೀನ ಕಾಲದಿಂದ ಕಪ್ಪು ದಾರವನ್ನು ಏಕೆ ಬಳಸುತ್ತಿದ್ದಾರೆ. ನೀವೂ ಸಹ ಹಲವಾರು ಜನರ ಕೈಗಳಲ್ಲಿ , ಕಾಲುಗಳಲ್ಲಿ, ಕೊರಳಲ್ಲಿ ಕಪ್ಪು ದಾರವನ್ನು ಖಂಡಿತ ನೋಡಿರುತ್ತೀರಿ. ಜನರು ಕಪ್ಪು ದಾರವನ್ನು ಏಕೆ ಧರಿಸುತ್ತಾರೆ. ಇದರ ಹಿಂದೆ ದೊಡ್ಡದಾದ ರಹಸ್ಯ ಇದೆ. ಕಪ್ಪು ದಾರವನ್ನು ಕೇವಲ ಕೆಟ್ಟ ದೃಷ್ಟಿಯನ್ನು ಮಾತ್ರ ದೂರ ಮಾಡಲು ಬಳಸುವುದಿಲ್ಲ.
ಬದಲಿಗೆ ಇದರ ಅನೇಕ ಚಮತ್ಕಾರಿ ಲಾಭಗಳು ಇವೆ. ಇದನ್ನು ಸರಿಯಾದ ರೀತಿಯಲ್ಲಿ ಅಭಿ ಮಂತ್ರಗೊಳಿಸಿ ಧರಿಸಿಕೊಂಡರೆ , ಇದು ನಿಮ್ಮ ಅದೃಷ್ಟ ಮತ್ತು ಭಾಗ್ಯವನ್ನು ಬದಲಾಯಿಸಬಹುದು. ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಹಲವಾರು ಸಮಸ್ಯೆಗಳನ್ನು ಕೆಲವೇ ಗಂಟೆಗಳಲ್ಲಿ ದೂರ ಮಾಡಬಹುದು. ಒಂದು ಕಪ್ಪು ದಾರದಲ್ಲಿ ಎಷ್ಟು ಶಕ್ತಿ ಇರುತ್ತದೆ ಎಂದರೆ, ಇದು ನಿಮ್ಮನ್ನು ಎಲ್ಲಾ ನಕಾರಾತ್ಮಕ ಕೆಟ್ಟ ಶಕ್ತಿಗಳಿಂದ ಕಾಪಾಡುತ್ತದೆ. ಕಪ್ಪು ದಾರ ಒಂದು ಪ್ರಕಾರದ ರಕ್ಷಾ ಕವಚ ಆಗಿದೆ. ಆದರೆ ಇದನ್ನು ಧರಿಸುವ ಸರಿಯಾದ ವಿಧಿ ನಿಮಗೆ ಗೊತ್ತಿರಬೇಕು.
ಹಲವಾರು ಜನರು ಕಪ್ಪು ದಾರವನ್ನು ಬಳಸುವಾಗ ವಿಧಿಗಳನ್ನು ಬಳಸುವುದಿಲ್ಲ. ಈ ಒಂದು ಕಾರಣದಿಂದ ಶುಭಫಲ ಸಿಗುವುದರ ಬದಲಿಗೆ ಅಶುಭ ಪರಿಣಾಮಗಳು ಸಿಗುತ್ತವೆ. ಕಪ್ಪು ದಾರ ಧರಿಸುವುದು ಎಷ್ಟು ಲಾಭಕರ ಆಗಿರುತ್ತದೆಯೋ, ಅಷ್ಟೇ ಇದು ನಿಮಗೆ ನಷ್ಟವನ್ನು ಉಂಟು ಮಾಡುತ್ತದೆ . ಶಾಸ್ತ್ರದಲ್ಲಿ ಕಾಲಿಗೆ ಕಟ್ಟುವ ಕಪ್ಪು ದಾರ ಆಗಲಿ, ಕೊರಳಲ್ಲಿ ಕಟ್ಟುವ ಕಪ್ಪು ದಾರಕ್ಕೆ ವಿಶಿಷ್ಟವಾದ ನಿಯಮಗಳನ್ನು ಮಾಡಿದ್ದಾರೆ. ಒಂದು ವೇಳೆ ಈ ನಿಯಮಗಳನ್ನು ಪಾಲಿಸುತ್ತಾ ,
ಕಪ್ಪು ದಾರವನ್ನು ಧರಿಸಿಕೊಂಡರೆ, ನಿಮಗೆ ಶುಭಫಲ ದೊರೆಯುತ್ತದೆ. ಕೆಲವರು ಬೇರೆಯವರು ಕಟ್ಟಿಕೊಂಡಿರುವ ಕಪ್ಪು ದಾರವನ್ನು ಕಂಡು ತಾವೂ ಕೂಡ ಅಂಗಡಿಯಿಂದ ತಂದು ಕಟ್ಟಿ ಕೊಳ್ಳುತ್ತಾರೆ. ಅವರು ಇದರ ವಿಧಿಯ ಪಾಲನೆಯನ್ನು ಮಾಡುವುದಿಲ್ಲ . ಹಾಗಾಗಿ ಅವರು ಇದರ ನಷ್ಟವನ್ನು ಅನುಭವಿಸುತ್ತಾರೆ. ನಿಮ್ಮ ಶರೀರದ ಯಾವುದೇ ಅಂಗದ ಮೇಲೆ ಕಪ್ಪು ದಾರವನ್ನು ಧರಿಸುವ ಮುನ್ನ ಅದರ ವಿಧಿಯನ್ನು ತಿಳಿದು ಕೊಳ್ಳಬೇಕು. ನಂತರ ಪೂರ್ತಿಯಾದ ನಂಬಿಕೆ ಮತ್ತು ಶ್ರದ್ಧೆಯಿಂದ ಅಂಗೈ ಮೇಲೆ ಈ ದಾರವನ್ನು ಕಟ್ಟಿ ಕೊಳ್ಳಬೇಕು . ಶಾಸ್ತ್ರಗಳಲ್ಲಿ ಕಪ್ಪು ದಾರ ಕಟ್ಟಿ ಕೊಳ್ಳುವುದನ್ನು ತಿಳಿಸುವುದು ತುಂಬಾ ಪ್ರಮುಖವಾಗಿದೆ.
ಕಪ್ಪು ದಾರ ಯಾವ ದಿನ ಕಟ್ಟಬೇಕು. ಯಾವ ಸ್ಥಾನದಲ್ಲಿ ಕಟ್ಟಬೇಕು. ಕಪ್ಪು ದಾರ ಧರಿಸಿದ ನಂತರ ಯಾವ ಮಂತ್ರ ಜಪ ಮಾಡಬೇಕು. ಕಪ್ಪು ದಾರ ಕಟ್ಟಿಕೊಳ್ಳುವ ಜನರು ಯಾವ ಕೆಲಸವನ್ನು ಮಾಡಬಾರದು. ಈ ಎಲ್ಲಾ ನಿಯಮಗಳನ್ನು ತಿಳಿಯುವುದು ತುಂಬಾ ಪ್ರಮುಖವಾಗಿದೆ. ಇಲ್ಲವಾದರೆ ಕಪ್ಪು ದಾರದ ಪ್ರಭಾವ ನಷ್ಟ ಆಗುತ್ತದೆ. ಆ ನಿಯಮಗಳ ಬಗ್ಗೆ ತಿಳಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಕೆಲವು ರಾಶಿಯ ಜನರು ಅಪ್ಪಿ ತಪ್ಪಿಯೂ ಕಪ್ಪು ದಾರವನ್ನು ಕಟ್ಟಿ ಕೊಳ್ಳಬಾರದು .
ಕಪ್ಪು ದಾರಕ್ಕೆ ಇರುವ ಪ್ರಮುಖ ಪ್ರಯೋಜನಗಳ ಬಗ್ಗೆ ತಿಳಿಯೋಣ . ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಕಪ್ಪು ದಾರ ಕೆಟ್ಟ ದೃಷ್ಟಿ , ಅಥವಾ ನಕಾರಾತ್ಮಕ ಕೆಟ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಣೆ ಮಾಡುವ ಕಾರ್ಯವನ್ನು ಮಾಡುತ್ತದೆ . ಇದು ತಕ್ಷಣವೇ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುತ್ತದೆ . ಇದನ್ನು ಕಟ್ಟಿಕೊಳ್ಳುವ ವ್ಯಕ್ತಿಯ ಮೇಲೆ ಜನರ ಕೆಟ್ಟ ದೃಷ್ಟಿ ಬೀಳುವುದಿಲ್ಲ . ಜೊತೆಗೆ ಈ ದಾರವು ಮನುಷ್ಯನ ಮಾಟ ಮಂತ್ರಗಳಂತಹ
ಕೆಟ್ಟ ಸಮಸ್ಯೆಗಳಿಂದ ಕಾಪಾಡುತ್ತದೆ .
ಕೆಲವರು ತಂತ್ರ ಮಂತ್ರ ಕ್ರಿಯೆಗಳನ್ನು ಮಾಡಿ ಬೇರೆಯವರ ಜೀವನ ಹಾಳು ಮಾಡಲು ಪ್ರಯತ್ನ ಮಾಡುತ್ತಿರುತ್ತಾರೆ .ಅಂತಹವರಿಂದ ಉಳಿದುಕೊಳ್ಳಲು ಅಭಿ ಮಂತ್ರ ಗೊಳಿಸಿದ ಕಪ್ಪು ದಾರವನ್ನು ಕಟ್ಟಿಕೊಳ್ಳಬೇಕು .ಒಂದು ವೇಳೆ ವ್ಯಕ್ತಿಗೆ ಜೀವನದಲ್ಲಿ ಪದೇ ಪದೇ ಅಸಭಲತೆ ಕಾಣುತ್ತಿದ್ದರೆ , ಎಷ್ಟೇ ಶ್ರಮ ಪಟ್ಟರೂ ಯಶಸ್ಸು ಸಿಗುತ್ತಿಲ್ಲ ಎಂದರೆ , ಇದು ಬೇರೆಯವರ ಕೆಟ್ಟ ದೃಷ್ಟಿಯ ಕಾರಣದಿಂದ ಆಗುತ್ತಿರುತ್ತದೆ . ಇಂತಹ ಸಮಯದಲ್ಲಿ ವ್ಯಕ್ತಿಯು ಕಪ್ಪು ದಾರವನ್ನು ಕಟ್ಟಿಕೊಳ್ಳಬೇಕು .
ವ್ಯಕ್ತಿಯ ಕುಟುಂಬದಲ್ಲಿ ಜಗಳ ಆಗುತ್ತಿದ್ದರೆ , ಗಂಡ ಹೆಂಡತಿಯ ಸಂಬಂಧದಲ್ಲಿ ಬೇರೆಯವರ ಕೆಟ್ಟ ದೃಷ್ಟಿ ಅಂಟಿಕೊಂಡಿದ್ದರೆ, ಇಂತಹ ಸ್ಥಿತಿಯಲ್ಲಿ ಒಂದು ಚಿಕ್ಕದಾಗಿರುವ ಕಪ್ಪು ದಾರ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳನ್ನು ನಾಶ ಮಾಡುತ್ತದೆ . ಯಾವುದಾದರೂ ವ್ಯಕ್ತಿಗೆ ಶನಿ ದೋಷ ಅಂಟಿಕೊಂಡಿದ್ದರೆ , ಶನಿಯ ವಕ್ರ ದೃಷ್ಟಿಯಿಂದ ಅವರ ಜೀವನ ಅಸ್ತ ವ್ಯಸ್ತವಾಗಿದ್ದರೆ , ಶನಿ ದೇವರನ್ನು ಒಲಿಸಿಕೊಳ್ಳಲು , ಶನಿ ದೇವರ ಮಂತ್ರದಿಂದ ಅಭಿ ಮಂತ್ರ ಗೊಂಡಿರುವ ಕಪ್ಪು ದಾರವನ್ನು ಕಟ್ಟಿಕೊಳ್ಳಬೇಕು . ಒಂದು ವೇಳೆ ಯಾವುದಾದರು ಬಾಲಕ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ,
ಅದು ಜನರ ಕೆಟ್ಟ ದೃಷ್ಟಿಯ ಪ್ರಭಾವವೇ ಆಗಿರುತ್ತದೆ . ಇದರಿಂದ ಕಾಪಾಡಿಕೊಳ್ಳಲು ಕಪ್ಪು ದಾರದ ಪ್ರಯೋಗವನ್ನು ಮಾಡಲಾಗುತ್ತದೆ . ಯಾವುದಾದರೂ ವ್ಯಕ್ತಿಗಳು ವ್ಯಸನಕ್ಕೆ ಒಳಗೊಂಡಿದ್ದರೆ , ಕೆಟ್ಟ ಹವ್ಯಾಸಗಳಲ್ಲಿ ಪೂರ್ತಿಯಾಗಿ ಸಿಲುಕಿಕೊಂಡಿದ್ದರೆ , ಅವರು ತಮ್ಮ ಕೆಟ್ಟ ಚಟಗಳನ್ನು ಬಿಡುತ್ತಿಲ್ಲ ಎಂದರೆ , ಇದಕ್ಕಾಗಿಯೂ ಕಪ್ಪು ದಾರವನ್ನು ಬಳಸಲಾಗುತ್ತದೆ .ಇಂತಹ ಹಲವಾರು ಕಾರಣಗಳು ಪರಿಸ್ಥಿತಿಗಳು ಸಹ ಇರುತ್ತವೆ . ಸಮಸ್ಯೆಗಳಿಂದ ಪಾರಾಗಲು ಕಪ್ಪು ದಾರವನ್ನು ಬಳಸಲಾಗಿದೆ . ಕಪ್ಪು ದಾರವನ್ನು ಹೇಗೆ ಮತ್ತು ಯಾವಾಗ ಕಟ್ಟಿಕೊಳ್ಳಬೇಕು ಎಂಬುದನ್ನು ತಿಳಿಯೋಣ .
ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಕಪ್ಪು ದಾರವನ್ನು ಕಟ್ಟಿಕೊಳ್ಳುವ ಸಮಯದಲ್ಲಿ ಕೆಲವು ಎಚ್ಚರಿಕೆಗಳನ್ನು ವಹಿಸಬೇಕು . ಇಲ್ಲವಾದರೆ ಶುಭ ಪರಿಣಾಮ ಕೊಡುವುದರ ಬದಲಿಗೆ ಅಶುಭ ಪರಿಣಾಮವನ್ನು ಕೊಡುತ್ತವೆ . ಒಂದು ವೇಳೆ ವಿಧಿ ಇಲ್ಲದೆ ಕಪ್ಪು ದಾರವನ್ನು ಕಟ್ಟಿಕೊಂಡರೆ, ನಿಮ್ಮತ್ತ ನಕಾರಾತ್ಮಕ ಶಕ್ತಿಯನ್ನು ಆಕರ್ಷಣೆ ಮಾಡಬಹುದು . ಬೇರೆಯವರಿಗೆ ಅಂಟಿಕೊಂಡಿರುವ ಕೆಟ್ಟ ದೃಷ್ಟಿಯನ್ನು ನಿಮ್ಮತ್ತ ಆಕರ್ಷಣೆ ಮಾಡಬಹುದು . ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಶನಿವಾರ ಕಪ್ಪು ದಾರವನ್ನು ಕಟ್ಟಿಕೊಳ್ಳಲು ಶುಭದಿನ ಆಗಿರುತ್ತದೆ . ಏಕೆಂದರೆ ಇದು ಶನಿ ದೇವರ ದಿನ ಆಗಿದೆ . ಕಪ್ಪು ಬಣ್ಣದ ಸಂಬಂಧ ಶನಿ ದೇವರೊಂದಿಗೆ ಇರುತ್ತದೆ .
ಕಪ್ಪು ದಾರವನ್ನು ಅಂಗಡಿಯಲ್ಲಿ ಖರೀದಿ ಮಾಡಿ ನೇರವಾಗಿ ನಿಮ್ಮ ಕೈಗಳಿಗೆ ಕಟ್ಟಿ ಕೊಳ್ಳಬಾರದು . ಕಪ್ಪು ದಾರವನ್ನು ಖರೀದಿ ಮಾಡಿದ ನಂತರ, ಇದನ್ನು ಶನಿ ದೇವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ , ಅವರ ಪಾದದ ಹತ್ತಿರ ಇಟ್ಟು , ನಂತರ ಶನಿ ದೇವರ ಮಂತ್ರದಿಂದ ಇದನ್ನು ಅಭಿ ಮಂತ್ರ ಗೊಳಿಸಬೇಕು . ಇದಾದ ನಂತರ ಇದನ್ನು ಧರಿಸಿಕೊಳ್ಳಬೇಕು . ಕಪ್ಪು ದಾರದ ಮೇಲೆ ಒಂಬತ್ತು ಗಂಟುಗಳನ್ನು ಕಟ್ಟಿದ ಮೇಲೆ ಇದನ್ನು ಧರಿಸಿಕೊಳ್ಳಬೇಕು . ಈ ದಾರವನ್ನು ನಿಮ್ಮ ಅಂಗಗಳ ಮೇಲೆ ಕಟ್ಟಿಕೊಂಡ ನಂತರ ಶನಿ ದೇವರ ಮಂತ್ರವನ್ನು 108 ಬಾರಿ ಜಪ ಮಾಡಬೇಕು . ಆಗ ಮಾತ್ರ ಈ ದಾರವು ಪ್ರಭಾವಶಾಲಿ ಆಗುತ್ತದೆ .
ಒಂದು ವೇಳೆ ಜೀವನದಲ್ಲಿ ಹಣಕಾಸಿನ ಸಮಸ್ಯೆ ಆರ್ಥಿಕ ಸಮಸ್ಯೆ ಇದ್ದರೆ , ಶನಿವಾರದ ದಿನ ಬಲ ಕಾಲಿನಲ್ಲಿ ಕಪ್ಪು ದಾರವನ್ನು ಕಟ್ಟಿ ಕೊಳ್ಳಬೇಕು . ಇದರಿಂದ ಜೀವನದಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ . ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ . ಯಾರಿಗಾದರೂ ಹೊಟ್ಟೆಗೆ ಸಂಬಂಧಪಟ್ಟ ರೋಗಗಳು ಇದ್ದರೆ , ಅಂತಹವರು ತಮ್ಮ ಕಾಲಿನ ಹೆಬ್ಬೆರಳಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬೇಕು . ವಿಶೇಷವಾಗಿ ಮಹಿಳೆಯರು ತಮ್ಮ ಪಾದದ ಹೆಬ್ಬೆರಳಿಗೆ ಕಪ್ಪು ದಾರವನ್ನು ಕಟ್ಟಿ ಕೊಳ್ಳಬೇಕು .
ಇದರಿಂದ ವೈವಾಹಿಕ ಜೀವನದಲ್ಲಿ ಬಂದಿರುವ ಸಮಸ್ಯೆಗಳು ದೂರವಾಗುತ್ತದೆ . ಯಾವ ಕೈಗಳಲ್ಲಿ ಕಪ್ಪು ದಾರವನ್ನು ಕಟ್ಟಿ ಕೊಳ್ಳುತ್ತೀರೋ , ಆ ಕೈಗಳಿಗೆ ಬೇರೆ ದಾರವನ್ನು ಕಟ್ಟಬಾರದು . ಕೆಲವರು ಕಪ್ಪು ದಾರದ ಜೊತೆ ಕೆಂಪು ದಾರವನ್ನು ಕಟ್ಟಿಕೊಳ್ಳುತ್ತಾರೆ .ಇದು ತಪ್ಪು . ಕಪ್ಪು ದಾರ ಶನಿ ದೇವರ ಪ್ರತೀಕ ಆಗಿದ್ದರೆ , ಕೆಂಪು ದಾರವೂ ಮಂಗಳ ಗ್ರಹದ ಪ್ರತೀಕ ಆಗಿದೆ. ಶನಿ ಮತ್ತು ಮಂಗಳನ ಸ್ಪರ್ಶ ನಿಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಉಂಟು ಮಾಡಬಹುದು. ಹಾಗಾಗಿ ಇವೆರಡೂ ದಾರಗಳನ್ನು ಜೊತೆಯಾಗಿ ಕಟ್ಟಿ ಕೊಳ್ಳಬಾರದು . ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ವಾಸ ಇದ್ದರೆ ,
ಮನೆಯಲ್ಲಿ ಜಗಳ ಅಥವಾ ಭಯ ಉಂಟಾಗುತ್ತಿದ್ದರೆ , ಮನೆಯಲ್ಲಿ ಭೂತ ಪ್ರೇತಗಳ ವಾಸ ಇದ್ದರೆ , ಮನೆಯ ಮುಖ್ಯ ದ್ವಾರಕ್ಕೆ ಕಪ್ಪು ದಾರದ ಜೊತೆ ನಿಂಬೆ ಕಾಯಿಯನ್ನು ಸೇರಿಸಿ ಕಟ್ಟಿ . ಈ ನಕಾರಾತ್ಮಕ ಶಕ್ತಿಗಳು ಮನೆಯನ್ನು ಬಿಟ್ಟು ಹೋಗುತ್ತದೆ . ಕಾರಣವಿಲ್ಲದೆ ಹಣ ಖರ್ಚು ಆಗುತ್ತಿದ್ದರೆ , ಇದರಿಂದ ಕಾಪಾಡಿಕೊಳ್ಳಲು ಯಾವ ಸ್ಥಳದಲ್ಲಿ ನೀವು ಹಣ ಇಡುತ್ತೀರೋ , ಆ ಸ್ಥಳದಲ್ಲಿ ಅಭಿ ಮಂತ್ರ ಗೊಳಿಸಿರುವ ಕಪ್ಪು ದಾರವನ್ನು ಇಡಬೇಕು . ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಮಹಿಳೆಯರು ತಮ್ಮ ಎಡಗಾಲಿನಲ್ಲಿ ಕಪ್ಪು ದಾರವನ್ನು ಮತ್ತು ಪುರುಷರು ತಮ್ಮ ಬಲಗಾಲಿನಲ್ಲಿ ತಪ್ಪು ದಾರವನ್ನು ಕಟ್ಟಿಕೊಳ್ಳಬೇಕು .
ಆಗ ಮಾತ್ರ ಕಪ್ಪು ದಾರ ತನ್ನ ಪ್ರಭಾವವನ್ನು ತೋರಿಸುತ್ತದೆ . ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಈ ಎರಡು ರಾಶಿಯವರು ಕಪ್ಪು ದಾರವನ್ನು ಕಟ್ಟಿ ಕೊಳ್ಳಬಾರದು. ಮೊದಲನೇ ರಾಶಿ ವೃಶ್ಚಿಕ ರಾಶಿ . ಈ ರಾಶಿಯ ಸ್ವಾಮಿ ಮಂಗಳ ದೇವರು ಆಗಿದ್ದಾರೆ . ಮಂಗಳ ದೇವರಿಗೆ ಕಪ್ಪು ಬಣ್ಣ ಅಪ್ರಿಯವಾಗಿದೆ .ಕಪ್ಪು ದಾರ ಕಟ್ಟಿಕೊಂಡರೆ ಇವರ ಸಮಸ್ಯೆ ಹೆಚ್ಚಾಗಬಹುದು . ಎರಡನೇ ರಾಶಿ ಮೇಷ ರಾಶಿ . ಈ ರಾಶಿಯ ಸ್ವಾಮಿ ಕೂಡ ಮಂಗಳ ದೇವರು ಆಗಿದ್ದಾರೆ . ಹಾಗಾಗಿ ಇವರು ಕೂಡ ಕಪ್ಪು ದಾರವನ್ನು ಕಟ್ಟಿ ಕೊಳ್ಳಬಾರದು . ಹಾಗಾಗಿ ಬೇರೆ ರಾಶಿಗಳ ಜನರು ಈ ಕಪ್ಪು ದಾರವನ್ನು ತಮ್ಮ ಕೈಯಲ್ಲಿ ಕಟ್ಟಿಕೊಂಡು ಕಷ್ಟಗಳಿಂದ ಮುಕ್ತಿಯನ್ನು ಪಡೆಯಬಹುದು .