ಕನ್ಯಾ ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಕನ್ಯಾ ರಾಶಿಯವರ ಲಾಂಛನವು ಕನ್ಯೆಯ ಲಾಂಛನವಾಗಿರುತ್ತದೆ. ರಾಶಿಯ ಅಧಿಪತಿಯು ‌ಬುಧನಾಗಿರುತ್ತಾನೆ. ಭೂಮಿ ತತ್ವದ ರಾಶಿ ಆಗಿರುತ್ತದೆ. ದಕ್ಷಿಣ ದಿಕ್ಕಾಗಿದ್ದು ಸ್ತ್ರೀಲಿಂಗದ ರಾಶಿ ಆಗಿರುತ್ತದೆ. ಸೌಮ್ಯ ಸ್ವಭಾವದ ರಾಶಿ ಆಗಿರುತ್ತದೆ. ಈ ರಾಶಿಯ ರತ್ನವು ಪಚ್ಚೆಯಾಗಿರುತ್ತದೆ. ಅದೃಷ್ಟದ ಬಣ್ಣ ಹಸಿರು ಮತ್ತು ಹಳದಿಯಾಗಿದೆ .ಅದೃಷ್ಟದ ದಿನ ಸೋಮವಾರ ಮತ್ತು ಬುಧವಾರ.

ಇವರ ರಾಶಿಗೆ ಅದೃಷ್ಟದ ದೇವತೆಯು ಶ್ರೀ ವಿಜ್ಞ ನಿವಾರಕ ಗಣೇಶ ಆಗಿರುತ್ತಾನೆ. ಅದೃಷ್ಟದ ಸಂಖ್ಯೆಗಳು 2 , 3, 5 6 7 ಆಗಿರುತ್ತದೆ . ಅದೃಷ್ಟದ ದಿನಾಂಕ 5 ,14, 23 , ಮಿತ್ರ ರಾಶಿಯು ಮೇಷ ಮಿಥುನ ಸಿಂಹ ವಾಗಿರುತ್ತದೆ . ಶತ್ರು ರಾಶಿಯು ಕಟಕ ರಾಶಿ ಆಗಿರುತ್ತದೆ . ಕನ್ಯಾ ರಾಶಿಯವರು ಬದುಕಿನಲ್ಲಿ ಯಾವುದೇ ಗದ್ದಲ ಗೊಂದಲ ಕಿರಿಕಿರಿ ಇಲ್ಲದೆ ಯಾವಾಗಲೂ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳಲು ಬಯಸುತ್ತಾರೆ. ಜೀವನದಲ್ಲಿ ಸಾಕಷ್ಟು ಏರುಪೇರು ಕಷ್ಟಕಾರ್ಪಣ್ಯಗಳನ್ನು ಎದುರಿಸಿ ಒಂದು ಅಂತಕ್ಕೆ ಬಂದು ನಿಲ್ಲುವ ವ್ಯಕ್ತಿತ್ವ

ಕನ್ಯಾ ರಾಶಿಯವರದಾಗಿರುತ್ತದೆ. ಅನುಭವವೂ ಸಾಕಷ್ಟಿರುತ್ತದೆ ಚುರುಕುತನದಿಂದ ಕೂಡಿರುತ್ತಾರೆ ಎಂತಹದೇ ಸಮಸ್ಯೆ ಆಗಿರಲಿ ನಿಭಾಯಿಸುವಂತಹ ವ್ಯಕ್ತಿತ್ವ ಇವರಿಗೆ ಇರುತ್ತದೆ. ಯಾವುದೇ ಒಂದು ವ್ಯವಹಾರ ವ್ಯಾಪಾರವಾಗಿರಲಿ ಅದನ್ನು ಜಾಣ್ಮೆಯಿಂದ ನಿಭಾಯಿಸುವಂತಹ ಜಾಣ್ಮೆ ಪುರುಷರೇ ಆಗಿರಲಿ ಮಹಿಳೆಯರೇ ಆಗಿರಲಿ ಕನ್ಯಾ ರಾಶಿಯವರಿಗೆ ಇರುತ್ತದೆ. ಜೂನ್ ತಿಂಗಳಿನಲ್ಲಿ ಕನ್ಯಾ ರಾಶಿಯವರಿಗೆ ಯಾವುದೇ ಕೆಲಸ ಕಾರ್ಯಗಳು ನಿಧಾನವಾದರೂ ಸಹ ಒಳ್ಳೆಯ ಫಲಿತಾಂಶ ಸಿಗುತ್ತದೆ.

ನಿಮ್ಮ ಪ್ರಯತ್ನಕ್ಕೆ ಹೆಚ್ಚಿನ ವೇಗವನ್ನು ನೀಡಿ ಇದರಿಂದ ಒಳ್ಳೆಯ ಫಲಿತಾಂಶ ದೊರಕುತ್ತದೆ. ನಿಮ್ಮ ಬುದ್ಧಿವಂತಿಕೆ ನಿಮ್ಮನ್ನು ಕಂಡು ಕೈ ಹಿಡಿಯುವಂತಹ ಸನ್ನಿವೇಶಗಳು ಕಂಡುಬರುತ್ತದೆ. ಮಾತಿನಲ್ಲಿಯೇ ಇರುವಂತಹ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿ ನಿಮಗಿರುತ್ತದೆ. ಹಣಕಾಸಿನ ವಿಚಾರದಲ್ಲಿ ಗೊಂದಲಗಳು ಏರ್ಪಡುತ್ತಿದ್ದರೆ ಅದು ನಿಧಾನಗತಿಯಲ್ಲಾದರೂ‌ ಸಹ ನೆರವೇರುತ್ತದೆ. ಯಾರ ಜೊತೆಯಲ್ಲೂ ಶತ್ರುತ್ವ ಅಸೂಯೆ ವಾದ ವಿವಾದಗಳನ್ನು ಮಾಡಲು ಹೋಗಬೇಡಿ ಆದಷ್ಟು ಕಿರಿಕಿರಿಯಿಂದ ದೂರವಿರಿ.

ಅನಾವಶ್ಯಕವಾಗಿ ಇಲ್ಲದ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ. ಯಾರಿಗಾದರೂ ನೀವು ಸಹಾಯ ಮಾಡಿ ಅವರಿಂದ ಪ್ರತಿಫಲವನ್ನು ನಿರೀಕ್ಷಿಸುತ್ತಿದ್ದಾರೆ ಅವರಿಂದ ನಿಮಗೆ ಏನೂ ಪ್ರತಿಫಲವು ಸಿಗುವುದಿಲ್ಲ ಅದರಿಂದ ನಿಮಗೆ ಬೇಸರ ಉಂಟಾಗುತ್ತದೆ. ನೀವು ಸ್ವಂತ ಆಲೋಚನೆಯನ್ನು ಮಾಡಿ ಬೇರೆಯವರ ಮೇಲೆ ಅವಲಂಬಿತರಾಗಬೇಡಿ. ನಿಮ್ಮಲ್ಲೇ ಇರುವಂತಹ ಛಲ ಮತ್ತು ಜಾಣಮೆಯನ್ನು ಉಪಯೋಗಿಸಿಕೊಂಡರೆ ಎಂತಹ ಅದ್ಭುತ ಕಾರ್ಯಗಳನ್ನಾದರೂ ನೀವು ಸಾಧಿಸುವಿರಿ.

ನೀವಿರುವಂತಹ ಮನೆ ಅಂದರೆ ವಾಸ ಸ್ಥಳವನ್ನು ಬದಲಾಯಿಸಲು ಹೋಗಬೇಡಿ ತೀರ ಅವಶ್ಯಕತೆ ಇದ್ದರೆ ಮಾತ್ರವೇ ಮಾಡಿಕೊಳ್ಳಿ. ವಾಹನಗಳನ್ನು ಕೊಳ್ಳುವ ಅವಕಾಶವಿದೆ . ವಿದ್ಯಾರ್ಥಿಗಳಿಗೆ ಒಳ್ಳೆಯ ಫಲವಿದೆ . ಹೊಸ ಜಮೀನು ಮನೆಯನ್ನು ಖರೀದಿ ಮಾಡಿಕೊಳ್ಳುವ ಯೋಗವಿದೆ. ಯಾವುದೇ ಉದ್ಯೋಗವಾಗಿರಲಿ ವ್ಯಾಪಾರ ವ್ಯವಹಾರಗಳನ್ನು ಮಾಡುವಂಥವರಾಗಿರಲಿ ಅವರಿಗೆ ಗುಣಾತ್ಮಕವಾದಂತಹ ಬದಲಾವಣೆಗಳು ಕಂಡುಬರುತ್ತದೆ . ಇದರಲ್ಲಿ ಲಾಭವು ಸಹ ಕಂಡುಬರುತ್ತದೆ

ಆದರೆ ಯಾವುದೇ ಕೆಲಸ ಮಾಡಿದರು ಸಹ ನೀವು ಪಾಲುದಾರಿಕೆಯಲ್ಲಿ ಮಾಡಲು ಹೋಗಬೇಡಿ ಸ್ವತಂತ್ರವಾಗಿ ಮಾಡುವುದರಿಂದ ಬಹಳಷ್ಟು ಅನುಕೂಲಕರವಾದಂತಹ ಲಾಭಗಳು ದೊರೆಯುತ್ತದೆ. ಈ ತಿಂಗಳಿನಲ್ಲಿ ಯಾವುದೇ ನೂತನವಾದಂತಹ ಹೂಡಿಕೆಗಳನ್ನು ಮಾಡಲು ಹೋಗಬೇಡಿ. ದೊಡ್ಡ ಪ್ರಮಾಣದಲ್ಲಿ ಸಾಲವನ್ನು ನೀಡುವುದು ಈ ರೀತಿಯ ಕೆಲಸಗಳನ್ನು ಮಾಡಲು ಹೋಗಬೇಡಿ. ಯಾವುದಾದರೂ ಕ್ಷೇತ್ರದಲ್ಲಿ ವ್ಯಾಪಾರ ಮಾಡಲು ಹೊರಟಿದ್ದರೆ ನುರಿತ ವ್ಯಕ್ತಿಗಳಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳಿ.

ಉದ್ಯೋಗ ಕ್ಷೇತ್ರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬೇಡಿ. ರಾಜಕಾರಣಿಗಳಿಗೆ ಒಳ್ಳೆಯ ಸ್ಥಾನಮಾನವಿದೆ . ಸರ್ಕಾರಿ ಮತ್ತು ಅರೆ ಸರ್ಕಾರಿ ಉದ್ಯೋಗದಲ್ಲಿರುವವರಿಗೆ ವಿಶೇಷವಾಗಿ ವೈದ್ಯರು ಮತ್ತು ಅಭಿಯಂತರು ಗಳಿಗೆ ವಿಶೇಷ ಫಲಗಳು ದೊರಕುವಂತಹ ಸನ್ನಿವೇಶವಿದೆ. ಸರ್ಕಾರದ ಅದೀನದಲಿ ಕೆಲಸ ಮಾಡುವಂತಹವರಿಗೆ ಒಳ್ಳೆಯ ಸ್ಥಾನಮಾನಗಳು ಲಭಿಸಲಿವೆ. ಮಾರಾಟ ಪ್ರತಿನಿಧಿಗಳಿಗೆ ಭೂ ವ್ಯವಹಾರದಲ್ಲಿ ನಿರತರಾಗಿರುವವರಿಗೆ

ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು ಒಳ್ಳೆಯ ಅವಕಾಶಗಳು ಲಭಿಸಲಿದೆ. ಗೃಹ ಕಚೇರಿಗಳಲ್ಲಿ ಕೆಲಸ ಮಾಡುವ ಗೃಹಿಣಿಯರು ಅಂದರೆ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಈ ಕಾರ್ಯಕ್ಷೇತ್ರದಲ್ಲಿ ಇರುವವರು ಮುಂಚೂಣಿಯಲ್ಲಿ ಇರುತ್ತಾರೆ. ವಕೀಲರು ಮತ್ತು ಪೊಲೀಸರಿಗೆ ಸಹಾಯದ ಅಗತ್ಯವಿರುತ್ತದೆ. ಸಂಕಷ್ಟಗಳಿಂದ ಪಾರಾಗುವಂತಹ ಸನ್ನಿವೇಶಗಳು ಉಂಟಾಗುತ್ತದೆ. ಈ ತಿಂಗಳಿನಲ್ಲಿ ಉತ್ತಮವಾದಂತಹ ಅದ್ಭುತವಾದ ಫಲಗಳು ಇದೆ . ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದರೆ ಒಳ್ಳೆಯ ಪ್ರತಿಫಲಗಳು ದೊರಕಲಿದೆ.

Leave a Comment