ಇಂದಿನ ಲೇಖನದಲ್ಲಿ ಕಟಕ ರಾಶಿಯ ಗುಣಲಕ್ಷಣಗಳನ್ನು ತಿಳಿದುಕೊಳ್ಳೋಣ. ಕಟಕ ರಾಶಿಯವರು ತುಂಬಾ ಸೂಕ್ಷ್ಮ ಸ್ವಭಾವ ಮತ್ತು ಎಮೋಷನಲ್ ಆಗಿ ಇರುತ್ತಾರೆ. ಇವರು ಯಾವಾಗಲೂ ಸೆಕ್ಯೂರ್ ಆಗಿರಲು ಇಷ್ಟಪಡುತ್ತಾರೆ. ಈ ರಾಶಿಯವರು ಮನೆ, ಫ್ಯಾಮಿಲಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಹಾಗೆಯೇ ಪ್ರತಿವಿಷಯದಲ್ಲೂ ಎಮೋಷನಲ್ ಆಗಿ ಇರಲು ಇಷ್ಟಪಡುತ್ತಾರೆ. ಕೆಲವರು ತಮ್ಮ ಭಾವನೆಗಳನ್ನು ಹೇಳಿಕೊಳ್ಳಬೇಕಾದರೇ ಕಟಕರಾಶಿಯವರನ್ನ ಆಯ್ಕೆ ಮಾಡಿಕೊಳ್ಳುತ್ತಾರೆ.
ಏಕೆಂದರೆ ಈ ರಾಶಿಯವರು ಎಮೋಷನ್ ಆಗಿ ಬೇಗ ಆಕರ್ಷಕರಾಗುತ್ತಾರೆ. ಇವರು ಸಂಬಂಧಗಳಿಗೆ ಬೆಲೆ ಕೊಡುತ್ತಾರೆ ಮತ್ತು ಆ ನೆನಪನ್ನು ಮರೆಯುವುದಿಲ್ಲ. ಯಾರನ್ನು ಬೇಗ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಕಟಕ ರಾಶಿಯವರನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಇವರು ಮೇಲ್ನೋಟಕ್ಕೆ ತುಂಬಾ ಸಾಫ್ಟ್, ಸಹಾಯ ಮಾಡುವ ಗುಣ, ನಗುಮುಖದವರು, ಶಾಂತವಾಗಿರುತ್ತಾರೆ. ಇವರು ಬೇರೆಯವರ ಜೊತೆ ಚೆನ್ನಾಗಿ ಬೆರೆಯುತ್ತಾರೆ. ಬೇರೆಯವರ ಬೇಕು, ಬೇಡಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ.
ಯಾರಿಗಾದರೂ ಸಹಾಯದ ಅವಶ್ಯಕತೆ ಇದ್ದರೆ ಕಟಕರಾಶಿಯವರನ್ನು ಹುಡುಕಿಕೊಂಡು ಬರುತ್ತಾರೆ. ಮಾತುಗಾರಿಕೆಯಿಂದ ಯಾವುದೇ ಸಮಸ್ಯೆ ಬಗೆಹರಿಸುವುದಾಗಿರಲಿ, ಪ್ರೋತ್ಸಾಹ ಕೊಡುವುದಾಗಿರಲೀ, ಮೋಟಿವೇಟ್ ಮಾಡುವುದಾಗಿರಲೀ ಅದನ್ನು ತುಂಬಾ ಚೆನ್ನಾಗಿ ಮಾಡುತ್ತಾರೆ. ಬೇರೆಯವರ ಭಾವನೆಗಳನ್ನು ಬಹಳ ಬೇಗ ಅರ್ಥಮಾಡಿಕೊಳ್ಳುತ್ತಾರೆ. ಇವರ ರಾಶಿಯಾಧಿಪತಿ ಚಂದ್ರವಾಗಿರುತ್ತದೆ. ಚಂದ್ರ ನೀರನ್ನು ಸೂಚಿಸುತ್ತದೆ. ಇವರದು ಹೊಂದಿಕೊಳ್ಳುವ ಸ್ವಭಾವವಾಗಿರುತ್ತದೆ.
ನೀರು ಬುದ್ದಿವಂತಿಕೆಯನ್ನು ಸೂಚಿಸುತ್ತದೆ. ಹಾಗಾಗಿ ಈ ರಾಶಿಯವರಿಗೆ ಪ್ರತಿಯೊಂದನ್ನು ಕಲಿಯಬೇಕೆನ್ನುವ ಆಸೆ ಇರುತ್ತದೆ. ಚಂದ್ರ ತಾಯಿಯನ್ನು ಸೂಚಿಸುತ್ತದೆ. ಇವರು ಮಾಡುವ ಕೇರಿಂಗ್ ತಾಯಿ ತನ್ನ ಮಗುವನ್ನು ಯಾವ ರೀತಿ ನೋಡಿಕೊಳ್ಳುತ್ತಾನೋ ಅದೇ ರೀತಿ ಇರುತ್ತದೆ. ಚಂದ್ರ ಬ್ಯೂಟಿ ಮತ್ತು ಆರ್ಟ್ ಅನ್ನು ಸೂಚಿಸುತ್ತದೆ. ಈ ರಾಶಿಯವರು ತಾವು ನೀಟಾಗಿ ಇರಲು ಇಷ್ಟಪಡುತ್ತಾರೆ ಮತ್ತು ತಾವು ಇರುವ ಸ್ಥಳವನ್ನು ನೀಟಾಗಿ ಇಡಲು ಇಷ್ಟಪಡುತ್ತಾರೆ.
ಇವರು ಲೈಫ್ ನಲ್ಲಿ ಬದಲಾವಣೆಯನ್ನು ಬಯಸುತ್ತಾರೆ. ಗುರು ಗ್ರಹ ಯಾವಾಗಲೂ ಯಾವುದು ಸರಿ ಯಾವುದು ತಪ್ಪು ಎಂದು ತಿಳಿಸಿಕೊಡುತ್ತದೆ. ಕಟಕರಾಶಿಯಲ್ಲಿ ಗುರುಗ್ರಹ ಪ್ರಭಾವಶಾಲಿಯಾಗಿರುವುದರಿಂದ ಯಾವಾಗಲೂ ಸರಿ ದಾರಿಯಲ್ಲಿ ಹೋಗುತ್ತಾರೆ. ಯಾವುದು ಸರಿ ಯಾವುದು ತಪ್ಪು ಎನ್ನುವ ಅರಿವು ಇವರಿಗೆ ಇರುತ್ತದೆ. ಕಟಕ ರಾಶಿಯವರು ಶಾಂತ ರೀತಿಯಲ್ಲಿ ಇದ್ದರೂ ಕೋಪ ತುಂಬಾ ಬರುತ್ತದೆ. ಕಟಕ ರಾಶಿಯ ಕಣ್ಣುಗಳು ತುಂಬಾ ಆಕರ್ಷಕವಾಗಿ ಇರುತ್ತದೆ. ಕಟಕ ರಾಶಿ ನಾಲ್ಕನೇ ಮನೆಯಾಗಿರುವುದರಿಂದ ಇದು ಮನೆ, ಫ್ಯಾಮಿಲಿ, ಕೇರಿಂಗ್ ಈ ವಿಷಯವನ್ನು ಸೂಚಿಸುತ್ತದೆ.
ಕಟಕ ರಾಶಿಯವರ ಆರೋಗ್ಯದ ವಿಷಯಕ್ಕೆ ಬರುವುದಾದರೇ ಕಟಕರಾಶಿ ಹೊಟ್ಟೆ ಮತ್ತು ಎದೆಯನ್ನು ಸೂಚಿಸುತ್ತದೆ. ಈ ರಾಶಿಯವರು ಇಷ್ಟಬಂದ ಆಹಾರವನ್ನು ಸೇವನೆ ಮಾಡಿ ಆ ನಂತರ ತೂಕ ಹೆಚ್ಚಾಯಿತ್ತೆಂದು ಒತ್ತಡಕ್ಕೆ ಒಳಗಾಗುತ್ತಾರೆ. ಹಾಗಾಗಿ ಆಹಾರದ ವಿಚಾರದಲ್ಲಿ ಗಮನ ಕೊಡಬೇಕಾಗುತ್ತದೆ. ಇವರಿಗೆ ಕಫ, ಉಸಿರಾಟದ ತೊಂದರೆ ಕಂಡುಬರುವುದರಿಂದ ದೇಹವನ್ನು ಬಿಸಿಯಾಗಿ ಇಟ್ಟುಕೊಳ್ಳಬೇಕು. ಕಟಕರಾಶಿಯವರು ಬೇರೆಯವರ ಫೀಲಿಂಗ್ ಅನ್ನು ಬಹಳ ಬೇಗ ಅರ್ಥಮಾಡಿಕೊಳ್ಳುವುದರಿಂದ ಇವರ ರಿಲೇಷನ್ ಶಿಪ್ ಚೆನ್ನಾಗಿರುತ್ತದೆ. ಇವರು ಮೇಲುನೋಟಕ್ಕೆ ಶಾಂತ ರೀತಿಯಲ್ಲಿ ಇದ್ದರೂ ಬೇರೆಯವರಿಂದ ಸ್ವಲ್ಪ ನೋವಾದರೂ ಬಹಳ ಬೇಗ ಕೋಪ ಹೊರ ಬರುತ್ತದೆ.
ಇವರಿಗೆ ಒಬ್ಬರಿಂದ ಎಷ್ಟು ಪ್ರೀತಿ ಸಿಕ್ಕಿದರೂ ತೃಪ್ತಿ ಇರುವುದಿಲ್ಲ ಆದ್ದರಿಂದ ಒಂದಕ್ಕಿಂತ ಹೆಚ್ಚು ಅಫೇರ್ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. ಸ್ವಲ್ಪ ಸೋಮಾರಿತನ ಬರುವುದರಿಂದ ಅಂದಿನ ಕೆಲಸವನ್ನು ಅಂದೇ ಮುಗಿಸಿರಿ. ಕೆರಿಯರ್ ಬಗ್ಗೆ ಹೇಳುವುದಾದರೇ ನೀರಿಗೆ ಸಂಬಂಧಪಟ್ಟ ಯಾವುದೇ ಬ್ಯುಜಿನೆಸ್ ಆಗಿದ್ದರೂ ಇವರಿಗೆ ಆಗಿಬರುತ್ತದೆ. ಇವರು ಜನರ ಜೊತೆ ಚೆನ್ನಾಗಿ ಬೆರೆಯುವುದರಿಂದ ಪಾಲಿಟಿಕ್ಸ್ ಕೂಡ ಇವರಿಗೆ ಚೆನ್ನಾಗಿ ಆಗಿ ಬರುತ್ತದೆ. ನಟನಾ ಕ್ಷೇತ್ರವು ಇವರಿಗೆ ಚೆನ್ನಾಗಿ ಆಗಿಬರುತ್ತದೆ. ಇವರು ಯಾವಾಗಲೂ ಸೆಕ್ಯುರ್ ಆಗಿ ಇರಲು ಇಷ್ಟಪಡುತ್ತಾರೆ. ಹಾಗಾಗಿ ಇವರು ಉಳಿತಾಯವನ್ನು ಚೆನ್ನಾಗಿ ಮಾಡುತ್ತಾರೆ. ಇವರ ಕೈಯಲ್ಲಿ ಹಣ ಖರ್ಚಾಗಿಬಿಡುತ್ತದೆ. ಆದರೂ ಕೂಡ ಉಳಿತಾಯದ ಕಡೆ ಗಮನ ಕೊಡುತ್ತಾರೆ.