ಎಸ್ ಎಂಬ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರಿಗೆ

0

ಎಸ್ ಎಂಬ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರಿಗೆ, ಎಸ್ ಅಕ್ಷರವು ಅವರ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರಾರಂಭದ ಅಕ್ಷರವನ್ನು ಕರೆಯುವಾಗ ಇದೇ ಮೊದಲು ಉಚ್ಚರಣೆಯಾಗುತ್ತದೆ. ಕೆಲವು ಅಕ್ಷರಗಳು ಮಹತ್ವದ್ದಾಗಿರುತ್ತದೆ. ಅವುಗಳೆಂದರೆ ಇಂಗ್ಲಿಷ್ ನ ಎ,ಜೆ, ಓ ಹಾಗೂ ಎಸ್. ಅದರಲ್ಲೂ ಎಸ್ ಎಂಬ ಅಕ್ಷರವು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಎಸ್ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ವ್ಯಕ್ತಿಗಳು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ,

ಜೀವನದಲ್ಲಿ ಹೆಚ್ಚಿನ ಸಾಧನೆಯನ್ನು ಸಾಧಿಸುತ್ತಾರೆ. ಇವರು ಅತೀ ಹೆಚ್ಚಿನ ನಿಷ್ಠಾವಂತರು ಹಾಗೂ ಎಲ್ಲರ ನಂಬಿಕೆಯನ್ನು ಕಾಪಾಡಿಕೊಳ್ಳುವವರಾಗಿರುತ್ತಾರೆ ಎಂದು ಸಂಖ್ಯಾಶಾಸ್ತ್ರಜ್ಞರು ಹೇಳುತ್ತಾರೆ. ಇವರು ಹೆಚ್ಚು ರಸಿಕರಾಗಿಲ್ಲದೇ ಹೋದರೂ ಮಾತು ಕಡಿಮೆ ಹಾಗೂ ಕೆಲಸ ಹೆಚ್ಚು ಮಾಡುವ ಗುಣದವರು ಆಗಿರುತ್ತಾರೆ. ಇವರು ತಮ್ಮ ಪ್ರೀತಿಯನ್ನು ತಮ್ಮ ಕಾರ್ಯಗಳಿಂದ ಮತ್ತು ದುಬಾರಿ ಉಡುಗೊಡರೆಯನ್ನು ಕೊಡುವುದರ ಮೂಲಕ ವ್ಯಕ್ತಪಡಿಸುತ್ತಾರೆ.

ಎಸ್ ಅಕ್ಷರ ಪ್ರಥಮ ಸ್ಥಾನದಲ್ಲಿರುವ ಕಾರಣ ಇವರು ತುಂಬಾ ಒಳ್ಳೆಯ ಗುಣದವರು ಮತ್ತು ಎಲ್ಲರನ್ನೂ ಪ್ರೀತಿಯಿಂದ ಕಾಣುವವರು ಮತ್ತು ತಾಳ್ಮೆ ಹಾಗು ಸಹಾನುಭೂತಿಯಿರುವವರು ಆಗಿರುತ್ತಾರೆ. ಇವರಲ್ಲಿ ಆತ್ಮೀಯತೆ ತುಂಬಿ ತುಳುಕಾಡುತ್ತದೆ. ಯಾವುದಾದರೂ ವ್ಯಕ್ತಿ ಕಷ್ಟದಲ್ಲಿರುವುದು ಕಂಡುಬಂದರೆ ಸಾಕು ಇವರು ಅಲ್ಲಿಗೆ ಧಾವಿಸುತ್ತಾರೆ. ಪ್ರಾಮಾಣಿಕತೆ ಇವರ ರಕ್ತದಲ್ಲಿರುವುದರಿಂದ ಇವರನ್ನು ಕಣ್ಣುಮುಚ್ಚಿಕೊಂಡು ನಂಬಬಹುದು ಆದರೆ ಇವರಿಗೆ ಸಿಟ್ಟು ಬಂದ ನಂತರ ಇವರನ್ನು ಯಾರೂ ಸಂಭಾಳಿಸಲು ಆಗುವುದಿಲ್ಲ.

ಅದರಿಂದ ಇವರನ್ನು ಅರ್ಥಮಾಡಿಕೊಳ್ಳುವುದು ಬೇರೆಯವರಿಗೆ ದೊಡ್ಡ ತಲೆನೋವಾಗಿರುತ್ತದೆ. ಇವರು ತಮ್ಮ ಆಂತರಿಕ ಭಾವನೆಗಳನ್ನು ಅಷ್ಟು ಸುಲಭವಾಗಿ ವ್ಯಕ್ತಪಡಿಸುವುದಿಲ್ಲ. ಆದ್ದರಿಂದ ಅವರನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಪರಿಣಾಮವಾಗಿ ಇತರರು ಇವರಲ್ಲಿ ಇರುವ ಅರ್ಹತೆಯನ್ನು ಗಮನಿಸದೇ ಇವರಿಗೆ ಸಿಗಬೇಕಾದ ಸವಲತ್ತುಗಳನ್ನು ಬೇರೆಯವರಿಗೆ ನೀಡಿದಾಗ ಸ್ವಾಭಾವಿಕವಾಗಿ ಇವರು ಖಿನ್ನತೆಗೊಳಗಾಗುತ್ತಾರೆ.

ಇವರು ಬಾಹ್ಯ ಸೌಂದರ್ಯ ಹೊಂದಿಲ್ಲದಿದ್ದರೂ ಇವರ ಆಂತರಿಕ ಸೌಂದರ್ಯ ಎಲ್ಲರನ್ನೂ ಸೆಳೆಯುತ್ತದೆ. ಇವರು ತಮ್ಮ ಸುತ್ತಮುತ್ತಲಿನ ಸಂತೋಷ ಕೂಟದಲ್ಲಿ ಭಾಗಿಯಾಗಿ ಎಲ್ಲರಿಗಿಂತ ಹೆಚ್ಚಿನ ಆತ್ಮ ತೃಪ್ತಿಯನ್ನು ಪಡೆಯುತ್ತಾರೆ. ಇದೇ ಕಾರಣಕ್ಕೆ ಇವರನ್ನು ಇವರ ಸುತ್ತಮುತ್ತಲಿನ ಜನ ಇವರನ್ನು ಹೆಚ್ಚು ಪ್ರೀತಿಯಿಂದ ಕಾಣುತ್ತಾರೆ ಹಾಗೂ ಹೆಚ್ಚು ಗೌರವಿಸುತ್ತಾರೆ ಕೂಡಾ. ಸಾಮಾನ್ಯವಾಗಿ ಇವರು ಹಣಕಾಸಿನ ವಿಚಾರದಲ್ಲಿ ಹೆಚ್ಚು ಎಚ್ಚರಿಕೆ ಹರಿಸುವ ಕಾರಣ ಇವರು ಯಶಸ್ವಿ ಉದ್ಯಮಿಯಾಗಿರುತ್ತಾರೆ, ರಾಜಕಾರಣಿಯಾಗಿರುತ್ತಾರೆ, ನಟ ಅಥವಾ ನಟಿಯೂ ಆಗಿರುತ್ತಾರೆ. ಹಣಕಾಸಿನ ವಿಚಾರದಲ್ಲಿ ಸದೃಢವಾಗಿರುವುದು ಇವರಿಗೆ ಪ್ರಮುಖ ವಿಷಯವಾಗಿರುತ್ತದೆ. ಹಾಗಾಗಿ ಅವರು ಸಮಾಜದಲ್ಲಿ ಒಳ್ಳೆಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

Leave A Reply

Your email address will not be published.