ಕುಂಭ ರಾಶಿ ಸೆಪ್ಟೆಂಬರ್ ಮಾಸ ಭವಿಷ್ಯ 

ಕುಂಭರಾಶಿಯವರಿಗೆ ಸೆಪ್ಟೆಂಬರ್ ತಿಂಗಳಿನ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ವಕ್ರನಾದ ಶುಕ್ರ, ವಕ್ರನಾಶ ಶನಿ ಆರನೇ ಮನೆಯಲ್ಲಿ ರಾಶಿಯ ಅಧಿಪತಿಯಾದ ಶನಿ ರಾಶಿಯಲ್ಲಿದ್ದು ತೀಕ್ಷ್ಮನಾಗಿದ್ದಾನೆ.ಈ ವಕ್ರತೆ ನಿಮಗೆ ಹಲವಾರು ಸವಾಲುಗಳನ್ನು ತರುತ್ತದೆ. ಈ ಸವಾಲುಗಳಲ್ಲೂ ಲಾಭವು ಆಗುತ್ತದೆ.

ಶನಿಯು ಈ ರಾಶಿಯಲ್ಲಿರುವಾಗ ನಮ್ಮ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತದೆ. ಸರ್ಕಾರಿ ಕಛೇರಿಗಳಲ್ಲಿ ಮತ್ತು ಮತ್ತಿತರ ಕೆಲಸಗಳು ಹಿನ್ನೆಡೆಯಾಗುವಂತದ್ದು, ನೀವು ದುಡ್ಡು ಕೊಡುತ್ತೀನಿ ಎಂದರೂ ಕೆಲಸಗಳು ಆಗುವುದಿಲ್ಲ. ಕುಂಭರಾಶಿಯ ಬಹಳಷ್ಟು ಜನರು ಕೆಲಸ ಕಳೆದುಕೊಂಡಿದ್ದೀರ ಮತ್ತು ಕೆಲಸ ಕಳೆದುಕೊಂಡವರು ಕೂಡ ಇದನ್ನು ಗಮನಿಸಬೇಕು. ಕೆಲಸಕ್ಕೆ ಮತ್ತೆ ಪ್ರಯತ್ನಿಸಿದಾಗಲೂ ವಿಳಂಬವಾಗುತ್ತದೆ. ಮೊದಲು ಏನು ನೀವು ಮಾಡಬೇಕು ಎಂದರೆ ಸ್ವಲ್ಪ ಸಮಯ ಕಾದರೂ ಪರವಾಗಿಲ್ಲ ಸರಿಯಾದ ಕೆಲಸಕ್ಕೆ ಸೇರಿಕೊಳ್ಳಬೇಕು, ಇದೊಂದು ಹೋರಾಟ ಎಂದು ತಿಳಿದುಕೊಳ್ಳಿ. ನೀವು ದೈಹಿಕ ಮತ್ತು ಮಾನಸಿಕವಾಗಿ ಸಶಕ್ತವಾಗಿರಬೇಕು. 17ನೇ ತಾರೀಖು ರವಿಯ ಪರಿವರ್ತನೆಯಿಂದ ನಿಮ್ಮ ಜೀವನದಲ್ಲಿ ಬದಲಾವಣೆಯಾಗುತ್ತದೆ.

ದುಡ್ಡಿನ ಕೊರತೆಯಾಗುತ್ತದೆ. ನಿಮಗೆ ದುಡ್ಡು ಕೊಡುವವರು ಹಿಂದೇಟು ಹಾಕುತ್ತಾರೆ. ಸ್ವಂತ ಉದ್ಯೋಗ ಮಾಡುವವರಿಗೆ ಹಣದ ಕೊರತೆಯಾಗುತ್ತದೆ. ವ್ಯವಹಾರದಲ್ಲಿ ಅಡ್ಡ ಆತಂಕಗಳು ಉಂಟಾಗುತ್ತದೆ. ತಿಂಗಳ ಸಂಬಳವನ್ನು ನಂಬಿಕೊಂಡಿರುವವರಿಗೆ ಖರ್ಚುಗಳು ಹೆಚ್ಚಾಗುತ್ತದೆ. ಅಕ್ಟೋಬರ್ 30ರ ವರೆಗೂ ರಾಹುವಿನ ಬೆಂಬಲ ನಿಮಗೆ ಇದೆ. ರಾಹು ನಿಮಗೆ ಧೈರ್ಯವನ್ನು ಕೊಡುತ್ತಾನೆ. ಸಾಡೇಸಾತಿಯಿಂದ ಬರುವಂತಹ ಎಲ್ಲಾ ನೆಗೆಟಿವ್ ಅನ್ನು ನಿಮ್ಮಿಂದ ದೂರ ಇಡುತ್ತಿದ್ದಾನೆ. ಗುರು ಚಾಂಡಾಲ ಯೋಗ ನಿಮಗೆ ಬಹಳಷ್ಟು ಯಶಸ್ಸನ್ನು ಕೊಡುತ್ತಿದೆ.

ಮಾನಸಿಕ ಒತ್ತಡಗಳು ಯಾವುದಾದರೂ ಮೂಲದಿಂದಲೂ ಬರಬಹುದು. ಹೆಚ್ಚು ಸಾಧಿಸಬೇಕೆಂದು ಹೋರಾಟ ಮಾಡುತ್ತಿರುವವರಿಗೆ ಆರೋಗ್ಯ ಕೈ ಕೊಡುತ್ತದೆ. ವಿಶೇಷವಾಗಿ ದೇಹಕ್ಕೆ ಶನಿಯಿಂದ ತೊಂದರೆಯಾಗುತ್ತದೆ. ವಾತಾದ ಸಮಸ್ಯೆ ಉಂಟಾಗುತ್ತದೆ. 24 ಗಂಟೆನೂ ಕೆಲಸ ಎಂದು ತಲೆಕೆಡಿಸಿಕೊಂಡರೆ ದೇಹದಲ್ಲಿ ರಕ್ತಪರಿಚಲನೆಯ ಸಮಸ್ಯೆ ಉಂಟಾಗುತ್ತದೆ. ಕೆಲಸ ಕಾರ್ಯಗಳು ಮತ್ತು ಒತ್ತಡದಿಂದ ಊಟ ಮಾಡಲು ಮತ್ತು ದೇಹದ ವ್ಯಾಯಾಮಕ್ಕೆ ಸಮಯ ಸಿಗುವುದಿಲ್ಲ. ಇದೆಲ್ಲಾ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸಣ್ಣದಾಗಿ ವ್ಯಾಯಾಮ, ವಾಕಿಂಗ್ ಮಾಡಲು ಪ್ರಯತ್ನಿಸಬೇಕು.

17ನೇ ತಾರೀಖು ರವಿ ಪರಿವರ್ತನೆಯಾಗುವುದರಿಂದ ರವಿ 17ನೇ ತಾರೀಖಿನ ವರೆಗೂ ನಿಮ್ಮ ಸಪ್ತಮ ಭಾಗದಲ್ಲಿ ಇರುತ್ತಾನೆ. ನಂತರ ಅಷ್ಟಮ ಭಾಗಕ್ಕೆ ಪರಿವರ್ತನೆಯಾಗುತ್ತಾನೆ. ಆ ಸಮಯದಲ್ಲಿ ಸವಾಲುಗಳು ಹೆಚ್ಚು ಆಗುತ್ತದೆ. ವಿಶೇಷವಾಗಿ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಸರ್ಕಾರಿ ನೌಕರರಿಗು ಹಿನ್ನೆಡೆಯಾಗುತ್ತದೆ. ಸಾಡೇಸಾತಿ ಇರುವಾಗ ಆರೋಗ್ಯದ ಸಮಸ್ಯೆ ಉಂಟಾಗುವುದರಿಂದ ಇನ್ನಷ್ಟು ಬಿಗಡಾಯಿಸುತ್ತದೆ. 17 ನಂತರ ಆರೋಗ್ಯದ ಕಡೆ ವಿಶೇಷವಾಗಿ ಎಚ್ಚರಿಕೆ ವಹಿಸಿ. ಸಾಡೇಸಾತಿ ಇರುವಾಗ ಸೋಮಾರಿತನವನ್ನು ಉಂಟುಮಾಡುತ್ತದೆ. ಹಗಲು ನಿದ್ದೆ ಮಾಡದೇ ರಾತ್ರಿ 6,7 ತಾಸು ಚೆನ್ನಾಗಿ ನಿದ್ದೆ ಮಾಡಿ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಆಲಸ್ಯವನ್ನು ಕಡಿಮೆ ಮಾಡಿಕೊಳ್ಳಬೇಕು.

ಭಿನ್ನಾಭಿಪ್ರಾಯಗಳು ಉಂಟಾಗುವ ಸಮಯವಾಗಿರುವುದರಿಂದ ಈ ವಿಷಯದಲ್ಲಿ ಎಚ್ಚರಿಕೆ ವಹಿಸಿ. ಪಾರ್ಟನರ್ ಶಿಪ್ ವ್ಯವಹಾರ ಮಾಡುತ್ತಿದ್ದರೆ ಲಕ್ಷ್ಮಿನಾರಾಯಣ ಸ್ವಾಮಿಯ ಸ್ತುತಿ ಮಾಡುವುದರ ಮೂಲಕ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು. ವಕ್ರ ಶುಕ್ರ 6ನೇ ಮನೆಯಲ್ಲಿದ್ದಾನೆ. ಇದು ಪಾಸಿಟಿವ್ ಆಗಿದೆ. ಸಾಡೇಸಾತಿ ಇರುವಾಗ ಶತೃತ್ವ ಉಂಟಾಗುತ್ತದೆ. ಮಿತ್ರರೇ ಶತೃಗಳಾಗುತ್ತಾರೆ.

ಸಾಡೇಸಾತಿಯಿಂದ ನಿರ್ಲಕ್ಷ್ಯೆ ಮಾಡುವವರಾಗಿರುತ್ತಾರೆ. ಒಳ್ಳೆಯ ಕೆಲಸ ಮಾಡುತ್ತಿರುತ್ತಾರೆ ಈ ಸಮಯದಲ್ಲಿ ಕೆಟ್ಟ ಅನುಭವಗಳು ಆಗುವ ಸಾಧ್ಯತೆ ಇರುತ್ತದೆ. ಪ್ರಾಣ ಅಪಾಯವಾಗುವಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರೆ ಡಬ್ಬಲ್ ಎಚ್ಚರಿಕೆಯನ್ನು ವಹಿಸಬೇಕು. ಶುಕ್ರನಲ್ಲಿ ಸ್ವಲ್ಪ ಒಳ್ಳೆಯ ಪರಿಣಾಮವಿದೆ.

ದೇವರಲ್ಲಿ ಭಕ್ತಿ, ಶ್ರದ್ಧೆ ಇರುತ್ತದೆ ಆದರೇ ಈ ಸಮಯದಲ್ಲಿ ಯಾವುದು ಗೊತ್ತಾಗುವುದಿಲ್ಲ. ಮಂತ್ರ, ದೇವರ ಧ್ಯಾನ ಮಾಡುವುದರಿಂದ ಮಾನಸಿಕ ಸಮಸ್ಯೆ ಬಗೆಹರಿಯುತ್ತದೆ ಎಂದರೆ ತುಂಬಾ ಜನರಿಗೆ ನಂಬಿಕೆ ಬರುವುದಿಲ್ಲ. ಒಳ್ಳೆಯ ಮಾತುಗಳು ಕೂಡ ನಿಮ್ಮ ಕಿವಿಗೆ ಬೀಳುವುದಿಲ್ಲ.

ಒಳ್ಳೆ ವಿಚಾಗಳು ಕಿವಿಗೆ ಬಿದ್ದರೂ ಕೂಡ ನಿಮ್ಮ ಮನಸ್ಸಿಗೆ ಅದು ನಾಟುವುದಿಲ್ಲ.

ಓಪನೆಸ್ ಇಲ್ಲದೇ ಇರುವುದು. ನಿಮ್ಮ ಬುದ್ದಿಗೆ ಕ್ಯಾಪ್ ಹಾಕಿಕೊಂಡಿರುತ್ತೀರಿ. ಏನನ್ನು ಒಪ್ಪುವುದಿಲ್ಲ. ಯಾರ ಸಲಹೆಗೂ ಕಿವಿ ಕೊಡುವುದಿಲ್ಲ. ಆದ್ದರಿಂದ ಹಿರಿಯರ ಸಲಹೆ ಮಾರ್ಗದರ್ಶನವನ್ನು ಕೇಳುವಂತರಾಗಿ.

ಎಲ್ಲಾ ಹಂತಗಳಲ್ಲಿ ಸೋತು ಸುಣ್ಣವಾಗಿರುವ ಭಾವನೆ ಇರುತ್ತದೆ. ಆದರೇ ಆ ಸೋಲನ್ನು ಒಪ್ಪಿಕೊಳ್ಳುವುದಕ್ಕೆ ನಿಮ್ಮ ಆ ಸ್ವಾಭಿಮಾನ ಬಿಡುವುದಿಲ್ಲ. ಅಹಂ ಕೂಡ ಬಂಡತನ, ಮೊಂಡುತನ ಇರುತ್ತದೆ. ಈ ಎಲ್ಲಾ ಸವಾಲುಗಳನ್ನು ಎದುರಿಸಲು ಕಲಿಯಬೇಕು. ಕಲಿತರೇ ಮಾತ್ರ ಶನಿದೇವರು ನಿಮ್ಮನ್ನು ಕ್ಷಮಿಸಲು ಸಾಧ್ಯವಿದೆ, ಮುಂದೆ ಸರಿಯಾದ ದಾರಿಯಲ್ಲಿ ಸಾಗಲು ಸಾಧ್ಯವಾಗುತ್ತದೆ.

Leave a Comment