ಕುಂಭ ರಾಶಿಗೇ ಹೀಗಾದ್ರೆ ಹೇಗೆ?

ನಾವು ಈ ಲೇಖನದಲ್ಲಿ, ಕುಂಭ ರಾಶಿಯವರಿಗೆ , ಸಾಡೇಸಾತಿ ಮತ್ತು ಶನಿಯ ಗೋಚಾರ ಫಲಗಳನ್ನು ತಿಳಿದುಕೊಳ್ಳೋಣ. ಕುಂಭ ರಾಶಿಯವರಿಗೆ ಸಾಡೇ ಸಾತಿ ಜನ್ಮ ಶನಿಯ ಕಾಟ, ಶುರುವಾಗಿ ಆಗಲೇ, ಒಂದು ವರ್ಷ ಕಳೆಯಿತು. ಇನ್ನು ಒಂದು ವರ್ಷ ಬಾಕಿ ಇದೆ . ಹೆಚ್ಚಿಗೆ ಒಳ್ಳೆಯದಾಗುವುದಿಲ್ಲ . ಶನಿಯಿಂದ, ಹೆಚ್ಚಿಗೆ ತೊಂದರೆ ಇದೆ . ಶನಿಯು ಬುದ್ಧಿ ಕಲಿಸುತ್ತಾನೆ. ಎಂದು, ಗಾಬರಿ ಮಾಡಿಕೊಂಡಿರುವವರಿಗೆ ಈ ವರ್ಷ ಶನಿ ಒಂದಷ್ಟು ವಿಚಾರಗಳಲ್ಲಿ, ನಿಮಗೆ ಒಳ್ಳೆಯದು ಮಾಡುತ್ತಾನೆ .

ಒಳ್ಳೆಯ ಫಲಗಳು , ಶುಭ ಸುದ್ದಿಗಳು , ಈ ವರ್ಷದಲ್ಲಿ ನಿಮಗೆ ಕಾದಿದೆ. ಶನಿಯು ಪಾಠ ಕಲಿಸುವುದರ ಜೊತೆಗೆ ಲಾಭಗಳನ್ನು ಸಹ ಮಾಡಿಕೊಡಬಹುದು . ಹಾಗಾದರೆ ಯಾವ ತಿಂಗಳಿನಲ್ಲಿ, ನಿಮಗೆ ಜನ್ಮ ಶನಿ ಕಾಲದಲ್ಲಿ ಲಾಭ ಆಗುತ್ತದೆ, ಅನ್ನೋ ವಿಚಾರದ ಬಗ್ಗೆ ತಿಳಿದುಕೊಳ್ಳೋಣ . ಜನವರಿ 17 2023 ರಿಂದಲೇ, ಜನ್ಮ ಶನಿ ಶುರುವಾಗಿದೆ. ಆಗಿನಿಂದಲೂ ಬಹಳಷ್ಟು ಜನರ ಶರೀರದಲ್ಲಿ, ಏನಾದರೂ ತೊಂದರೆಗಳು, ಕಾಣಿಸಿಕೊಂಡಿರಬಹುದು. ಅಂದರೆ ಬೆಳವಣಿಗೆ ವಿಚಾರದಲ್ಲಿ ,

ದೈಹಿಕ ಸಾಮರ್ಥ್ಯದಲ್ಲಿ ಮತ್ತು ಬಹಳಷ್ಟು ಜನ ಮುಖದ ಮೇಲೆ ಒಂದಷ್ಟು ಕಲೆ ಆಗೋದು, ಗಾಯ ಮಾಡಿಕೊಂಡಿರಬಹುದು. ಅದರಲ್ಲೂ ಫೆಬ್ರವರಿ 11ರ ನಂತರ ಇನ್ನಷ್ಟು ವಿಚಾರಗಳು, ನಡೆಯಬಹುದು. ಫೆಬ್ರವರಿ 11ರ ನಂತರ ಶನಿ , ಹಸ್ತನಾಗುತ್ತಾನೆ. ಹಸ್ತ ಎಂದರೆ ಸೂರ್ಯನಿಗೆ ಹತ್ತಿರ ಆಗುವುದರಿಂದ , ಶನಿಯ ಗೋಚರವಿರುವುದಿಲ್ಲ. ಇಂತಹ ವೇಳೆಯಲ್ಲಿ ನೀವು ಹೆಚ್ಚಿಗೆ, ಕಳೆದುಕೊಳ್ಳುತ್ತೀರಾ. ಜನ್ಮಸ್ಥಾನದಲ್ಲಿ ಶನಿ ಇದ್ದರೆ , ಅಥವಾ ಮೊದಲನೇ ಮನೆಯಲ್ಲಿ ಕೂತು , ಇದು ಯಾವಾಗಲೂ,

ಅವರ ಜೀವನದ ಭವಿಷ್ಯಕ್ಕೆ ಸಂಬಂಧಪಟ್ಟಿರುತ್ತದೆ. ಹಾಗೂ ಪ್ರಭಾವ ಬೀರುತ್ತದೆ. ಅದರ ಪ್ರಕಾರ ಹೇಳುವುದಾದರೆ , ಕುಂಭ ರಾಶಿಯ ಬಹಳಷ್ಟು ಜನ ಮನೋಸ್ಥೈರ್ಯವನ್ನು, ಕಳೆದುಕೊಳ್ಳುವ ಸಾಧ್ಯತೆ ಇದೆ. ಮತ್ತು ಪ್ರತಿಯೊಂದು ಹೆಜ್ಜೆಯನ್ನು, ಹೆದರಿಕೆಯಲ್ಲಿ ತೆಗೆದುಕೊಳ್ಳುವ ಹಾಗಾಗುತ್ತದೆ. ಮನಸ್ಸು ಯಾವಾಗಲೂ ನಕರಾತ್ಮಕ ವಾಗಿ , ಯೋಚನೆ ಮಾಡುತ್ತಿರುತ್ತದೆ. ಕೆಲವರಿಗೆ ಆಲಸ್ಯ ತನ ಕಾಡಿದರೆ , ಇನ್ನು ಕೆಲವರಿಗೆ ತಮ್ಮ ನಿರ್ಧಾರ ಸರಿಯೋ, ತಪ್ಪೋ , ಎಂದು ಯೋಚನೆ , ಮಾಡುವಂತಾಗುತ್ತದೆ.

ಇನ್ನು ಕೆಲವರಿಗೆ ಆತ್ಮಭಿಮಾನ ಕಡಿಮೆಯಾಗಬಹುದು. ನಿಮ್ಮವರಿಂದಲೇ ಅವಮಾನವೂ, ಸಹ ಆಗಬಹುದು. ಒಟ್ಟಿನಲ್ಲಿ ಫೆಬ್ರವರಿ 11ರ ನಂತರ ಒಟ್ಟು 37 ದಿನಗಳ ಕಾಲ , ನಿಮಗೆ ನೆಮ್ಮದಿ ಇರುವುದಿಲ್ಲ. ಆರೋಗ್ಯದ ವಿಚಾರದಲ್ಲಿಯೂ , ಸಹ ತುಂಬಾ ಹುಷಾರಾಗಿರಬೇಕು. ಚರ್ಮದ ಮೇಲೆ ಯಾವುದೇ ಹೊಸ ಪ್ರಯೋಗಗಳನ್ನು ಸಾಡೇಸಾತಿ, ಮುಗಿಯುವ ತನಕ ಪ್ರಯೋಗ ಮಾಡಬೇಡಿ. ಹಾಗೆಯೇ ಕಣ್ಣುಗಳು ಮತ್ತು ಹಲ್ಲುಗಳ ವಿಚಾರದಲ್ಲಿ ಹೆಚ್ಚಿಗೆ ಕಾಳಜಿ ವಹಿಸಿ. ವೈದ್ಯರ ಸಲಹೆ ಪಡೆಯದೆ ,

ಯಾವುದೇ ಔಷಧಿಗಳನ್ನು, ತೆಗೆದುಕೊಳ್ಳಬೇಡಿ ಅದು ನಿಮಗೆ ತುಂಬಾ ಹೊಡೆತ ಕೊಡುವ ಸಾಧ್ಯತೆ ಹೆಚ್ಚು. ಇನ್ನು ಕೈಕಾಲುಗಳಲ್ಲಿ ನೋವಿದ್ದರೆ ,ಹೆಚ್ಚು ನಿರ್ಲಕ್ಷ್ಯ ವಹಿಸಬೇಕು. ಇನ್ನು ಹಣಕಾಸಿನ ವಿಚಾರಕ್ಕೆ ಬಂದರೆ, ಶನಿ ಹಸ್ತನಾಗಿದ್ದಾಗ , ಹಣಕಾಸಿನ ವಿಚಾರದಲ್ಲಿ ತುಂಬಾ ನಂಬಿಕೆ ಇಟ್ಟುಕೊಳ್ಳುವುದು ವ್ಯರ್ಥ. ಯಾಕೆಂದರೆ ದುಡ್ಡು ನಿಮ್ಮ ಕೈಗೆ ಸಿಗುವುದು ಕಷ್ಟ .ಬೇರೆಯವರಿಗೆ ಕೊಟ್ಟು ನಷ್ಟವಾಗುವ ಸಾಧ್ಯತೆ ಹೆಚ್ಚು. ಮಾಡುವ ಕೆಲಸಗಳಲ್ಲಿ ಸಹ ನಿಧಾನವಾಗುವ ಸಾಧ್ಯತೆ ಇದೆ. 37 ದಿನಗಳ ನಂತರ, ಅಂದರೆ ಮಾರ್ಚ್ 18ಕ್ಕೆ, ಹಸ್ತನಾಗಿರುವ ಶನಿ ಉದಯವಾಗುತ್ತದೆ.

ಅಲ್ಲಿಯ ತನಕ ಯಾವುದೇ ರೀತಿಯ ನಿರ್ಧಾರಗಳನ್ನು , ತೆಗೆದು ಕೊಳ್ಳಬೇಡಿ . ಹಾಗಾದರೆ ಮಾರ್ಚ್. ಹದಿನೆಂಟರ ನಂತರ, ಶನಿ ಉದಯನಾಗುತ್ತಾನೆ . ಆಗ ಸ್ವಲ್ಪ ಮಟ್ಟಿಗೆ, ನಿಮಗೆ ಸಮಾಧಾನ ಸಿಗುತ್ತದೆ . ಮುಖ್ಯವಾಗಿ ವೃತ್ತಿ ಜೀವನದಲ್ಲಿ, ನಿಮಗೆ ಹೆಚ್ಚಿನ ಪ್ರಯೋಜನಗಳು ಸಿಗಲಿದೆ. ಕೆಲವರಿಗೆ ವಿದೇಶದಲ್ಲಿ ಉದ್ಯೋಗವಕಾಶಗಳು ಲಭಿಸಬಹುದು . ಇನ್ನು ಕೆಲವರು ಹೂಡಿಕೆ ಮಾಡಬಹುದು, ಕುಟುಂಬಕ್ಕೆ ಖರ್ಚು ಮಾಡಬಹುದು. ನಿಮ್ಮ ಹೂಡಿಕೆಗಳಿಗೆ ನಿಮ್ಮ ಕುಟುಂಬದವರು ಜೊತೆ ನಿಲ್ಲುತ್ತಾರೆ. ಮಾರ್ಚ್ ಹದಿನೆಂಟರ ನಂತರ ಒಳ್ಳೆಯ ಸೂಚನೆಗಳು ಶುರುವಾದಾಗಲೇ ,

ಶನಿಯು ವಕ್ರ ಚಲನೆಯನ್ನು ಶುರು ಮಾಡುತ್ತಾನೆ. ಅಂದರೆ ಜೂನ್ 29 ರಿಂದ ನವೆಂಬರ್ 15 ರ ತನಕ ವಕ್ರ ಶನಿಯ ಪ್ರಭಾವ ಕೂಡ, ನಿಮ್ಮ ಮೇಲೆ ಶುರುವಾಗುತ್ತದೆ. ಇದರಿಂದಲೂ ಬಹಳಷ್ಟು ವಿಚಾರಗಳಲ್ಲಿ ನಿಮಗೆ ಶುಭವಾಗಲಿದೆ. ವಕ್ರಶನಿ ಎಂದರೆ, ಕುಂಭ ರಾಶಿಯಲ್ಲಿ, ನೇರವಾಗಿ ಚಲಿಸುತ್ತಿದ್ದ ಶನಿ ಜೂನ್ 29 ರಿಂದ ಹಿಮ್ಮುಖ ಚಲನೆಯನ್ನು ಶುರು ಮಾಡುತ್ತಾನೆ. ಇದರಿಂದ ಬಹಳಷ್ಟು ಜನ ಹಣಕಾಸಿನ ವಿಚಾರಗಳಲ್ಲಿ ಲಾಭ ಮಾಡಿಕೊಳ್ಳುತ್ತೀರಾ. ನಿಮ್ಮ ರಾಶಿಯ ಅಧಿಪತಿ ಶನಿ ಆಗಿರುವುದರಿಂದ, ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತೀರಾ. ಅದೃಷ್ಟವು ,ಸಹ ಕೈ ಹಿಡಿಯುತ್ತದೆ. ದೈಹಿಕ ಸಾಮರ್ಥ್ಯವನ್ನು ಪಡೆಯುತ್ತೀರಾ .

ಆರೋಗ್ಯವು ವು ಸಹ ವೃದ್ಧಿಯಾಗುತ್ತದೆ . ಆತ್ಮ ವಿಶ್ವಾಸವು ಹೆಚ್ಚಾಗುತ್ತದೆ. ಏನೇ ಸಮಸ್ಯೆ, ಬಂದರೂ ಹೆದರಿಸುತ್ತೇನೆ . ಒಂದಲ್ಲ ಒಂದು ಪರಿಹಾರವನ್ನು ಕಂಡುಕೊಳ್ಳುತ್ತೇನೆ. ಎಂಬ ಮನೋಬಲ ಹೆಚ್ಚಾಗುತ್ತದೆ. ನವೆಂಬರ್ 15 ರ ತನಕ 60 % ರಷ್ಟು, ಒಳ್ಳೆಯ ಫಲಗಳನ್ನೇ ಕಾಣುತ್ತೀರಾ. ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸಿ. ಅನಗತ್ಯ ಪ್ರಯಾಣ ಬರಬಹುದು. ಸ್ನೇಹಿತರ ಜೊತೆ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದು , ಸಾಡೇಸಾತಿಯ ಕಾಲದಲ್ಲಿ, ಒಳ್ಳೆಯದಲ್ಲ. ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿದ್ದರೆ, ಸ್ವಲ್ಪ ಸಮಸ್ಯೆಗಳನ್ನು ಸಹ ನೀವು ಎದುರಿಸಬಹುದು. ನಿಮ್ಮ ಮನಸ್ಸಿನ ಶಾಂತಿಗಾಗಿ, ಶನಿಯ ಮಂತ್ರಗಳನ್ನು ಪಠಿಸಿ ಎಂದು ಹೇಳಲಾಗಿದೆ.

Leave a Comment