ನಾವು ಈ ಲೇಖನದಲ್ಲಿ ಮಕರ ರಾಶಿಯ ಜನವರಿ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ನೋಡೋಣ. ಹಳೆಯ ಘಟನೆ ನಡೆದಿರುವುದನ್ನು ಪದೇಪದೇ ನೆನಪಿಸಿಕೊಂಡು ಇದು ಹುಳುವಿನಂತೆ ಕೊರೆಯುತ್ತಿರುತ್ತದೆ. ಸಾಡೇಸಾತಿ ಸಮಯದಲ್ಲಿ ನಿಮ್ಮ ಜೀವನದಲ್ಲಿ ನಡೆದಿರುವ ಘಟನೆಗಳನ್ನು ನೆನಪಿಸುವ ಸಂದರ್ಭಗಳು ಬೆಳವಣಿಗೆ ಆಗುತ್ತದೆ . ಜನವರಿ ತಿಂಗಳಲ್ಲಿ ನಿಮ್ಮ ಗಮನ ಖರ್ಚಿನ ಕಡೆ ಹೆಚ್ಚಾಗಿ ಇರುತ್ತದೆ. ಇದು ಎಲ್ಲಾ ತರಹ ಜನರಿಗೆ ಅನ್ವಯಿಸುತ್ತದೆ . ಮತ್ತು ಅವಲಂಬಿತವಾಗಿರುತ್ತದೆ . ವ್ಯಾಪಾರ ವ್ಯವಹಾರ ವಿಷಯದಲ್ಲಿ ನಿಮ್ಮನ್ನು ನೀವು ತೊಡಗಿಸಿ ಕೊಂಡಿದ್ದರೆ , ನಿಮಗೆ ಒತ್ತಡಗಳು ಹೆಚ್ಚಾಗಿರುತ್ತದೆ.
ನಿಮ್ಮ ಕೆಲಸಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ತೆಗೆದುಕೊಳ್ಳುವಾಗ ಆತುರ ಬೀಳದೆ ಯೋಚನೆ ಮಾಡಿ ಖರೀದಿಸುವ ಸಾಹಸಕ್ಕೆ ಕೈ ಹಾಕ ಬೇಕಾಗುತ್ತದೆ . ಇಲ್ಲವಾದರೆ ನೀವು ಗಡಿ ಬಿಡಿಗೆ ಬೀಳ ಬೇಕಾಗುತ್ತದೆ . ಯಾಕೆಂದರೆ ಒಂದೆರಡು ತಿಂಗಳಲ್ಲಿ ನಿಮ್ಮ ಜೀವನದಲ್ಲಿ ಪರಿವರ್ತನೆಯಾಗುವ ಸನ್ನಿವೇಶಗಳು ಬರುವುದರಿಂದ , ನೀವು ಮಾಡುವ ಕೆಲಸದಲ್ಲಿ ಗಡಿಬಿಡಿ ಮಾಡಬಾರದು .ಇಂತಹ ಬೆಳವಣಿಗೆಯಿಂದ ನಿಮಗೆ ಧನಾತ್ಮಕ ಬೆಳವಣಿಗೆಗಳು ಕಾಣಬಹುದು . ಆದರೆ ಈಗ ಸದ್ಯದ ಪರಿಸ್ಥಿತಿಯಲ್ಲಿ ಮೂರು ಗ್ರಹಗಳು ನಿಮ್ಮ ವ್ಯಯ ಭಾಗದಲ್ಲಿ ಇರುವುದರಿಂದ ,
ನೀವು ದಿಗಿಲು ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಸಮರ್ಪಕವಾದ ನಿರ್ಧಾರವನ್ನು ತೆಗೆದುಕೊಳ್ಳಲು ಆಗುವುದಿಲ್ಲ . ನೀವು ಖರೀದಿಸಿದ ವಸ್ತುಗಳಿಗೆ ತಕ್ಕ ಬೆಲೆ ಸಿಕ್ಕಿರುವುದಿಲ್ಲ . ನೀವು ಅದನ್ನು ಆ ನಂತರದಲ್ಲಿ ಖರೀದಿಸಿದ ಮೇಲೆ ನಿಮ್ಮ ಮನಸ್ಸಿಗೆ ಬರುತ್ತದೆ . ಮಾರಾಟ ಮಾಡುವವರು ನಿಮಗೆ ಅತಿಯಾದ ಬೆಲೆ ಹೇಳಿ ಆಮೇಲೆ ಕಡಿಮೆ ಮಾಡುವ ಸಂಭವ ಕೂಡ ಇರುತ್ತದೆ . ಅದಕ್ಕಾಗಿ ನೀವು ಸ್ವಲ್ಪ ಮುಂದಾಲೋಚನೆಯನ್ನು ಇಟ್ಟುಕೊಂಡು ವ್ಯಾಪಾರ ವ್ಯವಹಾರ ಮಾಡುವುದು ಒಳ್ಳೆಯದು .
ಹೆಚ್ಚಿನ ವಿಚಾರದಲ್ಲಿ ವಿಶೇಷವಾದ ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ . ನಿಮ್ಮನ್ನು ಹಾದಿ ತಪ್ಪಿಸಲು ಮೂರು ಗ್ರಹಗಳು ನಿಮ್ಮ ರಾಶಿಯಲ್ಲಿ ಇರುತ್ತದೆ . ಅಂದರೆ ವ್ಯಯ ಭಾಗದಲ್ಲಿ ಇದೆ . ನಿಮಗೆ ಯಾವುದೇ ರೀತಿ ಅನಗತ್ಯ ಖರ್ಚುಗಳು ಕೂಡ ಬರಬಹುದು . ಅಗತ್ಯವಾಗಿರುವ ಖರ್ಚು ಕೂಡ ಬಹಳ ದೊಡ್ಡ ಪ್ರಮಾಣದಲ್ಲಿ ಬರುವ ಸಾಧ್ಯತೆ ಕೂಡ ಇರುತ್ತದೆ . ಸ್ವಲ್ಪ ಸುಧಾರಣೆಯನ್ನು ಮಾಡಿಕೊಂಡು ಮುಂದುವರೆಯುವುದು ಒಳ್ಳೆಯದು . ಸಾಕಷ್ಟು ಹೇಳಿ – ಕೇಳಿ ವಿಚಾರ ಮಾಡಿ , ತೀರ್ಮಾನವನ್ನು ತೆಗೆದುಕೊಳ್ಳಬೇಕಾಗುತ್ತದೆ .
ಕೆಲವು ವ್ಯಕ್ತಿಗಳಿಗೆ ಯಶಸ್ಸು ಸಿಗಲಿದೆ . ಹೇಗೆ ಎಂದರೆ ಖರ್ಚು ಮಾಡುವುದನ್ನು ಸಮತೋಲನ ಮಾಡುವುದಕ್ಕೆ ಶುಕ್ರ ಗ್ರಹ ಇದೆ . ಹಣವನ್ನ ಹೇರಳವಾಗಿ ತಂದುಕೊಡುತ್ತದೆ . ಮೂರು ಭಾಗ ಖರ್ಚಾಗುತ್ತದೆ ಎಂದರೆ , ಅದರಲ್ಲಿ ಒಂದು ಭಾಗ ಉಳಿಯುವ ಸಾಧ್ಯತೆ ಕೂಡ ಇದೆ . ಈ ತಿಂಗಳಲ್ಲಿ ನೀವು ಉಳಿಯುವ ತರಹ ಗಮನ ವಹಿಸಬೇಕು . ಖರ್ಚುಗಳನ್ನು ಸಮತೋಲನವಾಗಿ ನೋಡಿಕೊಳ್ಳುವುದು ಸುಲಭವಲ್ಲ , ಅದರ ಬಗ್ಗೆ ನಿಗಾ ವಹಿಸಬೇಕು . ಮೊದಲು ನೀವು ಅಗತ್ಯ ಮತ್ತು ಅಪೇಕ್ಷೆಗಳ ಬಗ್ಗೆ ತಿಳಿದುಕೊಳ್ಳಬೇಕು .
ಅಗತ್ಯಗಳನ್ನು ನೆರವೇರಿಸಿ ಕೊಂಡು ಅಪೇಕ್ಷೆಗಳನ್ನು ಬಿಟ್ಟುಬಿಡಬೇಕು .ತಿಂಗಳ ಕೊನೆಯಲ್ಲಿ ಕೈ ಖಾಲಿ ಆಗುವ ಪರಿಸ್ಥಿತಿ ಬರುತ್ತದೆ . ಆದ್ದರಿಂದ ಅಗತ್ಯವಾಗಿರುವ ವಸ್ತುಗಳ ಕಡೆ ಮಾತ್ರ ಗಮನ ವಹಿಸಿ ಅಪೇಕ್ಷೆಗಳನ್ನು ತ್ಯಜಿಸುವುದ ಒಳ್ಳೆಯದು. ನೀವು ತಿಂಗಳ ಕೊನೆ ಅನ್ನುವಾಗ ಯೋಚನೆ ಮಾಡಬೇಡಿ , ತಿಂಗಳ ಮೊದಲೇ ಯೋಚನೆ ಮಾಡಿ ಖರ್ಚು ಮಾಡುವುದರಿಂದ , ಕೊನೆಯಲ್ಲಿ ನಿಮಗೆ ಯಾವುದೇ ರೀತಿಯ ತೊಂದರೆ ಕಾಣಿಸುವುದಿಲ್ಲ . ನಿಮ್ಮ ಜೀವನದಲ್ಲಿ ಒಂದೇ ಒಂದು ಬೆಳವಣಿಗೆ ಎಂದರೆ ,
ಶುಕ್ರ ಗ್ರಹ ನಿಮ್ಮ ರಾಶಿಯಲ್ಲಿ ಲಾಭ ಸ್ಥಾನದಲ್ಲಿ ಇರುವುದು . ಖರ್ಚು ಮಾಡುವುದಕ್ಕೆ ಒಂದಷ್ಟು ಶಕ್ತಿಯನ್ನು ಕೊಡುವುದರ ಜೊತೆಗೆ , ಯಾವುದಾದರು ಮೂಲದಿಂದ ಹಣ ದೊರೆಯುವ ಹಾಗೆ ಆಗುತ್ತದೆ . ಇವತ್ತಿನ ಜೀವನದಲ್ಲಿ ಹಣ ಬರುವ ದೊಡ್ಡ ಮೂಲ ಎಂದರೆ, ಲೋನ್ . ಇದರ ವ್ಯವಸ್ಥೆ ಆಗುತ್ತದೆ ಎಂದು ಹೇಳಬಹುದು . ಈ ತಿಂಗಳಲ್ಲಿ ಕಾಡುವ ಇನ್ನೊಂದು ವಿಚಾರ ಎಂದರೆ , ಖರ್ಚು ಜಾಸ್ತಿ ಆದರೆ , ನಾವು ಇದಕ್ಕೆ ತುಂಬಾ ಪ್ರಾಮುಖ್ಯತೆಯನ್ನು ಕೊಡಬೇಕಾಗುತ್ತದೆ .
ಹಣದ ಅಗತ್ಯ ಹೆಚ್ಚಾದಾಗ ನಮ್ಮಲ್ಲಿ ಉದ್ವೇಗ ಜಾಸ್ತಿಯಾಗುತ್ತದೆ . ಅದರಲ್ಲೂ ವ್ಯಾಪಾರಸ್ಥರಿಗೆ ಉದ್ವೇಗ ಅನ್ನುವುದು ಯಾವಾಗಲೂ ಇರುತ್ತದೆ . ಇಲ್ಲಿ ಗುರು ಬಹಳ ಜಾಸ್ತಿ ಉದ್ವೇಗವನ್ನು ನೀಡುತ್ತಾನೆ . ನಿಮ್ಮ ಗ್ರಹ ಗತಿಯ ಆಧಾರದ ಮೇಲೆ ಹೇಳುವುದಾದರೆ ಸ್ವಲ್ಪ ದುಃಖ ಇರುತ್ತದೆ . ಬಹಳ ಕೆಟ್ಟ ವಿಚಾರ ಎಂದರೆ , ನಿಮ್ಮ ಸ್ನೇಹಿತರ ಜೊತೆ ಜಗಳವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ . ನೀವು ಸ್ನೇಹಿತರೊಂದಿಗೆ ತುಂಬಾ ಜಾಗೃತವಾಗಿ ವರ್ತಿಸಬೇಕು . ನೀವು ಸ್ನೇಹಿತರೊಂದಿಗೆ ಸರಳವಾಗಿ ಸಂಭಾವಿಸುವುದನ್ನು ಕಲಿಯಬೇಕು . ನಿಮ್ಮ ಮಾತುಗಳು ನಕಾರಾತ್ಮಕವಾಗಿ ತಿರುವು ತೆಗೆದು ಕೊಂಡಿರುತ್ತವೆ .ಅದಕ್ಕಾಗಿ ಕಾಳಜಿಯನ್ನು ವಹಿಸಬೇಕಾಗುತ್ತದೆ .
ಈ ಸಂದರ್ಭದಲ್ಲಿ ಧನಾತ್ಮಕವಾಗಿ ನೀವು ಮಾತನಾಡುವುದಿಲ್ಲ . ನೀವು ಮಾತನಾಡುವಾಗ ಹತಾಶೆ ಅಥವಾ ನಿರಾಸೆಗಳು ತೋರುತ್ತವೆ .ನೀವು ಬೇರೆಯವರಿಗೆ ಪ್ರೇರಣೆ ಆಗುವ ಹಾಗೆ ಮಾತನಾಡಬೇಕು .ನಿಮ್ಮ ಉತ್ಸಾಹದ ಮಟ್ಟ ಕಾಯ್ದುಕೊಳ್ಳುವುದಕ್ಕೆ ಸಾಧ್ಯವಾಗಬೇಕು .ನೀವು ಆಡುವ ಮಾತಿನಲ್ಲಿ ಚೈತನ್ಯ ತುಂಬಿರಬೇಕು .ಇದನ್ನು ಕಾಪಾಡಿಕೊಳ್ಳಲು ನೀವು ಸತತವಾಗಿ ಪ್ರಯತ್ನವನ್ನು ಮಾಡಬೇಕು .ಈ ವಿಚಾರದಲ್ಲಿ ತುಂಬಾ ಕಷ್ಟ ಇರುತ್ತದೆ . ಹಾಗೆಯೇ ಸೋಲಿನ ಭಯ ನಿಮಗೆ ಕಾಡುತ್ತಿರುತ್ತದೆ .
ನೀವು ಮಾಡುವ ಪ್ರಯತ್ನದಲ್ಲಿ ನಿಮಗೆ ಭಯ ಕಾಡುತ್ತಿರುತ್ತದೆ . ಈ ಭಯ ಅನ್ನುವುದು ಈ ಸಮಯದಲ್ಲಿ ನಿಮಗೆ ತುಂಬಾ ಹೆಚ್ಚಾಗಿ ಇರುತ್ತದೆ .ಅದೇ ಭಾವನೆ ಪದೇ ಪದೇ ಕಾಡುತ್ತಿರುತ್ತದೆ . ಈ ಸಮಯದಲ್ಲಿ ನಿಮಗೆ ನಿರ್ಣಾಯಕ ಪರಿಸ್ಥಿತಿ ಹೆಚ್ಚಾಗಿ ಬರುತ್ತವೆ . ತುಂಬಾ ನಕಾರಾತ್ಮಕ ವಿಚಾರಗಳು ಇವೆ . ಎಂದು ಗಾಬರಿ ಬೀಳುವುದು ಬೇಡ . ಪದೇ ಪದೇ ವೈಫಲ್ಯದ ಕಡೆ ಹೋಗುವ ಯೋಚನೆಗಳು ನಿಮ್ಮ ಮನಸ್ಸಿನಲ್ಲಿ ಕಾಡುತ್ತಿರುತ್ತದೆ .ಶನಿ ಗ್ರಹ ಧನು ಅಥವಾ ಮಕರ ರಾಶಿಯಲ್ಲಿ ಇರುವಾಗ ನಾಲ್ಕೈದು ವರ್ಷಗಳ ಹಿಂದೆ ನಡೆದ ಘಟನೆಗಳು
ಈಗ ಮರುಕಳಿಸುವ ನೆನಪುಗಳು ನಿಮ್ಮ ಜೀವನದಲ್ಲಿ ಆಗುತ್ತದೆ . ಮತ್ತೆ ಅದೇ ತರಹ ಆಗುತ್ತದೆ ಎಂದು ನಿಮಗೆ ಅನಿಸುತ್ತದೆ . ಆದರೆ ಅದು ಆಗುವುದಿಲ್ಲ .ಶನಿ ಗ್ರಹ ಮುಂದಿನ ನಕ್ಷತ್ರಗಳಿಗೆ ಹೋದಾಗ ನೀವು ಯಶಸ್ಸನ್ನು ಕಾಣಬಹುದು . ನಿಮ್ಮ ಮನೋಬಲ , ಪ್ರೇರಣಾ ಶಕ್ತಿ , ಬೇರೆಯವರ ಮೇಲೆ ಪ್ರಭಾವ ಬೀರುವ ಶಕ್ತಿ ಇರಬಹುದು , ಆತ್ಮ ಬಲ , ಇವೆಲ್ಲ ಹೆಚ್ಚಿಗೆ ಆಗುತ್ತಾ ಹೋಗುತ್ತದೆ .ಶನಿ ರಾಶಿಯಿಂದ ದೂರವಾದಾಗ ನಿಮಗೆ ಯಶಸ್ಸು ಅನ್ನುವುದು ನಿಮಗೆ ಬಹಳ ಸ್ಪಷ್ಟವಾಗಿ ತಿಳಿಯುತ್ತದೆ .
ಆಗ ನೀವು ಧನಾತ್ಮಕವಾಗಿ ಯೋಚನೆ ಮಾಡಲು ಶುರು ಮಾಡಲಾಗುತ್ತದೆ . ಹೇಗೆ ಧನಾತ್ಮಕವಾಗಿ ಯೋಚನೆ ಮಾಡುವುದು ಎಂಬುದನ್ನು ಮೊದಲು ತಿಳಿದು ನಂತರ ಅದನ್ನು ಧನಾತ್ಮಕವಾಗಿ ಬದಲಾಯಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳುವುದು ಉತ್ತಮ . ಈ ದಿಸೆಯಲ್ಲಿ ನಿರಂತರವಾಗಿ ಪ್ರಯತ್ನ ಮಾಡಬೇಕು . ನಿಮ್ಮ ರಾಶಿಯಲ್ಲಿ ಸಾಡೇಸಾತಿ ಕಳೆದ ನಂತರ ಸತತವಾದ ಪ್ರಯತ್ನ ಮಾಡುವುದರಿಂದ , ನೀವು ಬಂದಿರುವ ಸೋಲನ್ನು ಗೆಲುವಾಗಿ ಪರಿವರ್ತಿಸುವ ಸಾಮರ್ಥ್ಯ ನಿಮ್ಮಲ್ಲಿ ಬರುತ್ತದೆ .
ನಾವು ಯಾವ ಕ್ರಮವನ್ನು ಕೈಗೊಳ್ಳಬೇಕು ಅದಕ್ಕೆ ಪರಿಪೂರ್ಣವಾದ ಶಕ್ತಿಯನ್ನು ಹಾಕಿ , ಹೇಗೆಲ್ಲಾ ಸಾಧ್ಯ ಇದೆಯಾ ಅದನ್ನೆಲ್ಲ ಮಾಡಿ ನಮ್ಮನ್ನ ನಾವು ಪರಿವರ್ತಿಸಿ ಕೊಳ್ಳಲು ಪ್ರಯತ್ನ ಮಾಡಬೇಕು .ಈ ಕಾರ್ಯಗಳು ಸಿದ್ಧಿ ಆಗುವುದಕ್ಕೆ ನಿಮ್ಮ ಜೊತೆಯಲ್ಲಿ ರಾಹು ಗ್ರಹ ಇರುತ್ತದೆ . ಇದು ಬಹಳ ಶಕ್ತಿಯನ್ನು ನೀಡುತ್ತದೆ . ನಿಮ್ಮಲ್ಲಿ ಛಲ ಅಥವಾ ಧೈರ್ಯ ಬರಲು ರಾಹು ಸಹಾಯ ಮಾಡುತ್ತದೆ .ಯಾವತ್ತು ಹಿಂದೆ ತಿರುಗಿ ನೋಡಬೇಡಿ . ಮುಂದೆ ಹೆಜ್ಜೆ ಹಾಕುತ್ತಾ ನಡೆಯುವುದರಿಂದ ನಿಮ್ಮ ಪ್ರಯತ್ನಕ್ಕೆ ಪ್ರತಿಫಲ ಸಿಗುತ್ತದೆ ಎಂದು ಹೇಳಬಹುದು .