ಸಿಂಹರಾಶಿಯವರ ಗುಣಲಕ್ಷಣಗಳ

0

ಇಂದಿನ ಲೇಖನದಲ್ಲಿ ಸಿಂಹರಾಶಿಯವರ ಗುಣಲಕ್ಷಣಗಳನ್ನು ತಿಳಿಸಿಕೊಡುತ್ತೇವೆ. ಈ ರಾಶಿಯವರು ರಾಜನ ತರಹ ಇರಬೇಕೆಂದು ಇಷ್ಟಪಡುತ್ತಾರೆ. ಸಮಾಜ ಅಥವಾ ಕುಟುಂಬದಲ್ಲಿ ಇವರಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಬೇಕೆಂದು ಇಷ್ಟಪಡುತ್ತಾರೆ. ಇವರ ರಾಶ್ಯಾಧಿಪತಿ ಸೂರ್ಯ ಆಗಿರುವುದರಿಂದ ಲೀಡರ್ ಶಿಪ್ ಗುಣ ಇವರ ಹುಟ್ಟಿನಿಂದಲೇ ಬಂದಿರುತ್ತದೆ. ಇವರ ಮೇಲೆ ಯಾರಾದರೂ ಅಟ್ಯಾಕ್ ಮಾಡಲು ಬಂದರೆ ಬಹಳ ಬೇಗನೇ ತಿರುಗಿ ಬೀಳುತ್ತಾರೆ.

ಆದರೇ ಇವರ ಬಳಿ ಕ್ಷಮೆ ಕೇಳಿದರೇ ಕ್ಷಮಿಸುವ ಗುಣ ಕೂಡ ಇವರಲ್ಲಿದೆ. ಇವರು ಸ್ನೇಹಿತರು ಅಥವಾ ಬಂಧುಗಳನ್ನು ಮನೆಗೆ ಆಹ್ವಾನ ಮಾಡಿದ್ದರೇ ಅವರನ್ನು ರಾಯಲ್ ರೀತಿ ಅತಿಥಿ ಸತ್ಕಾರವನ್ನು ಮಾಡುತ್ತಾರೆ. ಇವರಿಗೆ ಯಾವುದಾದರೂ ವಸ್ತು ಇಷ್ಟವಾದರೇ ಅದನ್ನು ಕೊಂಡುಕೊಳ್ಳಲು ಹಿಂದೆಮುಂದೆ ಯೋಚನೆ ಮಾಡುವುದಿಲ್ಲ. ಒಟ್ಟಾರೆ ಹೇಳಬೇಕೆಂದರೆ ಇವರು ತಮ್ಮ ಇಮೇಜ್ ಗೆ ತುಂಬಾ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಕೆಲಸದ ವಿಷಯ ಬಗ್ಗೆ ಹೇಳುವುದಾದರೇ ಯಾರ ಹತ್ತಿರ ಆಜ್ಞೆಯನ್ನು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ, ಬೇರೆಯವರಿಗೆ ಆಜ್ಞೆ ಮಾಡಲು ಇಷ್ಟಪಡುತ್ತಾರೆ.

ಸಿಂಹರಾಶಿಯವರು ತುಂಬಾ ಕ್ರಿಯೇಟಿವ್ ಮತ್ತು ಇಂಡಿಪೆಂಡೆಂಟ್ ಆಗಿ ಇರಲು ಇಷ್ಟಪಡುತ್ತಾರೆ. ಇವರ ರಾಶ್ಯಾಧಿಪತಿ ಸೂರ್ಯ ಆಗಿರುವುದರಿಂದ ಇವರು ಜೀವನದಲ್ಲಿ ಶೈನ್ ಆಗಿರಬೇಕೆಂದು ತುಂಬಾ ಇಷ್ಟಪಡುತ್ತಾರೆ. ಸಿಂಹರಾಶಿ ಅಗ್ನಿತತ್ವವಾಗಿರುತ್ತದೆ. ಹಾಗಾಗಿ ಇವರು ಎನರ್ಜಿಟಿಕ್ ಆಗಿ ಇರುತ್ತಾರೆ. ಜೀವನದಲ್ಲಿ ಮುಂದೆ ಬರಲು ಪ್ರಯತ್ನ ಪಡುತ್ತಾರೆ ಮತ್ತು ನಿರ್ಧಾರವನ್ನು ಸರಿಯಾಗಿ ತೆಗೆದುಕೊಳ್ಳುತ್ತಾರೆ. ಬೇರೆಯವರ ಸಲಹೆಯನ್ನು ಪಡೆದರೂ ಇವರಿಗೆ ಯಾವುದು ಸರಿ ಎನಿಸುತ್ತದೆಯೋ ಅದನ್ನೇ ಮಾಡುತ್ತಾರೆ.

ಸಿಂಹರಾಶಿ 5ನೇ ಮನೆಯಾಗಿರುವುದರಿಂದ ಕ್ರಿಯೇಟಿವಿಟಿ, ಹ್ಯಾಬಿಯನ್ನ ಸೂಚಿಸುತ್ತದೆ. ಇವರಿಗೆ ಯಾವುದಾದರೂ ಕಲೆ ಇದ್ದೇ ಇರುತ್ತದೆ ಮತ್ತು ಅದನ್ನು ಕಲಿಯಬೇಕೆನ್ನುವ ಆಸಕ್ತಿಯೂ ಇರುತ್ತದೆ. 5ನೇ ಮನೆ ಲವ್, ರೊಮ್ಯಾನ್ಸ್ ಅನ್ನು ಸೂಚಿಸುತ್ತದೆ. ಪ್ರೀತಿ ವಿಷಯದಲ್ಲಿ ಬಹಳ ಬೇಗ ಬೀಳುತ್ತಾರೆ. ಇವರನ್ನು ಯಾರಾದರೂ ಹೊಗಳಿದರೇ ಅವರನ್ನ ತುಂಬಾ ಬೇಗ ಫ್ರೆಂಡ್ ಮಾಡಿಕೊಳ್ಳುತ್ತಾರೆ. ಸಿಂಹರಾಶಿಯವರು ಯಾವತ್ತೂ ಸೋಲುವುದಿಲ್ಲ ಗೆಲ್ಲುವ ಹಠದಲ್ಲೇ ಇರುತ್ತಾರೆ.

ಕೆಲಸ ಮುಗಿದ ಮೇಲೆ ವಿಶ್ರಾಂತಿಯನ್ನು ಪಡೆಯಲು ಇಷ್ಟಪಡುವುದರಿಂದ ಇವರಲ್ಲಿ ಸ್ವಲ್ಪ ಸೋಮಾರಿತನವಿರುತ್ತದೆ. ಆರೋಗ್ಯದ ವಿಷಯಕ್ಕೆ ಬಂದರೆ ಬೆನ್ನು, ಹೃದಯವನ್ನು ಸೂಚಿಸುತ್ತದೆ ಈ ಭಾಗದಲ್ಲಿ ಸಮಸ್ಯೆಗಳು ಕಂಡುಬರುತ್ತದೆ. ಹಾಗಾಗಿ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇವರಿಗೆ ಪಿತ್ತ, ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳು ಬರುತ್ತವೆ. ಫ್ಯಾಮಿಲಿಯಲ್ಲಿ ಇವರಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕೆಂದು ಅಪೇಕ್ಷೆ ಪಡುತ್ತಾರೆ.

ಇವರ ಕುಟುಂಬದಲ್ಲಿ ಜಗಳವಾದರೇ ಅದಕ್ಕೆ ಮುಖ್ಯಕಾರಣ ಈಗೋ ಆಗಿರುತ್ತದೆ ಏಕೆಂದರೆ ಇವರು ಯಾರಿಗೂ ತಲೆ ತಗ್ಗಿಸಲು ತಯಾರು ಇರುವುದಿಲ್ಲ. ಹಾಗಾಗಿ ಈಗೋ ಅನ್ನು ಕಡಿಮೆ ಮಾಡಿಕೊಳ್ಳಿ. ಕೇರಿಂಗ್ ಸ್ವಭಾವ ಮತ್ತು ರಿಲೇಷನ್ ಶಿಪ್ ಅನ್ನು ಒಳ್ಳೆಯ ರೀತಿಯಲ್ಲಿ ಮ್ಯಾನೇಜ್ ಮಾಡಿಕೊಂಡು ಹೋಗುತ್ತಾರೆ. ಸಿಂಹರಾಶಿಯವರಿಗೆ ತನ್ನ ಸಂಗಾತಿಯನ್ನು ನೋಡಿ ಹೊಗಳುವ ಆಸೆಯು ಇರುತ್ತದೆ. ಇವರು ತಮ್ಮ ಜೀವನದಲ್ಲಿ ಅಂದುಕೊಂಡಿದ್ದನ್ನ ಸಾಧನೆ ಮಾಡುತ್ತಾರೆ.

ಇವರಿಗೆ ಆಜ್ಞೆ ಮಾಡುವ ಕೆಲಸವು ಚೆನ್ನಾಗಿ ಆಗಿ ಬರುತ್ತದೆ. ಉನ್ನತ ಮಟ್ಟದ ಹುದ್ದೆಯ ಮತ್ತು ಸರ್ಕಾರಿ ಕೆಲಸ ಇವರಿಗೆ ಉತ್ತಮ. ಸಿಂಹರಾಶಿಯವರಿಗೆ ಟ್ಯಾಲೆಂಟ್ ಇರುತ್ತದೆ ಆ ಟ್ಯಾಲೆಂಟ್ ಅನ್ನು ಅರ್ಥಮಾಡಿಕೊಂಡರೇ ಗುರಿಯನ್ನು ತಲುಪುತ್ತೀರಿ. ಇವರಿಗೆ ಮೆಡಿಕಲ್, ಡಾಕ್ಟರ್, ಕೆಮಿಕಲ್ ರಿಲೇಟೆಡ್ ಜಾಬ್, ಕೆಮಿಕಲ್ ತಯಾರಿಸುವ ಲ್ಯಾಬ್ನ ಕೆಲಸಗಳು ಆಗಿ ಬರುತ್ತದೆ. ಸಿಂಹರಾಶಿಯವರು ಅವರ ಇಮೇಜ್ ಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದರಿಂದ ಖರ್ಚು ತುಂಬಾನೇ ಮಾಡುತ್ತಾರೆ. ಹಣವನ್ನು ಉಳಿತಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಿ. ಇವರಿಗೆ ಏನನ್ನು ಸಾಧನೆ ಮಾಡಬೇಕೆಂದು ತಿಳಿದುಕೊಂಡು ಒಳ್ಳೆಯ ಶ್ರಮ ಕೂಡ ವಹಿಸುತ್ತಾರೆ. ಸಿಂಹರಾಶಿಯವರು ಬೇರೆಯವರಿಗೆ ಎಷ್ಟು ಒಳ್ಳೆಯದು ಮಾಡುತ್ತಾರೋ ಅಷ್ಟೇ ನಿಮಗೂ ಒಳ್ಳೆಯದಾಗುತ್ತದೆ.

Leave A Reply

Your email address will not be published.