ನಾವು ಈ ಲೇಖನದಲ್ಲಿ ಕೃಷ್ಣ ಹೇಳಿರುವ ಮಾತುಗಳ ಬಗ್ಗೆ ತಿಳಿದುಕೊಳ್ಳಬಹುದು .ಆದುದೆಲ್ಲಾ ಒಳ್ಳೆಯದಕ್ಕೆ ಆಗಿದೆ . ಆಗುವುದೆಲ್ಲ ಒಳ್ಳೆಯದೇ ಆಗುತ್ತಿದೆ . ಆಗಲಿರುವುದು ಸಹ ಒಳ್ಳೆಯದೇ ಆಗಲಿದೆ . ರೋಧಿಸಲು ನೀನೇನು ಕಳೆದುಕೊಂಡಿರುವೆ , ಕಳೆದುಕೊಳ್ಳಲು ನೀನು ತಂದಿರುವುದಾದರು ಏನು? ನಾಶವಾಗು ನೀನು ಮಾಡಿರುವುದಾದರೂ ಏನು? ನೀನೇನು ಪಡೆದಿದ್ದರು. ಅದನ್ನು ಇಲ್ಲಿಂದಲೇ ಪಡೆದಿರುವ ಯಾವುದು ನಿನ್ನ ಭಾಗ್ಯದಲ್ಲಿ ಇದೆಯೋ ಅದು ನಿನಗೆ ಸಿಕ್ಕೇ ತೀರುತ್ತದೆ . ಯಾವುದು ನಿನ್ನದಲ್ಲವೋ ಅದು ನೀ ಎಷ್ಟೇ ಪ್ರಯತ್ನಿಸಿದ್ದರೂ ಸಿಗಲಾರದು . ಚಿಂತೆ ಬಿಡು ಜೀವನದಲ್ಲಿ ಬರುವುದೆಲ್ಲವ ಬಂದಂತೆ ಸ್ವೀಕರಿಸು. ನಮ್ಮ ಬದುಕೇ ಒಂದು ಹೋರಾಟ
ಈ ಹೋರಾಟದಲ್ಲಿ ನಾವು ಮಾಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು . ಏನು ಆಗಬೇಕೋ ಅದು ಆಗೇ ತೀರುತ್ತದೆ. ಅದನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ. ಸತ್ಯದ ದಾರಿಯಲ್ಲಿ ಹೋಗು ನೀನು ನಡೆಯುವಾಗ ಪಾತಾಳಕ್ಕೆ ಬಿದ್ದರೆ ನಿನ್ನನ್ನು ಮೇಲೆತ್ತಲು ನಾನು ಬಂದೇ ಬರುತ್ತೇನೆ. ಸ್ವರ್ಗದಲ್ಲಿ ಎಲ್ಲವೂ ಇದೆ. ಆದರೆ ಸಾವಿಲ್ಲ . ಭಗವದ್ಗೀತೆಯಲ್ಲಿ ಎಲ್ಲವೂ ಇದೆ, ಆದರೆ ಸುಳ್ಳಿಲ್ಲ. ಜಗತ್ತಿನಲ್ಲಿ ಎಲ್ಲವೂ ಇದೆ. ನೆಮ್ಮದಿ ಇಲ್ಲ . ಇವತ್ತಿನ ಎಲ್ಲಾ ಮಾನವರಲ್ಲಿ ಎಲ್ಲವೂ ಇದೆ ಆದರೆ ಶಾಂತಿ ಇಲ್ಲ .ಮನಸ್ಸಿಗೆ ಮಧವೇರಿದಾಗ ಸ್ಮಶಾನದಲ್ಲಿ ತಿರುಗಾಡಿ ಬರಬೇಕಂತೆ . ಏಕೆಂದರೆ
ಅಲ್ಲಿ ನಾನು ನನ್ನಿಂದಲೇ ಎಂದು ಹೇಳಿದ ಎಷ್ಟೋ ಜನ ಮಣ್ಣಾಗಿರುವವರು ಕಾಣ ಸಿಗುತ್ತಾರೆ. ಭಗವಂತ ತಡ ಮಾಡಿದರು ನ್ಯಾಯ ಮಾಡುತ್ತಾನೆ . ಆದರೆ ಅನ್ಯಾಯ ಮಾಡುವುದಿಲ್ಲ ತಡ ಆಗುವುದರ ಹಿಂದೆ “ಅದ್ಭುತಗಳು” ನಡೆಯುತ್ತವೆ. ಕಾದು ನೋಡಬೇಕಷ್ಟೇ . ಎಲ್ಲಾ ಹೇಳುತ್ತಾರೆ . ಮನುಷ್ಯ ಖಾಲಿ ಕೈಯ್ಯಲ್ಲಿ ಬರುತ್ತಾನೆ . ಖಾಲಿ ಕೈಯ್ಯಲ್ಲಿ ಹೋಗುತ್ತಾನೆ ಎಂದು…. ಆದರೆ ಮನುಷ್ಯ ಬರುವಾಗ ಭಾಗ್ಯದ ಜೊತೆ ಬರುತ್ತಾನೆ, ಹೋಗುವಾಗ ಕರ್ಮದ ಫಲ ಕೊಂಡು ಹೋಗುತ್ತಾನೆ. ಬದುಕುವುದಕ್ಕಾಗಿ ದುಡಿಯುವುದು ಅನಿವಾರ್ಯ ಹಾಗಂತ ಫುದ ಮೇಲೆ ಕಣ್ಣಿಟ್ಟು ಕೆಲಸ ಮಾಡಿದರೆ ನಿರಾಸೆ ಹೆಚ್ಚು ಕೆಲಸವನ್ನು ಶುದ್ಧಯಿಂದ, ಪ್ರೀತಿಯಿಂದ ಮಾಡಿದರೆ ಫಲ ಇಂದಲ್ಲ ನಾಳೆ ದೊರಕಿಯೇ ದೊರಕುತ್ತದೆ. ಒಂದು ಬಾರಿ ಅರ್ಜುನ
ಶ್ರೀ ಕೃಷ್ಣನನ್ನು ಕೇಳಿದ ಈ ಗೋಡೆಯ ಮೇಲೆ ಒಂದು ಸಂದೇಶ ಬರಿ ಅದು ಹೇಗಿರಬೇಕೆಂದರೆ , ಖುಷಿಯಲ್ಲಿದ್ದಾಗ ಓದಿದರೆ ದುಃಖವಾಗಬೇಕು, ದುಃಖವಾಗಿದ್ದಾಗ ಓದಿದರೆ ಖುಷಿಯಾಗಬೇಕು. ಕೃಷ್ಣನು ಬರೆದ : “ಈ ಸಮಯ ಕಳೆದು ಹೋಗುತ್ತದೆ” ಅಕ್ಕಿ ಅನ್ನಕ್ಕೆ ಕೇಳಿತು ನೀನು ನಾನೇ ಆಗಿದ್ದೆ ಆದರೆ ಹೇಗೆ ಅನ್ನವಾದೆ ಎಂದು ಅನ್ನ ಸುಂದರವಾಗಿ ಉತ್ತರಿಸಿತು ನೀರು ಮತ್ತು ಬೆಂಕಿಗಳ ಸಂಪರ್ಕಕ್ಕೆ ಒಳಗಗಾದೆ ಅವುಗಳ ಸಂಸ್ಕಾರದಿಂದ ಮೃದುವಾದೆ ಮಧುರವಾದೆ . ಅಕ್ಕಿ ಎನ್ನುವ ಭಾವ ಕಳೆದುಕೊಂಡೆ ಅನ್ನುವನ್ನುದ ಅನುಭವ ಪಡೆದುಕೊಂಡೆ ಅದೇ ರೀತಿ ಸಜ್ಜನರ ಸಂಗದಿಂದ ನಮ್ಮಲ್ಲಿರುವ
ಅಜ್ಞಾನ ದುರಿತ ದುಮ್ಮಾನಗಳ ಕಾಠಿಣ್ಯತೆ ತೊಲಗಿ ಪುಣ್ಯ ಜ್ಞಾನ ಮೋಕ್ಷಗಳೆಂಬ ಮೃದುತ್ವದ ಅನುಭವ ದೊರೆಯುತ್ತದೆ ಚಿಂತಿಸಲು ನೀನೇನು ಕಳೆದುಕೊಂಡಿರುವೆ ನಿಶ್ಚಿಂತೆಯಿಂದಿರು. ನೀನೇನು ಪಡೆದುಕೊಂಡಿರುವ ಮೂರು ದಿನದ ಈ ನಾಟಕದಲ್ಲಿ ಕಳೆದುಕೊಳ್ಳಬೇಕಾಗಿ ಇರುವುದು ಕರ್ಮವೊಂದೇ ಪಡೆಯ ಬೇಕಾಗಿರುವುದು ಪುಣ್ಯವೊಂದೇ ದೊಡ್ಡ ಮನುಷ್ಯನಾಗುವುದು ಒಳ್ಳೆಯದು ಆದರೆ ಒಳ್ಳೆಯ ಮನುಷ್ಯನಾಗುವುದು ದೊಡ್ಡ ವಿಷಯ ದುಃಖದ ಬಗ್ಗೆ ಚಿಂತಿಸತೊಡಗಿದರೆ ಸದಾ ದುಃಖಿಯಾಗಿಯೇ ಉಳಿಯುತ್ತೀರಾ . ಸದಾ ಸುಖ ಸಂತೋಷಗಳನ್ನು ಧ್ಯಾನಿಸುತ್ತದ್ದರೆ ಮುಂದೆ ಸುಖಿಯಾಗುತ್ತೀಯ .
ಏಕೆಂದರೆ ಮನಸ್ಸು ಯಾವುದರ ಬಗ್ಗೆ ಹೆಚ್ಚಾಗಿ ಧ್ಯಾನ ಗೊಳ್ಳುವುದೋ ಅದೇ ಸಕ್ರಿಯವಾಗುವುದು . ಪರಮಾತ್ಮನಲ್ಲಿ ಏನನ್ನಾದರು ಬೇಡುವುದಾದರೆ ಪರಮಾತ್ಮನನ್ನೇ ಬೇಡು , ಪರಮಾತ್ಮ ನಿನ್ನವನಾದರೆ ಸರ್ವಸ್ವವೂ ನಿನ್ನ ದೇ. ಹೊಡೆತದ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ನೀಡುವ ಭಗವಂತ ಸಮಯ ಬಂದಾಗ ತಿರುಗಿಸಿ ಹೊಡೆಯೋ ತಾಕತ್ತನ್ನು ನೀಡುತ್ತಾನೆ. ನೀವು ಪ್ರಯತ್ನಿಸುವವರೆಗೂ ನಿಮ್ಮೊಳಗಿನ ಶಕ್ತಿಯ ಅರಿವು ನಿಮಗಿರುವುದಿಲ್ಲ, ಪ್ರಯತ್ನ ನಿರಂತರವಾಗಿರಲಿ. ಒಂದು ವೇಳೆ ಮನುಷ್ಯ ತನ್ನ ನಿರೀಕ್ಷೆಗಳ ಮೇಲೆ ನಿರಂಕುಶ ಹಾಕಿ
ತನ್ನ ವಿಚಾರಗಳನ್ನು ಬೇರಾವುದೋ ವ್ಯಕ್ತಿಯ ಪರಿವರ್ತನೆಯ ಬದಲು ತನ್ನ ಅಂತರಂಗವನ್ನು ಪರಿವರ್ತನೆ ಮಾಡುವ ಪ್ರಯತ್ನ ಮಾಡಿದರೆ ನಾವು ಸಂಬಂಧಗಳಲ್ಲಿ ಸಂತೋಷವನ್ನು ಹುಡುಕುವಲ್ಲಿ ಕಷ್ಟವಾಗುವುದೇ ಇಲ್ಲ, ಅರ್ಥಾತ್ ಸ್ವೀಕಾರ ಭಾವವೇ ಸಂಬಂಧದ ವಾಸ್ತವಿಕ ಅರ್ಥವಾಗುವುದು. ಸಮಸ್ಯೆ, ಸವಾಲುಗಳನ್ನು ಯಾರು ಅವಕಾಶಗಳನ್ನು ಪರಿವರ್ತನೆ ಮಾಡಿಕೊಳ್ಳುತಾರೋ, ಅವರು ಮಾತ್ರ ಬದುಕಿನಲ್ಲಿ ಗಟ್ಟಿಯಾಗಿ ನಿಲ್ಲಬಲ್ಲರು. ಒಂದು ಕಲ್ಲು ಒಂದು ಸಾರಿ ಮಾತ್ರ ಮಂದಿರಕ್ಕೆ ಹೋಗುತ್ತದೆ , ಹೋಗಿ ಭಗವಂತನಾಗುತ್ತದೆ, ಆದರೆ ಪ್ರತಿ ದಿನವೂ ಮಂದಿರಕ್ಕೆ ಹೋಗುವ ಮನುಷ್ಯ ನು ಮಾತ್ರ ಕಲ್ಲಾಗಿಯೇ ಇರುತ್ತಾನೆ .
ಯಾವ ರಾಜನೂ ಸದಾ ಕಾಲ ರಾಜನಾಗಿ ಇರುವುದಿಲ್ಲ. ಯಾವ ಶ್ರೀಮಂತನು ಕೊನೆಯವರೆಗೂ ಶ್ರೀಮಂತನಾಗಿ ಇರುವುದಿಲ್ಲ. ಯಾವ ಬಡವನು ಕೊನೆಯವರೆಗೂ ಬಡವನಾಗಿಯೇ ಇರುವುದಿಲ್ಲ. ಈ ಜಗತ್ತಿನಲ್ಲಿ ಯಾವುದೂ ಕೂಡ ಶಾಶ್ವತವಲ್ಲ, ಪರಿವರ್ತನೆಯೇ ಜಗದ ನಿಯಮವಾಗಿದೆ. ಬದುಕಿನಲ್ಲಿ ಅತಿಯಾಗಿ ಮೌನವಾಗಿರುವುದು ಒಳ್ಳೆಯದಲ್ಲ .ಸಮಯಕ್ಕೆ ಸರಿಯಾಗಿ ತಪ್ಪುಗಳನ್ನು ವಿರೋಧಿಸುವುದನ್ನು ಕಲಿಯಿರಿ . ದೇವರು ನಮ್ಮ ಜೊತೆಗಿಲ್ಲ , ನಮ್ಮ ಮನಸ್ಸಿನಲ್ಲಿಯೂ ಇಲ್ಲ , ಕೇವಲ ನಮ್ಮ ಆತ್ಮ ವಿಶ್ವಾಸದಲ್ಲಿ ಇರುತ್ತಾನೆ .
ಯಾವಾಗ ಮನುಷ್ಯನು ತಾನು ಮಾಡಿದ ಕರ್ಮ ಫಲಗಳನ್ನು ಇದೇ ಜನ್ಮದಲ್ಲಿ ಅಥವಾ ಮುಂದಿನ ಜನ್ಮದಲ್ಲಿ ಅನುಭವವಿಸಬೇಕಾಗುತ್ತದೆ. ಎಂಬ ಜ್ಞಾನವನ್ನು ಅರಿತುಕೊಳ್ಳುತ್ತಾನೋ, ಆಗ ಇಡೀ ಜಗತ್ತು ಬದಲಾವಣೆಯತ್ತ ಸಾಗಿ ಬಿಡುತ್ತದೆ. ಚರಿತ್ರೆಯಲ್ಲಿ ಗೆದ್ದವನಿಗೆ ಗೆದ್ದವನು ಎನ್ನುವ ಜಾಗವಿದೆ, ಸೋತವನಿಗೂ ಕೂಡ ಇಂಥವನೊಂದಿಗೆ ಸೆಣಸಾಡಿ ಸೋತ ಎನ್ನುವ ಜಾಗವಿದೆ .ಆದರೆ ನಿಂತುಕೊಂಡು ನೋಡುವವರಿಗೆ ಆಡಿಕೊಂಡು ನಗುವವರಿಗೆ ಚರಿತ್ರೆಯಲ್ಲಿ ಎಲ್ಲಿಯೂ ಕೂಡ ಜಾಗವಿಲ್ಲ . ಕೋಪದಿಂದ ಮಾತನಾಡಿದರೆ ಗುಣವನ್ನು ಕಳೆದುಕೊಳ್ಳುತ್ತೇವೆ . ಹೆಚ್ಚಾಗಿ ಮಾತನಾಡಿದರೆ ಶಾಂತಿಯನ್ನು ಕಳೆದುಕೊಳ್ಳುತ್ತೇವೆ.
ಅನಗತ್ಯವಾಗಿ ಮಾತನಾಡಿದರೆ ಕೆಲಸವನ್ನು ಕಳೆದುಕೊಳ್ಳುತ್ತೇವೆ. ಅಹಂಕಾರದಿಂದ ಮಾತನಾಡಿದರೆ ಪ್ರೀತಿಯನ್ನು ಕಳೆದುಕೊಳ್ಳುತ್ತೇವೆ. ಸುಳ್ಳು ಮಾತನಾಡಿದರೆ ಹೆಸರನ್ನು ಕಳೆದುಕೊಳ್ಳುತ್ತೇವೆ . ವೇಗವಾಗಿ ಮಾತನಾಡಿದರೆ ಅರ್ಥವನ್ನು ಕಳೆದುಕೊಳ್ಳುತ್ತೇವೆ . ಪ್ರೀತಿಯಿಂದ ಮಾತನಾಡಿದರೆ ಎಲ್ಲವನ್ನು ಗಳಿಸುತ್ತೇವೆ . ಬದುಕಿನಲ್ಲಿ ಏನೇ ನಡೆದರೂ ಒಳ್ಳೆಯದೇ . ವರ್ತಮಾನದಲ್ಲಿ ಏನಾಗುತ್ತಿದೆಯೋ ಅದೆಲ್ಲವೂ ಉತ್ತಮವಾಗಿಯೇ ನಡೆಯುತ್ತದೆ . ಮುಂದೆ ಏನಾಗುವುದು ಅದೆಲ್ಲವೂ ಚೆನ್ನಾಗಿಯೇ ಇರುತ್ತದೆ .
ಭವಿಷ್ಯದ ಬಗ್ಗೆ ಚಿಂತಿಸಬೇಡಿ ವರ್ತಮಾನದಲ್ಲಿ ಜೀವಿಸಿ . ಒಂದು ಬಾರಿ ಅರ್ಜುನ ಶ್ರೀ ಕೃಷ್ಣನನ್ನು ಕೇಳುತ್ತಾನೆ. ಎಲ್ಲವೂ ಹಣೆ ಬರಹದಲ್ಲೆ ಬರೆದಿದ್ದರೆ, ಪ್ರಯತ್ನ ಪಟ್ಟು ಫಲವೇನು ಎ೦ದು, ಆವಾಗ ಶ್ರೀ ಕೃಷ್ಣನು ಉತ್ತರಿಸುತ್ತಾನೆ. ಯಾರಿಗೆ ಗೊತ್ತು ಪ್ರಯತ್ನ ಪಟ್ಟರೆ ಸಿಗುತ್ತದೆ ಎಂದು ಹಣೆ ಬರಹದಲ್ಲಿ ಬರೆದಿದ್ದರೆ , ” ಪ್ರಯತ್ನಂ ಸರ್ವ ಸಿದ್ಧಿ ಸಾಧನಂ ” .. ಒಮ್ಮೆ ನಾರದರು ಶ್ರೀ ಕೃಷ್ಣನನ್ನು ಕೇಳಿದರಂತೆ , ಈ ಪ್ರಪಂಚದಲ್ಲಿ ಎಲ್ಲರೂ ದುಃಖಿಗಳಾಗಿದ್ದಾರೆ ಏಕೆ? ಆಗ ಶ್ರೀ ಕೃಷ್ಣನು ಮುಗುಳ್ನಗುತ್ತಾ ಹೇಳಿದನಂತೆ. ಸುಖ ಎಲ್ಲರ ಬಳಿಯೂ ಇದೆ. ಆದರೆ ಎಲ್ಲರೂ ಇನ್ನೊಬ್ಬರ ಸಂತೋಷದಿಂದ ದುಃಖಿಗಳಾಗಿದ್ದಾರೆ ಅಷ್ಟೇ .
ನೆಮ್ಮದಿ ಯಾವುದೇ ವಸ್ತು ಹಣದಲ್ಲಿ ಇರುವುದಲ್ಲ . ನಮ್ಮ ಆಲೋಚನೆ ಮತ್ತು ಮನಸ್ಸಿನಲ್ಲಿ ಬರುತ್ತದೆ. ಕಷ್ಟ ಪಡದೇ ಸಿಕ್ಕ ಫಲ ಎಂದಿಗೂ ಸುಖ ಕೊಡುವುದಿಲ್ಲ. ಸುಖವನ್ನು ಕಷ್ಟ ಪಡುವುದರಲ್ಲಿ ಹುಡುಕಿ . ಸ್ನಾನ ದೇಹವನ್ನು , ಧ್ಯಾನ ಮನಸ್ಸನ್ನು , ದಾನ ಧನವನ್ನು , ಯೋಗ ಜೀವನವನ್ನು , ಪ್ರಾರ್ಥನೆ ಆತ್ಮವನ್ನು, ವ್ರತ ಆರೋಗ್ಯವನ್ನು , ಕ್ಷಮೆ ಸಂಬಂಧಗಳನ್ನು, ಪರೋಪಕಾರವನ್ನು ಅದೃಷ್ಟವನ್ನು ಪವಿತ್ರ ಗೊಳಿಸುತ್ತದೆ . ಕೇವಲ ದೇವರನ್ನು ಪೂಜಿಸುವುದರಿಂದ ಪುಣ್ಯ ಬರುವುದಿಲ್ಲ . ಉತ್ತಮ ಬುದ್ಧಿ , ಉತ್ತರ ಯೋಚನೆ , ಉತ್ತಮ ಕೆಲಸ , ಉತ್ತಮ ಮಾತು , ಉತ್ತಮ ವರ್ತನೆ , ಕರುಣೆ ಅಹಿಂಸೆಯಿಂದ ಪುಣ್ಯ ಸಿಗುತ್ತದೆ. ಮುಂಬರುವ ಜನ್ಮಕ್ಕೆ ಈ ಜನ್ಮವೇ ಬುನಾದಿಯಾಗುವುದು ನಿಜ .