ಮನೆ ಅಭಿವೃದ್ಧಿ ಆಗದೇ ಇರಲು ಬಹು ಮುಖ್ಯ ಕಾರಣಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನೆ ಅಭಿವೃದ್ಧಿ ಆಗದೇ ಇರಲು ಬಹು ಮುಖ್ಯ ಕಾರಣಗಳು ಏನು ಎನ್ನುವುದನ್ನು ನೋಡೋಣ ಬನ್ನಿ # ನಾವು ಎಲ್ಲೇ ಹೋಗಲಿ ಎಷ್ಟೇ ವೈಭವಿತ ಸ್ಥಾನದಲ್ಲಿ ಕಳೆದರೂ ಅತ್ಯಂತ ಸಂತೋಷ ಮತ್ತು ನೆಮ್ಮದಿ ಒಟ್ಟಿಗೆ ಸಿಗುವ ಸ್ಥಾನವೆಂದರೆ ಅದು ನಮ್ಮ ಮನೆ # ಎಷ್ಟೇ ಕಷ್ಟಪಟ್ಟು ದುಡಿದರು ಮನೆಯ ಏಳಿಗೆ ಆಗುತ್ತಿಲ್ಲ

ಅಭಿವೃದ್ಧಿ ಆಗುತ್ತಿಲ್ಲ ಎಂದು ಚಿಂತೆ ಮಾಡುತ್ತಿರುವಿರಾ ಈ ವಿಷಯಗಳನ್ನು ತಿಳಿದುಕೊಳ್ಳಿ ಮತ್ತು ಈ ತಪ್ಪುಗಳನ್ನು ಯಾವತ್ತಿಗೂ ಮಾಡಬೇಡಿ 1) ಮನೆಯನ್ನು ಅಶುದ್ಧವಾಗಿ ಇಡುವುದು ವಸ್ತುಗಳನ್ನು ಅತ್ತ ಇತ್ತ ಚೆಲ್ಲುವುದು 2) ಹೊತ್ತು ಮುಳುಗಿ ಕತ್ತಲಾದರೂ ಮನೆಯ ದೀಪ ಹಚ್ಚದೆ ಕತ್ತಲಲ್ಲಿ ಇರುವುದು ದೇವರ ಮುಂದೆ ದೀಪ ಹಚ್ಚದೇ ಇರುವುದು ಹೀಗೆ

ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕತೆಯ ವಾತಾವರಣ ಉಂಟಾಗುತ್ತದೆ 3) ದಿನನಿತ್ಯ ಸ್ನಾನ ಮಾಡದೆ ಹಾಗೆ ಇರುವುದು 4) ಕೊಳಕು ಮತ್ತು ಹರಿದ ಬಟ್ಟೆಗಳನ್ನು ಧರಿಸುವುದು 5) ಸದಾ ಬೇರೆಯವರಿಂದ ಅಥವಾ ಬೇರೆಯವರ ಮನೆಯಿಂದ ಏನನ್ನಾದರೂ ಕಡ ತೆಗೆದುಕೊಳ್ಳುವುದು 6) ಮುರಿದ ಬಾಚಣಿಕೆಯಿಂದ ತಲೆ ಬಾಚಿಕೊಳ್ಳುವುದು 7) ಮನೆಯ ಮುಂದೆ ಚಪ್ಪಲಿಗಳನ್ನು ಬೋರಲು ಹಾಕಿ ಹಾಗೆ ಬಿಡುವುದು

8) ಯಾವಾಗಲೂ ಮನೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಜಗಳ ಆಡುವುದು 9) ಪ್ರತಿದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸದೇ ಇರುವುದು ಅಥವಾ ದೇವರ ಪೂಜೆಯನ್ನು ಮಾಡದೆ ಹಾಗೆ ಇರುವುದು 10) ಒಡೆದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಂಡು ಅದರಲ್ಲಿ ಮುಖ ನೋಡುವುದು 12) ಸೂರ್ಯೋದಯ ಆದರೂ ಬಹಳ ಹೊತ್ತಿನವರೆಗೆ ಮಲಗುವುದು ಮತ್ತು ತಡವಾಗಿ ಎದ್ದೇಳುವುದು

13) ಸದಾ ಶೌಚಾಲಯದ ಬಾಗಿಲನ್ನು ತೆರೆದಿರುವುದು ಮತ್ತು ವಾಶ್ರೂಮ್ ಅನ್ನು ಕ್ಲೀನ್ ಮಾಡದೆ ಹಾಗೆ ಗಬ್ಬು ವಾಸನೆ ಬರುವಂತೆ ಇಟ್ಟುಕೊಳ್ಳುವುದು 14) ಕೈ ಕಾಲುಗಳನ್ನು ಅಲುಗಾಡಿಸುತ್ತಾ ಕುಳಿತುಕೊಳ್ಳುವುದು 15) ಮನೆಗೆ ಅತಿಥಿಗಳು ಬರುತ್ತಿದ್ದಾರೆ ಎಂದು ತಿಳಿದು ಬೇಜಾರು ಮಾಡಿಕೊಳ್ಳುವುದು ಅತಿಥಿಗಳಿಗೆ ಮರ್ಯಾದೆ ಕೊಡದಿರುವುದು ಮತ್ತು ಅವರೊಂದಿಗೆ ಒರಟಾಗಿ ಮಾತನಾಡುವುದು

16) ಅಡಿಗೆಮನೆಯನ್ನು ಗಲೀಜಾಗಿ ಇಟ್ಟುಕೊಳ್ಳುವುದು ಆಹಾರವನ್ನು ಪ್ರತಿನಿತ್ಯ ವೇಸ್ಟ್ ಮಾಡುವುದು 17) ಮನೆಯಲ್ಲಿ ನಲ್ಲಿಗಳು ಸೋರುತ್ತಿದ್ದರೆ ಸರಿ ಮಾಡಿಸದೆ ಹಾಗೆ ಬಿಡುವುದು 18) ಮನೆಯಲ್ಲಿ ಕೆಟ್ಟ ಪದಗಳನ್ನು ಬಳಸುವುದು ಹಿರಿಯರಿಗೆ ಗೌರವ ಕೊಡದಿರುವುದು ಮತ್ತು ಅವರೊಂದಿಗೆ ಏಕವಚನದಲ್ಲಿ ಮಾತನಾಡುವುದು 19) ಹಲ್ಲು ಕಚ್ಚುವುದು ಮತ್ತು ಉಗುರು ಕಡಿಯುವುದು ಮಾಡಬಾರದು

20) ಗೊತ್ತಿಲ್ಲದ ಹೊತ್ತಿನಲ್ಲಿ ನಿದ್ರೆ ಮಾಡುವುದು ತಡವಾಗಿ ಊಟ ಮಾಡುವುದು ಮತ್ತು ಸ್ನಾನ ಮಾಡುವುದು ಮಾಡಬಾರದು ಸ್ನೇಹಿತರೆ ಮನೆ ಎಂದರೆ ಅದು ಸ್ವರ್ಗ ಅದನ್ನು ಮಂದಿರ ಮಾಡುವುದು ಪ್ರತಿ ಒಬ್ಬರ ಕೈಯಲ್ಲಿದೆ ಈ ಮೇಲಿನ ಲಕ್ಷಣಗಳನ್ನು ಹೊಂದಿರುವವರು ಆದಷ್ಟು ನಿಮ್ಮನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಿ ಮತ್ತು ಸುಖವಾದ ಜೀವನವನ್ನು ಸಾಗಿಸಿ ಆತ್ಮೀಯರೇ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment