ಮನೆ ಮನೆಗೆ ಸಂಸ್ಕಾರ ಮನೆಯೇ ಮಂದಿರ• ವಸುದೈವ ಕುಟುಂಬಕಂ ಪ್ರಪಂಚವೇ ನಮ್ಮ ಕುಟುಂಬ• ದೇವರು ಸರ್ವವ್ಯಾಪಿ ಮನೆಯಲ್ಲೂ ಇದ್ದಾನೆ, ಮನದಲ್ಲೂ ಇದ್ದಾನೆ.
• ಸ್ವರ್ಗದಂತಹ ಮನೆಯಲ್ಲಿ ಮಕ್ಕಳೇ ದೇವರು.• ಅನ್ನ, ವಿದ್ಯೆ, ಔಷಧಿ ಮಾರಾಟ ಮಾಡುವುದಕ್ಕಿಂತ ದಾನ ಮಾಡುವುದು ಶ್ರೇಷ್ಠ.• ನಮ್ಮ ದುರ್ಗುಣಗಳನ್ನು ತ್ಯಾಗ ಮಾಡಿದಾಗ ನಾವೇ ದೇವರಾಗುತ್ತೇವೆ.
• ಊಟ ಮಾಡುವಾಗ ಮನೆಯ ಇತರ ಸದಸ್ಯರನ್ನು ಕಾದು ಊಟ ಮಾಡೋಣ ಮತ್ತು ಅನ್ನದ ಭಾಗ್ಯ ನೀಡಿದ ರೈತರನ್ನು, ದೇವರನ್ನು ನೆನೆಯೋಣ.
• ಮನೆಯಲ್ಲೇ ಆಹಾರ ತಯಾರಿಸಿ ಎಲ್ಲಾ ಹಬ್ಬಗಳನ್ನು ಆಚರಣೆ ಮಾಡೋಣ.• ನೀರು ಕುಡಿಯುವಾಗ ಕುಳಿತು ಕುಡಿಯೋಣ.• ಊಟ ಮಾಡುವಾಗ ನೆಲಕ್ಕೆ ಕೂತು ಮಾಡೋಣ.• ತಿಂದ ನಂತರ ನಮ್ಮ ಪಾತ್ರೆಯನ್ನು ನಾವೇ ತೊಳೆಯೋಣ.• ಇನ್ನೊಬ್ಬರ ವಸ್ತುಗಳನ್ನು ಕೇಳಿ ಅಥವಾ ಹೇಳಿ ಉಪಯೋಗಿಸೋಣ.
• ಅತಿಥಿಗಳಿಗೆ ಮೊದಲು ಬೆಲ್ಲ ಮತ್ತು ನೀರು ನೀಡೋಣ.• ಸೂರ್ಯೋದಯಕ್ಕೆ ಮುನ್ನ ಎದ್ದು ಸ್ವಲ್ಪವಾದರೂ ವ್ಯಾಯಾಮ ಯೋಗ ಮಾಡೋಣ.• ದಿನಕ್ಕೆ ಕನಿಷ್ಠ ಒಂದು ಬಾರಿಯಾದರೂ ಸ್ವತಃ ಬಗ್ಗೆ ಭವಿಷ್ಯ ಬಗ್ಗೆ ಯೋಚನೆ ಮಾಡೋಣ.• ತಿಂಗಳಿಗೆ ಒಮ್ಮೆ ಆದರೂ ಉಪವಾಸ ಮಾಡೋಣ.
• ನಾನೇ, ನನ್ನಿಂದಲೇ ಎಂಬ ಅಹಂಕಾರದ ಮಾತನ್ನು ತ್ಯಾಗ ಮಾಡೋಣ.• ಎಲ್ಲವೂ ಭಗವಂತನ ಇಚ್ಛೆ ಎಂದು ತಿಳಿಯೋಣ.• ಬೇರೆಯವರ ಬದುಕನ್ನ ನಮ್ಮ ಬದುಕಿಗೆ ಹೋಲಿಸುವುದು ನಿಲ್ಲಿಸೋಣ.• ನಾವು ಮಾಡುವ ಯಾವುದೇ ಕೆಲಸವು ಭಗವಂತನೇ ನೀಡಿದ್ದು ಎಂದು ಭಾವಿಸಿದರೆ ಎಲ್ಲಾ ಕೆಲಸವೂ ಯಶಸ್ವಿ ಆಗುತ್ತದೆ.• ನಾವು ಮಾಡುವ ಪ್ರತಿ ಕಾರ್ಯವನ್ನು ಸಕಾರಾತ್ಮಕ ಮನೋಭಾವನೆಯಿಂದ ಮಾಡೋಣ.
• ನನ್ನಿಂದ ಸಾಧ್ಯವಿಲ್ಲ ನನ್ನಿಂದ ಆಗುವುದಿಲ್ಲ ಎಂಬ ಭ್ರಮೆಯನ್ನು ದೂರ ಮಾಡೋಣ.