ನಾವು ಈ ಲೇಖನದಲ್ಲಿ ಮನೆಯ ಬಾಗಿಲಲ್ಲಿ ಈ ನೀರನ್ನು ಚಿಮುಕಿಸಿದರೆ , ಹೇಗೆ ಧನ ಆಗಮನ ಆಗುತ್ತದೆ. ಎಂಬುದರ ಬಗ್ಗೆ ತಿಳಿಯೋಣ . ಮನೆ ಬಾಗಿಲಲ್ಲಿ ಈ ನೀರನ್ನು ಚಿಮುಕಿಸಿದರೆ ಧನಾಗಮನ ಖಚಿತ…. !
ಮುಂಜಾನೆ ಎದ್ದ ತಕ್ಷಣ ಮನೆಯ ಮಹಿಳೆಯರು ಮುಖ್ಯ ಬಾಗಿಲಿನಲ್ಲಿ ನೀರು ಚಿಮುಕಿಸಿ ರಂಗೋಲಿ ಹಾಕುವುದನ್ನು ನೀವು ಗಮನಿಸಬಹುದು . ಮನೆಯ ಮುಖ್ಯ ಬಾಗಿಲಿನಲ್ಲಿ ನೀರು ಚಿಮುಕಿಸೋದರ ಪ್ರಯೋಜನವೇನು…?
ಮನೆಯ ಮುಖ್ಯ ಬಾಗಿಲಿಗೆ ಯಾವ ನೀರನ್ನು ಚಿಮಿಕಿಸಬೇಕು….? ಹಿಂದೂ ಧರ್ಮದಲ್ಲಿ ಶಾಸ್ತ್ರಗಳಿಗೆ , ಅವುಗಳಲ್ಲಿನ ನಿಯಮಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ . ನಾವು ಒಂದು ಮನೆಯನ್ನು ಕಟ್ಟುವುದರಿಂದ ಹಿಡಿದು , ಮನೆಯ ಅಲಂಕಾರ ಮಾಡುವ ವಿಚಾರಗಳ ವರೆಗೂ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಶಾಸ್ತ್ರದಲ್ಲಿ ಹೇಳಲಾದ ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ , ಅದು ಮನೆಯಲ್ಲಿ ಸಂತೋಷ , ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ
ಹಿಂದೂ ಸಂಪ್ರದಾಯದಲ್ಲಿ ಒಂದು ಮನೆಯ ಮಹಿಳೆಯು ಮುಂಜಾನೆ ಬೇಗ ಎದ್ದು, ಮನೆ ಮುಂದೆ ನೀರನ್ನು ಚಿಮುಕಿಸಿ ರಂಗೋಲಿಯನ್ನು ಹಾಕುವ ಸಂಪ್ರದಾಯ ಇದೆ. ಇದು ಶುಭ ಅಥವಾ ಮಂಗಳಕರ ಸೂಚನೆ ಹಿಂದೂ ಧರ್ಮದ್ದು, ಆದರೆ, ಮನೆಯ ಮುಖ್ಯ ಬಾಗಿಲಿನ ಬಳಿ ನೀರನ್ನು ಯಾಕೆ ಹಾಕಬೇಕು…? ಇದರ ಪ್ರಯೋಜನವೇನೆಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ ..?
” ಮನೆಯ ಮುಖ್ಯ ದ್ವಾರದಲ್ಲಿ ನೀರನ್ನು ಚಿಮುಕಿಸುವುದು ” ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ , ಮನೆಯ ಮುಖ್ಯ ದ್ವಾರದ ಬಳಿ ಮುಂಜಾನೆ ನೀರನ್ನು ಚಿಮುಕಿಸುವುದು ಮಂಗಳಕರ ಸೂಚನೆ . ಕೇವಲ ಮನೆಯ ಮುಖ್ಯ ದ್ವಾರದ ಬಳಿ ರಂಗೋಲಿ ಹಾಕುವುದು ಮಾತ್ರವಲ್ಲ , ನೀರನ್ನು ಚಿಮುಕಿಸುವುದು ಕೂಡ ಮಂಗಳಕರ ಸೂಚನೆಯಾಗಿದೆ . ಪ್ರತಿದಿನ ಮುಂಜಾನೆ ಎದ್ದು , ಸ್ನಾನ ಇತ್ಯಾದಿಗಳಿಂದ , ನಿರುತ್ತರಾದ ಬಳಿಕ
ತಾಮ್ರದ ಪಾತ್ರೆಯಿಂದ ನೀರನ್ನು ತೆಗೆದುಕೊಂಡು ಮನೆಯ ಮುಖ್ಯ ದ್ವಾರದ ಬಳಿ ಚಿಮುಕಿಸಬೇಕು. ಹೀಗೆ ಮಾಡುವುದರಿಂದ , ಆ ಮನೆಯಲ್ಲಿ ಸುಖ – ಸಮೃದ್ಧಿ ಮತ್ತು ಸಂಪತ್ತು ಧನ – ಧಾನ್ಯಗಳು ವೃದ್ಧಿಯಾಗುತ್ತವೆ . ಕೌಟುಂಬಿಕ ಕಲಹಗಳಿಂದ ಮುಕ್ತಿ ದೊರೆಯುತ್ತದೆ . ಅಷ್ಟು ಮಾತ್ರವಲ್ಲದೆ , ನಕಾರಾತ್ಮಕ ಶಕ್ತಿಗಳು ಕೂಡ ಮನೆಯಿಂದ ದೂರವಾಗಿ , ಧನಾತ್ಮಕ ಶಕ್ತಿಗಳ ಸಂಚಲನ ಮನೆಯಲ್ಲಿ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ .
” ಮನೆಯ ಮುಖ್ಯದ್ವಾರದಲ್ಲಿ ಉಪ್ಪು ನೀರನ್ನು ಚಿಮುಕಿಸುವುದು ” ನೀವು ಪ್ರತಿನಿತ್ಯ ಮನೆಯ ಮುಖ್ಯ ದ್ವಾರದಲ್ಲಿ ಖಾಲಿ ನೀರನ್ನು ಚಿಮುಕಸುವುದರೊಂದಿಗೆ ವಾರಕ್ಕೊಮ್ಮೆ ಅದರಲ್ಲೂ , ಶುಕ್ರವಾರದಂದು ಮನೆ ಮುಖ್ಯ ದ್ವಾರದ ಬಳಿ ಉಪ್ಪು ನೀರನ್ನು ಚಿಮುಕಿಸಬೇಕು . ಉಪ್ಪು ಬೆರೆಸಿದ ನೀರನ್ನು ಮನೆಯ ಮುಖ್ಯ ದ್ವಾರದಲ್ಲಿ ಚಿಮುಕಿಸುವುದರಿಂದ ,
ಆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ , ಎನ್ನುವ ನಂಬಿಕೆ ಇದೆ . ಅಷ್ಟು ಮಾತ್ರವಲ್ಲ , ಉಪ್ಪು ನೀರನ್ನು ಚಿಮುಕಿಸುವುದರಿಂದ , ಆರೋಗ್ಯದ ಸಮಸ್ಯೆಗಳನ್ನು ಕೆಲವು ದೋಷಗಳನ್ನು ಕೂಡ ನಮ್ಮಿಂದ ದೂರವಿಡಬಹುದು . ನೀವು ಕೂಡ ಇವುಗಳಿಂದ ಮುಕ್ತಿ ಹೊಂದಲು ಬಯಸಿದರೆ , ಖಂಡಿತ ಉಪ್ಪುನೀರನ್ನು ವಾರಕ್ಕೊಮ್ಮೆ ಯಾದರೂ ಮನೆಯ ಮುಖ್ಯದ್ವಾರದಲ್ಲಿ ಚಿಮಿಕಿಸಿ .
” ಮನೆಯ ಮುಖ್ಯ ದ್ವಾರದಲ್ಲಿ ಅರಿಶಿಣ ನೀರನ್ನು ಚಿಮುಕಿಸುವುದು” ಶಾಸ್ತ್ರಗಳ ಪ್ರಕಾರ , ಮನೆಯ ಮುಖ್ಯ ದ್ವಾರದಲ್ಲಿ ಅರಿಶಿಣ ಮಿಶ್ರಿತ ನೀರನ್ನು ಚಿಮುಕಿಸುವುದು ಅತ್ಯಂತ ಮಂಗಳಕರ ಸೂಚನೆಯಾಗಿದೆ . ಈ ಕೆಲಸವನ್ನು ನೀವು ಪ್ರತಿದಿನ ಮಾಡಬೇಕು . ಪ್ರತಿದಿನ ಬೆಳಿಗ್ಗೆ ಎದ್ದು , ಸ್ನಾನ ಇತ್ಯಾದಿಗಳಿಂದ ಶುದ್ಧವಾದ ಬಳಿಕ , ಒಂದು ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿ , ಅದಕ್ಕೆ ಸ್ವಲ್ಪ ಅರಿಶಿಣವನ್ನು ಬೆರೆಸಿ , ಆ ನೀರನ್ನು ನಂತರ ಮನೆಯ ಮುಖ್ಯ ದ್ವಾರದ ಬಳಿ ಚಿಮುಕಿಸಿ . ಇದನ್ನು ನೀವು ಮಾಡುವುದರಿಂದ ,
ನಿಮ್ಮ ಮನೆಯಲ್ಲಿ ಸಂಪತ್ತು ಮತ್ತು
ಐಶ್ವರ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ . ಇದು ನಿಮ್ಮ ಮನೆಯ ಧನ – ಧಾನ್ಯಕ್ಕೆ ಸಂಬಂಧಿಸಿದ ಕೊರತೆಯನ್ನು ದೂರಾಗಿಸುತ್ತದೆ. ನೀವು ಪ್ರತಿನಿತ್ಯ ಮುಂಜಾನೆ ಮನೆ ಮುಖ್ಯ ದ್ವಾರದ ಬಳಿ ಈ ಮೇಲೆ ತಿಳಿಸಿದ ಯಾವುದೇ ಒಂದು ರೀತಿಯ ಕೆಲಸ ಮಾಡಿದರೂ , ಅದರಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದು . ಮುಖ್ಯವಾಗಿ ಇದು ಕೌಟುಂಬಿಕ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ . ಹಾಗಾಗಿ ನಾವು ಮೇಲೆ ಹೇಳಿರುವ ಕೆಲಸಗಳನ್ನು ಶುಕ್ರವಾರದಂದು ನೀವು ಮಾಡಿದರೆ ನಿಮಗೆ ಧನ ಸಂಪತ್ತು ಲಭಿಸುತ್ತದೆ ಎಂದು ಹೇಳಬಹುದು .