ಮಾಂಗಲ್ಯದ ಪಕ್ಕದಲ್ಲಿ ಕರಿಮಣಿ ಹಾಕಬಾರದು, ಕಣ್ಣೀರು,ಕಷ್ಟ, ಜಾಸ್ತಿ ಆಗುತ್ತೆ,ಮರುಮಾಂಗಲ್ಯ ಧಾರಣೆಒಳ್ಳೆದಾ?

0

ಇಂದಿನ ಲೇಖನದಲ್ಲಿ ಮಂಗಳಸೂತ್ರದ ಮಹತ್ತ್ವವನ್ನು ತಿಳಿದುಕೊಳ್ಳೋಣ. ಮಂಗಳ ಸೂತ್ರ ಎಷ್ಟು ಉದ್ದವಿರಬೇಕು? ಮಾಂಗಲ್ಯದ ಪಕ್ಕದಲ್ಲಿ ಕರಿಮಣಿಯನ್ನು ಏಕೆ ಧರಿಸಬೇಕು? ಮರು ಮಾಂಗಲ್ಯಧಾರಣೆ ಎಂದರೆ ಏನು? ಏಕೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ. ಹಿಂಧೂ ಸಂಪ್ರದಾಯದ ಪ್ರಕಾರ ಗಂಡನ ದೀರ್ಘಾಯುಷ್ಯಕ್ಕೆ ಪ್ರತಿಯೊಬ್ಬ ವಿವಾಹಿತ ಮಹಿಳೆ ಮಂಗಳ ಸೂತ್ರವನ್ನು ಧರಿಸಲೇಬೇಕು. ಇದರಿಂದ ಗಂಡನ ಆರೋಗ್ಯ, ಯಶಸ್ಸು, ಆಯಸ್ಸು, ಅಭಿವೃದ್ಧಿ, ಶ್ರೇಯಸ್ಸು ಎಲ್ಲವೂ ಸಿಗುತ್ತದೆ. ಮಾಂಗಲ್ಯವು ಸ್ತನದ ಆಕಾರದಲ್ಲಿ ಇರುತ್ತದೆ. ಈ ಆಕಾರ ಏಕೆ ಬಂದಿತು ಎಂದರೆ ಅದಕ್ಕೆ ಒಂದು ಸಣ್ಣ ಕತೆ ಇದೆ ಅದೇನೆಂದರೆ

ಒಂದು ಸಲ ಮಹಾಲಕ್ಷ್ಮಿ ದೇವಿ ಶಿವ ಪೂಜೆಯನ್ನು ಮಾಡಬೇಕೆಂದು ಸಂಕಲ್ಪ ಮಾಡಿಕೊಳ್ಳುತ್ತಾರೆ. ಲಕ್ಷ್ಮಿಯು ತುಳಸಿಯ ಪೂಜೆಗೆ ಸಲ್ಲುವ ರೀತಿಯಲ್ಲಿ ಶಿವನಿಗೆ ನಾನು ಸಲ್ಲಬೇಕೆಂದು ಸಂಕಲ್ಪ ಮಾಡಿಕೊಂಡು ವ್ರತವನ್ನು ಶುರು ಮಾಡುತ್ತಾಳೆ. ಪ್ರತಿದಿನ 108 ತಾವರೆ ಹೂವುಗಳಿಂದ ಶಿವನನ್ನು ಪೂಜೆ ಮಾಡುತ್ತೀನಿನೆಂದು ಸಂಕಲ್ಪ ಮಾಡಿಕೊಳ್ಳುತ್ತಾಳೆ. ಲಕ್ಷ್ಮಿ ದೇವಿಯ ಈ ಸಂಕಲ್ಪಕ್ಕೆ ವನ ದೇವತೆಯು ಪ್ರತಿದಿನ 108 ತಾವರೆ ಹೂವನ್ನು ಕೊಡುತ್ತೇನೆಂದು ಹೇಳುತ್ತಾಳೆ. ವ್ರತವನ್ನು ಪ್ರಾರಂಭ ಮಾಡಿ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿರುವ ಸಂದರ್ಭದಲ್ಲಿ ಶಿವನು ಪರೀಕ್ಷೆಯನ್ನು ಮಾಡುತ್ತಾನೆ.

108 ಕಮಲದ ಹೂವಿನಲ್ಲಿ ಎರಡು ಹೂವನ್ನು ಸಾಕ್ಷಾತ್ ಶಿವನೇ ಬಚ್ಚಿಡುತ್ತಾನೆ. ಆದರೇ 108 ಅಷ್ಟೋತ್ತರ ಮಾಡುವಾಗ ಪ್ರತಿಯೊಂದು ಹೂವನ್ನು ಅರ್ಪಿಸುವಾಗ 108 ಮಂತ್ರವನ್ನು ಹೇಳುತ್ತಿರುವ ಲಕ್ಷ್ಮಿದೇವಿಗೆ 106 ಕಮಲದ ಹೂವು ಇದೆ ಎಂದು ಆತಂಕ ಪಡುತ್ತಾಳೆ. ಜೊತೆಗೆ ವನದೇವತೆಯು 108 ಹೂವುಗಳನ್ನು ಮಾತ್ರ ಕೊಡುತ್ತೇನೆಂದು ಶರತ್ತನ್ನು ಒಡ್ಡಿರುತ್ತಾಳೆ. ಲಕ್ಷ್ಮಿ ದೇವಿಯು ಈ ರೀತಿಯ ವ್ರತಭಂಗವಾಯಿತ್ತಲ್ಲಾ ಎಂದು ಗೊಂದಲಕ್ಕೆ ಒಳಗಾಗುತ್ತಾಳೆ.

ಅದೇ ಸಮಯಕ್ಕೆ ನಾರದ ಮುನಿಯು ಬರುವಾಗ ದೇವಿಯನ್ನು ಕುರಿತು ಲಕ್ಷ್ಮಿದೇವಿಯ ಕುರಿತಾದ ಹಾಡನ್ನು ಹೇಳಿಕೊಂಡು ಕಮಲದ ಮೊಗದವಳೇ, ಕಮಲದ ಕೈಯವಳೇ, ಕಮಲದಲ್ಲಿ ಕುಳಿತವಳೇ ಎಂದು ಹೇಳಿಕೊಂಡು ಬರುವಾಗ ಲಕ್ಷ್ಮಿದೇವಿಯು ನಾನೇ ಕಮಲವಾಗಿದ್ದೀನಿ ಎಂದು ತನ್ನ ಎರಡು ಸ್ತನಗಳನ್ನು ಕತ್ತರಿಸಿ ಶಿವಲಿಂಗಕ್ಕೆ ಅರ್ಪಿಸುತ್ತಾಳೆ. ದೇವಿಯು ಭಕ್ತಿಯನ್ನು ಶಿವನು ಮೆಚ್ಚಿ ಇನ್ನು ಮುಂದೆ ನೀನು ಬಿಲ್ವಪತ್ರೆಯ ರೂಪದಲ್ಲಿ ನನ್ನ ಪೂಜೆಗೂ ಸಲ್ಲುತ್ತೀಯ ಎಂದು ವರವನ್ನು ಕೊಡುತ್ತಾನೆ.

ಹಾಗೆಯೇ ಪ್ರತಿಯೊಬ್ಬ ವಿವಾಹಿತ ಸ್ತ್ರೀಯು ಧರಿಸುವ ಮಾಂಗಲ್ಯವು ಇದೇ ರೀತಿಯ ಆಕಾರದಲ್ಲಿ ಇರಲಿ ಎಂದು ವರವನ್ನು ಕೊಡುವುದರಿಂದ ನಮ್ಮ ಎಲ್ಲಾ ವಿವಾಹಿತ ಸ್ತ್ರೀಯರ ಮಾಂಗಲ್ಯವು ಸ್ತನದ ರೂಪದಲ್ಲಿರುತ್ತದೆ.
ಅರಿಶಿನ ಕುಂಕುಮವನ್ನು ಮಾಂಗಲ್ಯದ ಮೇಲ್ಭಾಗದಲ್ಲಿ ಹಚ್ಚುತ್ತೇವೆ. ಆದರೇ ಅದು ತಪ್ಪು ಮಾಂಗಲ್ಯದ ಹಿಂಭಾಗದಲ್ಲಿ ಹಚ್ಚಬೇಕು. ಜೊತೆಗೆ ನೀವು ಧರಿಸುವ ಚಿನ್ನದ ಅಥವಾ ಕರಿಮಣಿಯ ಮಾಂಗಲ್ಯದ ಸರ ಎಷ್ಟು ಉದ್ದವಿರಬೇಕೆಂದರೆ ನಾವು ಧರಿಸುವಾಗ

ನಮ್ಮ ಬೈತಲೆಗೆ ತಾಕುವಂತೆ ಇರಬೇಕು ತುಂಬಾ ಉದ್ದವಿರಬಾರದು, ಉದ್ದವಿಲ್ಲದಿದ್ದರೂ ಪರವಾಗಿಲ್ಲ ಹೆಚ್ಚು ಉದ್ದವಿರಬಾರದು. ಸರದ ಉದ್ದ 26 ಇಂಚಿನಷ್ಟು ಮಾತ್ರ ಧರಿಸಬೇಕು, ಮಾಂಗಲ್ಯದ ಪಕ್ಕದಲ್ಲಿ ಕರಿಮಣಿಗಳನ್ನು ಏಕೆ ಹಾಕಬೇಕೆಂದರೆ ಕರಿಮಣಿಗಳನ್ನು ಮಾಂಗಲ್ಯದ ಪಕ್ಕದಲ್ಲಿ ಹಾಕುವುದರಿಂದ ದಾಂಪತ್ಯಕ್ಕೆ ಯಾವುದೇ ಕೆಟ್ಟ ದೃಷ್ಟಿ ಬರದಂತೆ ತಡೆಯುತ್ತದೆ. ಈ ಕಪ್ಪು ಮಣಿಗಳು ಪತಿಯನ್ನು ಎಲ್ಲಾ ತೊಂದರೆಗಳಿಂದ ರಕ್ಷಿಸುತ್ತದೆ ಮತ್ತು ಆತನ ಯಶಸ್ಸು ಹೆಚ್ಚಾಗುವಂತೆ ಮಾಡುತ್ತವೆ.

ಕರಿಮಣಿಯನ್ನು ಶಿವನೆಂದು ಅದನ್ನು ಸೇರಿಸಿ ಕಟ್ಟುವ ಹಳದಿ ದಾರವನ್ನು ಪಾರ್ವತಿ ಎಂದು ಹೇಳಲಾಗುತ್ತದೆ. ಹೀಗೆ ಶಿವ ಪಾರ್ವತಿಯ ಕೃಪೆಯಿಂದ ದಾಂಪತ್ಯ ಸುಖಮಯವಾಗಿರುತ್ತದೆಂಬ ನಂಬಿಕೆಯು ಇದೆ. ಇನ್ನೊಂದು ವಿಷಯವೇನೆಂದರೆ ಕಪ್ಪು ಮಣಿಗಳು ಶನಿಗ್ರಹದ ಸಂಕೇತವಾಗಿದೆ, ಚಿನ್ನ ಗುರು ತತ್ತ್ವವನ್ನು ಹೊಂದಿದೆ. ಚಿನ್ನ ಗುರು ಗ್ರಹದ ಸಂಕೇತವಾಗಿದೆ. ಶನಿ ಮತ್ತು ಗುರು ಗ್ರಹಗಳ ಪರಸ್ಪರ ಕ್ರಿಯೆಯು ಸಂತೋಷದ ದಾಂಪತ್ಯದ ಜೀವನವನ್ನು ಸೂಚಿಸುತ್ತದೆ. ಮರು ಮಾಂಗಲ್ಯಧಾರಣೆಯ ಬಗ್ಗೆ ತಿಳಿಸುವುದಾದರೇ ತುಂಬಾ ಜನರ ಜಾತಕದಲ್ಲಿ ಕುಜ ದೋಷವಿರುತ್ತದೆ. ಕುಜ ದೋಷವಿದ್ದವರಿಗೆ ಎರಡು ಸಲ ಮದುವೆ ಯೋಗವಿರುತ್ತದೆ ಆದ್ದರಿಂದ ಅವರಿಗೆ ಎರಡು ಸಲ ಮದುವೆ ಮಾಡಿಸಬೇಕಾಗುತ್ತದೆ. ಆದ್ದರಿಂದ ದೋಷವನ್ನು ನಿವಾರಣೆ ಮಾಡಿಕೊಂಡು ಮದುವೆ ಮಾಡಿದರೇ ಒಳ್ಳೆಯದು.

Leave A Reply

Your email address will not be published.