ಮೇಷ ರಾಶಿ ರಹಸ್ಯ

ಮೇಷ ರಾಶಿಯವರ ರಹಸ್ಯವನ್ನು ನಾವು ಈಗ ತಿಳಿಯೋಣ. ಈ ರಾಶಿಯವರು ಹಣ ಅದೃಷ್ಟ ಬರಬೇಕೆಂದರೆ ಮುಂದೆ ಏನು ಮಾಡಬೇಕೆಂದು ತಿಳಿಸುತ್ತೇನೆ.. ಮೇಷ ರಾಶಿ ಚಕ್ರದ ಮೊದಲನೆಯ ರಾಶಿ ಅಶ್ವಿನಿ ಬರಣಿ ನಕ್ಷತ್ರಗಳ ನಾಲ್ಕು ಪಾದಗಳು ಹಾಗೆ ಕೃತಿಕ ನಕ್ಷತ್ರದ ಒಂದು ಪಾದ ಈ ರಾಶಿಗೆ ಸೇರುತ್ತದೆ. ಈ ರಾಶಿ ಕಾಲ ಪುರುಷನ ತಲೆ ಭಾಗ ಪ್ರತಿನಿಧಿಸುತ್ತದೆ. ಟಗರು ಇದು ಮೇಷ ರಾಶಿಯ ಸಂಕೇತ ಇದು ನೋಡುವುದಕ್ಕೆ ಸಾದಾಸಿದ ಪಾಪದ ಪ್ರಾಣಿಯಾಗಿ ಕಂಡರೂ ಮುಟ್ಟೋಕೆ ಹೋದರೆ ಆಕ್ರಮಣಕಾರಿ ಪ್ರಾಣಿ,

ಟಗರು ಸರಿಯಾದ ಗುರಿ ಸಮಯ ನೋಡಿ ಗುದ್ದೋಧು ಟಗರಿನ ಅಭ್ಯಾಸ ಗುದ್ದೂದ್ರಲ್ಲ್ಲಿ ಹೆಸರುವಾಸಿ ಎಂದೇ ಹೇಳಬಹುದು ಇಂತಹ ಪರ್ವತ ಕೋಟೆಯನ್ನು ಇರೋದಕ್ಕೆ ಇದಕ್ಕೆ ಶಕ್ತಿ ಇದೆ. ಈ ರಾಶಿಯವರು ಹಾಗೆ ಬ್ಯಾಲೆನ್ಸ್ ಗ್ರಿಪ್ ತಾಕತ್ತು ಹಾಗೆ ಬಹಳ ತಾಳ್ಮೆ ಇವರಿಗಿದೆ ಅಬ್ಸರ್ವ್ ಮಾಡಿ ಸರಿಯಾದ ಸಮಯದಲ್ಲಿ ಕಾರ್ಯ ಸಾಧಿಸುವ ಕಲೆ ಇವರಲ್ಲಿದೆ. ಈ ಮೇಷ ರಾಶಿಯವರು ಯಾವಾಗಲೂ ಸೀಕ್ರೇಟ್ ಮೇಂಟೇನ್ ಮಾಡುವವರು. ಇವರ ಸೀಕ್ರೆಟ್ ಏನೆಂದು ನಾವೀಗ ನೋಡೋಣ

ಮೇಷ ರಾಶಿಯವರಿಗೆ ಅಧಿಪತಿ ಮಂಗಳ ಇದರ ಪ್ರಕಾರ ಹೇಳುವುದಾದರೆ ಹೆಚ್ಚಾಗಿ ಮೇಷ ರಾಶಿಯಲ್ಲಿ ಹುಟ್ಟಿದವರು ನೋಡೋದಕ್ಕೆ ಕುಳ್ಳ ಅಥವಾ ಮಧ್ಯಮ ಎತ್ತರವಿರುತ್ತಾರೆ. ರಾಶಿಯಲ್ಲಿ ಸೂರ್ಯ ಇದ್ದರೆ ಇದು ಅನ್ವಯವಾಗುವುದಿಲ್ಲ. ಸ್ವಲ್ಪ ಡಾರ್ಕ್ ಬಣ್ಣದ ಮುಖ ಕಂದು ಬಣ್ಣದ ಕಣ್ಣುಗಳು ಗಟ್ಟಿ ಮುಟ್ಟಾದ ಮತ್ತೆ ಬಲವಾದ ದೇಹ ಉದ್ದವಾದ ಕುತ್ತಿಗೆ ದೊಡ್ಡ ಕಣ್ಣುಗಳು ಹಾಗೆ ಒರಟು ಕೂದಲುಗಳು ಇವರಲ್ಲಿ ಕಂಡು ಬರುವ ಲಕ್ಷಣಗಳು. ಸ್ವಭಾವತಹ ಒಂಟಿಯಾಗಿದ್ದು ಮಾನಸಿಕವಾಗಿ

ತುಂಬಾ ಶಕ್ತಿಶಾಲಿಗಳು ನೇರ ಸ್ವಭಾವ ಸ್ವಾಭಿಮಾನಿಗಳು ಉದಾರಿಗಳು ಸ್ವಾತಂತ್ರ ಪ್ರಿಯರು ಏನೇ ಮಾಡಿದರು ಮೊದಲು ಯೋಚಿಸಿ ಮಾಡಿ ಎನ್ನುವ ಮಾತಿದೆ ಆದರೆ ಇವರು ಇದಕ್ಕೆ ವಿರುದ್ಧವಾದವರು ಹಠಾತ್ ನಿರ್ಧಾರ ದುಡುಕೋದು ಇವರ ಸ್ವಭಾವ ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡಿ ಅದರ ಉಪಯೋಗವನ್ನು ನೋಡುವುದು ಇವರ ರೂಡಿ ನಾಯಕತ್ವದ ಗುಣಗಳು ಆಶಾವಾದಿಗಳು ಆಗಿರುತ್ತಾರೆ

ಇವರು ಧೈರ್ಯಶಾಲಿಯಾಗಿದ್ದು ಶಕ್ತಿ ಮತ್ತು ಚೈತನ್ಯದ ಚಿಲುಮೆ ಹೆಚ್ಚು ಮಾತನಾಡುದಿಲ್ಲ ಯಾರ್ಯಾರು ಜೊತೆ ಹೇಗೆ ಮಾತನಾಡಬೇಕೆಂಬ ಕಲೆ ಹುಟ್ಟಿನಿಂದಲೇ ಬಂದಿರುತ್ತದೆ. ಹಾಗಾಗಿ ಜನರ ಮನ ಒಲಿಸುವುದು ಸಲೀಸಾಗಿ ಕೆಲಸ ಮಾಡಿಸಿಕೊಳ್ಳುವುದು ಇವರಿಗೆ ತುಂಬಾ ಸುಲಭ ಒಳ್ಳೆಯ ಕೆಲಸ ಮಾಡಲು ಜನರಿಗೆ ಪ್ರೇರಣೆ ನೀಡುತ್ತಾರೆ ಸ್ಪರ್ಧಾತ್ಮಕ ಆತ್ಮವಿಶ್ವಾಸದ ಮನಸ್ಥಿತಿ ಆಕರ್ಷಕ ವ್ಯಕ್ತಿತ್ವ ಪ್ರತಿಯೊಂದು ಕೆಲಸದ ಜವಾಬ್ದಾರಿಯನ್ನು ಇವರೇ ತೆಗೆದುಕೊಳ್ಳುತ್ತಾರೆ.

ಮನಸ್ಸಿಂದ ತುಂಬಾ ಒಳ್ಳೆಯವರು ಬೇರೆಯವರ ಖುಷಿ ನೋಡಿ ತಾವು ಖುಷಿಪಡುವವರು. ಯಾರನ್ನಾದರೂ ಪ್ರೀತಿಸುತ್ತಿದ್ದರೆ ಯಾವುದಕ್ಕೂ ಕಾಯುವುದಿಲ್ಲ ನೇರವಾಗಿ ಹೋಗಿ ತಮ್ಮ ಭಾವನೆಯನ್ನು ಹೇಳಿ ಅತ್ಯುತ್ತಮವಾಗಿ ಪ್ರೀತಿ ನೀಡುತ್ತಾರೆ ನಿರ್ಧಯಗಳು ಎನಿಸಿದರು ಇವರಿಗೆ ಮಗುವಿನ ಮನಸ್ಸು ತಾವು ಪ್ರೀತಿಸುವವರನ್ನು ಅರ್ಥ ಮಾಡಿಕೊಳ್ಳಲು ಪ್ರಶಂಶಿಸಲು ಪ್ರಯತ್ನ ಪಡುತ್ತಾರೆ ಈ ರಾಶಿಯವರು ಕಡಿಮೆ ಮಾತನಾಡಿದರು ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಾರೆ.

ತಮ್ಮ ಸುತ್ತಮುತ್ತಲಿನ ಜನ ಕೂಡ ಹಾಗೆ ಇರಬೇಕೆಂದು ಬಯಸುತ್ತಾರೆ. ಇನ್ನೊಬ್ಬರ ಹಂಗಿನಲ್ಲಿ ಜೀವನ ನಡೆಸಲು ಒಪ್ಪುವುದಿಲ್ಲ ತುಂಬಾ ಕೋಪಿಷ್ಟ ವ್ಯಕ್ತಿಗಳು ಇವರೇನಾದರೂ ಕೋಪ ಕಂಟ್ರೋಲ್ ಮಾಡಿಕೊಳ್ಳುವಂತಿದ್ದರೆ ಜಗತ್ತು ಹೀಗಿರುತ್ತಿರಲಿಲ್ಲ ಜಗತ್ತಿನ ವಿಷಯ ಹೀಗಿರಲಿ ನೀವು ನಿಮ್ಮ ಕೋಪವನ್ನು ಕಂಟ್ರೋಲ್ ಮಾಡಿ ಹೀಗೆ ಮಾಡುವುದರಿಂದ ಅದೆಷ್ಟು ಸಂಬಂಧಗಳು ಉಳಿಯುತ್ತವೆ ಯಾವುದೇ ಸೆಲೆಬ್ರೆಟಿಗಳು ರಾಜಕಾರಣಿಗಳು ಪ್ರಸಿದ್ಧ ವ್ಯಕ್ತಿಗಳು ಮೇಷ ರಾಶಿಯವರು ಅವರ ಜೀವನದಿಂದ

ನಾವು ಏನನ್ನು ಕಲಿಯಬಹುದು ಹೇಗೆ ಸ್ಪೂರ್ತಿ ಪಡೆಯಬಹುದು ಎನ್ನುವುದನ್ನು ಮುಂದೆ ನೋಡೋಣ.
ಈಗ ಮೇಷ ರಾಶಿಯವರ ವೃತ್ತಿ ಜೀವನದ ಬಗ್ಗೆ ತಿಳಿಯೋಣ ನಾಯಕತ್ವದ ಗುಣಕ್ಕೆ ಹೆಸರಾಗಿರುವುದರಿಂದ ಬಿಜಿನೆಸ್ ಮ್ಯಾನ್ ಗಳಾಗಬಹುದು ಉತ್ತಮ ಸರ್ಕಾರಿ ಅಧಿಕಾರಿ ಕೂಡ ಆಗಬಹುದು ಸಂಶೋಧನೆ ಮೆಡಿಸಿನ್ ಶಸ್ತ್ರ ಚಿಕಿತ್ಸೆ ಮೆಕಾನಿಕ್ ಸ್ಪೋರ್ಟ್ಸ್ ಇಂಜಿನಿಯರಿಂಗ್ ಸೈಕಾಲಜಿ ಮತ್ತೆ ಮುಖ್ಯವಾಗಿ ಇವರಿಗೆ ಬಿಸಿನೆಸ್ ಉತ್ತಮವಾಗಿದೆ ಕರೆಂಟ್ ಮತ್ತು ವಾಹನದ ಕ್ಷೇತ್ರವನ್ನು ಸಹ ಉತ್ತಮ ಎಂದು ಪರಿಗಣಿಸಲಾಗುತ್ತದೆ

ಮೇಷ ರಾಶಿಯ ಜನ ಶಕ್ತಿಯ ಕೇಂದ್ರಗಳು ಇನ್ನು ಇವರ ಆರೋಗ್ಯದ ವಿಚಾರ ನೋಡುವುದಾದರೆ ತಲೆ ಹೊಟ್ಟೆ ಮೂತ್ರಪಿಂಡದ ಸಮಸ್ಯೆಯನ್ನು ಅನುಭವಿಸುತ್ತಾರೆ. ಮೈ ಗ್ರೇನ್ ಅಜೀರ್ಣ ಅಥವಾ ಮೂತ್ರಪಿಂಡದ ಕಲ್ಲುಗಳನ್ನು ಸಹ ಹೊಂದಬಹುದು. ಅತಿಯಾಗಿ ಕೆಲಸದಲ್ಲಿ ತೊಡಗಿಕೊಂಡು ಆರೋಗ್ಯವನ್ನು ನಿರ್ಲಕ್ಷ ಮಾಡುವುದೇ ಇದಕ್ಕೆ ಕಾರಣ ಇನ್ನು ಪಾಸಿಟಿವ್ ಹಾಗೂ ನೆಗೆಟಿವ್ ಅಂಶಗಳು ಒಂದು ನಾಣ್ಯದ ಎರಡು ಮುಖ ಇದ್ದ ಹಾಗೆ ಯಾವುದೇ ಒಂದು ಅಂಶದಿಂದ ಕೆಟ್ಟವರು ಆಗುವುದಿಲ್ಲ ಒಳ್ಳೆಯವರು ಆಗುವುದಿಲ್ಲ ಒಟ್ಟಾರೆಯಾಗಿ

ಈ ರಾಶಿಯವರ ಪಾಸಿಟಿವ್ ಹಾಗೂ ನೆಗೆಟಿವ್ ಗುಣದ ಬಗ್ಗೆ ಹೇಳುವುದಾದರೆ, ಆಕ್ಟಿವ್ ಧೈರ್ಯ ಸಾಹಸ ಸ್ವಾಭಿಮಾನಿ ಪ್ರಾಮಾಣಿಕ ಇನ್ನುವ ಗುಣವನ್ನು ಹೊಂದಿದ್ದರೆ ಮೂರ್ಖತನ ಸ್ವಾರ್ಥ ಅಹಂಕಾರ ನಿರ್ದಯತೆ ಎನ್ನುವ ನೆಗೆಟಿವ್ ಗುಣವನ್ನು ಹೊಂದಿದ್ದಾರೆ ಎಲ್ಲಾ ಚಾಲೆಂಜ್ಗಳನ್ನು ಸ್ವೀಕಾರ ಮಾಡಿ ಲೈಫ್ ಎಂಜಾಯ್ ಮಾಡುವುದು ಇವರ ಗುಣ ಇತರ ಮಹಿಳೆಯರಿಗೆ ಕೂಡ ಸ್ಪೂರ್ತಿಯಾಗುತ್ತಾರೆ ಉತ್ಸಾಹ ಬರೀತಾ ಆತ್ಮವಿಶ್ವಾಸ ಬುದ್ಧಿವಂತಿಕೆ

ನಾಟಕೀಯ ಮತ್ತು ಹಾಸ್ಯ ಗುಣ ಸ್ವತಂತ್ರವಾಗಿರುವುದರಿಂದ ಅವರು ಇಲ್ಲ ಸಂತೋಷವನ್ನು ಅನುಭವಿಸುತ್ತಾರೆ ಇದೇ ಹಬ್ಬದ ಸಂತೋಷದ ಸೀಕ್ರೆಟ್ ಇವರ ಅತ್ಯುತ್ತಮ ಜೀವನ ಸಂಗಾತಿ ಜೊತೆಗೆ ಖುಷಿಯಿಂದ ಜೀವನ ನಡೆಸುತ್ತಾರೆ ಇವರ ಜೀವನದಲ್ಲಿ ಆಲಸ್ಯ ಹಾಗೂ ಬೇಸರದ ಕ್ಷಣಗಳು ತುಂಬಾ ಕಡಿಮೆ ಎಂದು ಹೇಳಬಹುದು.
ಯಾವಾಗಲೂ ಹೊಸ ಹೊಸ ಯೋಜನೆಯನ್ನು ತಯಾರು ಮಾಡಿ ತನ್ನದೇ ಆದ ಕೆಲಸವನ್ನು ಮಾಡುತ್ತಿರುತ್ತಾರೆ ಇನ್ನು

ಇವರನ್ನು ಯಾರಾದರೂ ನಿರ್ಲಕ್ಷ್ಯ ಮಾಡಿದರೆ ಅವರ ಕಥೆ ದೇವರಿಗೆ ಪ್ರೀತಿ ಇವರು ಅಂದುಕೊಂಡ ಹಾಗೆ ಕೆಲಸವಾಗದಿದ್ದರೆ ಕೋಪ ಮೂಗಿನ ತುದಿಯಲ್ಲೇ ಇರುತ್ತದೆ. ಹೆಚ್ಚು ಹಣ ಖರ್ಚು ಮಾಡುತ್ತಾರೆ ಗಳಿಸಿದ ಹಣವನ್ನು ಯಾವತ್ತು ಉಳಿಸುವುದಿಲ್ಲ ಇನ್ನು ಪ್ರೀತಿ ಪಾತ್ರರ ವಿಷಯ ಬಂದರೆ ಅತಿ ಪೊ ಸೆಸಿವ್ ವಾಗಿ ನಡೆದುಕೊಳ್ಳುತ್ತಾರೆ ಹುತ್ಯಾದಿಯಾಗಿ ಮೇಷ ರಾಶಿಯ ಜನರು ಜೀವನದಲ್ಲಿ ಯಾವುದನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಇದಕ್ಕೆ ಅವರು ಸಾಮಾನ್ಯವಾಗಿ ಗೆಲ್ಲುವುದು ಹೆಚ್ಚು ಅವರ ದೊಡ್ಡ

ಶಕ್ತಿ ಎಂದರೆ ಧೈರ್ಯ ಧೈರ್ಯದಿಂದಲೇ ಅವರು ಜೀವನದ ಎಲ್ಲಾ ಸಮಸ್ಯೆಯನ್ನು ಎದುರಿಸುತ್ತಾರೆ ನಾನು ಮೊದಲೇ ಹೇಳಿದಂತೆ ಈ ರಾಶಿಯವರು ಅನುಸರಿಸಬೇಕಾದ ಕೆಲವು ವಿಷಯಗಳು ಇದ್ದಾವೆ. ಹಣ ಮತ್ತು ಅದೃಷ್ಟ ಒಳ್ಳೆಯ ಜೀವನ ಆರೋಗ್ಯಕ್ಕಾಗಿ ನೀವು ಏನು ಮಾಡಬೇಕೆಂದು ಎಂದು ಕೊನೆಯಲ್ಲಿ ನೋಡೋಣ. ಈಗ ಮೇಷ ರಾಶಿಯ ಪುರುಷರು ಖುಷಿಯಾಗಿರುವುದಕ್ಕೆ ಕಾರಣವಿನೆಂದರೆ,

ಅಟ್ಟ್ರಾಕ್ಟಿವ್ ಮತ್ತು ಸ್ಟ್ರಾಂಗ್ ಆಗಿದ್ದು ಆತ್ಮವಿಶ್ವಾಸದಿಂದ ಯಾವಾಗಲೂ ಹೊಸ ಹೊಸ ಸಂಗತಿಗಳಿಗೆ ವಿಶೇಷ ಸಂಗತಿಗಳಿಗೆ ಸಿದ್ದರಾಗಿರುತ್ತಾರೆ ಒಳ್ಳೆಯ ನಾಯಕರು ಜನರ ಮನಸ್ಸು ಗೆಲ್ಲುವುದು ಇವರಿಗೆ ಒಂತರ ಆಟ ಇದ್ದಂತೆ ಕುಟುಂಬ ಮನೆಯವರೊಂದಿಗೆ ತುಂಬಾ ಕ್ಲೋಸ್ ಆಗಿರುತ್ತಾರೆ ಸಾಕಷ್ಟು ಸಾಮರ್ಥ್ಯ ಶಕ್ತಿ ಇದ್ದು ಎಲ್ಲರನ್ನ ಅರ್ಥ ಮಾಡಿಕೊಳ್ಳುತ್ತಾರೆ. ಉತ್ತಮ ವ್ಯವಹಾರ ಪ್ರಜ್ಞೆ ಹಾಗೆ ನಡವಡಿಕೆ ಇದೆ. ಇವರನ್ನು ಇಂಪ್ರೆಸ್ ಮಾಡುವುದು ತುಂಬಾನೇ ಕಷ್ಟ.

ಜೀವನ ಸಂಗಾತಿ ಬಗ್ಗೆ ಕಾಳಜಿ ಸ್ನೇಹ ನಂಬಿಕೆ ಜಾಸ್ತಿ ಇರುತ್ತದೆ ಆದರೆ ನಂಬಿದವರು ಮೋಸ ಮಾಡಿದರೆ ಯಾವುದೇ ಕಾರಣಕ್ಕೂ ಹತ್ತಿರಕ್ಕೆ ಸೇರಿಸುವುದಿಲ್ಲ. ಕೆಲವೊಮ್ಮೆ ತುಂಬಾ ಮೋಡಿ ಆಗಿದ್ದು ಜಗಳ ಜಾಸ್ತಿ ಮಾಡುವುದು ಏಕಾಂಗಿ ಆಗಿರುವುದು ಇವರಿಗೆ ಇಷ್ಟವಾಗುತ್ತದೆ ಒರಟು ಸ್ವಾರ್ಥಿ ಹಾಗೂ ಹಟಾತ್ತಾಗಿ ಪ್ರತಿಕ್ರಿಯೆ ನೀಡುತ್ತಾರೆ ಸಿಂಹ ರಾಶಿ ಧನು ರಾಶಿ ಅವರೊಂದಿಗೆ ಹೆಚ್ಚಿನ ಉತ್ತಮ ಬಾಂಧವ್ಯ ಹೊಂದಿರುತ್ತಾರೆ ತುಲಾ ಮತ್ತು ಮೇಷ ರಾಶಿಯವರ ಜನರ ಯೋಚನೆ ಬೇರೆಯಾದರೂ ಇವರ ನಡುವೆ ಉತ್ತಮ ಬಾಂಧವ್ಯ ವಿರುತ್ತದೆ ಎಂದು ಹೇಳಲಾಗುತ್ತದೆ

ಹಾಗೆ ಮಕರ ಕರ್ಕಾಟಕ ವೃಷಭ ರಾಶಿಯವರೊಂದಿಗೆ ಇವರ ಸಂಬಂಧ ಯಾವಾಗಲೂ ಚೆನ್ನಾಗಿರುವುದಿಲ್ಲ ರಾಶಿಯ ಹಣ ಅದೃಷ್ಟ ಸುಧಾರಿಸುವುದಕ್ಕೆ ಹಂಗೆ ಧೈರ್ಯ ಸಾಹಸ ಪ್ರಸಿದ್ಧಕ್ಕೆ ಬರುವುದಕ್ಕೆ ಏನಿಲ್ಲ ಮಾಡುವುದು ಯಾವ ರತ್ನ ಯಾವ ಬಣ್ಣದ ಬಟ್ಟೆ ಧರಿಸುವುದು ಒಳ್ಳೆಯದು ಅನ್ನೋದನ್ನ ಒಂದೊಂದಾಗಿ ನೋಡುತ್ತಾ ಹೋಗೋಣ

9ನೇ ಮನೆಯಾದ ಧನಸ್ಸಿಗೆ ಗುರು ಅಧಿಪತಿ ಹಾಗೆ ದುಡ್ಡು ಬರುವುದಕ್ಕೆ ಅದೃಷ್ಟ ಸುಧಾರಿಸುವುದಕ್ಕೆ ಪುಷ್ಯರಾಗ ಧರಿಸುವುದು ಒಳ್ಳೆಯದು ಹಳದಿ ಮತ್ತು ಕಾವಿ ಬಣ್ಣದ ಬಟ್ಟೆ ಧರಿಸುವುದರಿಂದ ಅದೃಷ್ಟ ಕುಲಾಯಿಸುತ್ತದೆ ಹಿಂದೆ ಹೇಳಬಹುದು ಎಂದು ಹೇಳಬಹುದು ಸುಖ ಸ್ಥಾನ 4ನೇ ಮನೆ ಆದ ಕರ್ಕಾಟಕ. ಈ ಕರ್ಕಾಟಕಕ್ಕೆ ಅಧಿಪತಿ ಚಂದ್ರ ಖುಷಿ ಮನಸ್ಸಿಗೆ ಶಾಂತಿ ಆರೋಗ್ಯ ಚೆನ್ನಾಗಿರಲು ಮುತ್ತನ್ನು ಧರಿಸುವುದು ತುಂಬಾ ಒಳ್ಳೆಯದು ಹಾಗೇ ಕೆನೆ ಬಣ್ಣದ ಬಟ್ಟೆ ಧರಿಸುವುದು ತುಂಬಾ ಒಳ್ಳೆಯದು ಇನ್ನು ಧೈರ್ಯ ಸಾಹಸ ಸಾಧನೆಗೆ

ಹವಳನ್ನು ಧರಿಸಿ ಜೊತೆಗೆ ಕೆಂಪು ಬಣ್ಣದ ಬಟ್ಟೆ ಧರಿಸುವುದು ಕೂಡ ಧೈರ್ಯ ಸಾಹಸಿಗರನ್ನಾಗಿ ಮಾಡುತ್ತದೆ ಈಗೊಂತು ಜನ ಫೇಮಸ್ ಆಗಬೇಕೆಂದು ಬಯಸುತ್ತಾರೆ. ಫೇಮಸ್ ಆಗುವುದಕ್ಕೆ ಏನು ಮಾಡಬೇಕೆಂದು ನಾನು ತಿಳಿಸುತ್ತೇನೆ ಮೇಷ ರಾಶಿಗೆ ಪಂಚಮಾಧಿಪತಿ ಸೂರ್ಯ ಪಂಚಮ ಸ್ಥಾನವೆಂದರೆ ಪೂರ್ವ ಪುಣ್ಯಸ್ಥಾನ ಪೂರ್ವ ಪುಣ್ಯವೆಂದರೆ ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯ ಈಗ ಸಿಗುತ್ತದೆ ಎಂಬುದು

ಫೇಮಸ್ ಆಗುವುದಕ್ಕೆ ಸೂರ್ಯನಿಗೆ ಹೊಂದಿಕೆಯಾಗುವಂತಹ ರೂಬಿ ಅಥವಾ ಮಾಣಿಕ್ಯ ಧರಿಸಬೇಕು ಇದರ ಜೊತೆಗೆ ಕಿತ್ತಲೆ ಬಣ್ಣ ಕಿತ್ತಲೆ ಕೇಸರಿ ಬಟ್ಟೆಯನ್ನು ಧರಿಸುವುದು ತುಂಬಾ ಒಳ್ಳೆಯದು ಈ ರಾಶಿಯವರು ಧೈರ್ಯಕ್ಕಾಗಿ ಸುಬ್ರಹ್ಮಣ್ಯನನ್ನು ಅದೃಷ್ಟಕ್ಕಾಗಿ ಗಣೇಶನನ್ನು ಮನಶಾಂತಿ ಮತ್ತು ಆರೋಗ್ಯಕ್ಕಾಗಿ ದುರ್ಗಾದೇವಿಯನ್ನು ಪೂಜಿಸುವುದು ಸೂಕ್ತ.

ಮೊದಲೇ ಹೇಳಿದಂತೆ ಈ ರಾಶಿಗೆ ಅಧಿಪತಿ ಮಂಗಳ ಇವರು ಮಂಗಳವಾರವನ್ನು ಇಷ್ಟವಾರವನ್ನಾಗಿ ಮಾಡಿಕೊಳ್ಳಬಹುದು. ಮಂಗಳ ಗ್ರಹದಿಂದ ಉಂಟಾಗುವ ತೊಂದರೆಯನ್ನು ದೂರ ಮಾಡಲು ಬೇವಿನ ಮರವನ್ನು ಪೂಜಿಸಬೇಕು. ರಕ್ತ ಸಂಬಂಧಿತ ಅಂದ್ರೆಗಳು ಜೊತೆಗೆ ಕುಜ ದೋಷವಿದ್ದರೆ ಅದು ಕೂಡ ನಿವಾರಣೆ ಆಗುತ್ತದೆ ಕಗ್ಗಲಿ ಮತ್ತು ದತ್ತೂರಿ ಹೂವಿನ ಗಿಡವನ್ನು ಬೆಳೆಸುವುದರಿಂದ ಕುಜ ದೋಷ ನಿವಾರಣೆ ಆಗುತ್ತದೆ ಯಾವ ಯಾವ ಸೆಲೆಬ್ರೆಟಿಗಳು ಪ್ರಸಿದ್ಧ ವ್ಯಕ್ತಿಗಳು ರಾಜಕಾರಣಿಗಳು

ಮೇಷ ರಾಶಿಯವರಿದ್ದಾರೆ ಅವರ ಗುಣಲಕ್ಷಣ ಅವರು ಎದುರಿಸುವ ಜೀವನ ಹೇಗಿದೆ ಎಂದು ತಿಳಿದುಕೊಳ್ಳಬೇಕಾ ಹಾಗಾದರೆ ಅವರು ಯಾರು ಎಂದು ಹೇಳುತ್ತೇನೆ ಮೊದಲನೆಯದಾಗಿ ಅಮಿತಾ ಬಚ್ಚನ್ ಇವರ ಬಗ್ಗೆ ಹೇಳಬೇಕಾಗಿಲ್ಲ ಬಾಲಿವುಡ್ ನಲ್ಲಿ ವರಿಗೆ ಇವರೇ ಸಾಟಿ ಬಚ್ಚನ್ ಅಂದಾಕ್ಷಣ ಇವರ ಜೀವನದ ಒಂದು ಘಟನೆ ನೆನಪಾಗುತ್ತದೆ ಸಿನಿಮಾ ಹೀರೋ ಆಗುವುದಕ್ಕೂ ಮುಂಚೆ ಅಮಿತಾ ಬಚ್ಚನ್ ಜೀವನದಲ್ಲಿ ತಿರುವು ಕೊಟ್ಟ ಒಂದು ಘಟನೆ ಇದೆ. ಅವರು ಯುವಕರಾಗಿದ್ದಾಗ

ಆಕಾಶವಾಣಿ ನಿರೂಪಕರಾಗಲು ಅರ್ಜಿ ಹಾಕಿರುತ್ತಾರೆ ಅಲ್ಲಿ ಜಾಬ್ ಇಂಟರ್ವ್ಯೂಗೆ ಹೋಗಿರುತ್ತಾರೆ ಆದರೆ ಇವರ ಧ್ವನಿ ತುಂಬಾ ಗಡಸಾಗಿರುವ ಕಾರಣದಿಂದ ಜಾಬ್ ಬೇರೆಯವರ ಪಾಲಿಗೆ ಹೋಗುತ್ತದೆ ಆದರೆ ಅಲ್ಲಿಂದ ಹೊರ ಬಿದ್ದ ಅವರು ಬಾಲಿವುಡ್ ಗೆ ಕಾಲಿಡುತ್ತಾರೆ ಇವತ್ತು ಅವರೊಂದು ದಂತಕಥೆ ಮರಳಿ ಯತ್ನವ ಮಾಡು ಅನ್ನೋದನ್ನು ಯಾರು ಹೇಳಿ ಕೊಡಬೇಕಾಗಿಲ್ಲ ಮೇಷ ರಾಶಿಯವರದು ಎಲ್ಲದಕ್ಕೂ ಒಂದು ಕೈ ನೋಡಿಬಿಡೋಣ ಅನ್ನೋ ಮನಸ್ಥಿತಿ

ಎರಡನೆಯದಾಗಿ ಹೇಳುವುದಾದರೆ ಕಪಿಲ್ ಶರ್ಮ ಕಾಮಿಡಿ ಲೋಕದಲ್ಲಿ ಇವರ ಹೆಸರನ್ನು ಕೇಳದೆ ಇರುವವರು ಯಾರು ಇಲ್ಲ ಮಾತಿನ ಮೂಲಕ ಹೊಸ ಲೋಕವನ್ನು ಸೃಷ್ಟಿ ಮಾಡುವ ಇವರದ್ದು ಕೂಡ ಮೇಷ ರಾಶಿ.
ಇನ್ನು ಮೂರನೇಯದಾಗಿ ಅಜಯ್ ದೇವಗನ್ ಅತ್ಯಂತ ಸಂಭಾವಿತ ವ್ಯಕ್ತಿತ್ವ ಮತ್ತು ಶಾಂತ ಆದರೆ ಆಶಾವಾದಿ ವ್ಯಕ್ತಿತ್ವದ ಮೇರು ನಟ. ಇನ್ನು ನಾಲ್ಕನೆಯದಾಗಿ ಅಮಿತ್ ಶಾ ರಾಷ್ಟ್ರ ರಾಜಕಾರಣದಲ್ಲಿ ಚಾಣಕ್ಯ ಎಂದು ಕರೆಸಿಕೊಳ್ಳುತ್ತಾರೆ.

ಇವರು ದೇಶದ ಪ್ರಸ್ತುತ ಗೃಹಮಂತ್ರಿ ಆರ್ಟಿಕಲ್ ತ್ರೀ ಸವೆಂಟಿ ರದ್ದು ಹಾಗೆ ಸಿಐಎ ಎನ್ಆರ್ಸಿ ಬಿಲ್ ಪಾಸ್ ಮಾಡಿ ರಾಷ್ಟ್ರ ವಿರೋಧಿಗಳಿಗೆ ಕಡಕ್ ಸಂದೇಶ ನೀಡಿರುವುದೇ ಇವರ ಚಾಣಕ್ಯತನಕ್ಕೆ ಉದಾಹರಣೆ
ಇನ್ನು ಐದನೇದಾಗಿ ಹೇಳಬೇಕೆಂದರೆ ಎಲ್ ಕೆ ಅಡ್ವಾಣಿ ಇವರು ಭಾರತೀಯ ರಾಜಕಾರಣದಲ್ಲಿ ಭೀಷ್ಮ ಎಂದು ಹೆಸರುವಾಸಿ ರಾಷ್ಟ್ರ ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೆ ಇರುವ ಎಲ್ಲಾ ಅರ್ಹತೆಗಳಿದ್ದರೂ ಅದನ್ನು ತ್ಯಜಿಸಿ ರಾಷ್ಟ್ರ ಮೊದಲು ಎನ್ನುವ ಸಂದೇಶ ನೀಡಿದವರು

Leave a Comment