ಈ ಲೇಖನದಲ್ಲಿ ಮೇಷ ರಾಶಿಯವರ ಮೇ ತಿಂಗಳ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ನಿಮ್ಮ ಸ್ವಂತ ಉದ್ಯೋಗ ಮತ್ತು ಕಾರ್ಯಗಳಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಕೆಲಸ ಮತ್ತು ವ್ಯವಹಾರಗಳಲ್ಲಿ ನಿಮ್ಮ ಕಡಿಮೆ ಸಮಯದ ಗೋಚಾರ ಫಲ ಮತ್ತು ಪೂರ್ಣಾವಧಿಯ ಗೋಚಾರ ಫಲ ಅಂದರೆ ಮನೆ ಕಟ್ಟುವುದು ಭೂಮಿಯನ್ನು ಖರೀದಿಸುವುದು . ಇದರ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳೋಣ. ಮೇಷ ರಾಶಿಗೆ ಎರಡು ಗ್ರಹಗಳ ಬಲವು ತುಂಬಾ ಮುಖ್ಯವಾಗಿರುತ್ತದೆ.
ಎರಡುವರೆ ವರ್ಷ ಶನಿಯು ನಿಮ್ಮ ಗ್ರಹದಲ್ಲಿ ಉಳಿದುಕೊಂಡು ನಿಮಗೆ ಬಲವನ್ನು ಕೊಡುತ್ತಾನೆ. ಕುಂಭ ರಾಶಿಯಲ್ಲಿ ಶನಿ ಇರುವುದರಿಂದ ನಿಮ್ಮ ರಾಶಿಗೆ ತುಂಬಾ ಪೂರ್ಣಾವಧಿಯ ಯಶಸ್ಸು ಸಿಗುತ್ತದೆ. ನಿಮಗೆ ಲಾಭ ಸಿಗುವುದು ವ್ಯಾಪಾರ ವಹಿವಾಟಗಳಲ್ಲಿ ನಿಮಗೆ ಲಾಭ ಸಿಗುವುದು ಶತ್ರುಗಳ ಮುಂದೆ ಮೇಲುಗೈ ಸಾಧಿಸುವುದು ತುಂಬಾ ಮೂಲಗಳಿಂದ ಹಣವು ಹರಿದು ಬರುವುದು ದೀರ್ಘಾವಧಿಯ ಯಶಸ್ಸನ್ನು ಶನಿಯ ನಿಮಗೆ ನೀಡುತ್ತಾನೆ. ಇದೇ ರೀತಿಯ ಯಶಸ್ಸು ನಿಮಗೆ ದೀರ್ಘಾವಧಿಯಲ್ಲಿ ಸಿಗುತ್ತಾ ಹೋಗುತ್ತದೆ.
ಹಾಗೆಯೇ ಇನ್ನೂ ಒಂದು ಗ್ರಹ ನಿಮಗೆ ಒಂದು ವರ್ಷದ ಅವಧಿಯವರೆಗೆ ತುಂಬಾ ಯಶಸ್ಸನ್ನು ತಂದುಕೊಡುತ್ತದೆ. ಮೇಷ ರಾಶಿಯ ಮಟ್ಟಿಗೆ ತುಂಬಾ ಯಶಸ್ಸನ್ನು ತಂದು ಕೊಡುವ ಸಾಮರ್ಥ್ಯ ಈ ಗ್ರಹಕ್ಕಿದೆ. ಬಹಳಷ್ಟು ಕ್ರಾಂತಿಕಾರಿ ಬದಲಾವಣೆಗಳನ್ನು ಈ ಗ್ರಹವು ತಂದುಕೊಡುತ್ತದೆ. ಆ ಗ್ರಹ ಕೊಡುವಂತಹ ಸುಖ ಮತ್ತು ಪರಿವರ್ತನೆಗಳನ್ನು ಬಗ್ಗೆ ಕೊನೆಯಲ್ಲಿ ತಿಳಿದುಕೊಳ್ಳೋಣ. ಮೇ ತಿಂಗಳಲ್ಲಿ ಮೇಷ ರಾಶಿಗೆ ನಡೆಯುವಂತಹ ವಿಶೇಷವಾದ ಘಟನೆಗಳನ್ನು ಹೇಳುವುದಾದರೆ ಬಹಳಷ್ಟು ಮೂಲಗಳಿಂದ ನಿಮಗೆ ಖರ್ಚು ಜಾಸ್ತಿಯಾಗಲಿದೆ.
ಭಯಪಡುವಂತಹ ಅವಶ್ಯಕತೆ ಇಲ್ಲ . ಈ ನಿಮ್ಮ ಖರ್ಚುಗಳನ್ನು ಸರಿದೂಗಿಸಲು ಬಹಳಷ್ಟು ಗ್ರಹಗಳು ಜೊತೆಯಾಗಿರುತ್ತದೆ . ಯಾವ ಯಾವ ರೂಪಗಳಲ್ಲಿ ನಿಮ್ಮಿಂದ ಹಣ ಖರ್ಚಾಗಬಹುದು ಎಂದು ನೋಡುವುದಾದರೆ ನಿಮ್ಮಲ್ಲಿರುವಂತಹ ರಾಹುಗ್ರಹವು ಗ್ರಹದಿಂದ ಹೆಚ್ಚಿಗೆ ಖರ್ಚು ಉಂಟಾಗುತ್ತದೆ . ಅಂದರೆ ನೀವು ಖರೀದಿ ಮಾಡಿ ಮಾರಬೇಕು ಎಂದುಕೊಂಡಿರುವ ವಸ್ತು ದುಪ್ಪಟ್ಟು ಬೆಲೆಯಾಗುವುದು ಯಾವುದಾದರೂ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂದಿದ್ದರೆ,
ಅಲ್ಲಿ ಬಿಕ್ಕಟ್ಟಿನ ವಾತಾವರಣ ಸೃಷ್ಟಿಯಾಗುವುದು ವ್ಯಾಪಾರ ವ್ಯವಹಾರ ಮಾಡುವಂಥವರಿಗೆ ಈ ಅನುಭವ ಜಾಸ್ತಿಯಾಗಿರುತ್ತದೆ. ಒಂದು ದಿನ ಮುಂಚೆಯೇ ಅದನ್ನು ತೆಗೆದುಕೊಂಡಿದ್ದರೆ ನಿಮಗೆ ಕಮ್ಮಿ ದುಡ್ಡಿನಲ್ಲಿ ಆ ವಸ್ತು ನಿಮಗೆ ದೊರಕುತ್ತಿತ್ತು. ಈ ರೀತಿಯ ಪರಿಸ್ಥಿತಿಯು ಬರುತ್ತದೆ. ಸಾಧ್ಯವಾದಷ್ಟು ವಸ್ತುಗಳ ಖರೀದಿಯನ್ನು ಬೇಗನೆ ಮಾಡಿಕೊಳ್ಳುವುದು ಉತ್ತಮವಾಗಿರುತ್ತದೆ. ಲೋಹದ ಮತ್ತು ಅಂದರೆ ಕಬ್ಬಿಣ ತಾಮ್ರದ ವ್ಯಾಪಾರ ಮಾಡುವವ ರಿಗೆ ಒಂದು ವಿಶೇಷವಾದ ಸೂಚನೆ ಇರುತ್ತದೆ .
ವಿಶೇಷವಾಗಿ ಮನೆ ಕಟ್ಟುವವರಿಗೆ ಕಬ್ಬಿಣ ಅವಶ್ಯಕತೆ ಇರುತ್ತದೆ . ಮತ್ತು ತಾಮ್ರದ ಬೆಲೆಗಳಲ್ಲಿಯೂ ಸಹ ಏರಿಕೆ ಉಂಟಾಗುತ್ತದೆ . ಈ ವರ್ಷದಲ್ಲಿ ಯುಗಾದಿಯ ಭವಿಷ್ಯವನ್ನು ಹೇಳುವುದಾದರೆ, ಸಂಕ್ರಾಂತಿ ಪುರುಷ ಮೂರು ಲೋಹಗಳ ಮೇಲೆ ವಿಶೇಷವಾಗಿ ಪ್ರಭಾವವನ್ನು ಉಂಟು ಮಾಡಿದ್ದಾನೆ . ಆ ವಸ್ತುಗಳು ಯಾವುವೆಂದರೆ ಬೆಳ್ಳಿ ತಾಮ್ರ ಮತ್ತು ಕಬ್ಬಿಣ. ಈ ಮೂರು ಲೋಹಗಳು ದುಬಾರಿಯಾಗುವಂತಹ ಸಾಧ್ಯತೆ ಇರುತ್ತದೆ. ಇದು ತಲೆತಲಾಂತರಗಳಿಂದ ನಡೆದು ಬಂದಿರುವಂತಹ ಪದ್ಧತಿ, ಇದು ಇಂತಿಷ್ಟೇ ಹೆಚ್ಚಿಗೆ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಜನರ ಅನುಭವಕ್ಕೆ ಬಂದಿರುತ್ತದೆ ಸಂಕ್ರಾಂತಿ ಪುರುಷ ಯಾವ ಯಾವ ಲೋಹಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾನೋ ಆ ವಸ್ತುಗಳ ಬೆಲೆ ಹೆಚ್ಚಾಗುತ್ತದೆ. ಕಬ್ಬಿಣ ಬೆಳ್ಳಿ ಮತ್ತು ತಾಮ್ರದ ವಸ್ತುಗಳ ಬೆಲೆ ಹೆಚ್ಚಿಗೆ ಆಗುತ್ತದೆ. ಯುಗಾದಿ ಶುರುವಾದಾಗಿನಿಂದಲೇ ಈ ಲೋಹಗಳ ಬೆಲೆ ಹೆಚ್ಚಿಗೆಯಾಗಿದೆ . ಇನ್ನು ಹೆಚ್ಚಿಗೆ ಆಗುವ ಸಾಧ್ಯತೆಯೂ ಸಹ ಇರುತ್ತದೆ .ಒಂದು ವರ್ಷದ ಮಟ್ಟಿಗೆ ವ್ಯಾಪಾರ ವ್ಯವಹಾರ ಮಾಡುವವರು ಸ್ವಲ್ಪ ಬೆಲೆ ಕಮ್ಮಿ ಇದ್ದಾಗಲೇ ಇದಕ್ಕೆ ಬಂಡವಾಳ ಹೂಡಿಕೆ ಮಾಡುವುದು ಒಳ್ಳೆಯದು.
ಪಾತ್ರೆಗಳು ,ದೇವರ ಸಾಮಾಗ್ರಿಗಳು, ಇಂತಹ ವ್ಯಾಪಾರ ಮತ್ತು ವ್ಯವಹಾರ ಮಾಡುವ ವ್ಯಕ್ತಿಗಳು ಬೆಲೆ ಕಡಿಮೆ ಇರುವ ವೇಳೆಯಲ್ಲಿ ಅದನ್ನು ಖರೀದಿ ಮಾಡಿಕೊಂಡು ಬೆಲೆ ಹೆಚ್ಚಿಗೆಯಾದಂತಹ ಸಮಯದಲ್ಲಿ ಅದನ್ನು ಮಾರಾಟ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ನಿಮಗೆ ಲಾಭವೂ ಹೆಚ್ಚಿಗೆ ಆಗುತ್ತದೆ. ಮನೆ ಕಟ್ಟುವ ವ್ಯಕ್ತಿಗಳಿಗೆ ಬೆಳ್ಳಿ ವ್ಯಾಪಾರ ಮಾಡುವಂತಹ ವ್ಯಕ್ತಿಗಳಿಗೆ ಇದು ತುಂಬಾ ಉಪಯುಕ್ತವಾಗಿದೆ. ಶುಕ್ರ ಗ್ರಹವು ವ್ಯಯಸ್ಥಾನದಲ್ಲಿ ಇರುವುದರಿಂದ ಒಳ್ಳೆಯ ಲಾಭಗಳನ್ನು ನಿಮಗೆ ಮೇಷ ರಾಶಿಯವರಿಗೆ ತಂದುಕೊಡುತ್ತದೆ. .
ವ್ಯಾಪಾರ ವ್ಯವಹಾರ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ , ಪ್ರಗತಿ ,ಸುಖ , ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಮನರಂಜನೆ ಪ್ರವಾಸ ಪ್ರಯಾಣ ವಿಹಾರ ಧಾರ್ಮಿಕ ಕ್ಷೇತ್ರಗಳು ಪ್ರೇಕ್ಷಣೀಯ ಸ್ಥಳಗಳು ಇವೆಲ್ಲವೂ ಸಿಗುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಬುಧ ಗ್ರಹವು ವಕ್ರನಾಗಿದ್ದರು , ನೀಚನಾಗಿರುವುದರಿಂದ ಮೇಷ ರಾಶಿಯವರಿಗೆ ವ್ಯಯ ಭಾವದಲ್ಲಿ ಇರುವುದರಿಂದ , ಅದು ಮಿತ್ರನಾದಂತಹ ಶುಕ್ರ ಗ್ರಹದಲ್ಲಿ ಇರುವುದರಿಂದ ಒಳ್ಳೆಯ ಶುಭಫಲಗಳನ್ನು ನಾವು ಬಯಸಬಹುದು. ವಿಶೇಷವಾಗಿ ವ್ಯಾಪಾರಸ್ಥರಿಗೆ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಂಡಿರುವವರಿಗೆ ಇಂಥವರಿಗೆ ಒಳ್ಳೆಯ ಯಶಸ್ಸು ಲಾಭ ತಂದು ಕೊಡುತ್ತದೆ.
ರಾಹು ಗ್ರಹವು ವ್ಯಯಸ್ಥಾನದಲ್ಲಿ ಇರುವುದರಿಂದ ಖರ್ಚು ಹೆಚ್ಚಾಗಿ ಇರುತ್ತದೆ. ಬುಧ ಮತ್ತು ಶುಕ್ರನ ಜೊತೆ ರಾಹು ಕೂಡ ಇರುವುದರಿಂದ ವ್ಯಾಪಾರದಲ್ಲಿ ಯಶಸ್ಸು ಕಂಡರೂ ಸ್ವಲ್ಪ ಮಟ್ಟಿಗೆ ಮೋಸವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ತಿಂಗಳ ಮಟ್ಟಿಗೆ ಖರ್ಚು ಹೆಚ್ಚಿಗೆಯಾದರು ಅದಕ್ಕೆ ಹಣದ ಮೂಲಗಳು ನಿಮಗೆ ದೊರಕುತ್ತದೆ. ಶನಿ ಮತ್ತು ಕುಜ ಗ್ರಹಗಳು ಏಕಾದಶ ಭಾವದಲ್ಲಿ ರುವುದರಿಂದ ಲಾಭವನ್ನು ತಂದು ಕೊಡುತ್ತದೆ. ಹಾಗೆಯೇ ಇದೇ ತಿಂಗಳಲ್ಲಿ ಗುರುಗ್ರಹವು ದ್ವಿತೀಯ ಭಾವಕ್ಕೆ ಹೋಗುತ್ತದೆ .
ಮೇಷದಿಂದ ವೃಷಭ ರಾಶಿಗೆ ಗುರು ಪರಿವರ್ತನೆ ಯಾಗುತ್ತದೆ. ಶನಿಯು ಲಾಭವನ್ನು ತಂದು ಕೊಡುವುದರಿಂದ ಅದಕ್ಕೆ ಪ್ರೋತ್ಸಾಹವಾಗಿ ಗುರುವು ಸಹ ನಿಲ್ಲುತ್ತಾನೆ. ಗುರುವು ಹೆಚ್ಚಾಗಿ ಲಾಭವನ್ನು ನಿಮಗೆ ಕೊಡಲಿದ್ದಾನೆ. ಹಣಕಾಸಿನ ಮಟ್ಟಿಗೆ ಧನಸ್ಥಾನವು ಬಹಳ ಉಜ್ವಲವಾಗಿದೆ. ನೂರಕ್ಕೆ 70 ರಿಂದ 80ರಷ್ಟು ಜನಗಳಿಗೆ ಈ ಗೋಚಾರ ಫಲವು ನಿಜವಾಗುತ್ತದೆ. ಆತಂಕ ಪಡುವ ಅಗತ್ಯವಿಲ್ಲ . 2024 ನಿಮಗೆ ಒಳ್ಳೆಯ ಉಜ್ವಲ ಭವಿಷ್ಯವಿದೆ.
ಕೇತು ಗ್ರಹವು ಷಷ್ಟ ಭಾಗದಲ್ಲಿ ಇರುವುದರಿಂದ ಶತ್ರುನಾಶವಾಗುತ್ತದೆ . ಆದಾಯ ವೃದ್ಧಿಯಾಗುತ್ತದೆ .ಸಣ್ಣ ಪುಟ್ಟ ಬದಲಾವಣೆಯಾಗುತ್ತದೆ . ಅಂದರೆ ನಿಮ್ಮ ನಿಮ್ಮ ರಾಶಿಯಲ್ಲಿ ಈ. ತಿಂಗಳಿನಲ್ಲಿ ರವಿ ಇರುತ್ತಾನೆ . ಅನುಕೂಲಕರ ವಾತಾವರಣವನ್ನು ಒದಗಿಸುವುದಿಲ್ಲ. ವಿಶೇಷವಾಗಿ ಸರ್ಕಾರಿ ಕೆಲಸ ಮಾಡುವವರು ಗುತ್ತಿಗೆದಾರರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ರಿಯಲ್ ಎಸ್ಟೇಟ್ ವ್ಯಾಪಾರ ವ್ಯವಹಾರ ಮಾಡುವವರಿಗೆ ಒಳ್ಳೆಯ ಉಜ್ವಲ ಭವಿಷ್ಯವಿದೆ . ಕೃಷಿಕರಿಗೆ ಶನಿ ಗ್ರಹದ ಆಶೀರ್ವಾದವಿದೆ. ನಿಮ್ಮ ಜೀವನದಲ್ಲಿ ಮಹತ್ವವಾದ ಬದಲಾವಣೆಗಳು ಉಂಟಾಗಲಿದೆ.