ಗಣೇಶ ಚೌತಿ ದಿನ ಚಂದ್ರನನ್ನು ಯಾಕೆ ನೋಡಬಾರದು ಗೊತ್ತಾ?

0

ಗಣೇಶ ಚತುರ್ಥಿಯಂದು ಚಂದ್ರನನ್ನು ಏಕೆ ನೋಡಬಾರದು ಗೊತ್ತಾ ಶಿವನ ಹಾಗೂ ಪಾರ್ವತಿಯ ಪುತ್ರನಾದ ಗಣೇಶನಿಗೆ ಸಿಹಿ ತಿಂಡಿಗಳ ದೌರ್ಬಲ್ಯ ಇತ್ತು. ಹಿಂದೆ ಒಬ್ಬ ಭಕ್ತ ತುಂಬಾ ಸಿಹಿ ತಿಂಡಿಗಳನ್ನು ಮಾಡಿ ಗಣೇಶನಿಗೆ ಕೊಟ್ಟಾಗ ಗಣೇಶ ಎಲ್ಲಾ ತಿಂಡಿಗಳನ್ನು ತಿನ್ನುತ್ತಾ ಇಡೀ ದಿನ ಅಲ್ಲಿ ಕಳೆದ ರಾತ್ರಿಯಾದ ಮೇಲೆ ಉಳಿದಂತಹ ತಿಂಡಿಯನ್ನು ತೆಗೆದುಕೊಂಡು ತೆಗೆದುಕೊಂಡು ನಿಧಾನವಾಗಿ ಮನೆ ಕಡೆ ಹೊರಟ ಆಗಲೇ ತುಂಬಾ ಸಿಹಿ ತಿಂಡಿ ತಿಂದ ಗಣೇಶನ ಹೊಟ್ಟೆ ತುಂಬಿತ್ತು

ಈ ವೇಳೆ ನಿಧಾನವಾಗಿ ನಡೆದು ಹೋಗುತ್ತಿದ್ದ ಗಣೇಶ ಬೀಳುತ್ತಾನೆ ಆಗ ಎಲ್ಲಾ ತಿಂಡಿಗಳು ಕೆಳಗೆ ಚೆಲ್ಲಿ ಹೋಗಿದ್ದಲ್ಲದೆ ಗಣೇಶನ ಬಟ್ಟೆ ಕೂಡ ಹರಿದು ಹೋಗಿರುತ್ತದೆ ಆಗ ಗಣೇಶನಿಗೆ ಮುಜುಗರವಾಗುತ್ತದೆ ನಿಧಾನವಾಗಿ ಮೇಲಿದ್ದು ಚೆಲ್ಲಾಪಿಲ್ಲಿಯಾದ ಸಿಹಿ ತಿಂಡಿಗಳನ್ನು ಮತ್ತೆ ಕಟ್ಟಿಕೊಳ್ಳುತ್ತಾನೆ ಗಣೇಶ ಈ ಘಟನೆಯನ್ನು ಯಾರು ನೋಡಿಲ್ಲವೆಂದು ಸಮಾಧಾನ ಪಟ್ಟಿಕೊಂಡಿರುತ್ತಾನೆ ಆದರೆ ಚಂದ್ರದೇವ

ಈ ಎಲ್ಲಾ ಘಟನೆಯನ್ನು ನೋಡುತ್ತಾನೆ ಆ ಕಾಲದಲ್ಲಿ ಚಂದ್ರದೇವ ಯಾವಾಗಲೂ ಪೂರ್ಣ ಚಂದ್ರನ ರೂಪದಲ್ಲಿ ಇರುತ್ತಿದ್ದನಂತೆ ಚಂದ್ರ ಹೀಗೆ ಬಿದ್ದ ಗಣೇಶನನ್ನು ನೋಡಿ ಬಿದ್ದು ಬಿದ್ದು ನಗುತ್ತಾನಂತೆ ಚಂದ್ರದೇವ ತನ್ನನ್ನು ನೋಡಿ ನಗುತಿದ್ದನ್ನು ಕಂಡು ಗಣೇಶನಿಗೆ ಕೋಪ ಬರುತ್ತದೆ. ಚಂದ್ರನಗೊದನ್ನು ನಿಲ್ಲಿಸಿದ ಕೂಡಲೇ ಗಣೇಶ ಕೋಪದಿಂದ ಚಂದ್ರ ಎಂದು ಕೂಗಿದನಂತೆ ನಿನಗೆ ನೀನು ತುಂಬಾ ಸುಂದರವಾಗಿದೆಯಾ ಎಂದು ಅಹಂಕಾರ ಇನ್ನು ಮುಂದೆ ನೀನು ಆಕಾಶದಿಂದ ಮರೆಯಾಗಿ ಹೋಗ್ತಿಯ ಎಂದು ಗಣೇಶ ಶಾಪವನ್ನು ಕೊಡುತ್ತಾನಂತೆ

ಗಣೇಶನ ಶಾಪಕ್ಕೆ ಹೆದರಿದ ಚಂದ್ರ ದಯವಿಟ್ಟು ಆ ರೀತಿ ಮಾಡಬೇಡ ನೀನು ಈ ರೀತಿ ಶಾಪ ಕೊಟ್ಟರೆ ನನ್ನ ಸೌಂದರ್ಯ ಇದ್ದು ಏನು ಪ್ರಯೋಜನವಿಲ್ಲ ಅದನ್ನು ಯಾರು ನೋಡದಂತಾಗುತ್ತದೆ ಎಂದು ಬೇಡಿಕೊಳ್ಳುತ್ತಾನೆ. ಚಂದ್ರನ ಅಹಂಕಾರ ಕಡಿಮೆಯಾಗಿದ್ದನ್ನು ಕಂಡ ಗಣೇಶ ತನ್ನ ಸಿಟ್ಟನ್ನು ಕಡಿಮೆ ಮಾಡಿಕೊಂಡು ಮುಗುಳ್ನಗುತ್ತಾನೆ ಚಂದ್ರ ನಾನು ನಿನಗೆ ಕೊಟ್ಟ ಶಾಪವನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ ಆದರೆ ಅದನ್ನು ಕಡಿಮೆ ಮಾಡಬಹುದು ಎಂದು ಹೇಳುತ್ತಾನೆ

ಆಗಿನಿಂದ ಚಂದ್ರ ಅಮಾವಾಸ್ಯೆ ದಿನಕ್ಕ ಕಾಣದೆ ಪ್ರತಿ 15 ದಿನಕ್ಕೊಮ್ಮೆ ಪೂರ್ಣ ಚಂದ್ರನಾಗಿ ಗೋಚರಿಸುತ್ತಾನೆ. ಈ ಹುಣ್ಣಿಮೆ ಅಮಾವಾಸ್ಯೆಗಳು ಬಂದಿದ್ದೆ ಗಣೇಶನ ಶಾಪದಿಂದ ಎಂದು ಹೇಳಲಾಗುತ್ತದೆ. ಚಂದ್ರ ಗಣೇಶನಿಂದ ಶಾಪವನ್ನು ಹೊಂದಿದವ ಆದ್ದರಿಂದ ಗಣೇಶ ಚತುರ್ಥಿ ಅಂದು ಚಂದ್ರನನ್ನು ನೋಡಿದರೆ ಪಾಪ ತಟ್ಟುತ್ತದೆ ದೋಷ ತಟ್ಟುತ್ತದೆ ಎಂದು ಹೇಳಲಾಗುತ್ತದೆ ಇದರಿಂದ ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದೆಂದು ಹಿರಿಯರು ಹೇಳುತ್ತಾರೆ

Leave A Reply

Your email address will not be published.