ನಾವು ಈ ಲೇಖನದಲ್ಲಿ ನಮ್ಮ ಹಿರಿಯರು ನಂಬಿಕೊಂಡು ಬಂದ ವಿಶೇಷ ಸಲಹೆಗಳು ಯಾವುವು ಎಂಬುದನ್ನು ನೋಡೋಣ. ನಮ್ಮ ಹಿರಿಯರು ನಂಬಿಕೊಂಡು ಬಂದ ವಿಶೇಷ ಸಲಹೆಗಳು ಯಾವವು ಎಂಬುದನ್ನು ಈ ಕೆಳಕಂಡಂತೆ ನೋಡೋಣ.
1 ನಮ್ಮ ಹಿರಿಯರು ನಂಬಿಕೊಂಡು ಬಂದ ದೈವ ದೇವರುಗಳಿಗೆ ಗೌರವಿಸಬೇಕು. 2 ಮನೆಯಲ್ಲಿ ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಬೇಡಿ. 3 ಮನೆಯಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚುವುದನ್ನು ಮರೆಯದಿರಿ . 4 ಊಟದ ನಂತರ ಎಂಜಲು ತಟ್ಟೆಯನ್ನು ತುಂಬಾ ಹೊತ್ತು ತೊಳೆಯದೆ ಅಲ್ಲೇ ಇಡಬಾರದು.
5 ನೀವು ಮಲಗುವ ಕೋಣೆಯಲ್ಲಿ ಕನ್ನಡಿಯನ್ನು ಇಟ್ಟುಕೊಳ್ಳಬಾರದು. 6 ವಾರದಲ್ಲಿ ಎರಡು ಬಾರಿಯಾದರೂ ಹತ್ತಿರದ ದೇವಸ್ಥಾನಕ್ಕೆ ಹೋಗಿ ಬರುವುದು ಉತ್ತಮ. 7 ಹೊಡೆದಿರುವ ಯಾವುದೇ ವಸ್ತುಗಳನ್ನು ಮನೆಯಲ್ಲಿ ಇರಿಸಿ ಕೊಳ್ಳಬಾರದು.
8 ಮನೆ ಯಾವುದೇ ಜಾಗದಲ್ಲಿ ನಲ್ಲಿ ಸೋರುತ್ತಿದ್ದರೆ ಅದನ್ನು ಸರಿಪಡಿಸಿಕೊಳ್ಳಿ. 9 ಮನೆಯಲ್ಲಿ ಗಡಿಯಾರ ಕೆಟ್ಟು ನಿಂತಿದ್ದರೆ ಅದನ್ನು ಕೂಡಲೆ ಸರಿ ಪಡಿಸಿಕೊಳ್ಳುವುದು ಒಳ್ಳೆಯದು.
10 ಸಂಜೆ ವೇಳೆ ಅಂದರೆ ಸೂರ್ಯಾಸ್ತದ ನಂತರ ಕಸವನ್ನು ಗುಡಿಸ ಬಾರದು ಮತ್ತು ಗುಡಿ ಸಿದ ಕಸವನ್ನು ಹೊರಗೆ ಹಾಕಬಾರದು. 11 ಜೇನುಗೂಡು ಮನೆಯಲ್ಲಿ ಕಟ್ಟಬಾರದು, ಆದಷ್ಟು ಯಾವುದೇ ಜೀವಿಯು ಮನೆಯಲ್ಲಿ ಗೂಡು ಕಟ್ಟ ದಂತೆ ನೋಡಿಕೊಳ್ಳಿ.
12 ದೇವರ ಕೋಣೆಯ ಮೇಲೆ ಅತಿಯಾದ ಆಭರಣ ಅಥವಾ ಭಾರವನ್ನು ಇಡಬಾರದು. 13 ಮನೆಯಲ್ಲಿ ಕರ್ಪೂರ ಹಾಗೂ ಧೂಪವನ್ನು ಹಚ್ಚುವುದು ಒಳ್ಳೆಯದು. 14 ಮನೆಯಲ್ಲಿ ಬಟ್ಟೆ ಹಾಸಿಗೆ ಗಳನ್ನು ತೊಳೆದು ಮಡಚಿ ಶುಚಿಯಾಗಿ ಇಟ್ಟುಕೊಳ್ಳಿ.
15 ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ಔಷಧಗಳನ್ನು ಇಡಬಾರದು. ಇದು ನಕರಾತ್ಮಕ ಶಕ್ತಿಯನ್ನು ಎಳೆದು ತರುತ್ತದೆ . ಹೀಗೆ ನಮ್ಮ ಹಿರಿಯರು ನಂಬಿಕೊಂಡು ಬಂದಿರುವ ಒಂದು ಒಳ್ಳೆಯ ಅಭ್ಯಾಸಗಳನ್ನು ನಾವು ಮುಂದುವರಿಸಿಕೊಂಡು ಹೋಗೋಣ ಎಂದು ಹೇಳಲಾಗಿದೆ.