ಮೀನ ರಾಶಿ ಡಿಸೆಂಬರ್ ಮಾಸ ಭವಿಷ್ಯ 

ಡಿಸೆಂಬರ್ ತಿಂಗಳಿನ ಮೀನಾರಾಶಿಯ ಮಾಸ ಭವಿಷ್ಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ವಸ್ತುಗಳನ್ನು ಇಟ್ಟಲೇ ಇರೋದೇ ಇಲ್ಲ, ಬೇಕು ಎಂದಾಗ ನಮ್ಮ ಕೈಗೆ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯು ಈ ತಿಂಗಳಿನ ಮಧ್ಯಭಾಗದವರೆಗೂ ಇರುತ್ತದೆ. ಮಾನಸಿಕ ಗೊಂದಲ ಮತ್ತು ಉದ್ವೇಗವಿರುತ್ತದೆ. ಕೆಲವರಿಗೆ ಕ್ರಿಕೆಟ್ ಗೀಳು, ಬೆಟ್ಟಿಂಗ್ ಹುಚ್ಚು ಕೂಡ ಇರುತ್ತದೆ. ಸ್ಕೋರ್ ನೋಡಿ, ಮ್ಯಾಚ್ ನೋಡಿ ಖುಷಿ ಪಡುವ ಗುಂಪು ಒಂದು ಕಡೆ ಇನ್ನೊಂದು ಜೂಜಾಟದ ಗುಂಪು.

ಬೇರೆಯವರು ನಿಮ್ಮನ್ನು ಯಾಮಾರಿಸಲು ನೂರಾರು ದಾರಿಗಳು ಇರುತ್ತವೆ. ಮೀನಾರಾಶಿಯವರಲ್ಲಿ ಗೀಳನ್ನು ಅಂಟಿಸಿಕೊಂಡಿರುವವರಿಗೆ ಈ ತಿಂಗಳು ಬಹಳ ಕಷ್ಟಕರವಾಗಿದೆ ಮತ್ತು ಒಳ್ಳೆಯ ವಿಚಾರಗಳ ಕಡೆ ಹೋಗುವುದು ಈ ಮಾಸದಲ್ಲಿ ಬಹಳ ಕಷ್ಟವಾಗಿದೆ. ನಿಮಗೆ ಈ ತಿಂಗಳ ದ್ವಿತೀಯದಲ್ಲಿ ಗುರುವಿನ ರಕ್ಷಣೆ ಇದೆ, ಹಾಗೆಯೇ ರಾಹುವಿನಿಂದ ತಪ್ಪಿಸಿಕೊಳ್ಳುವ ಅವಶ್ಯಕತೆಯೂ ಇದೆ.

ಮೊದಲನೇ ಹಂತದ ಸಾಡೇಸಾತಿ ಇರುವುದರಿಂದ ಮೋಸಕ್ಕೆ ಒಳಗಾಗುತ್ತೀರ ಮತ್ತು ಹಣ ಕೀಳುವಂತಹ ಜನರಿಗೆ ಸಿಕ್ಕಿಹಾಕಿಕೊಳ್ಳುವ ಸಂದರ್ಭ ಎದುರಾಗುತ್ತದೆ ಆದ್ದರಿಂದ ಎಚ್ಚರಿಕೆಯಿಂದ ಇರಬೇಕು. ಇನ್ನೊಂದು ಕಡೆ ಜನ್ಮ ಶನಿಯ ಅರ್ಧ ಜನ್ಮರಾಹುವು ಇದ್ದ ಹಾಗೇ ಆದರೇ ದೊಡ್ಡ ತೊಂದರೆ ಏನು ಬರುವುದಿಲ್ಲ. ಸ್ವಲ್ಪ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ.

ದುಡ್ಡಿನ ವಿಚಾರದಲ್ಲಿ ಬಹಳ ಎಚ್ಚರಿಕೆ ಇರಬೇಕು. ಗುರುದೇವರ ಅನುಗ್ರಹ ಒಂದುವರೆ ವರ್ಷದ ವರೆಗೂ ನಿಮ್ಮ ಜೊತೆಯಲ್ಲೇ ಇರುತ್ತದೆ. ಈ ಮಾಸ ವಿದ್ಯಾರ್ಥಿಗಳಿಗೆ ಬಹಳ ಚೆನ್ನಾಗಿದೆ ಗುರುವಿನ ಅನುಗ್ರಹ ಮತ್ತು ಬುಧನ ಅನುಗ್ರಹವಿದೆ. ಧನುರ್ ರಾಶಿಯಲ್ಲಿ ಬುಧನು 28ನೇ ತಾರೀಖಿನವರೆಗೂ ಇರುತ್ತಾನೆ. ಶಿಕ್ಷಣ ಕ್ಷೇತ್ರ ಮತ್ತು ಇನ್ನಿತರೇ ಕ್ಷೇತ್ರಕ್ಕೂ ಚೆನ್ನಾಗಿಯೇ ಇದೆ.

ವಿಶೇಷವಾಗಿ 16ನೇ ತಾರೀಖಿನ ನಂತರ ರವಿ ಧನುರ್ ರಾಶಿಗೆ ಬರುತ್ತಾನೆ. 10ನೇ ಭಾವದಲ್ಲಿ ರವಿ ಇರುವಾಗ ಬಹಳ ಮಹತ್ವದ ಕೆಲಸ ಕಾರ್ಯಗಳು ಉದಾಹರಣೆಗೆ ಕೆಲಸಕ್ಕೆ ಅಪ್ಲೈ ಮಾಡಿರುವುದು, ಯಾವುದೋ ಪ್ರಾಜೆಕ್ಟ್ ಗೆ ಕೈ ಹಾಕಿರುವುದು, ಸರ್ಕಾರಿ ಕೆಲಸ ಮಾಡುವವರಿಗೆ ಪ್ರಗತಿ ಇದೆ. ನೀವು ಇಷ್ಟ ಪಡುವ ಕೆಲಸಗಳಲ್ಲಿ ಏಳಿಗೆ ಕಾಣುತ್ತದೆ ಮತ್ತು ಪ್ರಯಾಣ ಮಾಡುವ ಯೋಗವೂ ಇದೆ.

ನಿಮಗೆ ಬುಧ ಗ್ರಹವು ನಿಮ್ಮ ದಶಭಾವದಲ್ಲಿ ಇರುವುದರಿಂದ ಅದ್ಭುತ ಪ್ರಗತಿಯಾಗುತ್ತದೆ. ವಿಶೇಷವಾಗಿ ಖಾಸಗಿ ಕೆಲಸ ಮಾಡುವವರಿಗೆ, ಬ್ಯುಜಿನೆಸ್ ಮಾಡುವವರಿಗೆ ಸಕ್ಸಸ್ ಮತ್ತು ಪ್ರಖ್ಯಾತಿ ಸಿಗುತ್ತದೆ ಇದರಿಂದ ಸಂತೋಷವು ಉಂಟಾಗುತ್ತದೆ. 16ನೇ ತಾರೀಖಿನ ಒಳಗೆ ಅಂತಹ ಸಕ್ಸಸ್ ಸಿಗುವುದಿಲ್ಲ 16ನೇ ತಾರೀಖಿನ ನಂತರ ಹೊಸ ಕಳೆ ಉಂಟಾಗುತ್ತದೆ. ಶ್ರಮಪಟ್ಟು ಕೆಲಸ ಮಾಡುವವರಿಗೆ ಒಳ್ಳೆಯ ನಿರೀಕ್ಷೆಯ ಲಾಭ ಉಂಟಾಗುತ್ತದೆ.

ಕುಜ ಗ್ರಹದ ವ್ಯವಹಾರಗಳು ಅಷ್ಟೊಂದು ಸುಲಭವಾಗಿಲ್ಲ ಸ್ವಲ್ಪ ತೊಂದರೆ ಮಾಡುತ್ತದೆ. ಹೆವಿ ಇಂಜಿನಿಯರಿಂಗ್, ಬ್ಯುಜಿನೆಸ್, ಹಾರ್ಡ್ವೇರ್, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿರುವವರು ಎಚ್ಚರಿಕೆ ವಹಿಸಬೇಕಾಗುತ್ತದೆ. ಹೂಡಿಕೆ ಮಾಡುವವರು ಯೋಚನೆ ಮಾಡಿ ವ್ಯವಹರಿಸಬೇಕಾಗುತ್ತದೆ. ಮೀನಾರಾಶಿಯವರು ಹೋಲಿಕೆ ಮಾಡುವ ಗುಣವನ್ನು ಬಿಡಬೇಕು. ತೃಪ್ತಿ, ಸಮಾಧಾನವನ್ನು ಇಟ್ಟುಕೊಳ್ಳಬೇಕು. ಅದು ನಿಮಗೆ ಒಳ್ಳೆಯ ಪ್ರತಿಫಲವನ್ನು ಕೊಡುತ್ತದೆ.

Leave a Comment