ಕೃತ್ತಿಕಾ ಸ್ತ್ರೀ ನಕ್ಷತ್ರ ರಹಸ್ಯ

0

ಈ ಲೇಖನದಲ್ಲಿ ಕೃತ್ತಿಕಾ ನಕ್ಷತ್ರದ ಬಗ್ಗೆ ತಿಳಿದುಕೊಳ್ಳೋಣ. ಶಿವ ಪಾರ್ವತಿಯ ಮಗ ಕಾರ್ತೀಕೇಯನನ್ನು ಸಾಕಿ ಸಲುಹಿದ ಕೃತಿಕೆಯರ ನಕ್ಷತ್ರ ಈ ಕೃತ್ತಿಕಾ ನಕ್ಷತ್ರವಾಗಿದೆ. ಕೃತ್ತಿಕಾ ಎಂದರೆ ಜ್ವಾಲೆ, ಬೆಂಕಿ ಎಂಬ ಅರ್ಥವಿದೆ. ಹೆಸರಿಗೆ ತಕ್ಕಹಾಗೇ ಇವರದು ಉರಿಯುವ ಸ್ವಭಾವ. ಇವರಿಗೆ ಶಕ್ತಿಯೂ ಇದೆ ಯುಕ್ತಿಯೂ ಇದೆ. ಒಂದು ಸಲ ಕೆಂಡದಾಗೇ ಸುಟ್ಟರೂ ಮತ್ತೊಂದು ಸಲ ತಂಪಾದ ಬೆಳದಿಂಗಾಳೇ ಆಗುವ ಸ್ವಭಾವ ಇವರದು. ಕೃತ್ತಿಕಾ ನಕ್ಷತ್ರದ ಹೆಣ್ಣು ಮಕ್ಕಳ ಬಗ್ಗೆ ತಿಳಿದುಕೊಳ್ಳೋಣ.

ಬೆಂಕಿಯಂತಹ ಕೃತ್ತಿಕಾ ನಕ್ಷತ್ರದಲ್ಲಿ ಹುಟ್ಟಿದ ಸ್ತ್ರೀಯರು ರತ್ನದಂತೆ ಹೊಳೆಯಲು ಕಾರಣಗಳೇನು ಗೊತ್ತಾ? ಮೇಷರಾಶಿಯ 1ನೇ ಪಾದದಲ್ಲಿ, ವೃಷಭರಾಶಿಯ 2,3, ಮತ್ತು 4ನೇ ಪಾದದಲ್ಲಿ ಹುಟ್ಟಿದಂತಹ ಹೆಣ್ಣು ಮಕ್ಕಳು ಕೃತ್ತಿಕಾ ನಕ್ಷತ್ರಕ್ಕೆ ಸೇರುತ್ತಾರೆ. ಕೃತಿಕೆಯರು ನೋಡಲು ಮಧ್ಯಮ ಎತ್ತರ, ಸುಂದರವಾಗಿ ಇರುತ್ತಾರೆ. ದೇಹದಲ್ಲಿ ಎಲ್ಲೂ ಊನವಾಗಿರುವುದು ಅಪರೂಪ,

ಸುಂದರವಾದ ಕಣ್ಣುಗಳು, ಎದ್ದು ಕಾಣುವ ಮೂಗು ಅಥವಾ ದಪ್ಪ ಹಾಗೂ ಅಗಲವಾದ ಕುತ್ತಿಗೆ ಮತ್ತು ಭುಜಗಳು ಧೈರ್ಯವಾಗಿ ಮಾತನಾಡುವುದೇ ಇವರ ಯಶಸ್ಸಿಗೆ ಕಾರಣ ಎಂದು ಹೇಳಬಹುದು. ಹೊಸ ಹೊಸ ವಿಚಾರಗಳನ್ನು ತಿಳಿಯಲು ಯಾವಾಗಲೂ ಮುಂದೆ ಇರುತ್ತಾರೆ. ಷ್ಯಾಷನ್ಸ್, ಸ್ಪೋರ್ಟ್ಸ್, ರಾಜಕೀಯ ವಿಷಯಗಳಲ್ಲಿ ಇವರ ದೃಷ್ಠಿ ಇರುತ್ತದೆ. ಮಾಡುವ ಕೆಲಸದಲ್ಲಿ ಪರ್ಫೆಕ್ಟ್ ಇರುತ್ತದೆ. ನೇರ ನುಡಿ ಇವರದಾಗಿರುತ್ತದೆ. ಇವರಿಗೆ ಭವಿಷ್ಯದ ಬಗ್ಗೆ ಚಿಂತೆ ಇಲ್ಲ,

ಮನಸ್ಸು ಏನು ಹೇಳುತ್ತದೆ ಅದನ್ನೇ ಮಾಡುವವರು. ಮುಚ್ಚುಮರೆ ಮಾಡುವ ಸ್ವಭಾವ ಇವರದ್ದಲ್ಲ, ಏನು ಅನಿಸುತ್ತದೆಯೋ ಅದನ್ನ ನೇರವಾಗಿ ಹೇಳಿಬಿಡುತ್ತಾರೆ. ಸುತ್ತಮತ್ತ ಒಳ್ಳೆಯ ವಾತಾವರಣವಿರಬೇಕು, ಕಾರಣಗಳನ್ನು ಹೇಳುವುದು ಇವರಿಗೆ ಒಗ್ಗದ ವಿಚಾರ. ಇವರಿಗೆ ಎಮೋಷನ್ಸ್ ಸ್ವಲ್ಪ ಕಡಿಮೆ ಎಂದು ಹೇಳಬಹುದು. ಯಾರಾನ್ನಾದರೂ ಒಂದು ಸಲ ನಂಬಿದರೇ ಅವರ ಬಗ್ಗೆ ನೆಗೆಟಿವ್ ವಿಚಾರ ಕೇಳುವುದಕ್ಕೆ ಇಷ್ಟಪಡುವುದಿಲ್ಲ. ಕೃತ್ತಿಕಾ ನಕ್ಷತ್ರದವರ ಸ್ವ

ಭಾವ ತ್ಯಾಗ ಮಾಡುವ ಗುಣ ಇವರದು ಏನೇ ಕೇಳಿದರೆ ಪ್ರತಿಫಲಾಪೇಕ್ಷೆ ಇಲ್ಲದೇ ಕೊಟ್ಟುಬಿಡುತ್ತಾರೆ. ಇವರು ಆಧ್ಯಾತ್ಮಿಕವಾಗಿ ಹೇಳುವುದಾರೇ ದೇವರು ಎಂದರೆ ಭಕ್ತಿ ಹೆಚ್ಚಾಗಿ ಇರುತ್ತದೆ. ಇವರು ಆಧುನಿಕ ಪ್ರಪಂಚಕ್ಕೆ ಮತ್ತು ತಮ್ಮ ಮನೆಯ ಸಂಪ್ರದಾಯ ಎರಡನ್ನೂ ಮ್ಯಾನೇಜ್ ಮಾಡುವ ಸಾಮರ್ಥ್ಯ ಇವರಿಗೆ ಇರುತ್ತದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತಾರೆ ಮತ್ತು ಚೆನ್ನಾಗಿ ಓದಿಕೊಂಡಿರುವ ಹೆಣ್ಣುಮಕ್ಕಳು ಕೃತ್ತಿಕಾ ನಕ್ಷತ್ರದವರಾಗಿರುತ್ತಾರೆ. ತಮಗೆ ಉಪಯೋಗಕ್ಕೆ ಬರುವ ವಿಚಾರವನ್ನು ಮಾತ್ರ ತಮ್ಮ ಕಿವಿಯಲ್ಲಿ ಗಟ್ಟಿಯಾಗಿ ಇಟ್ಟುಕೊಳ್ಳುತ್ತಾರೆ.

ಉಪಯೋಗಕ್ಕೆ ಬಾರದ ವಿಚಾರಗಳನ್ನು ಮರೆತುಬಿಡುತ್ತಾರೆ. ಈ ಮಹಿಳೆಯರ ಕಿವಿಯು ತುಂಬಾ ಸೂಕ್ಷ್ಮ ಮತ್ತು ಇವರ ಹತ್ತಿರ ಏನು ಗುಟ್ಟು ಮಾಡಬೇಡಿ, ಇವರು ಮೊದಲೇ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಬೇರೆಯವರ ರಹಸ್ಯವನ್ನು ಬೇಧಿಸುವ ಜನರಾಗಿರುತ್ತಾರೆ. ವಾದ ಮಾಡಿದರೇ ಇವರ ವಿರುದ್ಧ ಗೆಲ್ಲಲು ಎರಡೂ ಗುಂಡಿಗೆನೇ ಬೇಕು. ಪ್ರೀತಿ ಮತ್ತು ಕಾಳಜಿ ಗುಣ ಇವರಲ್ಲಿ ಹೆಚ್ಚು ಇರುತ್ತದೆ.

ಮದುವೆಗೆ ಮುಂಚೆ ತಮಗೆ ಹೇಗೆ ಬೇಕೋ ಹಾಗೇ ಬಿಂದಾಸ್ ಆಗಿ ಓಡಾಡಿಕೊಂಡಿರುವ ವ್ಯಕ್ತಿಗಳು. ತಂದೆ ತಾಯಿಗಳ ಮೇಲೆ ಅಪಾರ ಪ್ರೀತಿ ಇರುವುದರಿಂದ ಅವರನ್ನು ಚೆನ್ನಾಗಿ ನೋಡಿಕೊಳ್ಳಲು ಎಂಥಾ ಕಷ್ಟ ಪಡಲು ತಯಾರು ಇರುತ್ತಾರೆ. ಸಹೋದರ, ಸಹೋದರಿಯರು ಇದ್ದರೇ ಅವರ ಕೆರಿಯರ್ ಅನ್ನು ಬ್ಯುಲ್ಡ್ ಮಾಡುವುದರಲ್ಲಿ ಇವರ ಸಮಯ ಕಳೆದು ಹೋಗುತ್ತದೆಂದು ಹೇಳಬಹುದು.

ಇವರಿಗೆ 30 ವರ್ಷಕ್ಕಿಂತ ಬೇಗ ಮದುವೆ ಆಗಲ್ಲ, ಜೀವನವನ್ನು ಎಂಜಾಯ್ ಮಾಡಿಕೊಂಡು ಮದುವೆಯಾಗುವಂತಹವರು. ಆದರೇ ಮದುವೆಯ ಸಮಯದಲ್ಲಿ ಅಡ್ಡಿಆತಂಕಗಳು ಉಂಟಾಗುವ ಭಯ ಹೆಚ್ಚಿನವರಿಗೆ ಇರುತ್ತದೆ ಕಾರಣ ಇವರು ಉರಿಯುವ ಕೋಪದ ಸ್ವಭಾವ ಆಗಿರುವುದರಿಂದ ಹೆಚ್ಚು ಕಡಿಮೆ ಮಾತನಾಡಿಕೊಂಡು ಸಂಬಂಧ ಕೈ ತಪ್ಪಿ ಹೋಗುವ ಸಂಭವವಿರುತ್ತದೆ.

ಇವರಿಗೆ ಮಕ್ಕಳನ್ನು ಹೇಗೆ ಬೆಳೆಸಬೇಕು ಮತ್ತು ಯಾವ ರೀತಿಯ ಜವಾಬ್ದಾರಿಯನ್ನ ಕಲಿಸಬೇಕೆಂಬುದು ಗೊತ್ತು. ಒಳ್ಳೆಯ ಪೇರೆಂಟ್ಸ್ ಆಗುತ್ತಾರೆ. ಕೃತ್ತಿಕಾ ನಕ್ಷತ್ರದವರು ಯಾರಿಗಾದರೂ ಮಾತು ಕೊಟ್ಟರೇ ಅದನ್ನು ಮರೆಯುವುದಿಲ್ಲ. ಕೃತ್ತಿಕಾ ನಕ್ಷತ್ರದವರ ವೀಕ್ ನೆಸ್ ಕೋಪ. ಆ ಸಮಯದಲ್ಲಂತೂ ಯಾರೂ ಕೂಡ ಇವರ ಜೊತೆ ಮಾತನಾಡದೇ ಸುಮ್ಮನಿರುವುದು ಒಳ್ಳೆಯದು. ಸ್ವಲ್ಪ ಹೊತ್ತು ಆದ ನಂತರ ಅವರೇ ಕೂಲ್ ಆಗಿ ಬಿಡುತ್ತಾರೆ. ಅಹಂಕಾರ ಮತ್ತು ಜಂಭ ಪಡುವುದನ್ನ ಮಾಡದೇ ಇದ್ದರೇ ಒಳ್ಳೆಯ ವ್ಯಕ್ತಿತ್ವವುಳ್ಳವರು ನೀವೇ ಆಗಿರುತ್ತೀರಿ.

Leave A Reply

Your email address will not be published.