40 ಸ್ವಪ್ನ ಫಲಗಳನ್ನು ತಿಳಿದುಕೊಳ್ಳೋಣ.

0

ಸಂಕ್ಷಿಪ್ತ ಸ್ವಪ್ನ ಫಲದರ್ಶನ ಮಾಲಿಕೆಯ ಈ ಮೊದಲ ಕಂತಿನಲ್ಲಿ 40 ಸ್ವಪ್ನ ಫಲಗಳನ್ನು ತಿಳಿದುಕೊಳ್ಳೋಣ. ಕನಸಿನಲ್ಲಿ ಉದಯಿಸುವ ಸೂರ್ಯನ ದರ್ಶನವಾದರೆ ನಿಮ್ಮ ಜೀವನದಲ್ಲಿ ಮಹತ್ವದ ಪಾತ್ರವಹಿಸುವ ವ್ಯಕ್ತಿಗಳ ಅಥವಾ ಅಧಿಕಾರಿಗಳ ಭೇಟಿ. ಬೆಳ್ಳಿ ಬಂಗಾರ ದಾನ ನೀಡಿದರೆ ಶುಭ.

ಬೆಳ್ಳಿ ಬಂಗಾರ ಬೇರೆಯವರಿಂದ ಪಡೆದರೆ ಅಶುಭ. ಹಾನಿಗೊಳಗಾಗುವ ಸೂಚನೆ. ಹೂಗಳನ್ನು ನೋಡಿದರೆ ಶುಭ. ಹೂಗಳ ಸೂವಾಸನೆಯನ್ನು ಅನುಭವಿಸುತ್ತಿರುವಂತೆ ಕನಸು ಬಿದ್ದರೆ ಶಾರೀರಿಕ ಸುಖ ಪ್ರಾಪ್ತಿ.

ಧಾನ್ಯಗಳು ಕಂಡರೆ ಅಭಿವೃದ್ಧಿಯ ಸೂಚಕ. ಕಿರೀಟ ಧರಿಸಿದಂತೆ ಕನಸು ಬಿದ್ದರೆ ಅಧಿಕಾರ ಪ್ರಾಪ್ತಿ. ರಥದ ಸವಾರಿ- ವಿಶೇಷ ಸುದ್ಧಿ ಕೇಳುವುದು. ಆನೆಯ ಸವಾರಿ- ಗೌರವ ಪ್ರಾಪ್ತಿ

ಕುದುರೆ ಸವಾರಿ- ವ್ಯಾಪಾರದಲ್ಲಿ ಅಭಿವೃದ್ಧಿ. ಕತ್ತೆಯ ಸವಾರಿ- ಅವಮಾನಗೊಳ್ಳುವ ಸೂಚನೆ ದೇವರು ಮತ್ತು ಗುರುಹಿರಿಯರ ದರ್ಶನ ಶುಭಕರ. ಶಿವ ಮಂದಿರ ಕಂಡರೆ ಜ್ಞಾನ ಹಾಗೂ ಸಂಪತ್ತು ದೊರೆಯುವುದು. ಬೆಂಕಿ ಹಚ್ಚುವುದು ಕಂಡರೆ ಕಷ್ಟ ಪ್ರಾಪ್ತಿ. ಹೊಗೆಯೊಂದಿಗೆ ಬೆಂಕಿ ಕಂಡರೆ ಆಪತ್ತಿನ ಸೂಚನೆ.

ಕನಸಿನಲ್ಲಿ ಹಣ್ಣುಗಳನ್ನು ತಿಂದರೆ ಅನಾರೋಗ್ಯದ ಸೂಚನೆ. ಬೆಳದಿಂಗಳಿನಲ್ಲಿ ಕುಳಿತಂತೆ ಕನಸು ಬಿದ್ದರೆ ಗೌರವ ಸನ್ಮಾನ ಕೀರ್ತಿ ಪ್ರಾಪ್ತಿ. ಕುದುರೆಯಿಂದ ಬಿದ್ದಂತೆ ಕನಸು ಕಂಡರೆ ವ್ಯಾಪಾರದಲ್ಲಿ ನಷ್ಟ. ಉರಿಯುವ ದೀಪ ಕಂಡರೆ ಯಶಸ್ಸು ಹಾಗೂ ಗೌರವ ಪ್ರಾಪ್ತಿ.

ದೀಪ ಆರಿದಂತೆ ಕನಸು ಬಿದ್ದರೆ ಅವಮಾನ ಅಥವಾ ಕೆಡುಕಿನ ಸೂಚನೆ. ಕನಸಿನಲ್ಲಿ ಉತ್ಸವ ಅಥವಾ ಮೆರವಣಿಗೆ ನೋಡುವುದು ಅನಾರೋಗ್ಯದ ಸೂಚನೆ. ದನಗಳು ಮೇಯುವುದು ಕಂಡರೆ ಉತ್ತಮ ಫಲ. ಕುರಿಗಳ ಹಿಂಡು ನೋಡಿದರೆ ಪರಿವಾರಕ್ಕೆ ಒಳ್ಳೆಯದಾಗುವ ಸೂಚನೆ.

ಕನಸಿನಲ್ಲಿ ಗುಹೆ ಪ್ರವೇಶಿಸಿದಂತೆ ಕಂಡರೆ ಇಕ್ಕಟ್ಟಿಗೆ ಸಿಲುಕುವ ಸೂಚನೆ. ಅಕ್ಕಿ ತಿನ್ನುವುದು ಧನ ಲಾಭ ಅಡಿಗೆ ಮಾಡುವುದು ಕಂಡರೆ ಮಕ್ಕಳಿಗೆ ಅನಾರೋಗ್ಯ ಉಂಟಾಗುವ ಸೂಚನೆ.

ತಾಂಬೂಲ ನೋಡುವುದು ಶುಭಕರ. ತಾಂಬೂಲ ತಿನ್ನುವುದು ಕಂಡರೆ ಸ್ತ್ರೀಯರಿಂದ ಸುಖ-ಸಂತೋಷ. ಕನಸಿನಲ್ಲಿ ತಾನು ಸತ್ತಂತೆ ಕಾಣುವುದು ಶುಭ. ಕನ್ನಡಿಯಲ್ಲಿ ಮುಖ ನೋಡುವುದು ಸಂತಾನ ಲಾಭ. ಮಳೆ ನೋಡುವದು ಶುಭ ಆದರೆ ಬಿರುಗಾಳಿ, ಮರ ಬೀಳುವುದು ನೋಡುವುದು ಅಶುಭ ಮತ್ತು ಅಪಾಯದ ಸೂಚನೆ.

ಕನಸಿನಲ್ಲಿ ಬೆತ್ತಲೆಯಾದಂತೆ ಕಂಡರೆ ಸಂಪತ್ತಿನ ಹಾನಿಯ ಸೂಚನೆ. ಕನಸಿನಲ್ಲಿ ಹೊಲಸು ತಿನ್ನುವುದು ಧನಪ್ರಾಪ್ತಿ. ಕನಸಿನಲ್ಲಿ ತನ್ನ ಮದುವೆಯನ್ನು ಕಾಣುವುದು ಮುಂದೆ ಕಷ್ಟ ಬರುವ ಸೂಚನೆ. ಕನಸಿನಲ್ಲಿ ಕಿವಿಯಲ್ಲಿ ಓಲೆ ಅಥವಾ ಆಭರಣ ಧರಿಸುವುದು ಗೌರವ ಅಧಿಕಾರ ಪ್ರಾಪ್ತಿಯ ಸೂಚನೆ.

ಕನಸಿನಲ್ಲಿ ತನ್ನ ಕೂದಲು ಬೆಳ್ಳಗಾಗಿದ್ದು ಕಂಡರೆ ದೀರ್ಘಾಯುಷ್ಯ. ಕಾಮನಬಿಲ್ಲನ್ನು ನೋಡಿದರೆ ಉತ್ತಮ ಫಲ. ಕನಸಿನಲ್ಲಿ ಕತ್ತಲು ಆವರಿಸಿದಂತೆ ಅಥವಾ ಗ್ರಹಣ ಇರುವಂತೆ ಕಂಡರೆ ಮುಂದೆ ಕಷ್ಟದ ದಿನಗಳು ಬರುವ ಸೂಚನೆ.

ಕನಸಿನಲ್ಲಿ ಒಣಗಿದ ಹಣ್ಣು ಅಂದರೆ ದ್ರಾಕ್ಷಿ ಗೋಡಂಬಿಗಳನ್ನು ನೋಡುವುದು ನೀರು ಕುಡಿಯುವುದು ಸೌಭಾಗ್ಯದ ಸೂಚಕ. ಆಣೆಕಲ್ಲು ಬೀಳುವುದು ನೋಡಿದರೆ ದುಃಖದ ದಿನಗಳು ಬರುವ ಸೂಚನೆ.

Leave A Reply

Your email address will not be published.